ಕನ್ನಡ ಸುದ್ದಿ  /  ಕ್ರಿಕೆಟ್  /  ಮರಗಳಿಗೆ ಬಣ್ಣ ಬಳಿಯುವುದೇಕೆ; ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರಶ್ನೆ, ಶೇ.90ರಷ್ಟು ಮಂದಿಗೆ ಉತ್ತರವೇ ಗೊತ್ತಿಲ್ಲ!

ಮರಗಳಿಗೆ ಬಣ್ಣ ಬಳಿಯುವುದೇಕೆ; ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರಶ್ನೆ, ಶೇ.90ರಷ್ಟು ಮಂದಿಗೆ ಉತ್ತರವೇ ಗೊತ್ತಿಲ್ಲ!

Kevin Pietersen: ಭಾರತದಲ್ಲಿ ರಸ್ತೆ ಬದಿಯಲ್ಲಿರುವ ಮರ-ಗಿಡಗಳಿಗೆ ಬಿಳಿ ಮತ್ತು ಕೆಂಪು ಬಣ್ಣವನ್ನು ಏಕೆ ಬಳಿಯಲಾಗಿರುತ್ತದೆ ಎಂಬ ಪ್ರಶ್ನೆಯನ್ನು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್, ಜನರಿಗೆ ಕೇಳಿದ್ದಾರೆ.

ಮರಗಳಿಗೆ ಬಣ್ಣ ಬಳಿಯುವುದೇಕೆ; ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರಶ್ನೆ
ಮರಗಳಿಗೆ ಬಣ್ಣ ಬಳಿಯುವುದೇಕೆ; ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರಶ್ನೆ

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರು (Kevin Pietersen) ಭಾರತದಲ್ಲಿ ಮರಗಳ ಮೇಲಿನ ವಿಶೇಷ ಪ್ರಯೋಗದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಭಾರತದಲ್ಲಿ ಬೈ-ರೋಡ್ ಟ್ರಿಪ್ ಸಮಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವ ಇಂಗ್ಲೆಂಡ್ ಮಾಜಿ ನಾಯಕ, ರಸ್ತೆ ಬದಿಯ ಮರಗಳಿಗೆ ಬಿಳಿ ಮತ್ತು ಕೆಂಪು (ಕೇಸರಿ) ಪಟ್ಟೆಗಳ ರೂಪದಲ್ಲಿ ಬಣ್ಣ ಹಾಕಿರುವುದನ್ನು ಕಂಡೊಡನೆ ಜನರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಪೀಟರ್ಸನ್ ಮಾತ್ರವಲ್ಲ, ಅನೇಕರಿಗೆ ಈ ಪ್ರಶ್ನೆಗೆ ಕಾಡುತ್ತಿದೆ. ಮರದ ಕಾಂಡಗಳಿಗೆ ಬಣ್ಣ ಬಳಿಯುವುದರ ಹಿಂದೆ ವೈಜ್ಞಾನಿಕ ಕಾರಣ ಅಡಗಿದೆ.

ಟ್ರೆಂಡಿಂಗ್​ ಸುದ್ದಿ

ಮಾಜಿ ಕ್ರಿಕೆಟಿಗ ಭಾರತದ ಮರಗಳಿಗೆ ಬಳಿದಿರುವ ಬಣ್ಣಕ್ಕೆ ಸಂಬಂಧಿಸಿ ಪ್ರಶ್ನೆ ಕೇಳಿದ್ದಾರೆ. ಮರಗಳಿಗೆ ಏಕೆ ಬಣ್ಣ ಹಾಕಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಅವರು ಉತ್ಸುಕರಾಗಿದ್ದಾರೆ. ಬಹುತೇಕ ಮಂದಿ ರಸ್ತೆ ಬದಿಯಲ್ಲಿರುವ ಮರಗಳಿಗೆ ಬಿಳಿ ಮತ್ತು ಕೆಂಪು ಬಳಿದಿರೋದು ನಿಮ್ಮ ಗಮನಕ್ಕೆ ಬಂದಿರುತ್ತದೆ. ರಸ್ತೆಬದಿಯ ಮರಗಳಿಗೆ ಬುಡದಿಂದ ಮೇಲೆ ಅರ್ಧ ಭಾಗದವರೆಗೂ ಬಣ್ಣ ಬಳಿಯಲಾಗಿರುತ್ತದೆ. ಇನ್ನೂ ಕೆಲವೆಡೆ ಬಿಳಿ ಬಣ್ಣವನ್ನೂ ಬಳಿಯಲಾಗಿರುತ್ತದೆ. ಆದರೆ ಏಕೆ ಹೀಗೆ ಮರಗಳಿಗೆ ಬಣ್ಣ ಹಾಕಲಾಗಿರುತ್ತದೆ ಎಂಬುವುದರ ಕುರಿತು ನಿಮಗೆ ಗೊತ್ತಿದೆಯೇ?

ಬಣ್ಣ ಬಳಿಯುವುದರ ಉದ್ದೇಶ

ಭಾರತದಲ್ಲಿ ಮರಗಳ ಕೆಳಗಿನ ಭಾಗಕ್ಕೆ ಬಣ್ಣ ಹಚ್ಚುವುದರ ಹಿಂದಿನ ಉದ್ದೇಶ ಅವುಗಳನ್ನು ಸಂರಕ್ಷಿತವಾಗಿಡುವುದಾಗಿದೆ. ವಾಸ್ತವವಾಗಿ, ಮರಗಳ ಮೇಲೆ ಕೀಟಗಳ ದಾಳಿಯಿಂದಾಗಿ ಅನೇಕ ಬಾರಿ ತೊಗಟೆ ಹೊರಬರಲು ಪ್ರಾರಂಭಿಸುತ್ತದೆ, ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಮರಗಳು ದುರ್ಬಲವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಮರದ ಕಾಂಡಗಳನ್ನು ಕೀಟಗಳಿಂದ ರಕ್ಷಿಸಲು ಬಣ್ಣ ಹಚ್ಚಲಾಗುತ್ತದೆ. ಗೆದ್ದಲು ಗೂಡುಕಟ್ಟುವಿಕೆಯಿಂದ ರಕ್ಷಿಸುತ್ತದೆ.

ಮರಗಳ ಆಯುಷ್ಯವು ಹೆಚ್ಚಾಗುತ್ತದೆ, ಮರಗಳನ್ನು ಕಡಿಯುವಂತಿಲ್ಲ

ಮರಗಳಿಗೆ ಬಣ್ಣ ಹಚ್ಚಿದರೆ ಗೆದ್ದಲು ಅಥವಾ ಕೀಟಗಳಿಂದ ರಕ್ಷಿಸಲು ನೆರವಾಗುತ್ತದೆ. ಬಣ್ಣ ಬಳಿಯದ ಬಹುತೇಕ ಮರಗಳಿಗೆ ಗೆದ್ದಲುಗಳು ಕಾಂಡದ ಮೇಲೆ ದಾಳಿ ಮಾಡಿರುತ್ತವೆ. ಮರಗಳನ್ನು ಟೊಳ್ಳಾಗುವಂತೆ ಮಾಡುತ್ತವೆ. ಬಣ್ಣ ಹೆಚ್ಚಿದರೆ ಮರಗಳ ಆರೋಗ್ಯ, ಆಯುಷ್ಯ ಹೆಚ್ಚಿಸಲು ಮತ್ತು ಟೊಳ್ಳಾಗದಂತೆ ರಕ್ಷಿಸುತ್ತದೆ. ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಯಲ್ಲಿ ನೆಟ್ಟಿರುವ ಮರಗಳಿಗೂ ಬಿಳಿ ಬಣ್ಣ ಬಳಿಯಲಾಗಿದ್ದು, ರಾತ್ರಿಯ ಕತ್ತಲೆಯಲ್ಲಿಯೂ ಈ ಮರಗಳು ಬಣ್ಣದ ಹೊಳಪಿನಿಂದ ಸುಲಭವಾಗಿ ಕಾಣುತ್ತವೆ. ಮರಗಳು ಅರಣ್ಯ ಇಲಾಖೆಯ ಕಣ್ಗಾವಲಿನಲ್ಲಿದ್ದು, ಕಡಿಯುವಂತಿಲ್ಲ ಎಂಬುದು ಬಣ್ಣಗಾರಿಕೆಯ ಇನ್ನೊಂದು ಉದ್ದೇಶ.

ಡಿಕೆಯನ್ನು ಗುಣಗಾನ ಮಾಡಿದ್ದ ಪೀಟರ್ಸನ್

ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ 83 ರನ್‌ಗಳ ಅದ್ಭುತ ಇನ್ನಿಂಗ್ಸ್ ಅನ್ನು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಶ್ಲಾಘಿಸಿದ್ದಾರೆ. ಯಾವುದೇ ಕಾಮೆಂಟೇಟರ್ ಇಷ್ಟು ಉತ್ತಮವಾಗಿ ಬ್ಯಾಟ್ ಮಾಡುವುದನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ಹೇಳಿದ್ದಾರೆ. ಐಪಿಎಲ್ 2024 ರಲ್ಲಿ ಹೈ-ಹೈವೋಲ್ಟೇಜ್ ಘರ್ಷಣೆಯ ಮಧ್ಯೆ, ಕಾರ್ತಿಕ್ ಕೇವಲ 35 ಎಸೆತಗಳಲ್ಲಿ ಸ್ಫೋಟಕ 83 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಸ್ಟರ್‌ಕ್ಲಾಸ್ ಅನ್ನು ಪ್ರಾರಂಭಿಸಿದ್ದಾರೆ.

IPL_Entry_Point