ನಾನು, ದ್ರಾವಿಡ್​, ಅಗರ್ಕರ್ ಹೇಳದ ಹೊರತು ಯಾವುದೂ ನಿಜವಲ್ಲ; ಟಿ20 ವಿಶ್ವಕಪ್ ಕುರಿತ ಸಭೆ ತಳ್ಳಿಹಾಕಿದ ರೋಹಿತ್​ ಶರ್ಮಾ-cricket news everything is fake rohit sharma denies meeting with ajit agarkar coach rahul dravid for t20 world cup prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು, ದ್ರಾವಿಡ್​, ಅಗರ್ಕರ್ ಹೇಳದ ಹೊರತು ಯಾವುದೂ ನಿಜವಲ್ಲ; ಟಿ20 ವಿಶ್ವಕಪ್ ಕುರಿತ ಸಭೆ ತಳ್ಳಿಹಾಕಿದ ರೋಹಿತ್​ ಶರ್ಮಾ

ನಾನು, ದ್ರಾವಿಡ್​, ಅಗರ್ಕರ್ ಹೇಳದ ಹೊರತು ಯಾವುದೂ ನಿಜವಲ್ಲ; ಟಿ20 ವಿಶ್ವಕಪ್ ಕುರಿತ ಸಭೆ ತಳ್ಳಿಹಾಕಿದ ರೋಹಿತ್​ ಶರ್ಮಾ

Rohit Sharma : ಟಿ20 ವಿಶ್ವಕಪ್​ಗೆ ತಂಡದ ಆಯ್ಕೆ ಸಂಬಂಧಿಸಿ ಹೆಡ್ ಕೋಚ್​ ರಾಹುಲ್ ದ್ರಾವಿಡ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರೊಂದಿಗೆ ತಾನು ಸಭೆ ನಡೆಸಿದ್ದರು ಎಂಬ ವರದಿಗಳನ್ನು ರೋಹಿತ್​ ಶರ್ಮಾ ತಳ್ಳಿಹಾಕಿದ್ದಾರೆ.

 ಟಿ20 ವಿಶ್ವಕಪ್ ಕುರಿತ ಸಭೆ ತಳ್ಳಿಹಾಕಿದ ರೋಹಿತ್​ ಶರ್ಮಾ
ಟಿ20 ವಿಶ್ವಕಪ್ ಕುರಿತ ಸಭೆ ತಳ್ಳಿಹಾಕಿದ ರೋಹಿತ್​ ಶರ್ಮಾ

ಟಿ20 ವಿಶ್ವಕಪ್​ ಟೂರ್ನಿಗೆ (T20 World Cup 2024) ಭಾರತ ತಂಡದ (Team India) ಆಯ್ಕೆಗೆ ಸಂಬಂಧಿಸಿ ಸಭೆ ನಡೆದಿದೆ ಎಂದು ಹರಿದಾಡುತ್ತಿರುವ ವರದಿಗಳನ್ನು ನಾಯಕ ರೋಹಿತ್ ಶರ್ಮಾ ಅವರು (Rohit Sharma) ತಳ್ಳಿ ಹಾಕಿದ್ದಾರೆ. ನನ್ನಿಂದಾಗಲಿ, ಮುಖ್ಯಕೋಚ್ ರಾಹುಲ್ ದ್ರಾವಿಡ್ (Rohit Sharma) ಅಥವಾ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ (Ajit Agarkar) ಅವರಿಂದ ಅಧಿಕೃತವಾಗಿ ಸುದ್ದಿ ಬರದ ಹೊರತು ಯಾವುದು ನಿಜವಲ್ಲ ಎಂದು ಹಿಟ್​ಮ್ಯಾನ್ ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತುತ ಓಡಾಡುತ್ತಿರುವ ಸುದ್ದಿಗಳು ನಕಲಿ ಎಂದು ಹೇಳಿದ್ದಾರೆ.

ಜೂನ್ 1 ರಂದು ಯುಎಸ್​ಎ ಮತ್ತು ವೆಸ್ಟ್ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಜರುಗುವ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಏಸ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ರೋಹಿತ್​ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹರದಾಡಿದ್ದವು. ತಂಡದ ಆಯ್ಕೆಯ ಬಗ್ಗೆ ವದಂತಿಗಳ ಕುರಿತು ಮಾತನಾಡಿದ ರೋಹಿತ್​, ನಾನು ಯಾರನ್ನೂ ಭೇಟಿಯಾಗಿಲ್ಲ. ಬಿಸಿಸಿಐನಿಂದ ಯಾವುದೇ ಸಭೆ ನಡೆದಿಲ್ಲ. ನಾವು ಕ್ಯಾಮೆರಾ ಮುಂದೆ ಬರದ ಹೊರತು ಯಾವುದು ಅಧಿಕೃತವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಯಾರು ಯಾರನ್ನೂ ಭೇಟಿಯಾಗಿಲ್ಲ ಎಂದ ರೋಹಿತ್​

ಅಗರ್ಕರ್ ಅವರು ದುಬೈನಲ್ಲಿ ಗಾಲ್ಫ್ ಆಡುತ್ತಿದ್ದಾರೆ. ದ್ರಾವಿಡ್ ತಮ್ಮ ಪುತ್ರರಿಗೆ ಕ್ರಿಕೆಟ್ ತರಬೇತಿ ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ನಾನು ಐಪಿಎಲ್​ನಲ್ಲಿದ್ದೇನೆ ಎಂದು ರೋಹಿತ್​ ಹೇಳಿದ್ದಾರೆ. ಕಳೆದ ವಾರ ಮುಂಬೈನಲ್ಲಿ ರೋಹಿತ್, ದ್ರಾವಿಡ್ ಮತ್ತು ಅಗರ್ಕರ್ ಅವರ ನಡುವೆ ಸಭೆ ನಡೆದಿತ್ತು ಎಂದು ವರದಿಯೊಂದು ತಿಳಿಸಿದೆ. ಈ ಸಭೆಯಲ್ಲಿ ರೋಹಿತ್ ಜೊತೆಗಾರ ಯಾರು? ಹಾರ್ದಿಕ್ ಪಾಂಡ್ಯ ಪಾತ್ರದ ಕುರಿತು ಚರ್ಚಿಸಲಾಗಿತ್ತು ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು.

ನಾನು ಯಾರನ್ನೂ ಭೇಟಿ ಮಾಡಿಲ್ಲ. ಅಜಿತ್ ಅಗರ್ಕರ್ ದುಬೈನಲ್ಲಿ ಗಾಲ್ಫ್ ಆಡುತ್ತಾ ಕಾಲ ಕಳೆಯುತ್ತಿದ್ದಾರೆ. ರಾಹುಲ್ ದ್ರಾವಿಡ್ ಅವರು ಬೆಂಗಳೂರಿನಲ್ಲಿ ತಮ್ಮ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ನಾವು ಸ್ವತಃ ಭೇಟಿಯಾಗಿಲ್ಲ. ಒಂದು ವೇಳೆ ಸಭೆಗೆ ಸಂಬಂಧಿಸಿ ಏನಾದರೂ ಅಪ್ಡೇಟ್ಸ್ ಇದ್ದರೆ, ನಾನಾಗಲಿ ಅಥವಾ ರಾಹುಲ್ ದ್ರಾವಿಡ್ ಅಥವಾ ಸ್ವತಃ ಅಜಿತ್ ಅಗರ್ಕರ್ ಆಗಲಿ ಅಥವಾ ಬಿಸಿಸಿಐನಿಂದ ಯಾರಾದರೂ ಕ್ಯಾಮೆರಾ ಮುಂದೆ ಹೇಳುವವರೆಗೂ ಯಾವುದು ಅಧಿಕೃತವಲ್ಲ ಎಂದು ರೋಹಿತ್, ಕ್ಲಬ್ ಪ್ರೈರೀ ಫೈರ್ ಪಾಡ್‌ ಕಾಸ್ಟ್‌ನಲ್ಲಿ ಮೈಕೆಲ್ ವಾನ್ ಮತ್ತು ಆಡಮ್ ಗಿಲ್‌ಕ್ರಿಸ್ಟ್‌ಗೆ ಹೇಳಿದ್ದಾರೆ.

ಹಾರ್ದಿಕ್​ಗೆ ಷರತ್ತು ವಿಧಿಸಿತ್ತೇ ಬಿಸಿಸಿಐ?

ಕಳೆದ ವಾರ ಸಭೆ ನಡೆದಿತ್ತು. ಸಭೆಯಲ್ಲಿ ರೋಹಿತ್​, ಅಗರ್ಕರ್, ದ್ರಾವಿಡ್ ಪಾಲ್ಗೊಂಡದ್ದರು. ಇಲ್ಲಿ ವಿರಾಟ್ ಕೊಹ್ಲಿಯನ್ನು ಆರಂಭಿಕ ಸ್ಥಾನಕ್ಕೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಹಾರ್ದಿಕ್ ಪಾಂಡ್ಯಗೆ ಬೌಲಿಂಗ್​​​ನಲ್ಲಿ ಸಾಮರ್ಥ್ಯ ಸಾಬೀತುಪಡಿಸುವಂತೆ ಷರತ್ತು ವಿಧಿಸಲಾಗಿದೆ ಎಂಬುದರ ಕುರಿತು ಸುದ್ದಿಗಳು ಹರಿದಾಡಿದ್ದವು. ಅಲ್ಲದೆ, ಐಪಿಎಲ್​ನಲ್ಲಿ ಮಿಂಚುತ್ತಿರುವ ಯುವ ಆಟಗಾರರ ಕುರಿತು ಮತ್ತು ವಿಕೆಟ್ ಕೀಪರ್ ಮೊದಲ ಆದ್ಯತೆ ಎಂಬುದರ ಕುರಿತು ಚರ್ಚೆ ನಡೆದಿತ್ತು ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಸಕ್ತ ಐಪಿಎಲ್​ನಲ್ಲಿ ರೋಹಿತ್​ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 17ನೇ ಆವೃತ್ತಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ 49ರ ಸರಾಸರಿಯಲ್ಲಿ 297 ರನ್ ಬಾರಿಸಿದ್ದಾರೆ.