ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ ಗೆಲ್ಲಲು ಪಾಕಿಸ್ತಾನ ಮಾಸ್ಟರ್ ಪ್ಲಾನ್; ಭಾರತಕ್ಕೆ ಒಡಿಐ ವರ್ಲ್ಡ್​ಕಪ್ ಗೆದ್ದುಕೊಟ್ಟಿದ್ದ ಹೆಡ್​​ಕೋಚ್​ಗೆ ಮಣೆ

ಟಿ20 ವಿಶ್ವಕಪ್​ ಗೆಲ್ಲಲು ಪಾಕಿಸ್ತಾನ ಮಾಸ್ಟರ್ ಪ್ಲಾನ್; ಭಾರತಕ್ಕೆ ಒಡಿಐ ವರ್ಲ್ಡ್​ಕಪ್ ಗೆದ್ದುಕೊಟ್ಟಿದ್ದ ಹೆಡ್​​ಕೋಚ್​ಗೆ ಮಣೆ

Pakistan Cricket Team : ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡವು ನೂತನ ಹೆಡ್​ಕೋಚ್ ಆಯ್ಕೆ ಮಾಡಿದೆ. ಭಾರತಕ್ಕೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟಿದ್ದ ಹೆಡ್​ಕೋಚ್ ಗ್ಯಾರಿ ಕರ್ಸ್ಟನ್​ ಅವರನ್ನು ಮುಖ್ಯ ಕೋಚ್​ ಆಗಿ ನೇಮಿಸಿದೆ. ಟೆಸ್ಟ್​ ತಂಡಕ್ಕೂ ನೂತನ ಕೋಚ್ ನೇಮಕವಾಗಿದ್ದಾರೆ.

ಟಿ20 ವಿಶ್ವಕಪ್​ ಗೆಲ್ಲಲು ಪಾಕಿಸ್ತಾನ ಮಾಸ್ಟರ್ ಪ್ಲಾನ್; ಭಾರತಕ್ಕೆ ಒಡಿಐ ವರ್ಲ್ಡ್​ಕಪ್ ಗೆದ್ದುಕೊಟ್ಟಿದ್ದ ಹೆಡ್​​ಕೋಚ್​ಗೆ ಮಣೆ
ಟಿ20 ವಿಶ್ವಕಪ್​ ಗೆಲ್ಲಲು ಪಾಕಿಸ್ತಾನ ಮಾಸ್ಟರ್ ಪ್ಲಾನ್; ಭಾರತಕ್ಕೆ ಒಡಿಐ ವರ್ಲ್ಡ್​ಕಪ್ ಗೆದ್ದುಕೊಟ್ಟಿದ್ದ ಹೆಡ್​​ಕೋಚ್​ಗೆ ಮಣೆ

ಭಾರತದ ಮಾಜಿ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ (Gary Kirsten) ಭಾನುವಾರ (ಏಪ್ರಿಲ್ 28) ಪಾಕಿಸ್ತಾನದ ಹೊಸ ವೈಟ್-ಬಾಲ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ (Jason Gillespie) ಅವರಿಗೆ ಟೆಸ್ಟ್ ತಂಡದ ಜವಾಬ್ದಾರಿಯನ್ನು ನೀಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (Pakistan Cricket Board) ಎಕ್ಸ್​​​ನಲ್ಲಿ ಪೋಸ್ಟ್ ಮಾಡುವ ಮೂಲಕ ಇಬ್ಬರು ಮಾಜಿ ಕ್ರಿಕೆಟಿಗರ ನೇಮಕಾತಿಯನ್ನು ದೃಢಪಡಿಸಿದೆ.

ಟ್ರೆಂಡಿಂಗ್​ ಸುದ್ದಿ

ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಗ್ಯಾರಿ ಕರ್ಸ್ಟನ್ ಅವರು, 2011ರ ಏಪ್ರಿಲ್ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ 2011ರಲ್ಲಿ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಎಂಎಸ್ ಧೋನಿ ನೇತೃತ್ವದ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು. ಕಸ್ಟರ್ನ್​​ ಅವರನ್ನು ಹೆಡ್​ ಕೋಚ್​ ಆಗಿ ನೇಮಿಸುವ ಮೂಲಕ ಜೂನ್​ 1ರಿಂದ ಶುರುವಾಗುವ ಟಿ20 ವಿಶ್ವಕಪ್​ ಗೆಲ್ಲಲು ಪಾಕ್ ಮಾಸ್ಟರ್​ ಪ್ಲಾನ್​ ರೂಪಿಸಿದೆ.

ಗ್ಯಾರಿ ಕರ್ಸ್ಟನ್ ಅವರ ಅಧಿಕಾರಾವಧಿಯಲ್ಲಿ ಏಕದಿನ ವರ್ಲ್ಡ್ ಕಪ್ ಗೆಲ್ಲುವುದರ ಜತೆಗೆ ಭಾರತ ತಂಡವು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಲ್ಲೂ ನಂಬರ್ 1 ಸ್ಥಾನ ತಲುಪಿತ್ತು. ಭಾರತ ತಂಡದೊಂದಿಗೆ ಒಪ್ಪಂದ ಮುಕ್ತಾಯದ ನಂತರ ಕರ್ಸ್ಟನ್ ಅವರು 2011 ರಿಂದ 2013 ರವರೆಗೆ ದಕ್ಷಿಣ ಆಫ್ರಿಕಾದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. 56 ವರ್ಷದ ಕರ್ಸ್ಟನ್ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್‌ ತಂಡಕ್ಕೆ ಬ್ಯಾಟಿಂಗ್ ಕೋಚ್ ಮತ್ತು ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜೂನ್ 9ರಂದು ಭಾರತ-ಪಾಕಿಸ್ತಾನ ಮುಖಾಮುಖಿ

ಪಾಕಿಸ್ತಾನ ತಂಡದೊಂದಿಗೆ ಕರ್ಸ್ಟನ್ ಅವರ ಮೊದಲ ಪ್ರಮುಖ ಕಾರ್ಯಯೋಜನೆಯು 2024ರ ಟಿ20 ವಿಶ್ವಕಪ್ ಆಗಿರುತ್ತದೆ. ಜೂನ್ 1ರಿಂದ 29ರ ತನಕ ವೆಸ್ಟ್ ಇಂಡೀಸ್ ಮತ್ತು ಯುಎಸ್​ಎ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ. ಟಿ20 ವಿಶ್ವಕಪ್​ನಲ್ಲಿ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನ ಮತ್ತು ಭಾರತ ಸೆಣಸಾಟ ನಡೆಸಲಿವೆ. ಮಿನಿ ವಿಶ್ವಕಪ್‌ ಇತಿಹಾಸದಲ್ಲಿ ಪಾಕ್, ಭಾರತ ತಂಡವನ್ನು ಒಮ್ಮೆ ಮಾತ್ರ ಸೋಲಿಸಿದೆ. ಉಭಯ ತಂಡಗಳು 2022ರ ಅಕ್ಟೋಬರ್ 23ರಂದು ಕೊನೆಯ ಬಾರಿ ಮುಖಾಮುಖಿಯಾಗಿದ್ದವು.

ಜೇಸನ್ ಗಿಲ್ಲೆಸ್ಪಿ ಪ್ರದರ್ಶನ

ಕರ್ಸ್ಟನ್ ಅವರು ಬಾಬರ್ ಅಜಮ್ ನೇತೃತ್ವದ ವೈಟ್-ಬಾಲ್ ತಂಡದ ಮುಖ್ಯಕೋಚ್ ಆಗಿ ನೇಮಕಗೊಂಡಿದ್ದರೆ, ಆಸ್ಟ್ರೇಲಿಯಾದ ಮಾಜಿ ವೇಗಿ ಗಿಲ್ಲೆಸ್ಪ್ ಶಾನ್ ಮಸೂದ್ ನೇತೃತ್ವದ ಟೆಸ್ಟ್ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪಾಕ್​ನ ಹೊಸ ಟೆಸ್ಟ್ ಮುಖ್ಯ ಕೋಚ್​ ಆಗುವ ಮೊದಲು ಗಿಲ್ಲೆಸ್ಪಿ ಅವರು ಯಾರ್ಕ್‌ಷೈರ್, ಸಸೆಕ್ಸ್ ಮತ್ತು ದಕ್ಷಿಣ ಆಸ್ಟ್ರೇಲಿಯಾದ ಮುಖ್ಯತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

ಗಿಲ್ಲೆಸ್ಪಿ ಆಸ್ಟ್ರೇಲಿಯಾ ತಂಡದ ಪರ 71 ಟೆಸ್ಟ್, 97 ಏಕದಿನ ಮತ್ತು ಒಂದು ಟಿ20ಐ ಆಡಿದ ಅನುಭವ ಹೊಂದಿದ್ದಾರೆ. ಕ್ರಮವಾಗಿ 259, 142 ಮತ್ತು 1 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್​​ನಲ್ಲಿ ದ್ವಿಶತಕವನ್ನೂ ಸಿಡಿಸಿದ್ದಾರೆ ಗಿಲ್ಲೆಸ್ಪಿ. ಕರ್ಸ್ಟನ್ ಮತ್ತು ಗಿಲ್ಲೆಸ್ಪಿ ಜೊತೆಗೆ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್ ಅವರನ್ನು ಪಾಕಿಸ್ತಾನದ ಮೂರು ಫಾರ್ಮೆಟ್​ನ ಸಹಾಯಕ ಕೋಚ್ ಆಗಿ ದೃಢಪಡಿಸಲಾಗಿದೆ.

ಇನ್ನಷ್ಟಯ ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

IPL_Entry_Point