ಕನ್ನಡ ಸುದ್ದಿ  /  ಕ್ರಿಕೆಟ್  /  ಗ್ಲೆನ್ ಮ್ಯಾಕ್ಸ್​ವೆಲ್ ಇನ್, ಕ್ಯಾಮರೂನ್ ಗ್ರೀನ್ ಔಟ್; ಎಸ್​ಆರ್​ಹೆಚ್ ಪಂದ್ಯಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್​ Xi

ಗ್ಲೆನ್ ಮ್ಯಾಕ್ಸ್​ವೆಲ್ ಇನ್, ಕ್ಯಾಮರೂನ್ ಗ್ರೀನ್ ಔಟ್; ಎಸ್​ಆರ್​ಹೆಚ್ ಪಂದ್ಯಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್​ XI

RCB Playing XI vs SRH : 17ನೇ ಆವೃತ್ತಿಯ ಐಪಿಎಲ್​ನ 41ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ.

ಎಸ್​ಆರ್​ಹೆಚ್ ಕಾದಾಟಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್​ XI
ಎಸ್​ಆರ್​ಹೆಚ್ ಕಾದಾಟಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್​ XI

2024ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮತ್ತೊಮ್ಮೆ ಮುಖಾಮುಖಿಗೆ ಸಜ್ಜಾಗಿವೆ. ಕಳೆದ ಮುಖಾಮುಖಿಯಲ್ಲಿ 287 ರನ್​ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಪ್ಯಾಟ್ ಕಮಿನ್ಸ್ ಪಡೆ ಈ ಬಾರಿ 300ರ ಗಡಿ ದಾಟಲು ಯೋಜನೆ ಹಾಕಿಕೊಂಡಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್ ಮೈದಾನವು ಹೈವೋಲ್ಟೇಜ್ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ರಾತ್ರಿ 7.30ಕ್ಕೆ ಪಂದ್ಯ ಶುರುವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಹೈದರಾಬಾದ್ ಬ್ಯಾಟರ್​ಗಳ ಬ್ಯಾಟಿಂಗ್ ವೇಗವನ್ನು ತಡೆಯಲು ಆರ್​​ಸಿಬಿ ಸಿದ್ಧತೆ ನಡೆಸುತ್ತಿದೆ. ಎಸ್​ಆರ್​​​ಹೆಚ್​ ವಿರುದ್ದ ಆಡಿದ್ದ ಕಳೆದ ಪಂದ್ಯದಲ್ಲಿ ಆರ್​​ಸಿಬಿಯ ನಾಲ್ವರು ಬೌಲರ್​​ಗಳು 50ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಭಾರಿ ಹಿನ್ನಡೆಗೆ ಕಾರಣವಾಗಿತ್ತು. ಹೆಚ್ಚು ರನ್ ಬಿಟ್ಟುಕೊಡುತ್ತಿರುವುದು ಈ ಪಂದ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ತನ್ನ ಎದುರಾಳಿಯ ಎಲ್ಲಾ ತಂಡಗಳ ವಿರುದ್ಧವೂ ಇಂತಹದ್ದೇ ಬೌಲಿಂಗ್ ಪ್ರದರ್ಶನ ಹೊರಬಂದಿದೆ. ಹಾಗಾಗಿ ಬದಲಾವಣೆಗೆ ನಿರ್ಧರಿಸಿದೆ ಆರ್​​ಸಿಬಿ.

ಗ್ಲೆನ್​​ ಮ್ಯಾಕ್ಸ್​ವೆಲ್ ಮರಳುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಕ್ಯಾಮರೂನ್ ಗ್ರೀನ್ ಕಳೆದ ಪಂದ್ಯದಲ್ಲಿ ಬೌಲಿಂಗ್​​ನಲ್ಲಿ ಗಮನ ಸೆಳೆದಿದ್ದರು. ಆದರೆ, ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದ್ದರು. ಹಾಗಾಗಿ ಆತನನ್ನು ಕೈಬಿಡಲು ನಿರ್ಧರಿಸಿದ್ದು, ಬ್ರೇಕ್ ನಂತರ ಮ್ಯಾಕ್ಸಿ ಖದರ್​ ತೋರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಮ್ಯಾಕ್ಸ್​ವೆಲ್ ಮಾನಸಿಕವಾಗಿ ಫಿಟ್ ಆಗಿದ್ದರೆ ಮಾತ್ರ. ಉಳಿದಂತೆ ಯಾವುದೇ ಬದಲಾವಣೆ ತಂಡದಲ್ಲಿ ಕಾಣುವುದು ಕಷ್ಟ. ಸುಯಾಶ್ ಪ್ರಭುದೇಸಾಯಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಭವನೀಯ XI)

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್/ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರ್ಣ್ ಶರ್ಮಾ ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ಎಸ್​​ಆರ್​​ಹೆಚ್​​ನಲ್ಲಿ ಬದಲಾವಣೆ ಇಲ್ಲ

ಗಾಯಗೊಂಡ ಆಟಗಾರರನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗೆ ಸನ್​ರೈಸರ್ಸ್ ಹೈದರಾಬಾದ್ ಮುಂದಾಗಿಲ್ಲ. ಕಳೆದ ಪಂದ್ಯದಲ್ಲಿ ಆಡಿಸಿದ್ದ ಪ್ಲೇಯಿಂಗ್ ಇಲೆವೆನ್​ ಅನ್ನೇ ಕಣಕ್ಕಿಳಿಯಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಏಕೆಂದರೆ ಈಗಿರುವ ತಂಡವೇ ಭಯಾನಕ ಪ್ರದರ್ಶನ ನೀಡುತ್ತಿದೆ. ಷಿಂಗ್ಟನ್ ಸುಂದರ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕರೆ ತರುವ ಸಾಧ್ಯತೆ ಇದೆ. ಅಲ್ಲದೆ, ಆಟಗಾರರ ಭಯಾನಕ ಬ್ಯಾಟಿಂಗ್ ಎದುರಾಳಿ ತಂಡಕ್ಕೆ ದೊಡ್ಡ ಚಿಂತೆಯನ್ನುಂಟು ಮಾಡಿದೆ.

ಸನ್‌ರೈಸರ್ಸ್ ಹೈದರಾಬಾದ್ (ಸಂಭವನೀಯ XI): ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ನಿತೀಶ್ ಕುಮಾರ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ ನಟರಾಜನ್.

ಪಿಚ್​​​ ರಿಪೋರ್ಟ್

ಈ ಮೈದಾನದಲ್ಲಿ ಋತುವಿನ ಮೊದಲ ಪಂದ್ಯದಂತೆಯೇ ಅದೇ ಪಿಚ್‌ನಲ್ಲಿ ಪಂದ್ಯವನ್ನು ಆಡಲಾಗುತ್ತದೆ, ಅಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಎಸ್​​ಆರ್​​ಹೆಚ್ 3 ವಿಕೆಟ್‌ಗೆ 277 ರನ್ ಗಳಿಸಿ ದಾಖಲೆ ಬರೆದಿತ್ತು. ಆದರೆ ಮುಂಬೈ 5 ವಿಕೆಟ್‌ಗೆ 246 ರನ್ ಮಾಡಿತ್ತು. ಹಾಗಾಗಿ, ಹೆಚ್ಚಿನ ಸ್ಕೋರಿಂಗ್ ಆಟ ನಿರೀಕ್ಷಿಸಬಹುದು. ಎಲ್ಲೆಡೆಯೂ 300+ ರನ್ ಹೋಗುವ ಸಾಧ್ಯತೆ ಇದೆ ಎಂದು ಫ್ಯಾನ್ಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂಕಿ-ಅಂಶಗಳು

ವಿರಾಟ್ ಕೊಹ್ಲಿ ಕಳೆದ ಋತುವಿನಲ್ಲಿ ಈ ಸ್ಥಳದಲ್ಲಿ 63 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಇಲ್ಲಿ ಅವರು ಕೊನೆಯ ಮೂರು ಟಿ20 ಪಂದ್ಯಗಳಲ್ಲಿ 50 ಪ್ಲಸ್ ಸ್ಕೋರ್​ ಮಾಡಿದ್ದಾರೆ. ಒಟ್ಟಾರೆ ಟಿ20ಯಲ್ಲಿ ಅವರು ಈ ಮೈದಾನದಲ್ಲಿ 59.20 ಸರಾಸರಿ ಹೊಂದಿದ್ದಾರೆ. ಅಚ್ಚರಿ ಏನೆಂದರೆ ಕೊಹ್ಲಿಯನ್ನು ಭುವನೇಶ್ವರ್​ ಅವರು 15 ಬಾರಿ ಪರಸ್ಪರ ಮುಖಾಮುಖಿಯಲ್ಲಿ 4 ಬಾರಿ ಔಟ್ ಮಾಡಿದ್ದಾರೆ. ಈ ಋತುವಿನಲ್ಲಿ ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳು 177.79 ಸ್ಟ್ರೈಕ್ ರೇಟ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಒಂದೇ ತಂಡದಿಂದ ಬ್ಯಾಟರ್‌ಗಳ ಸಂಯೋಜಿತ ಸ್ಟ್ರೈಕ್ ರೇಟ್ 170 ರ ಗಡಿಯನ್ನು ದಾಟಿದ್ದು ಇದೇ ಮೊದಲು.

IPL_Entry_Point