ಕನ್ನಡ ಸುದ್ದಿ  /  Cricket  /  Cricket News Gujarat Titans Strongest Predicted Playing Xi Against Mumbai Indians In Ipl 2024 5th Match Gt Vs Mi Prs

ಶುಭ್ಮನ್​ಗೆ​ ಸತ್ವಪರೀಕ್ಷೆ, ಶಮಿ ಸ್ಥಾನ ತುಂಬಬೇಕಿದೆ ಉಮೇಶ್​; ಮುಂಬೈ ಕದನಕ್ಕೆ ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ

Gujarat Titans Playing XI: ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಭರ್ಜರಿ ಸಿದ್ಧತೆ ನಡೆಸಿದೆ. ಪರ್ಫೆಕ್ಟ್ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸಲು ಟೀಮ್ ಮ್ಯಾನೇಜ್​ಮೆಂಟ್ ಚಿಂತಿಸಿದೆ.

ಮುಂಬೈ ಇಂಡಿಯನ್ಸ್ ಕದನಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್.
ಮುಂಬೈ ಇಂಡಿಯನ್ಸ್ ಕದನಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್. (Siddharaj Solanki)

ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಐಪಿಎಲ್‌ನ ಮೊದಲ ಎರಡು ಸೀಸನ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ (Gujarat TItans), ತನ್ನ ಮೂರನೇ ಆವೃತ್ತಿಯಲ್ಲಿ ನೂತನ ನಾಯಕನೊಂದಿಗೆ ಅಗ್ನಿಪರೀಕ್ಷೆಗೆ ಇಳಿದಿದೆ. ಮೊದಲಿದ್ದ ನಾಯಕ ಮುಂಬೈ ಇಂಡಿಯನ್ಸ್ (Mumbai Indias) ಸೇರಿಕೊಂಡ ಕಾರಣ ಹೊಸ ಕ್ಯಾಪ್ಟನ್​ ಆಗಿ ಆರಂಭಿಕ ಯುವ ಆಟಗಾರ ಶುಭ್ಮನ್​ ಗಿಲ್ (Shubman Gill)​ ನೇಮಕಗೊಂಡಿದ್ದಾರೆ.

ತಮ್ಮ ತಂಡವನ್ನು ಬಿಟ್ಟುಹೋದ ಹಾರ್ದಿಕ್ ವಿರುದ್ಧವೇ ಗಿಲ್​ ಸೆಣಸಾಟಕ್ಕೆ ಸಿದ್ಧವಾಗಿದ್ದಾರೆ. ಆದರೆ ನಾಯಕತ್ವದಲ್ಲಿ ಆತನಿನ್ನೂ ಅನಾನುಭವಿಯಾಗಿದ್ದು, ಯಾವ ರೀತಿ ತಂಡವನ್ನು ಕಟ್ಟಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಅನುಭವಿ ನಾಯಕನಿಗೆ ಟಕ್ಕರ್​ ಕೊಡಲು ಸಜ್ಜಾಗಿರುವ ಗಿಲ್​ಗೆ ಮೊಹಮ್ಮದ್ ಶಮಿ ಅಲಭ್ಯತೆ ದೊಡ್ಡ ತಲೆನೋವು ತಂದಿಟ್ಟಿದೆ. ಇದು ನಾಯಕ ಶುಭ್ಮನ್​ ಗಿಲ್​ಗೆ ಸತ್ವ ಪರೀಕ್ಷೆಯಾಗಿದೆ.

ಆರಂಭಿಕರಾಗಿ ಯಾರು?

ಆರಂಭಿಕರಾಗಿ ಶುಭ್ಮನ್ ಗಿಲ್ ಅವರು ಕಣಕ್ಕಿಳಿಯುವುದು ಖಚಿತ. ಆದರೆ ಅವರೊಂದಿಗೆ ಇನ್ನಿಂಗ್ಸ್​ ಆರಂಭಿಸುವ ಆಟಗಾರ ಯಾರು ಎಂಬುದು ಗೊಂದಲ ಇದೆ. ವಿಕೆಟ್ ಕೀಪರ್​​ಗಳಾದ ವೃದ್ಧಿಮಾನ್ ಸಾಹ ಅಥವಾ ಮ್ಯಾಥ್ಯೂವೇಡ್ ಒಬ್ಬರು ಅವಕಾಶ ಪಡೆಯಲಿದ್ದಾರೆ. ಆದರೆ ಮ್ಯಾನೇಜ್​ಮೆಂಟ್ ಒಲವು ಮ್ಯಾಥ್ಯೂವೇಡ್​ ಮೇಲಿದೆ. ಮತ್ತೊಂದೆಡೆ ಗಿಲ್ ನಾಯಕನಾಗಿ ಒತ್ತಡ ನಿಭಾಯಿಸುವರೇ ಎಂಬ ಪ್ರಶ್ನೆ ಕೂಡ ಎದ್ದಿದೆ.

ಮಧ್ಯಮ ಕ್ರಮಾಂಕ

3ನೇ ಕ್ರಮಾಂಕದಲ್ಲಿ ಸಾಮರ್ಥ್ಯ ಸಾಬೀತುಪಡಿಸಿರುವ ಸಾಯಿ ಸುದರ್ಶನ್​ಗೆ ಮತ್ತೆ ಅವಕಾಶ ಸಿಗಲಿದೆ. ಬಳಿಕ ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್​ ಕಣಕ್ಕಿಳಿಯಲಿದ್ದಾರೆ. ಫಿನಿಷರ್​ ಆಗಿ ಅಭಿನವ್ ಮನೋಹರ್ ತಮ್ಮ ಪಾತ್ರವನ್ನು ನಿಭಾಯಿಸಲಿದ್ದಾರೆ. ಮಿಲ್ಲರ್​ ಮತ್ತು ಮನೋಹರ್​ ಇಬ್ಬರು ಗೇಮ್​ ಚೇಂಜರ್​​ಗಳಾಗಿದ್ದಾರೆ.

ಆಲ್​ರೌಂಡರ್​/ಬೌಲಿಂಗ್​

ಆಲ್​ರೌಂಡ್​ ಮತ್ತು ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳಿವೆ. ಆದರೆ ಆಲ್​ರೌಂಡರ್​ ಆಗಿ ವಿಜಯ್ ಶಂಕರ್ ಮತ್ತು ರಾಹುಲ್ ತೆವಾಟಿಯಾ​​ ಸ್ಥಾನ ಪಡೆಯಲಿದ್ದಾರೆ. ಸ್ಪೆಷಲಿಸ್ಟ್​ ಸ್ಪಿನ್ನರ್​ ರಶೀದ್​ ಖಾನ್, ವೇಗದ ಬೌಲರ್​​ಗಳಾಗಿ ಕಾರ್ತಿಕ್ ತ್ಯಾಗಿ, ಉಮೇಶ್ ಯಾದವ್ ಅವಕಾಶ ಪಡೆಯಲಿದ್ದಾರೆ. ಆದರೆ ಇನ್ನೊಂದು ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ

ಶುಭ್ಮನ್ ಗಿಲ್ (ನಾಯಕ), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್​), ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್​, ವಿಜಯ್ ಶಂಕರ್​, ರಶೀದ್ ಖಾನ್, ಕಾರ್ತಿಕ್ ತ್ಯಾಗಿ, ಉಮೇಶ್ ಯಾದವ್, ಸಾಯಿ ಕಿಶೋರ್​.

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಹಾರ್ದಿಕ್ ಪಾಂಡ್ಯ (ನಾಯಕ), ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೊಯೆಟ್ಜಿ, ಲೂಕ್ ವುಡ್.

ಗುಜರಾತ್ ಟೈಟಾನ್ಸ್ ತಂಡ

ಡೇವಿಡ್ ಮಿಲ್ಲರ್, ಶುಭ್ಮನ್ ಗಿಲ್ (ನಾಯಕ), ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ, ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್, ಶಾರುಖ್ ಖಾನ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಮಾನವ್ ಸುತಾರ್, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿಂಜ್.

IPL_Entry_Point