ಹಾರ್ದಿಕ್​ ಪಾಂಡ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ; ನಿಖರವಾದ ಕಾರಣ ವಿವರಿಸಿದ ಭಾರತದ ಮಾಜಿ ಕ್ರಿಕೆಟಿಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್​ ಪಾಂಡ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ; ನಿಖರವಾದ ಕಾರಣ ವಿವರಿಸಿದ ಭಾರತದ ಮಾಜಿ ಕ್ರಿಕೆಟಿಗ

ಹಾರ್ದಿಕ್​ ಪಾಂಡ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ; ನಿಖರವಾದ ಕಾರಣ ವಿವರಿಸಿದ ಭಾರತದ ಮಾಜಿ ಕ್ರಿಕೆಟಿಗ

Hardik Pandya : ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ ಆದಾಗಿನಿಂದ ಹಾರ್ದಿಕ್ ಪಾಂಡ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿಕೆ ನೀಡಿದ್ದಾರೆ.

ಹಾರ್ದಿಕ್​ ಪಾಂಡ್ಯ ಕುರಿತು ರಾಬಿನ್ ಉತ್ತಪ್ಪ ಹೇಳಿಕೆ.
ಹಾರ್ದಿಕ್​ ಪಾಂಡ್ಯ ಕುರಿತು ರಾಬಿನ್ ಉತ್ತಪ್ಪ ಹೇಳಿಕೆ.

2024ರ ಐಪಿಎಲ್​ (IPL 2024) ಅರ್ಧದಾರಿ ಕ್ರಮಿಸಿದೆ. ಆದರೂ ರೋಹಿತ್ ಶರ್ಮಾ (Rohit Sharma) ಬದಲಿಗೆ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಮುಂಬೈ ಇಂಡಿಯನ್ಸ್​ಗೆ ನಾಯಕನನ್ನಾಗಿ ನೇಮಿಸಿರುವ ಕುರಿತು ಚರ್ಚೆಗಳು ನಿಂತಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಎಂಐಗೆ ಮರು ಸೇರ್ಪಡೆಯಾದ ಪಾಂಡ್ಯ, ಮಿನಿ ಹರಾಜು ಮುಕ್ತಾಯಗೊಂಡ ಬೆನ್ನಲ್ಲೇ ನಾಯಕತ್ವ ವಹಿಸಿಕೊಂಡರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರೋಹಿತ್​ ಫ್ಯಾನ್ಸ್ ಎಂಐ ಫ್ರಾಂಚೈಸಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೆ, ಋತುವಿನ ಆರಂಭದಲ್ಲಿ ಅಭಿಮಾನಿಗಳಿಂದ ಟ್ರೋಲ್​ಗೆ ಗುರಿಯಾದ ಹಾರ್ದಿಕ್‌, ಈಗಲೂ ಸಂಪೂರ್ಣ ಬೆಂಬಲ ಪಡೆದಿಲ್ಲ. ಎಲ್ಲೇ ಆಡಿದರೂ ನೂತನ ನಾಯಕನನ್ನು ಗೇಲಿ ಮಾಡಲಾಗುತ್ತಿದೆ. ಇದು ಆತನ ಮೇಲೆ ಪರಿಣಾಮ ಬೀರಿದೆ. ಹಾರ್ದಿಕ್‌ ಈ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 146.87 ಸ್ಟ್ರೈಕ್ ರೇಟ್‌ನಲ್ಲಿ 141 ರನ್ ಗಳಿಸಿದ್ದಾರೆ. ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು ಹಾರ್ದಿಕ್ ಮುಂಬೈಗೆ ಮರಳಿದ ಸುತ್ತಲಿನ ಸನ್ನಿವೇಶಗಳನ್ನು ಆಳವಾಗಿ ಚರ್ಚಿಸಿದ್ದಾರೆ.

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದ ರಾಬಿನ್ ಉತ್ತಪ್ಪ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೋಲ್‌ ಮತ್ತು ನಿಂದನೆ ಎದುರಿಸುತ್ತಿರುವ ಹಾರ್ದಿಕ್​ ಪಾಂಡ್ಯ ಅವರ ಮಾನಸಿಕ ಯೋಗಕ್ಷೇಮದ ಉತ್ತಪ್ಪ ಮಾತನಾಡಿದ್ದಾರೆ. ಬಿಯರ್‌ಬೈಸೆಪ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡ ಉತ್ತಪ್ಪ ಅವರು, ಹಾರ್ದಿಕ್ ಅವರ ಪ್ರಸ್ತುತ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದ್ದಾರೆ. ಭಾರತ ತಂಡಕ್ಕೆ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಆದರೆ, ಅವರು ತಾನು ಬೆಳೆದ ತಂಡದಿಂದ ಹೊರನಡೆದು ಇನ್ನೊಂದು ಫ್ರ್ಯಾಂಚೈಸಿಗೆ ಹೋದರು. ಜಿಟಿಗೆ ಹೋದ ನಂತರ ಮೊದಲ ವರ್ಷವೇ ಪ್ರಶಸ್ತಿ ಗೆದ್ದರು. ಮರು ವರ್ಷ ರನ್ನರ್ಸ್ ಅಪ್​ಗೆ ಮುಗಿಸಿದರು. ನಂತರ ಬಿಟ್ಟುಹೋಗಿದ್ದ ತಂಡದೊಂದಿಗೆ ಮಾತುಕತೆ ನಡೆಸಿದ್ದರು. ಅಪಹಾಸ್ಯ, ಟ್ರೋಲಿಂಗ್, ಮೀಮ್‌ಗಳ ಬಗ್ಗೆ ಹಾರ್ದಿಕ್​ಗೆ ಚೆನ್ನಾಗಿ ತಿಳಿದಿದೆ. ಆದರೆ ಅವರಿಗೆ ನೋವುಂಟು ಮಾಡುತ್ತದೆ ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ರಾಬಿನ್ ಉತ್ತಪ್ಪ ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ.

ಹೀಗೆ ಮಾಡಿದರೆ ಯಾರಿಗೆ ಆಗಲಿ ನೋವುಂಟು ಮಾಡುತ್ತದೆ. ಇದರಿಂದ ಹಾರ್ದಿಕ್​ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆತನೂ ಮನುಷ್ಯನೇ, ಆತನಿಗೂ ಭಾವನೆಗಳಿರುತ್ತವೆ. ಆದರೆ ಯಾವುದೇ ಮನುಷ್ಯನ ಮೇಲೆ ಈ ರೀತಿಯ ಚಿಕಿತ್ಸೆಯನ್ನು ಹೇರುವುದು ಸರಿಯಲ್ಲ. ನಾವು ಯಾರಿಗೂ ಹಾಗೆ ಮಾಡಬಾರದು. ನಾವು ಅದನ್ನು ನೋಡಿಯೂ ನಗಬಾರದು, ಅದನ್ನು ಫಾರ್ವರ್ಡ್ ಮಾಡಬಾರದು ಎಂದು ಉತ್ತಪ್ಪ ಹೇಳಿದ್ದಾರೆ.

‘ವಿಶ್ವಕಪ್​ನಲ್ಲಿ ಭಾರತವನ್ನು ಬೆಂಬಲಿಸಿದಂತೆ ಬೆಂಬಲಿಸಿ’

ವಿಶ್ವಕಪ್ ಫೈನಲ್‌ನಲ್ಲಿ ಹೃದಯವಿದ್ರಾವಕ ಸೋಲಿನ ನಂತರ ಭಾರತೀಯ ಅಭಿಮಾನಿಗಳು ರಾಷ್ಟ್ರೀಯ ತಂಡಕ್ಕೆ ಹೇಗೆ ಬೆಂಬಲ ನೀಡಿದ್ದರು ಎಂಬ ಉದಾಹರಣೆ ಉಲ್ಲೇಖಿಸಿದ ಉತ್ತಪ್ಪ, ಈ ಸವಾಲಿನ ಸಮಯದಲ್ಲಿ ಪಾಂಡ್ಯಗೆ ಅದೇ ರೀತಿಯ ದಯೆ ಮತ್ತು ಬೆಂಬಲ ನೀಡಬೇಕು ಎಂದು ಅಭಿಮಾನಿಗಳಲ್ಲಿ ಕೋರಿದ್ದಾರೆ. ಕ್ರಿಕೆಟ್​ ಆಡುವುದು ನಮ್ಮ ಕೆಲಸ. ಇದು ನಮ್ಮ ಪ್ಯಾಶನ್ ಕೂಡ ಹೌದು. ಅದೇ ನಮಗೆ ಊಟವನ್ನು ಕೊಡುತ್ತಿದೆ ಎಂದು ಹೇಳಿದ್ದಾರೆ. ನಾವು ವಿಶ್ವಕಪ್ ಸೋತಾ ಹೇಗೆ ಒಂದಾಗಿದ್ದೇವೋ ಅದೇ ರೀತಿ ನಾವು ಸಮಾಜವಾಗಿ ಮತ್ತು ಭಾರತೀಯರಾಗಿ ಅವರೊಂದಿಗೆ ನಿಲ್ಲಬೇಕು ಎಂದಿದ್ದಾರೆ.

Whats_app_banner