ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು ಸ್ಟಕ್ ಆಗಿದ್ದೆ, ನಾನಿದ್ದಿದ್ದರೆ ವರ್ಲ್ಡ್​ಕಪ್ ಗೆಲ್ತಿದ್ವಿ; ಏಕದಿನ ವಿಶ್ವಕಪ್ ಸೋಲಿಗೆ ಕೆಎಲ್ ರಾಹುಲ್ ಪಶ್ಚಾತ್ತಾಪ

ನಾನು ಸ್ಟಕ್ ಆಗಿದ್ದೆ, ನಾನಿದ್ದಿದ್ದರೆ ವರ್ಲ್ಡ್​ಕಪ್ ಗೆಲ್ತಿದ್ವಿ; ಏಕದಿನ ವಿಶ್ವಕಪ್ ಸೋಲಿಗೆ ಕೆಎಲ್ ರಾಹುಲ್ ಪಶ್ಚಾತ್ತಾಪ

KL Rahul on ODI World Cup 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಿನ ಕುರಿತು ಟೀಮ್ ಇಂಡಿಯಾ ವಿಕೆಟ್ ಕೀಪರ್ ಕೆಎಲ್ ರಾಹುಲ್​ ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ.

ಏಕದಿನ ವರ್ಲ್ಡ್​ಕಪ್ ಸೋಲಿಗೆ ಕೆಎಲ್ ರಾಹುಲ್ ಪಶ್ಚಾತ್ತಾಪ
ಏಕದಿನ ವರ್ಲ್ಡ್​ಕಪ್ ಸೋಲಿಗೆ ಕೆಎಲ್ ರಾಹುಲ್ ಪಶ್ಚಾತ್ತಾಪ

2023ರ ನವೆಂಬರ್ 19.. ಭಾರತೀಯ ಕ್ರಿಕೆಟ್​ನ ಕೋಟ್ಯಂತರ ಅಭಿಮಾನಿಗಳ ಕನಸನ್ನು ಭಗ್ನಗೊಳಿಸಿದ ದಿನ. ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಐಸಿಸಿ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿತ್ತು. ಸತತ 10 ಪಂದ್ಯ ಗೆದ್ದಿದ್ದ ಭಾರತ, ಪ್ರಶಸ್ತಿ ಸುತ್ತಿನ ಫೈಟ್​ನಲ್ಲಿ ಆಸೀಸ್​ಗೆ ಪ್ರಶಸ್ತಿ ಬಿಟ್ಟುಕೊಟ್ಟಿತ್ತು. ಆ ಸೋಲು ಈಗಲೂ ಕಾಡುತ್ತಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್​ನಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್​, ರೋಹಿತ್​ ನೇತೃತ್ವದ ಟೀಮ್ ಇಂಡಿಯಾವನ್ನು 6 ವಿಕೆಟ್​ಗಳಿಂದ ಸೋಲಿಸಿ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು.

ಟ್ರೆಂಡಿಂಗ್​ ಸುದ್ದಿ

ಅಂದು ಟೀಮ್ ಇಂಡಿಯಾ ತಂಡದ ಭಾಗವಾಗಿದ್ದ ಕೆಎಲ್ ರಾಹುಲ್, ನಿರಾಶಾದಾಯಕ ಸೋಲಿನ ಬಗ್ಗೆ ತೆರೆದಿಟ್ಟಿದ್ದಾರೆ. ಶುಭ್ಮನ್ ಗಿಲ್ ಬೇಗನೇ ವಿಕೆಟ್ ಒಪ್ಪಿಸಿದ ಹೊರತಾಗಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ, ಹಿಟ್​ಮ್ಯಾನ್ ಜೊತೆಗೆ ಶ್ರೇಯಸ್ ಅಯ್ಯರ್ ವಿಕೆಟ್ ಪಡೆದ ನಂತರ, ರಾಹುಲ್ ಮತ್ತು ಕೊಹ್ಲಿ ರನ್ ಗಳಿಸಲು ವಿಫಲರಾದರು. ಇದರ ನಡುವೆ ಕೊಹ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿ ಔಟಾದರು. ಆಗ ರಾಹುಲ್ ಅವರ ಹೋರಾಟವು ಪ್ರಮುಖವಾಗಿತ್ತು.

ಅವಕಾಶ ಸಿಕ್ಕರೆ ಆ ಇನ್ನಿಂಗ್ಸ್ ಪುನರಾವರ್ತಿಸುತ್ತೇನೆ ಎಂದ ಕೆಎಲ್

ಇದರ ಹೊರತಾಗಿಯೂ ಕೆಎಲ್ ರಾಹುಲ್ 107 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಹಿತ 66 ರನ್​​ ಗಳಿಸಿ ಔಟಾದರು. ಇದು ತಂಡದ ಹಿನ್ನಡೆಗೆ ಕಾರಣವಾಗಿತ್ತು. ಮಿಚೆಲ್ ಸ್ಟಾರ್ಕ್​ ಎಸೆದ ಇನ್ನಿಂಗ್ಸ್​​ನ 42ನೇ ಓವರ್​​​​ನಲ್ಲಿ ರಾಹುಲ್​​ ಔಟಾದರು. ರವಿಚಂದ್ರನ್ ಅಶ್ವಿನ್ ಅವರೊಂದಿಗಿನ ಸಂದರ್ಶನದಲ್ಲಿ ರಾಹುಲ್, ಅವಕಾಶ ಸಿಕ್ಕರೆ ಆಸ್ಟ್ರೇಲಿಯಾ ವಿರುದ್ಧದ ತಮ್ಮ ಇನ್ನಿಂಗ್ಸ್ ಅನ್ನು ಮತ್ತೆ ಪುನರಾವರ್ತಿಸುವುದಾಗಿ ಹೇಳಿದ್ದಾರೆ.

ನಾನು ಸ್ಟಕ್ ಆಗಿದ್ದೆ ಎಂದ ಕೆಎಲ್ ರಾಹುಲ್

31 ವರ್ಷದ ಬ್ಯಾಟ್ಸ್​​ಮನ್,​ ತಾನು ಕೊನೆಯವರೆಗೂ ಕ್ರೀಸ್​ನಲ್ಲಿ ಉಳಿದಿದ್ದರೆ ಇನ್ನೂ 30-40 ರನ್​​ ಸೇರಿಸುತ್ತಿದ್ದೆ. ಇದು ಪಂದ್ಯದ ಫಲಿತಾಂಶ ಬದಲಾಯಿಸಬಹುದಿತ್ತು. ನನ್ನ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ 2023ರ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು. ನಾನು ಮಿಚೆಲ್ ಸ್ಟಾರ್ಕ್ ಬೌಲಿಂಗ್​ನಲ್ಲಿ ದಾಳಿ ನಡೆಸಲು ಮುಂದಾಗಿದ್ದೆ. ಆದರೆ ನಾನು ಸ್ಟಕ್ ಆಗಿದ್ದೆ. ರನ್​ ಗಳಿಸಲು ಸಾಧ್ಯವಾಗಲಿಲ್ಲ. ನನಗೂ ಕಷ್ಟಕರವಾಗಿತ್ತು ಎಂದು ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

ವೇರಿಯೇಷನ್ ಬೌಲಿಂಗ್​​ ಮೂಲಕ ನನ್ನನ್ನು ಕಟ್ಟಿ ಹಾಕಿದ್ದರು. ದಾಳಿ ಮಾಡಬೇಕೇ, ಬೇಡವೇ ಎಂಬ ಗೊಂದಲಕ್ಕೆ ಸಿಲುಕಿದ್ದೆ. ಇದೇ ಆ ಗೊಂದಲದಲ್ಲಿ, ನಾನು ಚೆಂಡನ್ನು ನಿಕ್ ಮಾಡಿ ನಿರ್ಣಾಯಕ ಸಮಯದಲ್ಲಿ ಔಟ್ ಆದೆ. ನಾನು ಆ ಇನ್ನಿಂಗ್ಸ್ ಅನ್ನು ಮುಂದುವರಿಸಿದ್ದರೆ ನಾವು ಬಹುಶಃ 30-40ಕ್ಕೂ ಹೆಚ್ಚು ರನ್​​ಗಳನ್ನು ಗಳಿಸಬಹುದಿತ್ತು. ಅದು ಸಾಧ್ಯವಾಗಿದ್ದರೆ ನಾವು ವಿಶ್ವಕಪ್ ಅನ್ನು ನಮ್ಮ ಕೈಯಲ್ಲಿ ಹೊಂದಬಹುದಿತ್ತು. ಅದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ರವಿಚಂದ್ರನ್ ಅಶ್ವಿನ್ ಅವರು ಆಡುವ 11ರ ಭಾಗವಾಗಿರಲಿಲ್ಲ. ಆದರೆ ವಿಶ್ವಕಪ್​ನ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದ್ದರು. ಅಹ್ಮದಾಬಾದ್​​ನಲ್ಲಿ ನಡೆದ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅವರ ಶತಕ ಸಿಡಿಸಿ ಭಾರತ ತಂಡದ ಸೋಲಿಗೆ ಕಾರಣರಾಗಿದ್ದರು. ಭಾರತ 50 ಓವರ್​​ಗಳಲ್ಲಿ 240 ರನ್​​​ಗಳಿಗೆ ಆಲೌಟ್ ಆಯಿತು. ವಿಶ್ವಕಪ್​​ ಸೋಲಿನ ನಂತರ ರಾಹುಲ್ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಐಪಿಎಲ್ 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕನಾಗಿದ್ದಾರೆ.

IPL_Entry_Point