Ind vs Eng 5th Test: ನನ್ನ ಮಗ ಆರಂಭಿಕ ಕ್ರಮಾಂಕದಲ್ಲೇ ಆಡಲಿ; ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಶುಭ್ಮನ್ ಗಿಲ್ ತಂದೆ ಆಶಯ-cricket news ind vs eng 5th test let him continue in opening order says shubman gill father lakhwinder singh rmy ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Eng 5th Test: ನನ್ನ ಮಗ ಆರಂಭಿಕ ಕ್ರಮಾಂಕದಲ್ಲೇ ಆಡಲಿ; ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಶುಭ್ಮನ್ ಗಿಲ್ ತಂದೆ ಆಶಯ

Ind vs Eng 5th Test: ನನ್ನ ಮಗ ಆರಂಭಿಕ ಕ್ರಮಾಂಕದಲ್ಲೇ ಆಡಲಿ; ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಶುಭ್ಮನ್ ಗಿಲ್ ತಂದೆ ಆಶಯ

Ind vs Eng 5th Test: ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಶುಭ್ಮನ್ ಗಿಲ್ ಅವರನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳಿಸಿರುವುದಕ್ಕೆ ಅವರ ತಂದೆ ಲಖ್ವಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ 2ನೇ ದಿನ ಶುಭ್ಮನ್ ಗಿಲ್ 110 ರನ್‌ಗಳ ಶತಕ ಬಾರಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು 4ನೇ ಶತಕವಾಗಿದೆ. (ANI)
ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ 2ನೇ ದಿನ ಶುಭ್ಮನ್ ಗಿಲ್ 110 ರನ್‌ಗಳ ಶತಕ ಬಾರಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು 4ನೇ ಶತಕವಾಗಿದೆ. (ANI)

ಧರ್ಮಶಾಲ (ಹಿಮಾಚಲ ಪ್ರದೇಶ): ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಕ್ರಿಕೆಟ್‌ ಪಂದ್ಯದಲ್ಲಿ (Ind vs Eng 5th Test) ಶುಭ್ಮನ್ ಗಿಲ್ ಆಕರ್ಷಕ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ 400 ರನ್‌ಗಳ ಗಡಿ ದಾಟಲು ಉಪಯುಕ್ತ ಕಾಣಿ ನೀಡಿದ್ದಾರೆ. 3ನೇ ಕ್ರಮಾಂಕದಲ್ಲಿ ಬಂದು ಬ್ಯಾಟ್ ಬೀಸಿದ ಗಿಲ್, ಇಂಗ್ಲೆಂಡ್ ಸ್ಪಿನ್ನರ್‌ಗಳನ್ನು ದಿಟ್ಟವಾಗಿ ಎದುರಿಸಿದರು. 150 ಎಸೆತಗಳಿಂದ 12 ಬೌಂಡರಿ ಹಾಗೂ 5 ಅಮೋಘ ಸಿಕ್ಸರ್‌ ಸೇರಿ 110 ರನ್ ಬಾರಿಸಿದರು. ಇದು ಅವರ 4ನೇ ಟೆಸ್ಟ್ ಶತಕವಾಗಿದೆ. ಧರ್ಮಶಾಲದಲ್ಲಿ ಕ್ರಿಕೆಟ್ ಮೈದಾನದಲ್ಲಿ 24 ವರ್ಷದ ಗಿಲ್ ಅಬ್ಬರದ ಆಟಕ್ಕೆ ಅವರ ತಂದೆ ಲಿಖ್ವಿಂದರ್ ಸಿಂಗ್ ಸಾಕ್ಷಿಯಾದರು. ಪುತ್ರನ ಆಟದ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಗ್, ಆತ ಆರಂಭಿಕರಾಗಿಯೇ ಮುಂದುವರಿಯಲಿ ಎಂದು ಹೇಳಿದ್ದಾರೆ.

ಸ್ಪಿನ್ನರ್‌ಗಳಿಗೆ ಕ್ರೀಸ್ ಬಿಟ್ಟು ಮುಂದೆ ಬಂದು ಬ್ಯಾಟಿಂಗ್ ಗಿಲ್ ಸಹಜ ಆಟ

ಸ್ಪಿನ್ನರ್‌ಗಳಿಗೆ ಪದೇ ಪದೆ ಸ್ಟಂಪ್ ಬಿಟ್ಟು ಮುಂದೆ ಬಂದು ಬ್ಯಾಟಿಂಗ್ ಮಾಡುವ ವಿಚಾರವಾಗಿ ಮಾತನಾಡಿ, "ಹೊರಹೋಗುವುದು ದೊಡ್ಡ ವ್ಯತ್ಯಾಸವನ್ನುಂಟು ಮಾಡಿದೆ, ಆತ ಅದನ್ನು ಮಾಡುವುದನ್ನು ನಿಲ್ಲಿಸಿದ್ದರಿಂದ ಒತ್ತಡವನ್ನು ಸೃಷ್ಟಿಸಿತು. ಅಂಡರ್-16 ದಿನಗಳಿಂದಲೂ ಸ್ಪಿನ್ನರ್‌ಗಳಿಗೆ ಮುಂದೆ ಬಂದು ಬರುತ್ತಾರೆ. ಅದು ಅವರ ಸಹಜ ಆಟ. ನೀವು ನಿಮ್ಮ ಸಹಜ ಆಟದಿಂದ ದೂರ ಸರಿಯಬಾರದು ಎಂದು ಲಖ್ವಿಂದರ್ ಹೇಳಿದರು.

ಗಿಲ್ ರನ್‌ಗಳೊಂದಿಗೆ ಮರಳಿರುವುದು ಖಂಡಿತವಾಗಿಯೂ ಭಾರತಕ್ಕೆ ದೊಡ್ಡ ಪ್ಲಸ್ ಆಗಿದೆ. ಈ ಸರಣಿಯ ಮೊದಲು, 3 ನೇ ಕ್ರಮಾಂಕದಲ್ಲಿ ಎಂಟು ಇನ್ನಿಂಗ್ಸ್‌ಗಳನ್ನು ಆಡಿದ್ದು, 23.71 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 452 ರನ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರಾಗಿದ್ದಾರೆ. ಕಳೆದ ವರ್ಷ ಕೆರಿಬಿಯನ್ ಪ್ರವಾಸದ ಸಮಯದಲ್ಲಿ ಅವರು ಆರಂಭಿಕ ಸ್ಥಾನದಿಂದ 3 ನೇ ಸ್ಥಾನಕ್ಕೆ ಇಳಿದಿದ್ದರು. ಆರಂಭಿಕ ಬ್ಯಾಟಿಂಗ್ ಕ್ರಮಾಂಕದಲ್ಲಿ 29 ಇನ್ನಿಂಗ್ಸ್‌ಗಳಲ್ಲಿ 32.37 ರನ್ ಸರಾಸರಿ ಹೊಂದಿದ್ದಾರೆ. ಗಿಲ್ ಅಗ್ರಸ್ಥಾನದಲ್ಲಿ ಬ್ಯಾಟಿಂಗ್ ಮುಂದುವರಿಸಬೇಕಾಗಿತ್ತು ಎಂದು ಲಖ್ವಿಂದರ್ ಅಭಿಪ್ರಾಯಪಟ್ಟಿದ್ದಾರೆ.

ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಾಗ ಒತ್ತಡ ಹೆಚ್ಚಾಗುತ್ತದೆ. ಚೆಂಡು ಹೊಸದಾಗಿದ್ದಾೃಜ ನೀವು ಹೆಚ್ಚು ಸಡಿಲವಾದ ಚೆಂಡುಗಳನ್ನು ಪಡೆಯುತ್ತೀರಿ. ನೀವು 5-7 ಓವರ್‌ಗಳ ನಂತರ ಬಂದಾಗ ಬೌಲರ್ ಕೂಡ ತನ್ನ ಲೈನ್ ಮತ್ತು ಲೆಂಗ್ತ್‌ಗೆ ಅನುಗುಣವಾಗಿರುತ್ತಾನೆ ಎಂದು ಲಖ್ವಿಂದರ್ ಅಭಿಪ್ರಾಯಪಟ್ಟರು. "ಆದರೆ ನಾನು ಅವನ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ನಾನು ಅವನಿಗೆ ತರಬೇತಿ ನೀಡುತ್ತೇನೆ. ಆತನಿಗೆ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ವಯಸ್ಸಾಗಿದೆ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಗಿಲ್ ಎರಡು ಶತಕಗಳನ್ನು ಗಳಿಸುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ರನ್ ಬರವನ್ನು ನೀಗಿಸಿಕೊಂಡಿದ್ದಾರೆ.

ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಸರ್ವ ಪತನ ಕಂಡಿತು. ಇಂಗ್ಲೆಂಡ್ ಪರ ಆರಂಭಿಕ ಬ್ಯಾಟರ್ ಝಾಕ್ ಕ್ರಾಲಿ ಅವರು ಸಿಡಿಸಿದ 79 ರನ್ ತಂಡದ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿತು. ಇವರ ಈ ಅರ್ಧಶಕದಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸೇರಿತ್ತು. ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರ ಆಕರ್ಷಕ ಶತಕಗಳ ನೆರವಿನಿಂದ 2ನೇ ದಿನದಾಟದ (ಮಾರ್ಚ್ 8, ಶುಕ್ರವಾರ) ಅಂತ್ಯದ ವೇಳೆಗೆ 120 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 473 ರನ್ ಗಳಿಸಿದೆ. ಆ ಮೂಲಕ 255 ರನ್‌ಗಳ ಮುನ್ನಡೆಯಲ್ಲಿದೆ. 27 ರನ್ ಗಳಿಸಿರುವ ಕುಲ್ದೀಪ್ ಯಾದವ್ ಮತ್ತು 19 ರನ್ ಗಳಿಸಿರುವ ಜಸ್ಪ್ರೀತ್ ಬುಮ್ರಾ 3ನೇ ದಿನದಾಟಕ್ಕೆ (ಮಾರ್ಚ್ 9, ಶನಿವಾರ) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )