IPL 2024: ಅತಿ ಹೆಚ್ಚು ಸಿಕ್ಸ್ ಸೇರಿ ಆರ್‌ಸಿಬಿ-ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿರ್ಮಿಸಿದ ದಾಖಲೆಗಳಿವು
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ 47 ರನ್‌ಗಳ ಬಾರಿಸಿದ ಆರ್‌ಸಿಯ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ಐಪಿಎಲ್ 2024ರ (IPL 2024) ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ (Virat Kohli) ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅದರಲ್ಲೂ ಶನಿವಾರ (ಮೇ 18) ನಡೆದ ಸಿಎಸ್‌ಕೆ (CSK) ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ 47 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ಮತ್ತಷ್ಟು ದಾಖಲೆಗಳನ್ನು ಬರೆದಿದ್ದಾರೆ.
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ಸಿಕ್ಸರ್‌ಗಳು
2016 ರಲ್ಲಿ 38 ಸಿಕ್ಸ್
2024 ರಲ್ಲಿ 37* ಸಿಕ್ಸ್
2015 ರಲ್ಲಿ 23 ಸಿಕ್ಸ್
2013 ರಲ್ಲಿ 22 ಸಿಕ್ಸ್
700 ಪ್ಲಸ್ ರನ್‌ಗಳ ದಾಖಲೆ
- ವಿರಾಟ್ ಕೊಹ್ಲಿ 2024ರ ಐಪಿಎಲ್‌ನಲ್ಲಿ 708* ರನ್ ಸಿಡಿಸಿದ್ದಾರೆ
- 700 ಪ್ಲಸ್ ರನ್ ಬಾರಿಸಿರುವುದರಲ್ಲೂ ದಾಖಲೆ
- ಈ ದಾಖಲೆ ಬಾರಿದ ಎರಡನೇ ಆಟಗಾರ ವಿರಾಟ್ ಕೊಹ್ಲಿ
- 2016 ರಲ್ಲಿ 973 ರನ್, 2024 ರಲ್ಲಿ 701* ರನ್ ಸಿಡಿಸಿರುವ ಕೊಹ್ಲಿ
- ಕ್ರಿಸ್ ಗೇಲ್ 2012 ರಲ್ಲಿ 733 ರನ್, 2013 ರಲ್ಲಿ 708 ರನ್ ಗಳಿಸಿದ್ದರು
ಐಪಿಎಲ್‌ನಲ್ಲಿ ಸ್ಟೇಡಿಯಂವೊಂದರಲ್ಲಿ ಅತಿ ಹೆಚ್ಚು ರನ್
- ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ 3005*
- ವಾಂಖೆಡೆಯಲ್ಲಿ ರೋಹಿತ್ ಶರ್ಮಾ 2,295 ರನ್
- ಚಿನ್ನಸ್ವಾಮಿಯಲ್ಲಿ ಎಬಿ ಡೆವಿಲಿಯರ್ಸ್ 1,960 ರನ್
ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಭಾರತೀಯ ಆಟಗಾರ
2016 ರಲ್ಲಿ ವಿರಾಟ್ ಕೊಹ್ಲಿ 38 ಸಿಕ್ಸ್
2024 ರಲ್ಲಿ ವಿರಾಟ್ ಕೊಹ್ಲಿ 37* ಸಿಕ್ಸ್
2024ರ ಐಪಿಎಲ್‌ನ ಲೀಗ ಹಂತದವರೆಗೆ ವಿರಾಟ್ ಕೊಹ್ಲಿ ರನ್ ಮಾಹಿತಿ
14 ಪಂದ್ಯಗಳಿಂದ 64.36ರ ಸರಾಸರಿ, 155.60 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 708 ರನ್
5 ಅರ್ಧ ಶತಕಗಳು, 1 ಶತಕ, 59 ಬೌಂಡರಿ, 37 ಸಿಕ್ಸರ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)