ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿವೇಗದ ಅರ್ಧಶತಕ ಚಚ್ಚಿದ ಜೇಕ್ ಫ್ರೇಸರ್-ಮೆಕ್​​ಗುರ್ಕ್; ಮೊದಲ ಸ್ಥಾನ ಯಾರಿಗೆ?

ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿವೇಗದ ಅರ್ಧಶತಕ ಚಚ್ಚಿದ ಜೇಕ್ ಫ್ರೇಸರ್-ಮೆಕ್​​ಗುರ್ಕ್; ಮೊದಲ ಸ್ಥಾನ ಯಾರಿಗೆ?

Jake Fraser-McGurk: ಜೇಕ್ ಫ್ರೇಸರ್-ಮೆಕ್​ಗುರ್ಕ್ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ನಂತರ ಐಪಿಎಲ್​ನಲ್ಲಿ 3ನೇ ವೇಗದ ಅರ್ಧಶತಕ ದಾಖಲಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ 3ನೇ ಅತಿ ವೇಗದ ಅರ್ಧಶತಕ ಚಚ್ಚಿದ ಜೇಕ್ ಫ್ರೇಸರ್-ಮೆಕ್​​ಗುರ್ಕ್
ಐಪಿಎಲ್ ಇತಿಹಾಸದಲ್ಲಿ 3ನೇ ಅತಿ ವೇಗದ ಅರ್ಧಶತಕ ಚಚ್ಚಿದ ಜೇಕ್ ಫ್ರೇಸರ್-ಮೆಕ್​​ಗುರ್ಕ್

ನವದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ 267 ರನ್​​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಸನ್​ರೈಸರ್ಸ್ ಹೈದರಾಬಾದ್ (DC vs SRH) ಶೈಲಿಯಲ್ಲೇ ಇನ್ನಿಂಗ್ಸ್ ಪ್ರಾರಂಭಿಸಿತು. ಅದರಲ್ಲೂ ಜೇಕ್ ಫ್ರೇಸರ್-ಮೆಕ್​ಗುರ್ಕ್ (Jake Fraser-McGurk) ಬ್ಯಾಟಿಂಗ್​ ವೈಭವ ಮತ್ತಷ್ಟು ರೋಮಾಂಚನಗೊಳಿಸಿತು. ಇದೇ ಪಂದ್ಯದಲ್ಲಿ ಯುವ ಆಟಗಾರ ಜೇಕ್ ಫ್ರೇಸರ್, ತಮ್ಮ ಆಸ್ಟ್ರೇಲಿಯಾದ ಹಿರಿಯ ಆಟಗಾರ ಟ್ರಾವಿಸ್ ಹೆಡ್ ದಾಖಲೆಯನ್ನು ಬ್ರೇಕ್ ಮಾಡಿದ್ದಲ್ಲದೆ, ಐಪಿಎಲ್​ ಇತಿಹಾಸದಲ್ಲಿ ವೇಗದ ಅರ್ಧಶತಕ ಬಾರಿಸಿದರು.

ಟ್ರೆಂಡಿಂಗ್​ ಸುದ್ದಿ

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿ ದಾಖಲೆ ನಿರ್ಮಿಸಿದರು. ಇದು ಐಪಿಎಲ್​​ ಇತಿಹಾಸದಲ್ಲಿ ಮೂರನೇ ವೇಗದ ಮತ್ತು ಐಪಿಎಲ್ 2024ರಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೇಕ್ ಫ್ರೇಸರ್-ಮೆಕ್​ಗುರ್ಕ್ 353.33ರ ಸ್ಟ್ರೈಕ್ ರೇಟ್​​ನೊಂದಿಗೆ ಬ್ಯಾಟ್ ಬೀಸಿದ್ದು, ಕೇವಲ 18 ಎಸೆತಗಳಲ್ಲಿ 7 ಸಿಕ್ಸರ್​ ಮತ್ತು 5 ಬೌಂಡರಿ ಸಹಿತ 65 ರನ್ ಚಚ್ಚಿದರು. ಇದರೊಂದಿಗೆ ಡೆಲ್ಲಿಗೆ ಗೆಲುವಿನ ಆಸೆ ಹುಟ್ಟಿಸಿದ್ದರು.

ಆದರೆ, 7ನೇ ಓವರ್​​ನ ಅಂತಿಮ ಎಸೆತದಲ್ಲಿ ಮಯಾಂಕ್ ಮಾರ್ಕಂಡೆ ಬೌಲಿಂಗ್​ನಲ್ಲಿ ಫ್ರೇಸರ್-ಮೆಕ್​ಗುರ್ಕ್ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರೊಂದಿಗೆ ಡೆಲ್ಲಿ ಬ್ಯಾಟಿಂಗ್ ಕೂಡ ಕುಸಿಯಿತು. ಅಲ್ಲದೆ, ಸೋಲಿಗೂ ಶರಣಾಯಿತು. ಸೋತರೂ ಮೆಕ್​ಗುರ್ಕ್ ಆಟ ಎಲ್ಲರ ಗಮನ ಸೆಳೆಯಿತು. 267 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಪರ ರಿಷಭ್ ಪಂತ್ ಸಹ ಮಿಂಚಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ವಾರ್ನರ್, ಪೃಥ್ವಿ ಶಾ ಸಹ ಅಬ್ಬರಿಸಲಿಲ್ಲ. ಫ್ರೇಸರ್​ನಂತೆ ಉಳಿದವರೂ ಆರ್ಭಟಿಸಿದ್ದರೆ, ಗೆಲ್ಲುವ ಸಾಧ್ಯತೆ ಇತ್ತು.

ಐಪಿಎಲ್​ನಲ್ಲಿ ಅತಿವೇಗದ ಅರ್ಧಶತಕ

ರಾಜಸ್ಥಾನ್ ರಾಯಲ್ಸ್‌ನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕದ ದಾಖಲೆ ಹೊಂದಿದ್ದಾರೆ. 2023ರ ಮೇ 11ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 13 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದ್ದರು. ಅಂದು ಜೈಸ್ವಾಲ್ 47 ಎಸೆತಗಳಲ್ಲಿ 98* ರನ್ ಗಳಿಸಿದ್ದರು. ಲಕ್ನೋ ಸೂಪರ್ ಜೈಂಟ್ಸ್ ನಾಯಕ ಮತ್ತು ಪಂಜಾಬ್ ಕಿಂಗ್ಸ್ ಮಾಜಿ ನಾಯಕ ಕೆಎಲ್ ರಾಹುಲ್ ಐಪಿಎಲ್ ಇತಿಹಾಸದಲ್ಲಿ 2ನೇ ಅತಿವೇಗದ ಹಾಫ್ ಸೆಂಚುರಿ ಸಿಡಿಸಿದ್ದಾರೆ.

ರಾಹುಲ್ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಹಿಂದೆ ಡೆಲ್ಲಿ ಡೇರ್ ಡೆವಿಲ್ಸ್ ಎಂದು ಕರೆಯಲಾಗುತ್ತಿತ್ತು) ವಿರುದ್ಧ 14 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ನಂತರದ ಸ್ಥಾನದಲ್ಲಿ ಪ್ಯಾಟ್ ಕಮ್ಮಿನ್ಸ್ ಇದ್ದಾರೆ. ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ರಾಹುಲ್ ಜೊತೆ ಜಂಟಿ ದಾಖಲೆ ಬರೆದಿದ್ದಾರೆ. ಕೆಕೆಆರ್ ಪರ ಆಡುತ್ತಿದ್ದ ವೇಳೆ ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ 50 ಬಾರಿಸಿದ್ದರು.

ಆಟಗಾರ
ಎದುರಿಸಿದ ಎಸೆತಗಳು
ವಿರುದ್ಧ
ಪಂದ್ಯದ ದಿನಾಂಕ
ಯಶಸ್ವಿ ಜೈಸ್ವಾಲ್ (ಆರ್​)
13
ಕೆಕೆಆರ್
11 ಮೇ 2023
ಕೆಎಲ್ ರಾಹುಲ್ (ಪಿಬಿಕೆಎಸ್)
14
ಡಿಸಿ
08 ಏಪ್ರಿಲ್ 2018
ಪ್ಯಾಟ್ ಕಮಿನ್ಸ್ (ಕೆಕೆಆರ್)
14
ಎಂಐ
06 ಏಪ್ರಿಲ್ 2022
ಜೇಕ್ ಫ್ರೇಸ್-ಮ್ಯಾಕ್‌ಗುರ್ಕ್ (ಡಿಸಿ)
15
ಡಿಸಿ
20 ಏಪ್ರಿಲ್ 2024
ಯೂಸುಫ್ ಪಠಾಣ್ (ಕೆಕೆಆರ್)
15
ಎಸ್​ಆರ್​​ಹೆಚ್
24 ಮೇ 2014
ನಿಕೋಲಸ್ ಪೂರನ್ (ಎಲ್​ಎಸ್​ಜಿ)
15
ಎಲ್​ಎಸ್​ಜಿ
10 ಏಪ್ರಿಲ್ 2023
ಸುನಿಲ್ ನರೈನ್ (ಕೆಕೆಆರ್)
15
ಆರ್​ಸಿಬಿ
07 ಮೇ 2017
ಸುರೇಶ್ ರೈನಾ (ಸಿಎಸ್​ಕೆ)
16
ಪಿಬಿಕೆಎಸ್
30 ಮೇ 2014
ಅಭಿಷೇಕ್ ಶರ್ಮಾ (ಎಸ್​ಆರ್​​ಹೆಚ್)16ಎಂಐ27 ಮಾರ್ಚ್, 2024
ಟ್ರಾವಿಸ್ ಹೆಡ್ (ಎಸ್​ಆರ್​​ಹೆಚ್)16ಡಿಸಿ20 ಏಪ್ರಿಲ್ 2024

 

IPL_Entry_Point