ಕನ್ನಡ ಸುದ್ದಿ  /  ಕ್ರಿಕೆಟ್  /  ಚೆನ್ನೈ ಸೂಪರ್​ ಕಿಂಗ್ಸ್ ಬೇಟೆಯಾಡಿದ ಕನ್ನಡಿಗ ಕೆಎಲ್ ರಾಹುಲ್; ಸತತ 2 ಸೋಲುಗಳ ನಂತರ ಗೆದ್ದು ಬೀಗಿದ ಲಕ್ನೋ

ಚೆನ್ನೈ ಸೂಪರ್​ ಕಿಂಗ್ಸ್ ಬೇಟೆಯಾಡಿದ ಕನ್ನಡಿಗ ಕೆಎಲ್ ರಾಹುಲ್; ಸತತ 2 ಸೋಲುಗಳ ನಂತರ ಗೆದ್ದು ಬೀಗಿದ ಲಕ್ನೋ

Lucknow Super Giants vs Chennai Super Kings: 17ನೇ ಆವೃತ್ತಿಯ ಐಪಿಎಲ್​ನ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್​​ಗಳ ಜಯ ಸಾಧಿಸಿತು.

ಚೆನ್ನೈ ಸೂಪರ್​ ಕಿಂಗ್ಸ್ ಬೇಟೆಯಾಡಿದ ಕನ್ನಡಿಗ ಕೆಎಲ್ ರಾಹುಲ್
ಚೆನ್ನೈ ಸೂಪರ್​ ಕಿಂಗ್ಸ್ ಬೇಟೆಯಾಡಿದ ಕನ್ನಡಿಗ ಕೆಎಲ್ ರಾಹುಲ್ (PTI)

ನಾಯಕ ಕೆಎಲ್ ರಾಹುಲ್ (82) ಮತ್ತು ಕ್ವಿಂಟನ್ ಡಿ ಕಾಕ್ (82) ಅವರ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪಕ್ ಕಿಂಗ್ಸ್ ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್​ಗಳ ಅಮೋಘ ಜಯ ಸಾಧಿಸಿತು. ಬ್ಯಾಟಿಂಗ್ ಜತೆಗೆ ಬೌಲಿಂಗ್​​ನಲ್ಲೂ ಮಿಂಚಿದ ಲಕ್ನೋ, ಸಿಎಸ್​ಕೆ ತಂಡದ ವಿರುದ್ಧ ಸವಾರಿ ನಡೆಸಿತು. ಸತತ ಎರಡು ಸೋಲುಗಳ ನಂತರ ಲಕ್ನೋ ಜಯದ ಟ್ರ್ಯಾಕ್​ಗೆ ಮರಳಿದ್ದು, ಟೂರ್ನಿಯಲ್ಲಿ 4ನೇ ಗೆಲುವಿಗೆ ಮುತ್ತಿಕ್ಕಿದೆ. ಚೆನ್ನೈ ಮೂರನೇ ಸೋಲಿಗೆ ಶರಣಾಯಿತು.

ಟ್ರೆಂಡಿಂಗ್​ ಸುದ್ದಿ

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ, ಉತ್ತಮ ಮೊತ್ತ ಕಲೆ ಹಾಕಿತು. ರವೀಂದ್ರ ಜಡೇಜಾ ಅರ್ಧಶತಕದ ಸಿಡಿಸಿದ ಪರಿಣಾಮ ಚೆನ್ನೈ 20 ಓವರ್​ಗೆ 6 ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಲಕ್ನೋ 19 ಓವರ್​​ಗಳಲ್ಲಿ 2 ವಿಕೆಟ್ ನಷ್ಟಕ್ಕೆ ದಿಗ್ವಿಜಯ ಸಾಧಿಸಿತು. ಕೆಎಲ್ ರಾಹುಲ್ ನಾಯಕನಾಟ ಆಡಿದರೆ, ಕ್ವಿಂಟನ್ ಡಿ ಕಾಕ್ ಸಖತ್ ಸಾಥ್ ನೀಡಿದರು.

ಲಕ್ನೋ ಬ್ಯಾಟಿಂಗ್​

177 ರನ್​ಗಳ ಸ್ಪರ್ಧಾತ್ಮಕ ಸವಾಲು ಬೆನ್ನಟ್ಟಿದ ಎಲ್​ಎಸ್​ಜಿ ಭರ್ಜರಿ ಆರಂಭ ಪಡೆಯಿತು. ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್​ಗೆ ದಾಖಲೆ 134 ರನ್​ಗಳ ಪಾಲುದಾರಿಕೆ ನೀಡಿದರು. ಈ ಮೈದಾನದಲ್ಲಿ ಇದೇ ಗರಿಷ್ಠ ಜೊತೆಯಾಟವಾಗಿದೆ. ಆರಂಭಿಕರು ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಡಿ ಕಾಕ್ 53 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ಸಹಿತ 54 ರನ್ ಗಳಿಸಿದರು. ರಾಹುಲ್ 53 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್​ ಸಹಿತ 82 ಚಚ್ಚಿದರು.

ಓಪನರ್ಸ್ ನೀಡಿದ ಉತ್ತಮ ಪ್ರದರ್ಶನದ ಕಾರಣ ಲಕ್ನೋ ಸುಲಭವಾಗಿ ಜಯದ ಗೆರೆ ದಾಟಲು ನೆರವಾಯಿತು. ಈ ಇಬ್ಬರನ್ನೂ ಮುಸ್ತಫಿಜುರ್ ರೆಹಮಾನ್ ಮತ್ತು ಮತೀಶಾ ಪತಿರಾಣ ಔಟ್ ಮಾಡಿದರು. ಆದರೆ ಈ ವಿಕೆಟ್​​ಗಳು ಲಕ್ನೋ ತಂಡದ ಮೇಲೆ ಪರಿಣಾಮ ಬೀರಿಲ್ಲ. ಏಕೆಂದರೆ ಅದಾಗಲೇ ಎಲ್​ಎಸ್​ಜಿ ಗೆಲುವಿನ ಸನಿಹಕ್ಕೆ ಬಂದಿತ್ತು. ಕೊನೆಯಲ್ಲಿ ನಿಕೋಲಸ್ ಪೂರನ್ 23 ರನ್ ಮತ್ತು ಮಾರ್ಕಸ್ ಸ್ಟೊಯ್ನಿಸ್ 8 ರನ್ ಸಿಡಿಸಿ ಜಯದ ಕಾಣಿಕೆ ನೀಡಿದರು. 19 ಓವರ್​​ಗಳಲ್ಲಿ ಗೆದ್ದು ಬೀಗಿತು.

ಸಿಎಸ್​ಕೆ ಬ್ಯಾಟಿಂಗ್

ಮೊದಲು ಬ್ಯಾಟಿಂಗ್ ನಡೆಸಿದ್ದ ಸಿಎಸ್​ಕೆ ಉತ್ತಮ ಆರಂಭ ಪಡೆದಿರಲಿಲ್ಲ. ರಚಿನ್ ರವೀಂದ್ರ ಡಕೌಟ್ ಆದರೆ, ಋತುರಾಜ್ ಗಾಯಕ್ವಾಡ್ 17 ರನ್​ಗೆ ಆಟ ಮುಗಿಸಿದರು. ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜಾ ಆರಂಭಿಕ ಆಘಾತಕ್ಕೆ ಚೇತರಿಕೆ ನೀಡಿದರೂ ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ರಹಾನೆ 36 ರನ್ ಗಳಿಸಿದರೆ, ಜಡೇಜಾ ಬಡ್ತಿ ಪಡೆದು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅರ್ಧಶತಕ ಬಾರಿಸಿ ಅಜೇಯರಾಗಿ ಉಳಿದರು.

ಶಿವಂ ದುಬೆ (3), ಸಮೀರ್ ರಿಜ್ವಿ (1) ನಿರಾಸೆ ಮೂಡಿಸಿದರು. ಮೊಯಿನ್ ಅಲಿ 30 ರನ್ ಸಿಡಿಸಿದರೆ, ಎಂಎಸ್ ಧೋನಿ ಮತ್ತೊಮ್ಮೆ ಕೊನೆಯಲ್ಲಿ ಮಿಂಚಿದರು. ಕೇವಲ 9 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ ಸಹಿತ 28 ರನ್ ಚಚ್ಚಿದರು. ಸ್ಟ್ರೈಕ್​​ರೇಟ್ 311.11 ಇತ್ತು. ಲಕ್ನೋ ಬೌಲರ್​​ಗಳು ಟೈಟ್ ಬೌಲಿಂಗ್ ನಡೆಸಿದ ಕಾರಣ ಚೆನ್ನೈ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಕೃನಾಲ್ 2, ಮೊಹ್ಸಿನ್ ಖಾನ್, ಯಶ್ ಠಾಕೂರ್, ರವಿ ಬಿಷ್ಣೋಯ್, ಮಾರ್ಕಸ್ ಸ್ಟೊಯ್ನಿಸ್ ತಲಾ 1 ವಿಕೆಟ್ ಪಡೆದರು.

 

IPL_Entry_Point