ಮಯಾಂಕ್ ಡಾಗರ್​ ಇನ್, ಯಶ್ ದಯಾಳ್ ಔಟ್; ಬಲಿಷ್ಠ ಕೆಕೆಆರ್​ ವಿರುದ್ಧದ ಪಂದ್ಯಕ್ಕೆ ಆರ್​​ಸಿಬಿ ಸಂಭಾವ್ಯ ಪ್ಲೇಯಿಂಗ್ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಮಯಾಂಕ್ ಡಾಗರ್​ ಇನ್, ಯಶ್ ದಯಾಳ್ ಔಟ್; ಬಲಿಷ್ಠ ಕೆಕೆಆರ್​ ವಿರುದ್ಧದ ಪಂದ್ಯಕ್ಕೆ ಆರ್​​ಸಿಬಿ ಸಂಭಾವ್ಯ ಪ್ಲೇಯಿಂಗ್ Xi

ಮಯಾಂಕ್ ಡಾಗರ್​ ಇನ್, ಯಶ್ ದಯಾಳ್ ಔಟ್; ಬಲಿಷ್ಠ ಕೆಕೆಆರ್​ ವಿರುದ್ಧದ ಪಂದ್ಯಕ್ಕೆ ಆರ್​​ಸಿಬಿ ಸಂಭಾವ್ಯ ಪ್ಲೇಯಿಂಗ್ XI

RCB Playing XI vs KKR : 17ನೇ ಆವೃತ್ತಿಯ ಐಪಿಎಲ್​ನ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ಪ್ಲೇಯಿಂಗ್ XI ಇಲ್ಲಿದೆ.

ಬಲಿಷ್ಠ ಕೆಕೆಆರ್​ ವಿರುದ್ಧದ ಪಂದ್ಯಕ್ಕೆ ಆರ್​​ಸಿಬಿ ಸಂಭಾವ್ಯ ಪ್ಲೇಯಿಂಗ್ XI
ಬಲಿಷ್ಠ ಕೆಕೆಆರ್​ ವಿರುದ್ಧದ ಪಂದ್ಯಕ್ಕೆ ಆರ್​​ಸಿಬಿ ಸಂಭಾವ್ಯ ಪ್ಲೇಯಿಂಗ್ XI

2024ರ ಐಪಿಎಲ್​ನ 36ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ಹೈವೋಲ್ಟೇಜ್ ಕಾದಾಟಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನವು ಆತಿಥ್ಯ ವಹಿಸಲಿದೆ. 7 ಪಂದ್ಯಗಳಿಂದ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿರುವ ಆರ್​​ಸಿಬಿಗೆ ಪ್ರತಿ ಪಂದ್ಯವು ಸೆಮಿಫೈನಲ್​ ಆಗಿದ್ದು ಒಂದು ಪಂದ್ಯ ಸೋತರೂ ಬಹುತೇಕ ಎಲಿಮಿನೇಷನ್​ ಆಗಲಿದೆ. ಮತ್ತೊಂದೆಡೆ ಕೆಕೆಆರ್​ 6 ಪಂದ್ಯಗಳಲ್ಲಿ 4 ಗೆದ್ದು, 8 ಅಂಕ ಪಡೆದು 3ನೇ ಸ್ಥಾನದಲ್ಲಿದೆ.

ಆರ್​ಸಿಬಿ ಪ್ಲೇಆಫ್​ ರೇಸ್​​ನಲ್ಲಿ ಉಳಿಯಬೇಕೆಂದರೆ ಬ್ಯಾಟರ್‌ಗಳು ಕೆಕೆಆರ್‌ ಸ್ಪಿನ್ನರ್‌ಗಳ ವಿರುದ್ಧ, ಅದರಲ್ಲೂ ವಿಶೇಷವಾಗಿ ಸುನಿಲ್ ನರೈನ್ ವಿರುದ್ಧದ ಯುದ್ಧವನ್ನು ಗೆಲ್ಲಬೇಕಾಗುತ್ತದೆ. ವಿರಾಟ್ ಕೊಹ್ಲಿ ವರ್ಷಗಳ ಕಾಲ ರೆಡ್​ ಆರ್ಮಿಯ ಬ್ಯಾಟಿಂಗ್‌ನ ಟಾರ್ಚ್-ಬೇರರ್ ಆಗಿದ್ದಾರೆ. ಆದರೂ ಕಳೆದ ಕೆಲವು ವರ್ಷಗಳಿಂದ ಟಿ20ಗಳಲ್ಲಿ ಸ್ಪಿನ್ ಫೋಬಿಯಾಗೆ ಒಳಗಾಗಿದ್ದಾರೆ. 2020ರಿಂದ ಸ್ಪಿನ್ ವಿರುದ್ಧ ಅವರ ಸ್ಟ್ರೈಕ್ ರೇಟ್ 113.52, ವೇಗಿಗಳ ವಿರುದ್ಧ 145.79 ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಅದಾಗಿಯೂ ಕೊಹ್ಲಿ ಈ ಸಮಸ್ಯೆಗೆ ಈ ಬಾರಿ ಸ್ವಲ್ಪಮಟ್ಟಿಗೆ ಪರಿಹರಿಸಿಕೊಂಡಂತಿದ್ದಾರೆ.

ಐಪಿಎಲ್ 2024ರಲ್ಲಿ ಸ್ಪಿನ್ ವಿರುದ್ಧ 130.09ರ ಸ್ಟ್ರೈಕ್​​ರೇಟ್​​ನಲ್ಲಿ ರನ್ ಕಲೆ ಹಾಕಿದ್ದಾರೆ. ಇದೇ ಐಪಿಎಲ್​ನಲ್ಲಿ ಕೆಕೆಆರ್​ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ನರೈನ್ (12 ರಲ್ಲಿ 21) ವಿರುದ್ಧ ಮೇಲುಗೈ ಸಾಧಿಸಿದ್ದರು. ಆದರೆ, ಈಡನ್ ಗಾರ್ಡನ್‌ನಲ್ಲಿ ಇದು ಸುಲಭವಲ್ಲ, ವಿಶೇಷವಾಗಿ ಪಿಚ್ ನಿಧಾನಗತಿಯಲ್ಲಿದ್ದರೆ, ರನ್ ಗಳಿಸುವುದು ಕಷ್ಟವಾಗಬಹುದು. ಅದರಲ್ಲೂ ನರೇನ್ ವಿರುದ್ಧ ಕೊಹ್ಲಿ ದಾಖಲೆ ಉತ್ತಮವಾಗಿಲ್ಲ. 157 ಎಸೆತಗಳಲ್ಲಿ 162 ರನ್ ಗಳಿಸಿದ್ದು 4 ಬಾರಿ ವಿಕೆಟ್ ಒಪ್ಪಿಸಿದ್ದಾರೆ.

ಕೇವಲ ಕೊಹ್ಲಿ ಅಲ್ಲ, ಫಾಫ್ ಡು ಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಕೂಡ ನರೈನ್ ವಿರುದ್ಧ ರನ್ ಗಳಿಸಲು ಪರದಾಡಿದ್ದಾರೆ. ನರೇನ್ ಎದುರು ಡು ಪ್ಲೆಸಿಸ್ 77.14 ಮತ್ತು ಕಾರ್ತಿಕ್ 119.29 ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಈ ಋತುವಿನಲ್ಲಿ ನರೈನ್ ಆರು ಪಂದ್ಯಗಳಲ್ಲಿ ಏಳು ವಿಕೆಟ್‌ ಪಡೆದಿದ್ದು, 6.87ರ ಎಕಾನಮಿ ಹೊಂದಿದ್ದಾರೆ. ನರೇನ್ ಬ್ಯಾಟ್‌ನಲ್ಲೂ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಆರಂಭಿಕರಾಗಿ 187.75ರ ಸ್ಟ್ರೈಕ್​ರೇಟ್‌ನಲ್ಲಿ 276 ರನ್ ಗಳಿಸಿದ್ದಾರೆ.

ಕಳೆದ ಮುಖಾಮುಖಿಯಲ್ಲಿ ಗೆದ್ದಿತ್ತು ಕೆಕೆಆರ್​

ಈ ಪಂದ್ಯಕ್ಕೂ ಮುನ್ನ ಕೆಕೆಆರ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕೊಹ್ಲಿ, 59 ಎಸೆತಗಳಲ್ಲಿ ಅಜೇಯ 83 ರನ್ ಗಳಿಸುವುದರೊಂದಿಗೆ 6 ವಿಕೆಟ್‌ಗೆ 182 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ, ನರೈನ್ 22 ಎಸೆತಗಳಲ್ಲಿ 47 ರನ್, ವೆಂಕಟೇಶ್ ಅಯ್ಯರ್ 30 ರಲ್ಲಿ 50 ರನ್ ಗಳಿಸಿ ಕೆಕೆಆರ್ 17ನೇ ಓವರ್‌ನಲ್ಲಿ ಗುರಿ ಬೆನ್ನಟ್ಟಿತು.

ಕೆಕೆಆರ್​​ ಟೀಮ್ ನ್ಯೂಸ್​

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತೊಬ್ಬ ಸ್ಪಿನ್ನರ್​ ಅನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ವೇಗಿ ವೈಭವ್ ಅರೋರಾ ಬದಲಿಗೆ ಮೂರನೇ ಸ್ಪಿನ್ನರ್ ಸುಯಾಶ್ ಶರ್ಮಾ ಅವರನ್ನು ಆಡಿಸಬಹುದು. ಕೆಕೆಆರ್ ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುತ್ತದೆಯೇ ಎಂಬುದರ ಆಧಾರದ ಮೇಲೆ ಸುಯಾಶ್ ಮತ್ತು ರಮಣದೀಪ್ ಸಿಂಗ್ ಅವರಲ್ಲಿ ಒಬ್ಬರು ಇಂಪ್ಯಾಕ್ಟ್ ಪ್ಲೇಯರ್ ಆಗಬಹುದು.

ಕೆಕೆಆರ್​​ ಸಂಭಾವ್ಯ ಪ್ಲೇಯಿಂಗ್​ XI: ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್ , ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ

ಆರ್​ಸಿಬಿ ಟಿಮ್ ನ್ಯೂಸ್

ಆರ್​​ಸಿಬಿ ತಂಡದಲ್ಲಿ ವಿಲ್ ಜಾಕ್ಸ್ ನಂ. 3 ರಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಯಶ್ ದಯಾಳ್ ಬದಲಿಗೆ ಮಯಾಂಕ್ ಡಾಗರ್ ಅವರನ್ನು ಕರೆತರುವ ಬಗ್ಗೆ ನಿರೀಕ್ಷೆಯಿದೆ. ಅನೂಜ್ ರಾವತ್ ಇಂಪ್ಯಾಕ್ಟ್ ಪ್ಲೇಯರ್ ಆಗಬಹುದು. ಗ್ಲೆನ್ ಮ್ಯಾಕ್ಸ್​ವೆಲ್ ವಿರಾಮ ಪಡೆದಿದ್ದಾರೆ. ಕ್ಯಾಮರೂನ್ ಗ್ರೀನ್​ ಅವರನ್ನು ಆಡಿಸುವ ಚಿಂತನೆ ನಡೆಸಿಲ್ಲ.

ಆರ್​ಸಿಬಿ ಸಂಭಾವ್ಯ XI: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟೀದಾರ್, ಸೌರವ್ ಚೌಹಾಣ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, 9 ವಿಜಯ್ ಕುಮಾರ್ ವೈಶಾಕ್, ರೀಸ್ ಟೋಪ್ಲಿ, ಲಾಕಿ ಫರ್ಗುಸನ್, 12 ಮಯಾಂಕ್ ಡಾಗರ್.

 

Whats_app_banner