ಕನ್ನಡ ಸುದ್ದಿ  /  ಕ್ರಿಕೆಟ್  /  ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಇಲ್ಲ; ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್ ಪಂದ್ಯಕ್ಕೆ ಭಾರತದ ಸಂಭಾವ್ಯ Xi

ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಇಲ್ಲ; ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್ ಪಂದ್ಯಕ್ಕೆ ಭಾರತದ ಸಂಭಾವ್ಯ XI

India vs Ireland T20 World Cup 2024: ಜೂನ್ 5ರ ಬುಧವಾರ ಐರ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿರುವ ಟೀಮ್ ಇಂಡಿಯಾ, ಅಚ್ಚರಿಯ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸಲು ಸಿದ್ಧವಾಗಿದೆ.

ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಇಲ್ಲ; ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್ ಪಂದ್ಯಕ್ಕೆ ಭಾರತದ ಸಂಭಾವ್ಯ XI
ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಇಲ್ಲ; ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್ ಪಂದ್ಯಕ್ಕೆ ಭಾರತದ ಸಂಭಾವ್ಯ XI

ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಜೂನ್ 5ರ ಬುಧವಾರ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೆಣಸಾಟ ನಡೆಸಲು ಸಜ್ಜಾಗಿದೆ. 2013ರ ನಂತರ ಐಸಿಸಿ ಟ್ರೋಫಿ ಗೆಲ್ಲಲು ಹೊರಟಿರುವ ಭಾರತ ತಂಡ, ಎ ಗುಂಪಿಯಲ್ಲಿ ಐರಿಷ್ ತಂಡವನ್ನು ಎದುರಿಸಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಲಿದೆ.

ಟ್ರೆಂಡಿಂಗ್​ ಸುದ್ದಿ

ಮಾರ್ಚ್​ 22 ರಿಂದ ಮೇ 26ರ ತನಕ ನಡೆದ ಎರಡು ತಿಂಗಳ 2024ರ ಇಂಡಿಯನ್ ಪ್ರೀಮಿಯರ್ ಲೀಗ್​​ ಆಡಿರುವ ಭಾರತೀಯ ಆಟಗಾರರು, ಇತರೆ ಆಟಗಾರರಿಗೆ ಹೋಲಿಸಿದರೆ ಹೆಚ್ಚು ತರಬೇತಿ ಪಡೆದಿದ್ದಾರೆ. ಇದೇ ಅನುಭವದೊಂದಿಗೆ ಮೆಗಾ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾದ ರೋಹಿತ್​​ ಪಡೆ, ಐರ್ಲೆಂಡ್ ಅನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಆದಾಗ್ಯೂ, ತಂಡದ ಸಂಯೋಜನೆಯು ನಿಗೂಢವಾಗಿಯೇ ಉಳಿದಿದೆ.

ಮೆನ್ ಇನ್ ಬ್ಲೂ ಸುಮಾರು 6+ ತಿಂಗಳವರೆಗೆ ಅಂತಾರಾಷ್ಟ್ರೀಯ ಟಿ20ಐ ಪಂದ್ಯವನ್ನಾಡಿಲ್ಲ. ರೋಹಿತ್ ಶರ್ಮಾ ನೇತೃತ್ವದ ತಂಡವು ಕೊನೆಯ ಬಾರಿಗೆ ಜನವರಿ 17 ರಂದು ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ಎದುರು ಟಿ20ಐ ಆಡಿತ್ತು. ಬಳಿಕ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದ ಭಾರತೀಯ ಆಟಗಾರರು, ನಂತರ 2 ತಿಂಗಳ ಕಾಲ ಐಪಿಎಲ್​ನಲ್ಲಿ ಬ್ಯುಸಿ ಆಗಿದ್ದರು. ಇದೀಗ ಟಿ20 ವಿಶ್ವಕಪ್​ ಆಡಲಿದ್ದಾರೆ.

ಭಾರತದ ಅಚ್ಚರಿಯ ಪ್ಲೇಯಿಂಗ್​ XI

ಟೀಮ್ ಇಂಡಿಯಾ ಪ್ಲೇಯಿಂಗ್ XI ಹೇಗಿರಲಿದೆ? ಈ ಪ್ರಶ್ನೆ, ಟೂರ್ನಿಗೆ ಭಾರತ ತಂಡ ಪ್ರಕಟವಾದಾಗಿನಿಂದಲೂ ಕೇಳಿಬರುತ್ತಿದೆ. ಆರಂಭಿಕ ಜೋಡಿ ಯಾರೆಂದು ಇನ್ನೂ ಖಚಿತಗೊಂಡಿಲ್ಲ. ತಂಡದಲ್ಲಿ ಯಶಸ್ವಿ ಜೈಸ್ವಾಲ್ ಇದ್ದರೂ ವಿರಾಟ್ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಇನ್ನಿಂಗ್ಸ್ ಆರಂಭಿಸಬೇಕು ಎಂಬುದು ಎಲ್ಲರ ಅಭಿಪ್ರಾಯ. ಟೀಮ್ ಮ್ಯಾನೇಜ್ಮೆಂಟ್ ಸಹ ಜೈಸ್ವಾಲ್ ಬಿಟ್ಟು ಇವರನ್ನೇ ಆಡಿಸಲು ನಿರ್ಧರಿಸಿದೆ.

ಐಪಿಎಲ್​ನಲ್ಲಿ ಆರಂಭಿಕರಾಗಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ ಅಚ್ಚರಿ ಅಂದರೆ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ಇದೆ. ಆದರೆ ಸಂಜು ಸ್ಯಾಮ್ಸನ್​ ಬೆಂಚ್ ಬಿಸಿ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. ಸೂರ್ಯಕುಮಾರ್​ ತನ್ನ ನಾಲ್ಕನೇ ಸ್ಥಾನದಲ್ಲೇ ಬ್ಯಾಟ್ ಬೀಸಲಿದ್ದಾರೆ.

ಹಾರ್ದಿಕ್ ಪಾಂಡ್ಯ ನಂತರ ಸ್ಥಾನ ಪಡೆದರೆ, ಶಿವಂ ದುಬೆ ಅವರು ಫಿನಿಷರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಅವರು ಮಧ್ಯಮ ವೇಗದ ಬೌಲಿಂಗ್ ಆಲ್​ರೌಂಡರ್ ಕೂಡ ಆಗಿದ್ದಾರೆ. ಅಮೆರಿಕ ಪಿಚ್​​ಗಳಲ್ಲಿ ಸ್ಪಿನ್ ಹೆಚ್ಚು ವರ್ಕೌಟ್ ಆಗುತ್ತಿರುವ ಕಾರಣ ಮೂವರು ಸ್ಪಿನ್ನರ್​​ಗಳನ್ನು ಕಣಕ್ಕಿಳಿಸಲು ಮ್ಯಾನೇಜ್ಮೆಂಟ್ ಚಿಂತಿಸಿದೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಪಿನ್​​ ಆಲ್​​ರೌಂಡರ್​​ಗಳಾದರೆ ಕುಲ್ದೀಪ್​ ಯಾದವ್ ಸ್ಥಾನ ಪಡೆಯಲಿದ್ದಾರೆ.

ಆದರೆ, ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಲ್​ ಅವರಿಗೆ ಸ್ಥಾನ ಪಡೆಯುವುದು ಬಹುತೇಕ ಅನುಮಾನ. ಇನ್ನು ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಅರ್ಷದೀಪ್​ ಸಿಂಗ್ ಅವರು ಕಣಕ್ಕಿಳಿಯಲಿದ್ದಾರೆ. ಆದರೆ ಮೊಹಮ್ಮದ್ ಸಿರಾಜ್ ಕೂಡ ಅವಕಾಶ ವಂಚಿತರಾಗಲಿದ್ದಾರೆ. ಆಡುವ ಕ್ರಮಾಂಕದಲ್ಲಿ ಬದಲಾವಣೆಯಾದರೂ ಬಹುತೇಕ ಇದೇ ತಂಡ ಕಣಕ್ಕಿಳಿಯುವುದು ಖಚಿತವಾಗಿದೆ.

ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ XI

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್.

ಇನ್ನಷ್ಟು ಟಿ20 ವಿಶ್ವಕಪ್​ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ