ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು 100 ಪರ್ಸೆಂಟ್ ರೆಡಿ; ಟಿ20 ವಿಶ್ವಕಪ್​ಗೆ ಭಾರತ ತಂಡದ ಆಯ್ಕೆ ಕುರಿತು ದಿನೇಶ್ ಕಾರ್ತಿಕ್ ಮನದಾಳದ ಮಾತು

ನಾನು 100 ಪರ್ಸೆಂಟ್ ರೆಡಿ; ಟಿ20 ವಿಶ್ವಕಪ್​ಗೆ ಭಾರತ ತಂಡದ ಆಯ್ಕೆ ಕುರಿತು ದಿನೇಶ್ ಕಾರ್ತಿಕ್ ಮನದಾಳದ ಮಾತು

Dinesh Karthik: ಟಿ20 ವಿಶ್ವಕಪ್​ ಆರಂಭದ ದಿನವೇ 39ನೇ ವರ್ಷಕ್ಕೆ ಕಾಲಿಡಲಿರುವ ದಿನೇಶ್​ ಕಾರ್ತಿಕ್, ಚುಟುಕು ಸಮರಕ್ಕೆ ಭಾರತ ತಂಡದಲ್ಲಿ ಅವಕಾಶ ಪಡೆಯಲು ನನ್ನ ಕೈಲಾದಷ್ಟು ಪೈಪೋಟಿ ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್​ಗೆ ಭಾರತ ತಂಡದ ಆಯ್ಕೆ ಕುರಿತು ದಿನೇಶ್ ಕಾರ್ತಿಕ್ ಮನದಾಳದ ಮಾತು
ಟಿ20 ವಿಶ್ವಕಪ್​ಗೆ ಭಾರತ ತಂಡದ ಆಯ್ಕೆ ಕುರಿತು ದಿನೇಶ್ ಕಾರ್ತಿಕ್ ಮನದಾಳದ ಮಾತು

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challeners Bengaluru) ವಿಕೆಟ್ ಕೀಪರ್​-ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ (Dinesh Karthik) ಅವರು 'ನಾನು ಟಿ20 ವಿಶ್ವಕಪ್ (T20 World Cup 2024)​ ಸಿದ್ಧ ಎಂದು ಭಾರತ ತಂಡಕ್ಕೆ (Team India) ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಐಪಿಎಲ್​ನಲ್ಲಿ ಫಿನಿಷರ್​ ಸ್ಥಾನದಲ್ಲಿ ಸಿಡಿಲಮರಿಯಾದ ದಿನೇಶ್, ಜೂನ್ 1ರಿಂದ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ನ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​​ಗೆ ಸಂಪೂರ್ಣ ಸಜ್ಜಾಗಿದ್ದೇನೆ ಎಂದು ಹೇಳಿಕೆ ನೀಡಿದ್ದು, ಆಯ್ಕೆದಾರರ ಗೊಂದಲ ಹೆಚ್ಚಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಅತ್ಯುತ್ತಮ ಫಾರ್ಮ್​​ನಲ್ಲಿರುವ ತಮಿಳುನಾಡು ಕ್ರಿಕೆಟಿಗ, 2022ರ ಟಿ20 ವಿಶ್ವಕಪ್​ಗೂ ಆಯ್ಕೆಯಾಗಿದ್ದರು. ಆ ಬಳಿಕ ತಂಡದಿಂದ ದೂರವಿದ್ದ ಡಿಕೆ, ಈಗ ಮತ್ತೆ ಕಂಬ್ಯಾಕ್ ಮಾಡು ಕನಸು ಹೊಂದಿದ್ದಾರೆ. ಟಿ20 ವಿಶ್ವಕಪ್​ ಆರಂಭದ ದಿನವೇ 39ನೇ ವರ್ಷಕ್ಕೆ ಕಾಲಿಡಲಿರುವ ದಿನೇಶ್​ ಕಾರ್ತಿಕ್, ಚುಟುಕು ಸಮರಕ್ಕೆ ಭಾರತ ತಂಡದಲ್ಲಿ ಅವಕಾಶ ಪಡೆಯಲು ನನ್ನ ಕೈಲಾದಷ್ಟು ಪೈಪೋಟಿ ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್​ನಲ್ಲಿ ಅದ್ಭುತ ಲಯದಲ್ಲಿರುವ ಡಿಕೆ, ಆರ್​ಸಿಬಿ ಪರ ಅತ್ಯುತ್ತಮ ಫಿನಿಷರ್ ಆಗಿದ್ದಾರೆ. 205 ಸ್ಟ್ರೆಕ್​​ರೇಟ್​ನಲ್ಲಿ 226 ರನ್ ಗಳಿಸುವ ಮೂಲಕ ಬೆಂಗಳೂರು ಪರ 3ನೇ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ (361 ರನ್) ಹಾಗೂ ನಾಯಕ ಫಾಫ್ ಡುಪ್ಲೆಸಿಸ್ (232 ರನ್) ಇದ್ದಾರೆ. ಈ ಹಿಂದೆಂದಿಗಿಂತಲೂ ಅದ್ಭುತ ಬ್ಯಾಟಿಂಗ್ ಮಾಡುತ್ತಿರುವ ಡಿಕೆ, ಟಿ20 ವಿಶ್ವಕಪ್​ ಕುರಿತು ಏನು ಹೇಳಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಇದೇ ನನ್ನ ದೊಡ್ಡ ಆಸೆ ಎಂದ ದಿನೇಶ್ ಕಾರ್ತಿಕ್

ಕೋಲ್ಕತ್ತಾದ ಈಡನ್​ ಗಾರ್ಡನ್​​ ಮೈದಾನದಲ್ಲಿ ನಡೆಯುವ ಕೆಕೆಆರ್ ವಿರುದ್ಧದ ಆರ್​ಸಿಬಿ ಪಂದ್ಯಕ್ಕೂ ಮುನ್ನ ಮಾತನಾಡಿದ 38 ವರ್ಷದ ಆಟಗಾರ, ವಿಶ್ವಕಪ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನ್ನ ಜೀವನದಲ್ಲಿ ಈ ಹಂತದಲ್ಲಿ, ಭಾರತವನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಭಾವನೆಯಾಗಿದೆ. ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದಕ್ಕಿಂತ ದೊಡ್ಡ ಆಸೆ ನನ್ನ ಜೀವನದಲ್ಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಒಟ್ಟು 6 ವಿಕೆಟ್​ ಕೀಪರ್​​ಗಳ ನಡುವೆ ಪೈಪೋಟಿ ಹೆಚ್ಚಾಗಿದೆ.

ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ವಿಕೆಟ್ ಕೀಪರ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್, ಸಂಜು ಸ್ಯಾಮ್ಸನ್, ರಿಷಭ್ ಪಂತ್, ಕೆಎಲ್ ರಾಹುಲ್, ಇಶಾನ್ ಕಿಶನ್ ಮತ್ತು ಜಿತೇಶ್ ಶರ್ಮಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಹುಲ್, ಪಂತ್ ಮತ್ತು ಸಂಜು ಅದ್ಭುತ ಪ್ರದರ್ಶನ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ದಿನೇಶ್, ನನಗೆ ಅವಕಾಶ ನೀಡುವುದು ಬಿಡುವುದು ನಾಯಕ ರೋಹಿತ್​ ಶರ್ಮಾ, ರಾಹುಲ್ ದ್ರಾವಿಡ್, ಅಜಿತ್ ಅಗರ್ಕರ್​​ಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

ಸಮರ್ಥರನ್ನು ಆಯ್ಕೆ ಮಾಡುವ ನಂಬಿಕೆ ಇದೆ ಎಂದ ಡಿಕೆ

ಈ ಮೂವರು ವಿಕೆಟ್​​ ಕೀಪರ್​ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಸಮರ್ಥ ಆಟಗಾರರನ್ನು ಕ್ಯಾಪ್ಟನ್, ಕೋಚ್ ಮತ್ತು ಸೆಲೆಕ್ಟರ್ಸ್ ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ನಾನು ಸಹ ಅವರೊಂದಿಗಿದ್ದೇನೆ. ತಂಡದ ಆಯ್ಕೆಗೆ ಸಂಬಂಧಿಸಿ ಏನೇ ನಿರ್ಧಾರ ತೆಗೆದುಕೊಂಡರೂ ನಾನು ಗೌರವಿಸುತ್ತೇನೆ. ಆದರೆ ನಾನಂತೂ ಟಿ20 ವರ್ಲ್ಡ್​ಕಪ್ ಆಡಲು ಸಂಪೂರ್ಣ ಫಿಟ್ ಆಗಿದ್ದೇನೆ. ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಹಿರಿಯ ಕ್ರಿಕೆಟಿಗ ಹೇಳಿದ್ದಾರೆ.

ಈ ದಿನಗಳಲ್ಲಿ ಆಟಗಾರನಾಗಿ ನಿಮ್ಮ ಸಾಮರ್ಥ್ಯವನ್ನು ನೀವು ಅರ್ಥಮಾಡಿಕೊಳ್ಳಬೇಕು. ನಾನು ರಸೆಲ್ ಅಥವಾ ಪೊಲಾರ್ಡ್ ಅಲ್ಲ. ಅವರು ಕೇವಲ ಚೆಂಡನ್ನು ಮುಟ್ಟಿದರೆ ಸಿಕ್ಸರ್​ ಗಳಿಸುತ್ತಾರೆ. ಆದರೆ ನಾನು ಎಂತಹ ಚೆಂಡನ್ನು ಬೌಂಡರಿ-ಸಿಕ್ಸರ್​ ಹೊಡೆಯಬಹುದು ಎಂಬುದನ್ನು ಕಾದುನೋಡುತ್ತೇನೆ. ಯಾರು ಬೌಲಿಂಗ್ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡು, ಅದರಂತೆ ಬ್ಯಾಟಿಂಗ್ ಮಾಡುತ್ತೇನೆ ಎಂದು ಡಿಕೆ ಹೇಳಿದ್ದಾರೆ.

ಈ ದಿನದಂದು ಭಾರತ ತಂಡ ಪ್ರಕಟ ಸಾಧ್ಯತೆ

ಜೂನ್ 1 ರಿಂದ ಅದೇ ತಿಂಗಳ 29ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಏಪ್ರಿಲ್ 27 ಅಥವಾ 30 ರಂದು ಭಾರತ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಟೀಮ್ ಇಂಡಿಯಾ ಜೂನ್ 5ರಂದು ಐರ್ಲೆಂಡ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ಅಭಿಯಾನ ಆರಂಭಿಸಲಿದೆ. ಭಾರತ ತಂಡಕ್ಕೆ ಈಗಾಗಲೇ 10 ಆಟಗಾರರು ಖಚಿತಗೊಂಡಿದ್ದು, ಉಳಿದ ಐದು ಆಟಗಾರರಿಗೆ ಶೋಧ ನಡೆಸುತ್ತಿದ್ದಾರೆ ಸೆಲೆಕ್ಟರ್ಸ್.

IPL_Entry_Point