ಸಿಎಸ್​ಕೆ ವಿರುದ್ಧ ಸೇಡಿಗೆ ಕಾದು ಕುಳಿತ ಆರ್​​ಸಿಬಿ; ಗೆಲುವಿನ ಗೇಮ್​ಪ್ಲಾನ್ ಏನು, ಅಖಾಡದಲ್ಲಿ ಗೆಲ್ಲೋದ್ಯಾರು?
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್​ಕೆ ವಿರುದ್ಧ ಸೇಡಿಗೆ ಕಾದು ಕುಳಿತ ಆರ್​​ಸಿಬಿ; ಗೆಲುವಿನ ಗೇಮ್​ಪ್ಲಾನ್ ಏನು, ಅಖಾಡದಲ್ಲಿ ಗೆಲ್ಲೋದ್ಯಾರು?

ಸಿಎಸ್​ಕೆ ವಿರುದ್ಧ ಸೇಡಿಗೆ ಕಾದು ಕುಳಿತ ಆರ್​​ಸಿಬಿ; ಗೆಲುವಿನ ಗೇಮ್​ಪ್ಲಾನ್ ಏನು, ಅಖಾಡದಲ್ಲಿ ಗೆಲ್ಲೋದ್ಯಾರು?

RCB vs CSK Preview: ಐಪಿಎಲ್​ನ 68ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಹೈವೋಲ್ಟೇಜ್ ಕಾದಾಟಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಸಜ್ಜಾಗಿ ನಿಂತಿದೆ.

ಸಿಎಸ್​ಕೆ ವಿರುದ್ಧ ಸೇಡಿಗೆ ಕಾದು ಕುಳಿತ ಆರ್​​ಸಿಬಿ; ಗೆಲುವಿನ ಗೇಮ್​ಪ್ಲಾನ್ ಏನು, ಅಖಾಡದಲ್ಲಿ ಗೆಲ್ಲೋದ್ಯಾರು?
ಸಿಎಸ್​ಕೆ ವಿರುದ್ಧ ಸೇಡಿಗೆ ಕಾದು ಕುಳಿತ ಆರ್​​ಸಿಬಿ; ಗೆಲುವಿನ ಗೇಮ್​ಪ್ಲಾನ್ ಏನು, ಅಖಾಡದಲ್ಲಿ ಗೆಲ್ಲೋದ್ಯಾರು?

ಐಪಿಎಲ್​ನ 68ನೇ ಪಂದ್ಯ, ಸೇಡಿನ ಸಮರಕ್ಕೆ ಸಾಕ್ಷಿಯಾಗುತ್ತಿದೆ. ಅಂದು ಚೆಪಾಕ್​ ಅಂಗಳದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ತವರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಸೇಡಿಗಾಗಿ ಕಾದು ಕುಳಿತಿದೆ. ಇದಕ್ಕಾಗಿಯೇ ಪ್ರತ್ಯೇಕ ಗೇಮ್​​ಪ್ಲಾನ್, ಸ್ಟ್ರಾಟಜಿ ರೂಪಿಸಿಕೊಂಡಿದೆ. ಆದರೆ ಈ ಪಂದ್ಯಕ್ಕೆ ಶೇ 80 ರಿಂದ 90 ರಷ್ಟು ಮಳೆ ಸುರಿದು ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದಿನಾಂಕ ಮಾರ್ಚ್​ 22. ಸ್ಥಳ-ಚೆನ್ನೈನ ಚೆಪಾಕ್​ ಮೈದಾನ. ಈ ದಿನ ನೆನೆಪಿದೆಯಾ? ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹೀನಾಯವಾಗಿ ಸೋಲುಪ್ಪಿಕೊಂಡಿದ್ದ ದಿನ. ಯೆಲ್ಲೋ ಆರ್ಮಿ ಅಬ್ಬರಕ್ಕೆ ಮಂಕಾಗಿ ಕುಳಿತ್ತಿದ್ದ ದಿನ. ಅಂದು ಉದ್ಘಾಟನಾ ಪಂದ್ಯದಲ್ಲಿ ಶರಣಾಗಿತ್ತು. ಆದರೀಗ ಪುಟಿದಿದ್ದಿರುವ ಫಾಫ್ ಪಡೆಯ ಲಕ್ ಆ್ಯಂಡ್ ಟೈಮ್, ಬದಲಾಗಿದೆ.

ಸಿಎಸ್​ಕೆ​ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಸೋತಿದ್ದ ಆರ್​ಸಿಬಿ ತಂಡದ ಸಮಯ ಬದಲಾಗಿದೆ. ಟೂರ್ನಿಯ ಕೊನೆಯ ಹಂತದಲ್ಲಿ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇಆಫ್ ಪ್ರವೇಶಿಸುವ ಸಮಯ ಕೂಡ ಬಂದಿದೆ. ಅದರಲ್ಲೂ ಸುಮ್ಮನೆ ಸೋಲೊಪ್ಪಿಕೊಳ್ಳದ ವಿರಾಟ್ ಕೊಹ್ಲಿ, ಪ್ರತೀಕಾರಕ್ಕಾಗಿ ಕಾಯುತ್ತಿರುವುದು ಪಂದ್ಯದ ರೋಚಕತೆಗೆ ಸಾಕ್ಷಿಯಾಗಿದೆ. ಪ್ರಸ್ತುತ ಸತತ ಗೆಲುವಿನ ಟ್ರ್ಯಾಕ್​​ನಲ್ಲಿರುವ ರೆಡ್​ ಆರ್ಮಿ ಸಿಎಸ್​ಕೆ​​ ಬೇಟೆಗೆ ಸನ್ನದ್ಧವಾಗಿದೆ.

ಋತುರಾಜ್​​ರನ್ನ ಆರಂಭದಲ್ಲೇ ಕಟ್ಟಿಹಾಕಲು ಪ್ಲಾನ್

ಗೆಲ್ಲುವ ಛಲದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಭರ್ಜರಿ ಗೇಮ್​ಪ್ಲಾನ್ ರೂಪಿಸಿಕೊಂಡಿದೆ. 13 ಪಂದ್ಯಗಳಿಂದ ಬೊಂಬಾಟ್ ಪ್ರದರ್ಶನ ನೀಡುವ ಮೂಲಕ ಆರೆಂಕ್ ಕ್ಯಾಪ್ ರೇಸ್​​ನಲ್ಲಿರುವ ಋತುರಾಜ್ ಗಾಯಕ್ವಾಡ್, ಇದೀಗ ಆರ್​​ಸಿಬಿ ವಿರುದ್ಧವೂ ರನ್ ಬೇಟೆಗೆ ಸಜ್ಜಾಗಿದ್ದಾರೆ. ಹಾಗಾಗಿ ಈತನ​​​ ಆರ್ಭಟಕ್ಕೆ ಆರಂಭದಲ್ಲೇ ಕಡಿವಾಣ ಹಾಕಿದರೆ, ಸಿಎಸ್​ಕೆ ವಿರುದ್ಧ ಅರ್ಧ ಪಂದ್ಯ ಗೆದ್ದಂತೆ. ಹಾಗಾಗಿ ಆತನ ವಿಕೆಟ್​ಗೆ ಸ್ಪಿನ್ ಅಸ್ತ್ರವನ್ನು ಪ್ರಯೋಗಿಸಲು ಆರ್​ಸಿಬಿ ಮುಂದಾಗಿದೆ.

ಕಿವೀಸ್​ ಆಟಗಾರರ ಮೇಲೆ ಕಣ್ಣು

ಸಿಎಸ್​ಕೆ ಪರ ರನ್ ಗಳಿಸಲು ಕಿವೀಸ್​ ಆಟಗಾರರಾದ ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಪರದಾಡುತ್ತಿದ್ದಾರೆ. ಆದರೆ ಇವರು ಚಿನ್ನಸ್ವಾಮಿ ಪಿಚ್​​ನಲ್ಲಿ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಹಾಗಾಗಿ ಇವರನ್ನು ಕಟ್ಟಿ ಹಾಕಲು ಆರ್​​ಸಿಬಿ ಸಿದ್ಧವಾಗಿದೆ. ಇಬ್ಬರನ್ನೂ ಬೇಗನೇ ಔಟ್ ಮಾಡಿಸಿದರೆ, ತಂಡದ ಮೊತ್ತ ಕುಸಿಯಲು ಕಾರಣವಾಗಲಿದೆ.

ಶಿವಂ ದುಬೆ ಅಬ್ಬರಕ್ಕೆ ಬ್ರೇಕ್ ಹಾಕಲು ಸ್ಟ್ರಾಟರ್ಜಿ..!

ಸಿಎಸ್​ಕೆ ಸ್ಪೋಟಕ ಬ್ಯಾಟ್ಸ್​ಮನ್ ಶಿವಂ ದುಬೆ, ಎಂತಹ ಬೌಲರ್​​ಗಳ ವಿರುದ್ಧವಾದರೂ ಚಿಂದಿ ಉಡಾಯಿಸ್ತಾರೆ. ಹಾಗಾಗಿ ಪೂರನ್ ಅಬ್ಬರಕ್ಕೆ ಕಾಡಿವಾಣ ಹಾಕಲು, ಆರ್​ಸಿಬಿ ಸ್ಟ್ರಾಟಜಿ ರೂಪಿಸಿದೆ. ಸ್ಪಿನ್ನರ್​​ಗಳಿಗೆ ಬೆಂಡೆತ್ತುವ ದುಬೆಯನ್ನು ಅವರಿಂದಲೇ ಔಟ್ ಮಾಡಿಸುವ ಪ್ರಯೋಗಕ್ಕೆ ಫಾಫ್​ ಪಡೆ ಚಿಂತಿಸಿದೆ.

ಪ್ರಮುಖ ಬೌಲರ್​​ಗಳೇ ಔಟ್

ಉದ್ಘಾಟನಾ ಪಂದ್ಯದಲ್ಲಿ ಮಿಂಚಿದ್ದ ಮುಸ್ತಫಿಜುರ್​, ಉಳಿದ ಪಂದ್ಯಗಳಲ್ಲಿ ಮಿಂಚಿದ್ದ ದೀಪಕ್ ಚಹರ್ ಮತ್ತು ಮತೀಶಾ ಪತಿರಾಣ ಅವರು ಗಾಯದಿಂದ ಹೊರಗುಳಿದಿದ್ದಾರೆ. ಮೊಯಿನ್ ಅಲಿ ತವರಿಗೆ ಹೋಗಿದ್ದಾರೆ. ಇದು ಆರ್​ಸಿಬಿಗೆ ಲಾಭ ತಂದುಕೊಟ್ಟಿದೆ. ಆದರೆ ಅವರ ಅಲಭ್ಯತೆಯಲ್ಲಿ ತುಷಾರ್ ದೇಶಪಾಂಡೆ ಅಬ್ಬರದ ಬೌಲಿಂಗ್ ಮಾಡುತ್ತಿದ್ದು, ಆರ್​ಸಿಬಿ ಬ್ಯಾಟರ್​​ಗಳನ್ನು ಕಟ್ಟಿಹಾಕಲು ಯೋಜನೆ ರೂಪಿಸುತ್ತಿದ್ದಾರೆ.

ಚೆಪಾಕ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಇದೀಗ ಎಲ್ಲಾ ವಿಭಾಗಗಳಲ್ಲಿ ಬಲಿಷ್ಠವಾಗಿ ರೂಪುಗೊಂಡಿದೆ. ಸತತ ಐದು ಗೆಲುವು ಸಾಧಿಸಿ ಪ್ಲೇಆಫ್ ಸನಿಹಕ್ಕೆ ಬಂದು ನಿಂತಿದೆ. ಇದೇ ಸಮಯ ಬಳಸಿಕೊಂಡು ಚೆನ್ನೈ ಸೂಪರ್​​​ ಕಿಂಗ್ಸ್​ ವಿರುದ್ಧ, ಸೇಡು ತೀರಿಸಿಕೊಳ್ಳಲು ಫಾಫ್ ಸೇನೆ​ ಸೇನೆ ರನ್​ಭೂಮಿಗೆ ಇಳೀತಿದೆ. ಈ ಮದಗಜಗಳ ಕಾದಾಟ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner