Rohit Sharma: ನಿಮ್ಮ ಮತ್ತು ಕೊಹ್ಲಿ ಟಿ20 ಕ್ರಿಕೆಟ್ ವೃತ್ತಿಜೀವನ ಮುಗಿಯಿತಾ; ಖಡಕ್ ಉತ್ತರದ ಜೊತೆಗೆ ಸ್ಪಷ್ಟನೆ ನೀಡಿದ ರೋಹಿತ್ ಶರ್ಮಾ
ಕನ್ನಡ ಸುದ್ದಿ  /  ಕ್ರಿಕೆಟ್  /  Rohit Sharma: ನಿಮ್ಮ ಮತ್ತು ಕೊಹ್ಲಿ ಟಿ20 ಕ್ರಿಕೆಟ್ ವೃತ್ತಿಜೀವನ ಮುಗಿಯಿತಾ; ಖಡಕ್ ಉತ್ತರದ ಜೊತೆಗೆ ಸ್ಪಷ್ಟನೆ ನೀಡಿದ ರೋಹಿತ್ ಶರ್ಮಾ

Rohit Sharma: ನಿಮ್ಮ ಮತ್ತು ಕೊಹ್ಲಿ ಟಿ20 ಕ್ರಿಕೆಟ್ ವೃತ್ತಿಜೀವನ ಮುಗಿಯಿತಾ; ಖಡಕ್ ಉತ್ತರದ ಜೊತೆಗೆ ಸ್ಪಷ್ಟನೆ ನೀಡಿದ ರೋಹಿತ್ ಶರ್ಮಾ

Rohit Sharma: ತಾನು ಮತ್ತು ವಿರಾಟ್ ಕೊಹ್ಲಿ ಟಿ20 ಆಡದಿರುವ ಕುರಿತು ಮಾತನಾಡಿದ ರೋಹಿತ್ ಶರ್ಮಾ​​, ರವೀಂದ್ರ ಜಡೇಜಾ ಕೂಡ ಟಿ20 ಕ್ರಿಕೆಟ್​ ಆಡುತ್ತಿಲ್ಲ. ನೀವು ಅವರ ಯಾಕೆ ಬಗ್ಗೆ ಕೇಳಲಿಲ್ಲವೇ? ನನ್ನ ಮತ್ತು ವಿರಾಟ್ ಬಗ್ಗೆ ಗಮನ ಏಕೆ? ಎಂದು ಮರು ಪ್ರಶ್ನೆ ಹಾಕಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್ (T20 World Cup 2022) ಬಳಿಕ ಒಂದೇ ಒಂದು ಟಿ20 ಪಂದ್ಯದಲ್ಲಿ ಕಾಣಿಸಿಕೊಳ್ಳದ ರೋಹಿತ್​ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಟಿ20 ಕ್ರಿಕೆಟ್ ವೃತ್ತಿಜೀವನ ಮುಗಿಯಿತು ಎಂಬ ಸುದ್ದಿಗಳು ಹರಿದಾಡುತ್ತಿವೆ. ಇನ್ಮುಂದೆ ಚುಟುಕು ಕ್ರಿಕೆಟ್​ಗೆ ಅವರ ಆಯ್ಕೆ ಅನುಮಾನ ಎನ್ನುವಂತೆ ಬಿಸಿಸಿಐ ಮೂಲಗಳು ತಿಳಿಸಿದ್ದವು. ಇದೀಗ ಏಕದಿನ ವಿಶ್ವಕಪ್ ಕ್ರಿಕೆಟ್​​​ಗೆ ಸಿದ್ಧತೆಯ ಭಾಗವಾಗಿ ವಿಶ್ರಾಂತಿಯಲ್ಲಿರುವ ನಾಯಕ ರೋಹಿತ್​ಗೆ ಮತ್ತೆ ಇದೇ ಪ್ರಶ್ನೆ ಎದುರಾಗಿದ್ದು, ಖಡಕ್ ಉತ್ತರ ಜತೆಗೆ ಸ್ಪಷ್ಟನೆ ನೀಡಿದ್ದಾರೆ.

ವೆಸ್ಟ್ ಇಂಡೀಸ್ ಸರಣಿಯ ಎರಡು ಏಕದಿನ ಪಂದ್ಯಗಳಲ್ಲಿ ಮತ್ತು 5 ಪಂದ್ಯಗಳ ಟಿ20 ಸರಣಿಗೆ ರೋಹಿತ್​ ಮತ್ತು ವಿರಾಟ್​​ಗೆ ವಿಶ್ರಾಂತಿ ನೀಡಲಾಗಿದೆ. ಸದ್ಯ ರೋಹಿತ್ ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಬಂದ ರೋಹಿತ್​, ಮುಂಬೈನ ಲಾ ಲಿಗಾ ಸಮಾರಂಭದಲ್ಲಿ ಭಾಗವಹಿಸಿದರು. ಈ ವೇಳೆ ಅನುಭವಿ ಬ್ಯಾಟರ್ ಮುಂಬರುವ ಏಕದಿನ ವಿಶ್ವಕಪ್ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ. ಈ ವೇಳೆ ಏಷ್ಯಾಕಪ್, ವಿಶ್ವಕಪ್‌ಗೆ ಮುನ್ನ ಟೀಮ್​ ಇಂಡಿಯಾಗೆ ನಂಬರ್ 4ನೇ ಸ್ಥಾನವು ದೊಡ್ಡ ಸಮಸ್ಯೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಕಳೆದ ವಾರದ ಹಿಂದಷ್ಟೇ ಯುನೈಟೆಡ್ ಸ್ಟೇಟ್ಸ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಂದಿನ ವರ್ಷ ನಡೆಯುವ ವಿಶ್ವಕಪ್​ಗಾಗಿ ಎದುರು ನೋಡುತ್ತಿದ್ದೇವೆ ಎಂದು ಹೇಳುವ ಮೂಲಕ ಟಿ20 ಕ್ರಿಕೆಟ್​ ಇನ್ಮುಂದೆ ಆಡಲ್ಲ ಎಂಬ ಗೊಂದಲಗಳಿಗೆ ತೆರೆ ಎಳೆದಿದ್ದರು. ಇದೀಗ ವಿರಾಟ್​ ಕೊಹ್ಲಿ ಸರದಿ ಬಂದಿದೆ. ಕೊಹ್ಲಿ ಮುಂದಿನ ಚುಟುಕು ವಿಶ್ವಕಪ್ ಆಡುವುದೇ ಆದರೆ, ಏಕೆ ಕಳೆದ ಟಿ20 ವಿಶ್ವಕಪ್ ಬಳಿಕ ಕಾಣಿಸಿಕೊಳ್ಳಲೇ ಇಲ್ಲ? ಟಿ20 ಕ್ರಿಕೆಟ್​ನಲ್ಲಿ ಕರಿಯರ್​ ಮುಗಿಯಿತೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ರೋಹಿತ್, ಉತ್ತರಿಸಿದ್ದಾರೆ.

ಜಡೇಜಾ ಬಗ್ಗೆ ಕೇಳುತ್ತಿಲ್ಲವೇಕೆ?

ತಾನು ಮತ್ತು ಕೊಹ್ಲಿ ಟಿ20 ಆಡದಿರುವ ಕುರಿತು ಮಾತನಾಡಿದ ರೋಹಿತ್​​, ರವೀಂದ್ರ ಜಡೇಜಾ ಕೂಡ ಟಿ20 ಕ್ರಿಕೆಟ್​ ಆಡುತ್ತಿಲ್ಲ. ನೀವು ಅವರ ಯಾಕೆ ಬಗ್ಗೆ ಕೇಳಲಿಲ್ಲವೇ? ನನ್ನ ಮತ್ತು ವಿರಾಟ್ ಬಗ್ಗೆ ಗಮನ ಏಕೆ? ನೀವು ಕೇಳುವ ಪ್ರಶ್ನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಜಡೇಜಾ ಕೂಡ ಆಡುತ್ತಿಲ್ಲ. ಜಡೇಜಾ ಕೂಡ ಸಂಪೂರ್ಣ ಫಿಟ್​ ಆಗಿದ್ದಾರೆ. ಆದರೆ ನಮ್ಮ ಕಾರ್ಯಯೋಜನೆಗಳು ಬೇರೆಯದ್ದೇ ಇವೆ ಎಂದು ಭಾರತದ ಇತ್ತೀಚಿನ ಟಿ20I ಸರಣಿಗಳಿಗೆ ಆಯ್ಕೆದಾರರಿಂದ ಅವರನ್ನು (ರೋಹಿತ್) ಮತ್ತು ಕೊಹ್ಲಿಯನ್ನು ಕಡೆಗಣಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದರು.

ಸ್ಪಷ್ಟನೆ ಹೀಗಿದೆ..!

ಏಕದಿನ ವಿಶ್ವಕಪ್‌ಗಾಗಿ ದ್ವಿಪಕ್ಷೀಯ ಸರಣಿಗಳಲ್ಲಿ ಭಾರತದ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡುವ ಪ್ರಾಮುಖ್ಯತೆ ಕುರಿತು ರೋಹಿತ್ ಮಾತನಾಡಿದರು. ಕಳೆದ ವರ್ಷ ಟಿ20 ವಿಶ್ವಕಪ್ ಇತ್ತು. ಆದ್ದರಿಂದ ಟಿ20 ಕ್ರಿಕೆಟ್​ ಮೇಲೆ ಹೆಚ್ಚು ಗಮನ ಹರಿಸಿದ್ದೆವು. ಹಾಗಾಗಿ ನಾವು ಅಧಿಕ ಏಕದಿನ ಆಡಲಿಲ್ಲ. ಪ್ರಸ್ತುತ ನಾವು ಅದೇ ರೀತಿ ಮಾಡುತ್ತಿದ್ದೇವೆ. ಮುಂದೆ ಏಕದಿನ ವಿಶ್ವಕಪ್​ ಇದೆ. ಹಾಗಾಗಿ ಟಿ20 ಆಡುತ್ತಿಲ್ಲ. ನೀವು ಎಲ್ಲವನ್ನೂ ಆಡಿ ವಿಶ್ವಕಪ್‌ಗೆ ಸಿದ್ಧರಾಗಲು ಸಾಧ್ಯವಿಲ್ಲ. ಇದನ್ನು ಎರಡು ವರ್ಷಗಳ ಹಿಂದೆ ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

'ನಾನು ಏಕದಿನ ವಿಶ್ವಕಪ್ ಗೆದ್ದಿಲ್ಲ'

ಮುಂಬರುವ ವಿಶ್ವಕಪ್‌ನಲ್ಲಿ ಭಾರತದ ಐಸಿಸಿ ಟ್ರೋಫಿ ಬರ ಕೊನೆಗೊಳಿಸಲು ತಮ್ಮ ತಂಡವು ಪ್ರಯತ್ನಿಸುತ್ತದೆ. ನಾನು ಎಂದಿಗೂ (50 ಓವರ್‌ಗಳು) ವಿಶ್ವಕಪ್ ಗೆದ್ದಿಲ್ಲ. ವಿಶ್ವಕಪ್ ಗೆಲ್ಲುವುದು ಕನಸು. ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು 36 ವರ್ಷದ ರೋಹಿತ್ ಹೇಳಿದ್ದಾರೆ. ಭಾರತ ಕೊನೆಯ ಬಾರಿಗೆ 2013ರಲ್ಲಿ ಐಸಿಸಿ ಪ್ರಶಸ್ತಿ ಗೆದ್ದುಕೊಂಡಿತು. ಏಷ್ಯನ್ ದೈತ್ಯರು 2011ರಲ್ಲಿ ಕೊನೆಯ ಬಾರಿಗೆ 50ಓವರ್​​ಗಳ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿತ್ತು.

Whats_app_banner