ನೀನಲ್ಲ, ರೋಹಿತ್​ ಶರ್ಮಾ ನನ್ನ ಮಗ; ಸುನೀಲ್ ಶೆಟ್ಟಿ ಹೇಳಿಕೆಗೆ ಕೆಎಲ್ ರಾಹುಲ್ ಅಚ್ಚರಿ, ವಿಡಿಯೋ ವೈರಲ್-cricket news rohit sharma joins actor suniel shetty to brutally troll kl rahul over mi vs lsg viral ipl dream 11 ad prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ನೀನಲ್ಲ, ರೋಹಿತ್​ ಶರ್ಮಾ ನನ್ನ ಮಗ; ಸುನೀಲ್ ಶೆಟ್ಟಿ ಹೇಳಿಕೆಗೆ ಕೆಎಲ್ ರಾಹುಲ್ ಅಚ್ಚರಿ, ವಿಡಿಯೋ ವೈರಲ್

ನೀನಲ್ಲ, ರೋಹಿತ್​ ಶರ್ಮಾ ನನ್ನ ಮಗ; ಸುನೀಲ್ ಶೆಟ್ಟಿ ಹೇಳಿಕೆಗೆ ಕೆಎಲ್ ರಾಹುಲ್ ಅಚ್ಚರಿ, ವಿಡಿಯೋ ವೈರಲ್

Suniel Shetty : ಐಪಿಎಲ್ ಟೂರ್ನಮೆಂಟ್ ಮುಗಿಯೋ ತನಕ ನೀನು ನನ್ನ ಮಗನೇ ಅಲ್ಲ, ರೋಹಿತ್​ ಶರ್ಮಾ ನನ್ನ ಮಗ ಎಂದು ಸ್ವಂತ ಅಳಿಯ ಕೆಎಲ್ ರಾಹುಲ್​ಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ.

ಸುನೀಲ್ ಶೆಟ್ಟಿ ಹೇಳಿಕೆಗೆ ಕೆಎಲ್ ರಾಹುಲ್ ಅಚ್ಚರಿ
ಸುನೀಲ್ ಶೆಟ್ಟಿ ಹೇಳಿಕೆಗೆ ಕೆಎಲ್ ರಾಹುಲ್ ಅಚ್ಚರಿ

17ನೇ ಆವತ್ತಿಯ ಐಪಿಎಲ್​​​ (IPL 2024) ಭರ್ಜರಿ ಆರಂಭ ಪಡೆದಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ಸೂಪರ್ ಗೆಲುವು ದಾಖಲಿಸಿದೆ. ಪಂದ್ಯದಿಂದ ಪಂದ್ಯಕ್ಕೆ ರೋಚಕತೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಅಭಿಮಾನಿಗಳು ತಮ್ಮ ಫೇವರಿಟ್ ಆಟಗಾರರ ಆಟವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಜಾಹೀರಾತುಗಳ ಸದ್ದು ಜೋರಾಗಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿವೆ.

ಅಂತಹದ್ದೇ ಒಂದು ಜಾಹೀರಾತು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ವೈರಲ್ ಆಗುತ್ತಿದೆ. ಡ್ರೀಮ್​ 11 ಜಾಹೀರಾತು ಇದಾಗಿದ್ದು, ಇದರಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma), ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ (KL Rahul) ಮತ್ತು ಬಾಲಿವುಡ್ ನಟ ಹಾಗೂ ರಾಹುಲ್ ಅವರ ಮಾವ ಸುನೀಲ್ ಶೆಟ್ಟಿ (Suniel Shetty) ಕಾಣಿಸಿಕೊಂಡಿದ್ದಾರೆ. ಇದರಲ್ಲಿ ರಾಹುಲ್​ರನ್ನು ನೀನು ನನ್ನ ಮಗನೇ ಅಲ್ಲ ಅಂದಿದ್ದಾರೆ ಶೆಟ್ಟಿ.

ಕೆಎಲ್ ರಾಹುಲ್ ಮದುವೆಯಾಗಿರುವುದು ಸುನೀಲ್ ಶೆಟ್ಟಿ ಅವರ ಮಗಳು ಆತಿಯಾ ಶೆಟ್ಟಿ ಅವರನ್ನು. ಹಾಗಾಗಿ ಕೆಎಲ್​ರನ್ನು ಮಾವ ಪ್ರೀತಿಯಿಂದ ಮಗ ಎಂದು ಕರೆಯುತ್ತಾರೆ. ಸಾಕಷ್ಟು ಸಲ ಹೀಗೆ ಕರೆದಿದ್ದುಂಟು. ಆದರೆ ಐಪಿಎಲ್​ ಆರಂಭಕ್ಕೂ ಮೊದಲೇ ನೀನು ನನ್ನ ಮಗನೇ ಅಲ್ಲ ಎಂದು ರಾಹುಲ್​​ಗೆ ಬಾಲಿವುಡ್ ನಟ ಹೇಳಿದ್ದಾರೆ. ಆದರೆ ಇದು ನಿಜ ಜೀವನದಲ್ಲಿ ಅಲ್ಲ, ಜಾಹೀರಾತಿನಲ್ಲಿ.

ಜಾಹೀರಾತಿನಲ್ಲೇನಿದೆ?

ಈ ಆ್ಯಡ್​​ನಲ್ಲಿ ಅಳಿಯ ಪ್ರತಿನಿಧಿಸುವ ಲಕ್ನೋ ತಂಡಕ್ಕೆ ಬದಲಿಗೆ ಸುನೀಲ್ ಶೆಟ್ಟಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆಂಬಲ ನೀಡಿದ್ದಾರೆ. ಬಾಲಿವುಡ್ ನಟ ತನ್ನ ಅಳಿಯ ಕೆಎಲ್ ರಾಹುಲ್ ಅವರನ್ನು ಕೈಬಿಟ್ಟು ರೋಹಿತ್ ಶರ್ಮಾ ಅವರನ್ನು ಬೆಂಬಲಿಸಿದ್ದಾರೆ. ಸಖತ್ ಫನ್ನಿಯಾದ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ್ಯಡ್​ನಲ್ಲಿ ಏನಿದೆ? ನೋಡೋಣ ಬನ್ನಿ.

ಒಂದು ರೆಸ್ಟೋರೆಂಟ್​​ನಲ್ಲಿ ಈ ಆ್ಯಡ್​ ಅನ್ನು ಶೂಟಿಂಗ್​ ಮಾಡಲಾಗಿದೆ. ಸುನೀಲ್ ಶೆಟ್ಟಿ ಮತ್ತು ರೋಹಿತ್​ ಶರ್ಮಾ ಒಂದೇ ಟೇಬಲ್​ನಲ್ಲಿ ಊಟ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಕೆಎಲ್ ರಾಹುಲ್, ತಾನು ಕೂಡ ಊಟಕ್ಕೆ ಜೊತೆಯಾಗಲು ಬರುತ್ತಾರೆ. ಆದರೆ ರೋಹಿತ್​​, ನಾವು ಫ್ಯಾಮಿಲಿ ಡಿನ್ನರ್​ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಇದಕ್ಕೆ ಅಚ್ಚರಿಗೊಂಡ ಕೆಎಲ್ ರಾಹುಲ್ ಪಪ್ಪಾ ಎಂದು ಸುನೀಲ್ ಶೆಟ್ಟಿ ಕಡೆ ನೋಡುತ್ತಾ ಹೇಳುತ್ತಾರೆ.

ಇದೇ ವೇಳೆ ಸುನೀಲ್ ಶೆಟ್ಟಿ ನೋ ಪಪ್ಪಾ, ಐಪಿಎಲ್ ಟೂರ್ನಮೆಂಟ್ ಮುಗಿಯೋ ತನಕ ನೀನು ನನ್ನ ಮಗನಲ್ಲ, ರೋಹಿತ್​ ಶರ್ಮಾ ನನ್ನ ಮಗ ಎಂದು ಹಿಟ್​ಮ್ಯಾನ್​ರನ್ನು ತೋರಿಸುತ್ತಾರೆ. ಇದರ ಬೆನ್ನಲ್ಲೇ ಬೇಸರಗೊಂಡ ರಾಹುಲ್ ಅಲ್ಲಿಂದ ಹೊರ ನಡೆಯುತ್ತಾರೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ರಾಹುಲ್- ಸುನೀಲ್ ಶೆಟ್ಟಿ ಅವರ ಬಾಂಧವ್ಯವನ್ನು ಜಾಹೀರಾತಿನಲ್ಲಿ ವಿಭಿನ್ನ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ.

ಗಾಯದಿಂದ ರಾಹುಲ್ ಫಿಟ್

ಇದೇ ವರ್ಷ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ನಂತರ ಗಾಯಗೊಂಡು ಸರಣಿಯಿಂದ ಹೊರಬಿದ್ದರು. ಅಂದಿನಿಂದ ಎನ್​ಸಿಎನಲ್ಲಿ ಫಿಟ್​ನೆಸ್ ತರಬೇತಿ ಪಡೆದ ರಾಹುಲ್, ಈಗ ಸಂಪೂರ್ಣ ಫಿಟ್​ ಆಗಿ ಐಪಿಎಲ್​ಗೆ ಮರಳಿದ್ದಾರೆ. ಎಲ್‌ಎಸ್‌ಜಿ ತಂಡವನ್ನು ಮುನ್ನಡೆಸಲಿದ್ದಾರೆ.

mysore-dasara_Entry_Point