ವಿರಾಟ್ ಕೊಹ್ಲಿ ಇರಲೇಬೇಕೆಂದ ರೋಹಿತ್​ ಶರ್ಮಾ; ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಮೊದಲ ಆಯ್ಕೆಯಲ್ಲ, ಮತ್ಯಾರು?
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಇರಲೇಬೇಕೆಂದ ರೋಹಿತ್​ ಶರ್ಮಾ; ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಮೊದಲ ಆಯ್ಕೆಯಲ್ಲ, ಮತ್ಯಾರು?

ವಿರಾಟ್ ಕೊಹ್ಲಿ ಇರಲೇಬೇಕೆಂದ ರೋಹಿತ್​ ಶರ್ಮಾ; ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಮೊದಲ ಆಯ್ಕೆಯಲ್ಲ, ಮತ್ಯಾರು?

T20 World Cup 2024 : ಟಿ20 ವಿಶ್ವಕಪ್ 2024 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸುವುದಕ್ಕೂ ಮುನ್ನ ನಡೆದ ಬಿಸಿಸಿಐ ಸಭೆಯಲ್ಲಿ ವಿರಾಟ್ ಕೊಹ್ಲಿ ತಂಡದಲ್ಲಿರಬೇಕೆಂದು ನಾಯಕ ರೋಹಿತ್​ ಶರ್ಮಾ, ಆಯ್ಕೆದಾರರಿಗೆ ಸೂಚಿಸಿದ್ದಾರೆ.

ವಿರಾಟ್ ಕೊಹ್ಲಿ ಇರಲೇಬೇಕೆಂದ ರೋಹಿತ್​ ಶರ್ಮಾ; ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಮೊದಲ ಆಯ್ಕೆಯಲ್ಲ, ಮತ್ಯಾರು?
ವಿರಾಟ್ ಕೊಹ್ಲಿ ಇರಲೇಬೇಕೆಂದ ರೋಹಿತ್​ ಶರ್ಮಾ; ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಮೊದಲ ಆಯ್ಕೆಯಲ್ಲ, ಮತ್ಯಾರು?

ಜೂನ್​ 1ರಿಂದ ಶುರುವಾಗುವ ಟಿ20 ವಿಶ್ವಕಪ್ ಟೂರ್ನಿಗೆ ಮೊದಲ ತಂಡವಾಗಿ 15 ಸದಸ್ಯರ ತಂಡವನ್ನು ನ್ಯೂಜಿಲೆಂಡ್ (New Zealand Cricket Team) ಘೋಷಿಸಿದೆ. ಅದರಂತೆ ಟೀಮ್ ಇಂಡಿಯಾ (Team India) ಪ್ರಕಟಗೊಳ್ಳುವುದು ಯಾವಾಗ ಎಂಬ ಸುದ್ದಿ ಹರಿದಾಡುತ್ತಿದೆ. ಏಪ್ರಿಲ್ 28ರಂದು ನಾಯಕ ರೋಹಿತ್ ಶರ್ಮಾ (Rohit Sharma), ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ (Ajit Agarkar)​ ಅವರು ಮಹತ್ವದ ಸಭೆ ನಡೆಸಿದ್ದು, ಯಾರಿಗೆ ಮಣೆ ಹಾಕಬೇಕು ಎನ್ನುವ ನಿರ್ಧಾರವನ್ನು ಅಂತಿಮಗೊಳಿಸಿದ್ದಾರೆ.

ಮೇ 1ರೊಳಗೆ ಭಾರತದ 15 ಸದಸ್ಯರ ತಂಡವನ್ನು ಪ್ರಕಟಿಸಲು ಸೆಲೆಕ್ಷನ್ ಕಮಿಟಿ ಸಿದ್ಧವಾಗಿದೆ. ಆದರೆ, ಸಭೆಯಲ್ಲಿ ಚರ್ಚೆಯಾದ ಕೆಲ ವಿಷಯಗಳು ಬಹಿರಂಗಗೊಂಡಿವೆ. ವಿರಾಟ್ ಕೊಹ್ಲಿ ಸ್ಟ್ರೈಕ್​​ರೇಟ್​ ಮತ್ತು ಮೊದಲ ವಿಕೆಟ್ ಆಯ್ಕೆಯ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಈ ಬಗ್ಗೆ ಇಎಸ್​ಪಿಎನ್​ ಕ್ರಿಕ್​ಇನ್ಫೋ ವರದಿ ಮಾಡಿದ್ದು, ವಿರಾಟ್ ಟಿ20 ವಿಶ್ವಕಪ್​ಗೆ ಇರಲೇಬೇಕೆಂದು ರೋಹಿತ್​ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ರಿಷಭ್ ಪಂತ್ ವಿಕೆಟ್​ ಕೀಪರ್ ಸ್ಥಾನಕ್ಕೆ ಮೊದಲ ಆಯ್ಕೆಯಲ್ಲ ಎಂಬ ಮಾಹಿತಿ ಬಹಿರಂಗಗೊಂಡಿದೆ.

ವಿರಾಟ್ ಕೊಹ್ಲಿ ಸ್ಟ್ರೈಕ್​ರೇಟ್​ ಕುರಿತು ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಆಮೆಗತಿಯಲ್ಲಿ ಬ್ಯಾಟಿಂಗ್ ನಡೆಸುತ್ತಾರೆ, ವಿಶ್ವಕಪ್​ಗೆ ಅವರನ್ನು ಆಯ್ಕೆ ಮಾಡಬಾರದು ಎಂದು ಮಾಜಿ ಕ್ರಿಕೆಟರ್​​ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಕೊಹ್ಲಿಯನ್ನು ಬೆಂಬಲಿಸಿದ್ದಾರೆ. ಆದರೆ ರೋಹಿತ್, ಕೊಹ್ಲಿ ಆತನನ್ನು ಬೆಂಬಲಿಸಿದ್ದಾರೆ. ವಿರಾಟ್ ತನ್ನ ತಂಡದಲ್ಲಿ ಇರಬೇಕು ಎಂದು ಆಯ್ಕೆದಾರರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಕೊಹ್ಲಿ ಇರಬೇಕೆಂದ ರೋಹಿತ್​

ಒಂದು ಪಂದ್ಯದ ಸ್ಟ್ರೈಕ್​ರೇಟ್​ ಬಗ್ಗೆ ಚರ್ಚೆಗಳು ಬೇಡ. ಕೊಹ್ಲಿ ತಂಡದಲ್ಲಿದ್ದರೆ ಯುವ ಆಟಗಾರರಿಗೆ ಮಾರ್ಗದರ್ಶನ, ಪ್ರೋತ್ಸಾಹ ನೀಡುವುದರ ಜೊತೆ ತಂಡ ಸಂಕಷ್ಟಕ್ಕೆ ಸಿಲುಕಿದ್ದ ಅವಧಿಯಲ್ಲಿ ವಿಕೆಟ್ ಕಾಪಾಡಿಕೊಂಡು ರಕ್ಷಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಅನುಭವಿ ಆಟಗಾರ. ಹಾಗಾಗಿ, ಕೊಹ್ಲಿ ತಂಡದಲ್ಲಿರಬೇಕು ಎಂದು ಆಯ್ಕೆದಾರರಿಗೆ ರೋಹಿತ್​, ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಕಳೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಗರಿಷ್ಠ ಸ್ಕೋರರ್​ ಆಗಿ ಹೊರಹೊಮ್ಮಿದ್ದರು.

2022ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್‌ಗಳ ಹೀನಾಯ ಸೋಲಿನ ನಂತರ ಕೇವಲ 2 ಟಿ20ಐಗಳನ್ನು ಆಡಿರುವ ಕೊಹ್ಲಿ, ಐಪಿಎಲ್ 2024ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. 10 ಪಂದ್ಯಗಳಲ್ಲಿ 500 ರನ್ ಗಳಿಸಿರುವ ಕೊಹ್ಲಿ, ಪ್ರಸ್ತುತ ಆರೆಂಜ್ ಕ್ಯಾಪ್ ಹೋಲ್ಡರ್​ ಆಗಿದ್ದಾರೆ. 4 ಅರ್ಧಶತಕ, 1 ಶತಕ ಸಿಡಿಸಿದ್ದಾರೆ. ಉಳಿದ 4 ಪಂದ್ಯಗಳಲ್ಲೂ ಮಿಂಚುವ ನಿರೀಕ್ಷೆ ಇದೆ.

ರಿಷಭ್ ಪಂತ್ ಮೊದಲ ಆಯ್ಕೆಯಲ್ಲ, ಮತ್ಯಾರು?

ಕಾರು ಅಪಘಾತಕ್ಕೆ ಒಳಗಾಗಿ ಚೇತರಿಸಿಕೊಂಡಿರುವ ರಿಷಭ್ ಪಂತ್, ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾಯಕನಾಗಿ ಕೂಡ ಮಿಂಚುತ್ತಿದ್ದಾರೆ. ಮತ್ತೆ ಚುರುಕಿನ ವಿಕೆಟ್ ಕೀಪಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ, ಟಿ20 ವಿಶ್ವಕಪ್​ ವಿಕೆಟ್ ಕೀಪರ್ ಸ್ಥಾನಕ್ಕೆ ಪಂತ್ ಮೊದಲ ಆದ್ಯತೆ ಎಂದು ಹೇಳಲಾಗಿತ್ತು. ಆದರೀಗ ಪಂತ್​ ಮೊದಲ ಆಯ್ಕೆಯ ವಿಕೆಟ್ ಕೀಪರ್​ ಅಲ್ಲ ಎಂದು ವರದಿಯಾಗಿದೆ.

ಆರ್​ಆರ್​​ ನಾಯಕ ಸಂಜು ಸ್ಯಾಮ್ಸನ್, ಟಿ20 ವಿಶ್ವಕಪ್‌ನಲ್ಲಿ ಭಾರತದ ಮೊದಲ ಆಯ್ಕೆಯ ವಿಕೆಟ್‌ಕೀಪರ್-ಬ್ಯಾಟರ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಗಳು ಹೇಳುತ್ತಿವೆ. ಸಂಜು ಸ್ಯಾಮ್ಸನ್ ಸಹ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎಲ್​ಎಸ್​ಜಿ ನಾಯಕ ಕೆಎಲ್ ರಾಹುಲ್, ಜಿತೇಶ್ ಶರ್ಮಾ ಕೂಡ ಈ ರೇಸ್​​​ನಲ್ಲಿದ್ದರು. ಆದರೆ, ನಿರೀಕ್ಷಿತ ಪ್ರದರ್ಶನ ಅವರಿಂದ ಬಂದಿಲ್ಲ. ಹಾಗಾಗಿ ಸಂಜು-ಪಂತ್ ಆಯ್ಕೆಯಾಗುವ ನಿರೀಕ್ಷೆಯಿದ್ದು, ಮೊದಲ ಆಯ್ಕೆ ಸ್ಯಾಮ್ಸನ್ ಆಗಿರಲಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Whats_app_banner