ಕನ್ನಡ ಸುದ್ದಿ  /  ಕ್ರಿಕೆಟ್  /  ಜನರು ಕೊಹ್ಲಿಯನ್ನು ದೇವರೆಂದು ಭಾವಿಸುತ್ತಾರೆ, ಆದರೆ ಆತನೂ ಮನುಷ್ಯನೇ: ವಿರಾಟ್ ನೆರವಿಗೆ ಧಾವಿಸಿದ ಕೈಫ್-ಸಿಧು

ಜನರು ಕೊಹ್ಲಿಯನ್ನು ದೇವರೆಂದು ಭಾವಿಸುತ್ತಾರೆ, ಆದರೆ ಆತನೂ ಮನುಷ್ಯನೇ: ವಿರಾಟ್ ನೆರವಿಗೆ ಧಾವಿಸಿದ ಕೈಫ್-ಸಿಧು

Navjot singh Sidhu and Mohammad Kaif: ಆರ್​ಸಿಬಿ ಮಾಜಿ ನಾಯಕನ ಸುತ್ತಲಿನ 'ಸ್ಟ್ರೈಕ್ ರೇಟ್' ಚರ್ಚೆಯ ಹಿನ್ನೆಲೆಯಲ್ಲಿ ಮೊಹಮ್ಮದ್ ಕೈಫ್ ಮತ್ತು ನವಜೋತ್ ಸಿಧು ಅವರು ವಿರಾಟ್ ಕೊಹ್ಲಿ ಅವರ ಸಹಾಯಕ್ಕೆ ಧಾವಿಸಿದ್ದಾರೆ.

ಜನರು ಕೊಹ್ಲಿಯನ್ನು ದೇವರೆಂದು ಭಾವಿಸುತ್ತಾರೆ, ಆದರೆ ಆತನೂ ಮನುಷ್ಯನೇ: ವಿರಾಟ್ ನೆರವಿಗೆ ಧಾವಿಸಿದ ಕೈಫ್-ಸಿಧು
ಜನರು ಕೊಹ್ಲಿಯನ್ನು ದೇವರೆಂದು ಭಾವಿಸುತ್ತಾರೆ, ಆದರೆ ಆತನೂ ಮನುಷ್ಯನೇ: ವಿರಾಟ್ ನೆರವಿಗೆ ಧಾವಿಸಿದ ಕೈಫ್-ಸಿಧು

ವಿರಾಟ್ ಕೊಹ್ಲಿ (Virat Kohli) ಅವರ ಅಜೇಯ 70 ರನ್​​ಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB 2024) ತಂಡವು, ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ 9 ವಿಕೆಟ್​​ ಗೆಲುವು ಸಾಧಿಸಿತು. ಟೂರ್ನಿಯಲ್ಲಿ ತಮ್ಮ 4ನೇ ಅರ್ಧಶತಕ ಗಳಿಸಿದ ಕೊಹ್ಲಿ ಒಟ್ಟಾರೆ, 500 ರನ್ ಗಳಿಸಿದ್ದು, ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. 71.4ರ ಸರಾಸರಿ ಮತ್ತು 147.4ರ ಸ್ಟ್ರೈಕ್ ರೇಟ್​​ ಹೊಂದಿರುವ ಕೊಹ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇದರ ಹೊರತಾಗಿಯೂ ಕೊಹ್ಲಿ ಸ್ಟ್ರೈಕ್​ರೇಟ್​ ಮತ್ತು ಸ್ಪಿನ್ನರ್​​ಗಳ ವಿರುದ್ಧ ರನ್ ಗಳಿಸಲು ಪರದಾಡುತ್ತಾರೆ ಎಂಬ ಟೀಕೆಗೆ ಗುರಿಯಾಗಿದ್ದಾರೆ. ಸನ್​​​ರೈಸರ್ಸ್ ಹೈದರಾಬಾದ್ ವಿರುದ್ಧ 43 ಎಸೆತಗಳಲ್ಲಿ 51 ರನ್ ಗಳಿಸಿದ್ದ ಕಾರಣ ಈ ಟೀಕೆಗೆ ಗುರಿಯಾಗಿದ್ದರು.

ಟ್ರೆಂಡಿಂಗ್​ ಸುದ್ದಿ

ಗುಜರಾತ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಕೊಹ್ಲಿ, ಟೀಕಾಕಾರರ ಬಾಯ್ಮುಚ್ಚಿಸಿದರು. ತೀಕ್ಷ್ಣ ಪ್ರತಿಕ್ರಿಯೆ ನೀಡುವ ಮೂಲಕ ಕೊಹ್ಲಿ, ತನ್ನ ಸ್ಟ್ರೈಕ್​ರೇಟ್​ ಕುರಿತು ಟೀಕೆಗಳನ್ನು ತಳ್ಳಿಹಾಕಿದರು. ಕಾಮೆಂಟರಿ ಬಾಕ್ಸ್​ನಲ್ಲಿ ಕೂತು ತನ್ನ ಸ್ಟ್ರೈಕ್​ರೇಟ್​​ ಮಾತನಾಡುವುದು ಸುಲಭ ಎಂದು ಟೀಕಿಸಿದ್ದವರಿಗೆ ಚಾಟಿ ಬೀಸಿದರು. 15 ವರ್ಷಗಳ ಕಾಲ ಇದೇ ಆಟವನ್ನು ಮುಂದುವರೆಸಿಕೊಂಡು ಬಂದಿದ್ದೇನೆ. ತನ್ನ ತಂಡವು ಗೆಲ್ಲುವುದನ್ನು ಖಚಿತಪಡಿಸಿಕೊಳ್ಳುವುದು ತನ್ನ ಕೆಲಸವನ್ನು ಹೇಗೆ ತಿಳಿದಿದೆ ಎಂದು ಹೇಳುವ ಮೂಲಕ ಕೊಹ್ಲಿ ಗಮನಸೆಳೆದರು. ಇದರ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗರಾದ ಮೊಹಮ್ಮದ್ ಕೈಫ್ ಮತ್ತು ನವಜೋತ್ ಸಿಧು ಬೆಂಬಲ ನೀಡಿದರು.

ಕೊಹ್ಲಿ ಬಗ್ಗೆ ಕೈಫ್ ಹೇಳಿದ್ದೇನು?

ಭಾನುವಾರದ ಡಬಲ್ ಹೆಡರ್​​ನ ಎರಡನೇ ಪಂದ್ಯದ ಸಮಯದಲ್ಲಿ ಕೈಫ್ ಮತ್ತು ಸಿಧು, ವೀಕ್ಷಕವಿವರಣೆ ಮಾಡುವಾಗ, ಕೊಹ್ಲಿಯ ಸ್ಟ್ರೈಕ್ ರೇಟ್ ಸುತ್ತಲಿನ ಚರ್ಚೆಯ ಕುರಿತು ಮಾತನಾಡಿ, ಭಾರತದ ಮಾಜಿ ನಾಯಕನ ಸಹಾಯಕ್ಕೆ ಧಾವಿಸಿದರು. 'ಈ ದಿನಗಳಲ್ಲಿ ನಾನು ಕೇಳುತ್ತಿರುವ ವಿಚಾರ ಅಂದರೆ ಸ್ಟ್ರೈಕ್ ರೇಟ್ ಬಗ್ಗೆ ಮಾತ್ರ. 7 ಮತ್ತು 15 ಓವರ್​​​ಗಳ ನಡುವೆ ನಿಧಾನವಾಗಿರುವುದು ಸ್ಪಷ್ಟವಾಗಿದೆ. ಸ್ಪಿನ್ನರ್​​ಗಳ ಎಕಾನಮಿ ರೇಟ್ ವೇಗದ ಬೌಲರ್​​​​ಗಳಿಂತ ಕಡಿಮೆ ಇರುತ್ತದೆ, ಏಕೆ? ಏಕೆಂದರೆ ಅವರು ಮಧ್ಯಮ ಓವರ್​​ಗಳನ್ನು ಎಸೆಯುತ್ತಾರೆ ಎಂದು ಕೈಫ್ ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಮಧ್ಯಮ ಓವರ್​ಗಳಲ್ಲಿ ಸ್ಪಿನ್ನರ್​ಗಳು ಮೇಲುಗೈ ಸಾಧಿಸುತ್ತಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಕೊಹ್ಲಿ ಬೆಂಬಲಿಸಿದ ಸಿಧು

ಸ್ಪಿನ್ ವಿರುದ್ಧ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸುತ್ತಾರೆ ಎಂದು ಟೀಕೆ ಮಾಡಿದ್ದ ಟೀಕಾಕಾರರಿಗೆ ತನ್ನ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್​ಗಳ ವಿರುದ್ಧ 179ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ ರನ್ ಗಳಿಸಿದರು. ಸ್ಪಿನ್ನರ್​​​​ಗಳ ವಿರುದ್ಧ ಎದುರಿಸಿದ 34 ಎಸೆತಗಳಲ್ಲಿ 61 ರನ್ ಗಳಿಸಿದ್ದಾರೆ. ಇದೇ ಉದಾಹರಣೆ ಉಲ್ಲೇಖಿಸಿದ ಸಿಧು, ಕೊಹ್ಲಿ 6ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸುವ ತನ್ನ ಖದರ್​ ತೋರಿಸಿದ್ದಾರೆ ಎಂದಿದ್ದಾರೆ.

"ಜನರು ಕೊಹ್ಲಿಯನ್ನು ದೇವರು ಎಂದು ಭಾವಿಸುತ್ತಾರೆ. ಆದರೆ ಆತನೂ ಮನುಷ್ಯನೇ. ಆದರೆ, ಆ ವ್ಯಕ್ತಿ 80 ಶತಕಗಳನ್ನು ಸಿಡಿಸಿದ್ದಾರೆ ಎಂಬ ಅಂಶವನ್ನು ನಾವೇಕೆ ನೋಡುತ್ತಿಲ್ಲ. ಇದು ಆತನ ಶಕ್ತಿ. ನೀವು ಸರಿಯಾಗಿ ಗಮನಿಸಿದರೆ, ಗುಜರಾತ್ ವಿರುದ್ಧ ಬ್ಯಾಕ್​ಫುಟ್​​ನಲ್ಲಿ ಆಡಿದರು. ಸ್ಪಿನ್ನರ್​​ಗಳ ವಿರುದ್ಧ ಅಬ್ಬರಿಸಿದರು. ಹೀಗೆ ಎಷ್ಟು ಜನರು ಮಾಡಬಹುದು ಹೇಳಿ? ಅದರಲ್ಲೂ ಎಡಗೈ ಸ್ಪಿನ್ನರ್​​ಗಳ ವಿರುದ್ಧ ಬ್ಯಾಕ್​ಫುಟ್​ನಲ್ಲಿ ಅಷ್ಟು ಸುಲಭವಲ್ಲ. ಹೀಗೆ ಎಷ್ಟು ಮಂದಿ ಮಾಡುತ್ತಾರೆ. ಅವರು ತಮ್ಮ ವಿಕೆಟ್ ಕಾಪಾಡಿಕೊಳ್ಳುವುದನ್ನೂ ಪ್ರೀತಿಸುತ್ತಾರೆ. ತಂಡಕ್ಕಾಗಿ ಅವರು ಇನ್ನೇನು ಮಾಡಬೇಕು?" ಎಂದು ಸಿಧು ಪ್ರಶ್ನಿಸಿದ್ದಾರೆ.

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point