ಕನ್ನಡ ಸುದ್ದಿ  /  ಕ್ರಿಕೆಟ್  /  Virat Kohli: ಈ ಗೆಲುವು ನನ್ನದಷ್ಟೇ ನಿನ್ನದು; ಅನುಷ್ಕಾ ಶರ್ಮಾ ಕುರಿತು ವಿರಾಟ್ ಕೊಹ್ಲಿ ಭಾವುಕ ಪೋಸ್ಟ್

Virat Kohli: ಈ ಗೆಲುವು ನನ್ನದಷ್ಟೇ ನಿನ್ನದು; ಅನುಷ್ಕಾ ಶರ್ಮಾ ಕುರಿತು ವಿರಾಟ್ ಕೊಹ್ಲಿ ಭಾವುಕ ಪೋಸ್ಟ್

Virat Kohli on Anushka Sharma: ತನಗೆ ಬೆಂಗಾವಲಾಗಿ ನಿಂತಿರುವ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಹೊಗಳಿ ಬ್ಯಾಟಿಂಗ್ ಸೂಪರ್​ ಸ್ಟಾರ್​ ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

Virat Kohli: ಈ ಗೆಲುವು ನನ್ನದಷ್ಟೇ ನಿನ್ನದು; ಅನುಷ್ಕಾ ಶರ್ಮಾ ಕುರಿತು ವಿರಾಟ್ ಕೊಹ್ಲಿ ಭಾವುಕ ಪೋಸ್ಟ್
Virat Kohli: ಈ ಗೆಲುವು ನನ್ನದಷ್ಟೇ ನಿನ್ನದು; ಅನುಷ್ಕಾ ಶರ್ಮಾ ಕುರಿತು ವಿರಾಟ್ ಕೊಹ್ಲಿ ಭಾವುಕ ಪೋಸ್ಟ್

ಐಸಿಸಿ ಟಿ20 ವಿಶ್ವಕಪ್ 2024ರ (T20 World Cup 2024) ವಿಜಯದ ನಂತರ ಬ್ಯಾಟಿಂಗ್​ ಸೂಪರ್‌ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರಿಗೆ ಹೃದಯಸ್ಪರ್ಶಿ ಸಂದೇಶ ಕೊಟ್ಟಿದ್ದಾರೆ. ಕೋಟ್ಯಂತರ ಜನರಿಗೆ ವಿರಾಟ್ ಸ್ಫೂರ್ತಿಯಾಗಿದ್ದರೆ ಕೊಹ್ಲಿಗೆ ಅನುಷ್ಕಾ ಸ್ಫೂರ್ತಿಯಾಗಿದ್ದಾರೆ. 17 ವರ್ಷಗಳ ನಂತರ ಭಾರತ ವಿಶ್ವಕಪ್ (T20 World Cup 2024) ಗೆದ್ದ ಬೆನ್ನಲ್ಲೇ ಅನುಷ್ಕಾ ಅವರನ್ನು ವಿರಾಟ್ ಹೊಗಳಿ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದು, ತಮ್ಮ ಪತ್ನಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ವಿರಾಟ್ ಕೊಹ್ಲಿ ಪೋಸ್ಟ್​ನಲ್ಲಿ ಏನಿದೆ?

ಇನ್‌ಸ್ಟಾಗ್ರಾಂನಲ್ಲಿ ಅನುಷ್ಕಾ ಶರ್ಮಾ ಅವರೊಂದಿಗಿನ ಫೋಟೋ ಹಂಚಿಕೊಂಡ ವಿರಾಟ್, 'ನೀನಿಲ್ಲದಿದ್ದರೆ ಇದೆಲ್ಲವೂ ಅಸಾಧ್ಯ. ನೀನು ನನ್ನನ್ನು ಯಾವಾಗೂ ವಿನಯಪೂರ್ವಕವಾಗಿರಲು ಪ್ರಯತ್ನಿಸುತ್ತಿರುವೆ. ಅದು ಹೇಗೆ ಎಂದು ನೀವು ಯಾವಾಗಲೂ ಸಂಪೂರ್ಣ ಪ್ರಾಮಾಣಿಕತೆಯಿಂದ ಹೇಳುತ್ತೀರಿ. ನಾನು ನಿಮಗಾಗಿ ಹೆಚ್ಚು ಕೃತಜ್ಞರಾಗಿರಲು ಸಾಧ್ಯವಿಲ್ಲ. ಈ ಗೆಲುವು ನನ್ನದಷ್ಟೇ ನಿಮ್ಮದು. ಧನ್ಯವಾದಗಳು. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಕೊಹ್ಲಿಗೂ ಮುನ್ನ ಅನುಷ್ಕಾ ಮಾಡಿದ್ದ ಪೋಸ್ಟ್​ನಲ್ಲೇನಿತ್ತು?

ಪಂದ್ಯ ಗೆದ್ದ ನಂತರ ವಿರಾಟ್ ಪತ್ನಿ ಅನುಷ್ಕಾ ಕೂಡ ವಿಶೇಷ ಪೋಸ್ಟ್ ಹಾಕಿದ್ದರು. ನಮ್ಮ ಮಗಳ ದೊಡ್ಡ ಕಾಳಜಿ ಏನೆಂದರೆ, ಎಲ್ಲಾ ಆಟಗಾರರು ಟಿವಿಯಲ್ಲಿ ಅಳುತ್ತಿರುವುದನ್ನು ನೋಡಿದ ನಂತರ ಅವರನ್ನು ತಬ್ಬಿಕೊಳ್ಳಲು ಯಾರಾದರೂ ಇದ್ದಾರಾ? ಎಂದು. ಹೌದು, ನನ್ನ ಕಂದ ಅವರನ್ನು 1.5 ಬಿಲಿಯನ್ ಜನರು ತಬ್ಬಿಕೊಂಡರು. ಎಂತಹ ಅದ್ಭುತ ಗೆಲುವು ಮತ್ತು ಎಂತಹ ಪೌರಾಣಿಕ ಸಾಧನೆ!! ಚಾಂಪಿಯನ್ಸ್ ತಂಡಕ್ಕೆ ಅಭಿನಂದನೆಗಳು ಎಂದು ಲವ್ ಎಮೋಜಿ ಜೊತೆಗೆ ಪೋಸ್ಟ್ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫೈನಲ್​ನಲ್ಲಿ ವಿರಾಟ್ ಕೊಹ್ಲಿ ಅಬ್ಬರ

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಲೀಗ್​ ಮತ್ತು ಸೂಪರ್​-8 ಹಾಗೂ ಸೆಮಿಫೈನಲ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ಫೈನಲ್​ನಲ್ಲಿ ಅಬ್ಬರಿಸಿದ್ದರು. ಫೈನಲ್​ಗೂ ಮುನ್ನ ಕೊಹ್ಲಿ ಆಡಿದ 7 ಪಂದ್ಯಗಳಲ್ಲಿ 75 ರನ್ ಮಾತ್ರ ಗಳಿಸಿದ್ದರು. ಆದರೆ ಸೌತ್ ಆಫ್ರಿಕಾ ಎದುರು ಫೈನಲ್​ನಲ್ಲಿ ಕೊಹ್ಲಿ, ಅರ್ಧಶತಕ ಸಿಡಿಸಿದರು. 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ ಸಹಿತ 76 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಈ ಅದ್ಭುತ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಯಿತು.

ವಿರಾಟ್ ಕೊಹ್ಲಿ ಟಿ20ಐ ಕ್ರಿಕೆಟ್​ಗೆ ವಿದಾಯ

ಟಿ20 ವಿಶ್ವಕಪ್ 2024 ಗೆದ್ದ ಬೆನ್ನಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ವಿರಾಟ್ ಕೊಹ್ಲಿ, ಟಿ20ಐ ಕ್ರಿಕೆಟ್​ಗೆ ವಿದಾಯ ಹೇಳಿದರು. ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದು ಬಹಿರಂಗಪಡಿಸಿದರು. ಟಿ20ಐ ಕ್ರಿಕೆಟ್​ನಲ್ಲಿ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ (4188) ಎನಿಸಿದ ಕೊಹ್ಲಿ, 48.69ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. 39 ಬಾರಿ 50+ ಸ್ಕೋರ್ ಮಾಡಿದ್ದಾರೆ. ಅಲ್ಲದೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ 1292 ರನ್ ಗಳಿಸಿ ಅಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ.

  • ಟಿ20ಐಗಳಲ್ಲಿ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: 4188 ರನ್
  • ಟಿ20ಐಗಳಲ್ಲಿ ಎರಡನೇ ಗರಿಷ್ಠ ಸರಾಸರಿ: 48.69
  • ಪಂದ್ಯದ ಹೆಚ್ಚಿನ ಆಟಗಾರ ಪ್ರಶಸ್ತಿಗಳು: 16
  • ಸರಣಿಯ ಹೆಚ್ಚಿನ ಆಟಗಾರ ಪ್ರಶಸ್ತಿಗಳು: 7
  • ಅತಿ ಹೆಚ್ಚು ಅರ್ಧಶತಕಗಳು: 39
  • 3500 ರನ್‌ಗಳಿಗೆ ವೇಗವಾಗಿ: 96 ಇನ್ನಿಂಗ್ಸ್
  • ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: 1292 ರನ್
  • ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ಸರಾಸರಿ: 58.72
  • ಟಿ20 ವಿಶ್ವಕಪ್‌ನಲ್ಲಿ ಪಂದ್ಯದ ಹೆಚ್ಚಿನ ಆಟಗಾರ ಪ್ರಶಸ್ತಿಗಳು: 8
  • ಎರಡು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಏಕೈಕ ಆಟಗಾರ

ಇದನ್ನೂ ಓದಿ: ಟಿ20 ವಿಶ್ವಕಪ್ ಟೂರ್ನಿಯ ತಂಡವನ್ನು ಪ್ರಕಟಿಸಿದ ಐಸಿಸಿ; ಭಾರತದ 6 ಆಟಗಾರರಿಗೆ ಅವಕಾಶ, ಕೊಹ್ಲಿಗಿಲ್ಲ ಸ್ಥಾನ!