ಐಪಿಎಲ್ ಇತಿಹಾಸದಲ್ಲಿ 700 ಬೌಂಡರಿ ಸಿಡಿಸಿದ ವಿರಾಟ್ ಕೊಹ್ಲಿ; ಫೋರ್ಗಳಿಂದಲೂ ಐತಿಹಾಸಿಕ ದಾಖಲೆ ಬರೆದ ಕಿಂಗ್
- Virat Kohli Record: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ 2ನೇ ಓವರ್ನಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಬೌಂಡರಿಗಳ ಮೂಲಕವೇ ವಿಶೇಷ ದಾಖಲೆ ಬರೆದಿದ್ದಾರೆ.
- Virat Kohli Record: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ 2ನೇ ಓವರ್ನಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಬೌಂಡರಿಗಳ ಮೂಲಕವೇ ವಿಶೇಷ ದಾಖಲೆ ಬರೆದಿದ್ದಾರೆ.
(1 / 6)
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18ರ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2024ರ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವೈಯಕ್ತಿಕ ಮೈಲಿಗಲ್ಲು ತಲುಪಿದರು. ಕೊಹ್ಲಿ ಈ ವಿಶೇಷ ದಾಖಲೆ ಬರೆದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಐಪಿಎಲ್ ಇತಿಹಾಸದಲ್ಲಿ 17 ಆವೃತ್ತಿಗಳಲ್ಲಿ ಕೇವಲ ಇಬ್ಬರು ಬ್ಯಾಟರ್ಗಳು ಮಾತ್ರ ಈ ಅಪರೂಪದ ಸಾಧನೆ ಮಾಡಿದ್ದಾರೆ.
(2 / 6)
ಚೆನ್ನೈ ವಿರುದ್ಧದ ತವರು ಪಂದ್ಯದಲ್ಲಿ ಕೊಹ್ಲಿ ಒಂದು ಬೌಂಡರಿ ಸಿಡಿಸಿ ಐಪಿಎಲ್ ಇತಿಹಾಸದಲ್ಲಿ 700 ಬೌಂಡರಿಗಳ ಮೈಲಿಗಲ್ಲನ್ನು ತಲುಪಿದರು. ಈ ಮೂಲಕ ಐಪಿಎಲ್ನಲ್ಲಿ 700 ಬೌಂಡರಿ ಬಾರಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ. ಪಂದ್ಯದ 2ನೇ ಓವರ್ನಲ್ಲಿ ಶಾರ್ದೂಲ್ ಠಾಕೂರ್ ಎಸೆದ 2ನೇ ಎಸೆತದಲ್ಲಿ ಬೌಂಡರಿ ಸಿಡಿಸಿ ಈ ದಾಖಲೆ ಬರೆದರು.
(3 / 6)
ವಿರಾಟ್ ಕೊಹ್ಲಿ ತಮ್ಮ 251 ನೇ ಐಪಿಎಲ್ ಪಂದ್ಯದ 243 ಇನ್ನಿಂಗ್ಸ್ಗಳಲ್ಲಿ 700 ಬೌಂಡರಿಗಳನ್ನು ಬಾರಿಸಿದ್ದಾರೆ. ಕೊಹ್ಲಿಗಿಂತ ಮೊದಲು ಶಿಖರ್ ಧವನ್ ಐಪಿಎಲ್ನಲ್ಲಿ 700 ಬೌಂಡರಿಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 222 ಐಪಿಎಲ್ ಪಂದ್ಯಗಳಲ್ಲಿ 221 ಇನ್ನಿಂಗ್ಸ್ಗಳಲ್ಲಿ 768 ಬೌಂಡರಿಗಳನ್ನು ಸಿಡಿಸಿದ್ದಾರೆ.
(4 / 6)
ಈ ಪಂದ್ಯದಲ್ಲಿ ಕೊಹ್ಲಿ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಾಯದಿಂದ 47 ರನ್ ಗಳಿಸಿದರು. ಐಪಿಎಲ್ನಲ್ಲಿ ವಿರಾಟ್ ಅವರ ಬೌಂಡರಿಗಳ ಸಂಖ್ಯೆ 702 ಆಗಿದೆ.
(5 / 6)
ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಈವರೆಗೆ 38.88 ಸರಾಸರಿಯಲ್ಲಿ 7971 ರನ್ ಗಳಿಸಿದ್ದು, 271 ಸಿಕ್ಸರ್ಗಳನ್ನು ಬಾರಿಸಿದ್ದಾರೆ. 8 ಶತಕ ಮತ್ತು 55 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್ನಲ್ಲಿ ಒಟ್ಟು 10 ಬಾರಿ ಡಕೌಟ್ ಆಗಿದ್ದಾರೆ.
(6 / 6)
ಅರ್ಧಶತಕ ಗಳಿಸಲು ವಿಫಲರಾಗಿದ್ದರೂ, ಕೊಹ್ಲಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲಿ 47 ರನ್ ಗಳಿಸುವ ಹಾದಿಯಲ್ಲಿ 700 ರನ್ಗಳ ಗಡಿ ದಾಟಿದ್ದಾರೆ. ಐಪಿಎಲ್ 2024ರ 14 ಪಂದ್ಯಗಳಲ್ಲಿ ಕೊಹ್ಲಿ 64.36 ಸರಾಸರಿಯಲ್ಲಿ 708 ರನ್ ಗಳಿಸಿದ್ದಾರೆ. ಈ ಐಪಿಎಲ್ನಲ್ಲಿ 1 ಶತಕ, 5 ಅರ್ಧಶತಕ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಔಟಾಗದೆ 113 ರನ್ ಆಗಿದೆ. 59 ಬೌಂಡರಿ, 37 ಸಿಕ್ಸರ್ ಬಾರಿಸಿದ್ದಾರೆ.
ಇತರ ಗ್ಯಾಲರಿಗಳು