ಕನ್ನಡ ಸುದ್ದಿ  /  Cricket  /  Cricket News Virat Kohli Likely To Miss Ipl Ab De Villiers Related To Sunil Gavaskar Statement Rmy

ವಿರಾಟ್ ಕೊಹ್ಲಿ ಐಪಿಎಲ್ ಮಿಸ್ ಮಾಡಿಕೊಳ್ಳುವ ಸಾಧ್ಯತೆ; ಸುನಿಲ್ ಗವಾಸ್ಕರ್ ಹೇಳಿಕೆಗೆ ಹೀಗಿತ್ತು ಎಬಿಡಿ ಉತ್ತರ

ವೈಯಕ್ತಿಕ ಕಾರಣ ನೀಡಿ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದ ವಿರಾಟ್ ಕೊಹ್ಲಿ ಐಪಿಎಲ್‌ ತಪ್ಪಿಸಿಕೊಳ್ಳಬಹುದು ಅಂತ ಗವಾಸ್ಕರ್ ಹೇಳಿದ್ರು. ಆದರೆ ಎಬಿಡಿ ಇದಕ್ಕೆ ಬೇರೆೆಯೇ ಸುಳಿವು ಕೊಟ್ಟಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎಂಬ ಸುನಿಲ್ ಗವಾಸ್ಕರ್ ಹೇಳಿಕೆಗೆ ಆರ್‌ಸಿಬಿಯ ಮಾಜಿ ಆಟಗಾರ ಎಬಿಡಿ ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎಂಬ ಸುನಿಲ್ ಗವಾಸ್ಕರ್ ಹೇಳಿಕೆಗೆ ಆರ್‌ಸಿಬಿಯ ಮಾಜಿ ಆಟಗಾರ ಎಬಿಡಿ ಪ್ರತಿಕ್ರಿಯಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌-ಐಪಿಎಲ್‌ನ 17ನೇ ಆವೃತ್ತಿ ಆರಂಭಕ್ಕೆ 15 ದಿನಗಳಿಗಿಂತ ಕಡಿಮೆ ಸಮಯ ಇದೆ. ಚುಟುಕು ಟಿ20 ಕ್ರಿಕೆಟ್ ಸಮರದ ಮೊದಲ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮಾರ್ಚ್ 22 ರಂದು ನಡೆಯಲಿದೆ. ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಆರ್‌ಸಿಬಿಯ ಸ್ಟಾರ್ ಬ್ಯಾಟ್ಸಮನ್‌ಗಳಾಗಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ವಿರಾಟ್ ಕೊಹ್ಲಿ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು. ಈ ಬಗ್ಗೆ ಇತ್ತೀಚೆಗಷ್ಟೇ ಪ್ರತಿಕ್ರಿಯಿಸಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮುಂಬರುವ ಐಪಿಎಲ್ ಟೂರ್ನಿಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ಹೈದರಾಬಾದ್‌ನಲ್ಲಿ ಜನವರಿ 25 ರಿಂದ 29 ವರೆಗೆ ನಡೆದಿದ್ದ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ಕೆಲ ಪಂದ್ಯಗಳಿಂದ ಹಿಂದೆ ಸರಿಯುವುದಾಗಿ ಬಿಸಿಸಿಐಗೆ ತಿಳಿಸಿದ್ದರು. ಇದಾದ ಕೆಲವೇ ದಿನಗಳ ಬಳಿಕ ಅಂದ್ರೆ ಫೆಬ್ರವರಿ 15 ರಂದು ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ 2ನೇ ಮಗುವನ್ನು ಸ್ವಾಗತಿಸಿದ್ದರು.

ಟೀಂ ಇಂಡಿಯಾದ ಮಾಜಿ ಆಟಗಾರ ಗವಾಸ್ಕರ್, ಕೆಲವೊಂದು ಕಾರಣಗಳಿಂದ ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯಗಳನ್ನು ಆಡುವುದು ಅನುಮಾನವಾಗಿದೆ ಎಂದು ಹೇಳಿದ್ದರು. ಇದೀಗ ಸುನಿಲ್ ಗವಾಸ್ಕರ್ ಅವರ ಹೇಳಿಕೆಗೆ ಆರ್‌ಸಿಬಿಯ ಮಾಜಿ ಆಟಗಾರ ಹಾಗೂ ವಿರಾಟ್ ಕೊಹ್ಲಿ ಆಪ್ತಮಿತ್ರ ಎಬಿ ಡಿವಿಲಿಯರ್ಸ್ ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಮುಂಬರುವ ಐಪಿಎಲ್‌ನಲ್ಲಿ ಆಡಲಿದ್ದಾರೆ ಎಂದು ಎಬಿಡಿ ಹೇಳಿದ್ದಾರೆ.

ನಾಕೌಟ್ ಹಂತದಲ್ಲಿ ಆರ್‌ಸಿಬಿ ಬ್ಯಾಕೆಂಡ್‌ಗೆ ವಾಪಸ್‌ ಆಗ್ತೇನೆ-ಎಬಿಡಿ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅವರು, ಇನ್ನೂ ಯಾವುದೇ ಸ್ಪಷ್ಟವಾಗಿಲ್ಲ. ಆದರೆ ಐಪಿಎಲ್ ಆರಂಭವಾದ ಬಳಿಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಬ್ಯಾಟರ್‌ಗಳೊಂದಿಗೆ ಸ್ವಲ್ಪ ಸಮಯ ಕಳೆಯಲು ನಾನು ಬಯಸುತ್ತೇನೆ ಎಂದು ಆರ್‌ಸಿಬಿಗೆ ವಾಪಸ್ ಬರುವ ಸುಳಿವು ನೀಡಿದ್ದಾರೆ. ಇನ್ನೂ ಯಾವುದನ್ನೂ ದೃಢಪಡಿಸಲಾಗಿಲ್ಲ. ಆಂಡಿ ಫ್ಲವರ್, ಫಾಫ್ ಡು ಪ್ಲೆಸಿಸ್ ಹಾಗೂ ತಂಡದಿಂದ ಕರೆ ಬಂದಿದೆ. ಆದರೆ ಸದ್ಯಕ್ಕೆ ನಾನು ಐಪಿಎಲ್‌ನ ಮೊದಲ ಕೆಲವು ವಾರಗಳ ಕಾಲ ಮುಂಬೈನಲ್ಲಿ ಇರಲಿದ್ದೇನೆ. ನಾನು ಸ್ವಲ್ಪ ಕಾಮೆಂಟರಿ ಮಾಡುತ್ತೇನೆ. ನಮ್ಮ ಲೈವ್ ಸ್ಟ್ರೀಮ್‌ಗಳನ್ನು ನೋಡುವುದನ್ನು ಮರೆಯಬೇಡಿ. ನಾಕೌಟ್‌ ಹಂತದ ಸಮಯದಲ್ಲಿ ಆರ್‌ಸಿಬಿಯ ಬ್ಯಾಕೆಂಡ್‌ಗೆ ಹಿಂತಿರುಗುತ್ತೇನೆ ಎಂದು ಎಬಿಡಿ ಸ್ಪಷ್ಟಪಡಿಸಿದ್ದಾರೆ.

ಟಾಪ್ ಸ್ಟಾರ್ ಬ್ಯಾಟರ್‌ಗಳು ಇಲ್ಲದಿದ್ದರೂ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿದೆ. ಇದು ತುಂಬಾ ಹೆಮ್ಮೆ ಪಡುವ ವಿಷಯವಾಗಿದೆ. ಇದನ್ನು ಎಲ್ಲರೂ ಎಂಜಾಯ್ ಮಾಡಬೇಕು ಎಂದು ಸುನಿಲ್ ಗವಾಸ್ಕರ್ ಇತ್ತೀಚೆಗಷ್ಟೇ ಹೇಳಿದ್ದರು. ಮಾರ್ಚ್ 22 ರಿಂದ ಐಪಿಎಲ್‌ನ 17ನೇ ಆವೃತ್ತಿ ಆರಂಭವಾಗಲಿದೆ. ಇದಕ್ಕಾಗಿ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದರದಲ್ಲೂ ಉದ್ಘಾಟನಾ ಪಂದ್ಯ ಸಿಎಸ್‌ಕೆ-ಆರ್‌ಸಿಬಿ ನಡುವೆ ನಡೆಯಲಿದ್ದು, ಮೊದಲ ಪಂದ್ಯವೇ ರೋಚಕತೆಯನ್ನು ಹೆಚ್ಚಿಸಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )