ಕನ್ನಡ ಸುದ್ದಿ  /  ಕ್ರಿಕೆಟ್  /  ಇದೊಂದು ಆಯ್ಕೆಯಲ್ಲ, ಸಹಿ ಹಾಕಿ ಎಂದಿದ್ರು ವಿರಾಟ್ ಕೊಹ್ಲಿ; ಆರ್​ಸಿಬಿ ಸೇರಿದ್ದೇಗೆಂದು ಬಹಿರಂಗಪಡಿಸಿದ ಕೆಎಲ್ ರಾಹುಲ್

ಇದೊಂದು ಆಯ್ಕೆಯಲ್ಲ, ಸಹಿ ಹಾಕಿ ಎಂದಿದ್ರು ವಿರಾಟ್ ಕೊಹ್ಲಿ; ಆರ್​ಸಿಬಿ ಸೇರಿದ್ದೇಗೆಂದು ಬಹಿರಂಗಪಡಿಸಿದ ಕೆಎಲ್ ರಾಹುಲ್

KL Rahul: ಇಂಡಿಯನ್ ಪ್ರೀಮಿಯರ್​ ಲೀಗ್​​ನಲ್ಲಿ ಆರ್​​ಸಿಬಿ ಪರ ಆಡುವ ಕನಸು ಹೊತ್ತಿದ್ದ ಕೆಎಲ್ ರಾಹುಲ್ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಹಿ ಹಾಕಿದ್ದೇಗೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಆರ್​ಸಿಬಿ ಸೇರಿದ್ದೇಗೆಂದು ಬಹಿರಂಗಪಡಿಸಿದ ಕೆಎಲ್ ರಾಹುಲ್
ಆರ್​ಸಿಬಿ ಸೇರಿದ್ದೇಗೆಂದು ಬಹಿರಂಗಪಡಿಸಿದ ಕೆಎಲ್ ರಾಹುಲ್

ಗುರುವಾರ (ಏಪ್ರಿಲ್ 19) ತಮ್ಮ 32ನೇ ಹುಟ್ಟುಹಬ್ಬ ಆಚರಿಸಿಕೊಂಡ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕ ಕೆಎಲ್ ರಾಹುಲ್ (KL Rahul), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನನ್ನು ಆಯ್ಕೆ ಮಾಡಿದ್ದೇಗೆಂದು ಬಹಿರಂಗಪಡಿಸಿದ್ದಾರೆ. 2013ರಲ್ಲಿ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಆರ್​ಸಿಬಿ ತಂಡಕ್ಕೆ ಪದಾರ್ಪಣೆ ಮಾಡಿದ ರಾಹುಲ್, ಕೊಹ್ಲಿ ನೆರವನ್ನು ನೆನೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2013ರ ಋತುವಿಗೆ ಮುನ್ನ ಹೆವಿವೇಯ್ಟ್ ಆರ್​ಸಿಬಿ ತಂಡದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡರು. ಆಗಿನ್ನೂ ರಾಹುಲ್​ಗೆ 20 ವರ್ಷವಾಗಿತ್ತು. ಐಪಿಎಲ್​ನಲ್ಲಿ ಆರ್​ಸಿಬಿ ಪರ 2 ಬಾರಿ ಆಡಿದ್ದ ಕನ್ನಡಿಗ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಕೊಹ್ಲಿ ಅವರೊಂದಿಗಿನ ಪರಿಚಯದ ಕುರಿತು ಭಾರತೀಯ ಸ್ಪಿನ್ನರ್ ಆರ್ ಅಶ್ವಿನ್ ಯೂಟ್ಯೂಬ್ ಚಾನೆಲ್​​ನಲ್ಲಿ ಭಹಿರಂಗಪಡಿಸಿದ್ದಾರೆ.

ಆರ್​ಸಿಬಿಗೆ ಸಹಿ ಹಾಕಿದ್ದೇಗೆ?

2013ರ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕೆಎಲ್, ಆರ್​ಸಿಬಿ ಪರ ಆಡುವುದು ಯಾವಾಗಲೂ ನನ್ನ ಕನಸಾಗಿತ್ತು. ಆರ್​ಸಿಬಿ ಸೇರಲು ಕೊಹ್ಲಿ ಅವರೊಂದಿಗೆ ಕೇಳಿದ್ದೆ. ವಿರಾಟ್, ಕೋಚ್ ರೇ ಜೆನ್ನಿಂಗ್ಸ್ ಮತ್ತು ಇತರ ಸಹಾಯಕ ಸಿಬ್ಬಂದಿ ಐಟಿಸಿ ಗಾರ್ಡೇನಿಯಾ ಹೋಟೆಲ್​​ನಲ್ಲಿದ್ದರು. ಆಗ ವಿರಾಟ್, 'ನೀವು ಈ ಒಪ್ಪಂದಕ್ಕೆ ಸಹಿ ಹಾಕಿ ಆರ್​​ಸಿಬಿಗೆ ಆಡಲು ಬಯಸುತ್ತೀರಾ?' ಎಂದು ಕೇಳಿದ್ದರು. ನಾನು, 'ನೀವು ತಮಾಷೆ ಮಾಡುತ್ತಿದ್ದೀರಾ? ಅದು ಯಾವಾಗಲೂ ನನ್ನ ಕನಸಾಗಿತ್ತು ಎಂದು ಹೇಳಿದ್ದೆ.

ತದನಂತರ ಅವರು, 'ನಾನು ತಮಾಷೆ ಮಾಡುತ್ತಿದ್ದೇನೆ. ಇದು ಆಯ್ಕೆಯಲ್ಲ, ಈ ಒಪ್ಪಂದಕ್ಕೆ ಸಹಿ ಹಾಕಿ ಎಂದಿದ್ದರು. ಆಗ ನಾನು ಸಹಿ ಹಾಕಿದೆ. 'ಇದು ಹುಚ್ಚು ಸವಾರಿಯಾಗಲಿದೆ. ಮುಂದಿನ 2 ತಿಂಗಳಲ್ಲಿ ನೀವು ಸಾಕಷ್ಟು ಆನಂದಿಸಲಿದ್ದೀರಿ ಎಂದು ಕೊಹ್ಲಿ ಒಪ್ಪಂದದ ನಂತರ ಹೇಳಿದ್ದರು ಎಂದು ರಾಹುಲ್, ತಾನು ಆರ್​ಸಿಬಿ ಸೇರಿದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಈ ಎರಡು ತಿಂಗಳಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ ಎಂದು ವಿಕೆಟ್ ಕೀಪರ್-ಬ್ಯಾಟರ್​ ಹೇಳಿದ್ದಾರೆ.

‘7-8 ಆವೃತ್ತಿಗಳದ್ದು ಎರಡೇ ತಿಂಗಳಲ್ಲಿ ಕಲಿತೆ’

2013ರಲ್ಲಿ ಆರ್​ಸಿಬಿ ಸೇರಿದ ಹೊರತಾಗಿಯೂ ಆ ಆವೃತ್ತಿಯ ನಂತರ ತಂಡದಿಂದ ಬೇರ್ಪಟ್ಟರು. ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ 1 ಕೋಟಿಗೆ ಸಹಿ ಹಾಕಿದರು. 2013ರ ಸೀಸನ್​ನಲ್ಲಿ ರಾಹುಲ್ ಕೇವಲ 20 ರನ್ ಗಳಿಸಿದ್ದರು. 2014ರಲ್ಲಿ 166 ರನ್ ಗಳಿಸಿದ್ದ ಕೆಎಲ್, ಅದೇ ವರ್ಷ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆರ್​ಸಿಬಿ ಜೊತೆಗಿನ ಬಾಂಧವ್ಯ ಹಂಚಿಕೊಂಡ ರಾಹುಲ್, ನಾನು ಆ ಎರಡು ತಿಂಗಳಲ್ಲಿ (2013ರ ಆವೃತ್ತಿ) ಬೆಂಗಳೂರು ತಂಡದಲ್ಲಿ ಸಾಕಷ್ಟು ವಿಷಯಗಳನ್ನು ಕಲಿತೆ ಎಂದು ಹೇಳಿದ್ದಾರೆ.

ಕೇವಲ ರಣಜಿ ಟೂರ್ನಿಯಲ್ಲಿ ಆಡುವ ಮೂಲಕ ನಾನು ಪರಿಪೂರ್ಣ ಆಟಗಾರನಾಗಲು 7 ರಿಂದ 8 ಆವೃತ್ತಿಗಳನ್ನು ತೆಗೆದುಕೊಳ್ಳುತ್ತಿತ್ತು. ಆದರೆ, ಐಪಿಎಲ್​ನಲ್ಲಿ ಆ ಎರಡು ತಿಂಗಳು, ನಾನು ತುಂಬಾ ಜ್ಞಾನ ಮತ್ತು ಅನುಭವ ಪಡೆದುಕೊಂಡೆ. ಅದರಂತೆ ಎಲ್ಲವೂ ವೇಗವಾಗಿ ಮುಂದುವರಿಯಿತು ಎಂದು ರಾಹುಲ್ ಹೇಳಿದ್ದಾರೆ. ರಾಹುಲ್ 2016ರಲ್ಲಿ ಮತ್ತೆ ಆರ್​ಸಿಬಿಗೆ ಮರಳಿದರು. ಈ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 397 ರನ್ ಗಳಿಸಿದ್ದರು. ನಂತರ ಪಂಜಾಬ್ ಕಿಂಗ್ಸ್ 11 ಕೋಟಿ ರೂ.ಗೆ ಖರೀದಿಸಿತು. ಐಪಿಎಲ್ 2020 ಆರೆಂಜ್ ಕ್ಯಾಪ್ ವಿಜೇತರಾದ ಕನ್ನಡಿಗ, 2022ರ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕರಾಗಿ ನೇಮಕಗೊಂಡರು.

IPL_Entry_Point