ಕನ್ನಡ ಸುದ್ದಿ  /  ಕ್ರಿಕೆಟ್  /  ಸುನಿಲ್ ನರೈನ್ ಟೀಸ್ ಮಾಡಿದ ವಿರಾಟ್; ಅಂಡರ್​ಟೇಕರ್ ಶೈಲಿಯಲ್ಲಿ ಕತ್ತು ಸೀಳ್ತೇನೆ ಎಂದ ಕೊಹ್ಲಿ, ಫನ್ನಿ ವಿಡಿಯೋ ವೈರಲ್

ಸುನಿಲ್ ನರೈನ್ ಟೀಸ್ ಮಾಡಿದ ವಿರಾಟ್; ಅಂಡರ್​ಟೇಕರ್ ಶೈಲಿಯಲ್ಲಿ ಕತ್ತು ಸೀಳ್ತೇನೆ ಎಂದ ಕೊಹ್ಲಿ, ಫನ್ನಿ ವಿಡಿಯೋ ವೈರಲ್

Virat Kohli: ಆರ್​ಸಿಬಿ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​ ಪರ ಸುನಿಲ್ ನರೇನ್ ಆರಂಭಿಕರಾಗಿ ಕಣಕ್ಕಿಳಿದರು. ಈ ವೇಳೆ ವಿರಾಟ್ ಕೊಹ್ಲಿ ಬೌಲಿಂಗ್​ ಮಾಡುವಂತೆ ನಟಿಸಿ ಟೀಸ್ ಮಾಡಿದ್ದಾರೆ.

ಸುನಿಲ್ ನರೈನ್ ಟೀಸ್ ಮಾಡಿದ ವಿರಾಟ್; ಅಂಡರ್​ಟೇಕರ್ ಶೈಲಿಯಲ್ಲಿ ಕತ್ತು ಸೀಳ್ತೇನೆ ಎಂದ ಕೊಹ್ಲಿ
ಸುನಿಲ್ ನರೈನ್ ಟೀಸ್ ಮಾಡಿದ ವಿರಾಟ್; ಅಂಡರ್​ಟೇಕರ್ ಶೈಲಿಯಲ್ಲಿ ಕತ್ತು ಸೀಳ್ತೇನೆ ಎಂದ ಕೊಹ್ಲಿ

17ನೇ ಆವೃತ್ತಿಯ ಐಪಿಎಲ್​ನ​ 36ನೇ ಪಂದ್ಯದಲ್ಲಿ ಈಡನ್ ಗಾರ್ಡನ್ ಕ್ರಿಕೆಟ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು (Kolkata Knight Riders vs Royal Challengers Bengaluru) ಎದುರಿಸಿತು. ಈ ಪಂದ್ಯದ ಆರಂಭಕ್ಕೂ ಮುನ್ನ ಕೆಕೆಆರ್ ಬ್ಯಾಟರ್​ ಸುನಿಲ್ ನರೇನ್ (Sunil Narine)​ ಅವರನ್ನು ವಿರಾಟ್ ಕೊಹ್ಲಿ (Virat Kohli) ಕೀಟಲೆ ಮಾಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ಪರ ನರೇನ್ ಆರಂಭಿಕರಾಗಿ ಕಣಕ್ಕಿಳಿದರು. ಈ ವೇಳೆ ಕೊಹ್ಲಿ ಬೌಲಿಂಗ್​ ಮಾಡುವಂತೆ ನಟಿಸಿ ಟೀಸ್ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿರಾಟ್ ಕೊಹ್ಲಿ ಮೈದಾನಕ್ಕೆ ಬರುತ್ತಿದ್ದಂತೆ ಅಂಪೈರ್​​ಗೆ ಕ್ಯಾಪ್ ನೀಡಿದ ಮೊದಲ ಓವರ್​​ ಮಾಡಲು ಯತ್ನಿಸಿದ್ದಾರೆ. ಕೆಕೆಆರ್​ ಆಟಗಾರರ ಜೊತೆಗೆ ಅಂಪೈರ್​ ಕೂಡ ಶಾಕ್​ ಆದರು. ಇದೇ ವೇಳೆ ಬ್ಯಾಟಿಂಗ್​ಗೆ ಆಗಮಿಸಿದ ನರೇನ್ ಮತ್ತು ಫಿಲ್ ಸಾಲ್ಟ್​ ಸಹ ಶಾಕ್ ಆದರು. ಆದರೆ ಅಭಿಮಾನಿಗಳು ಮಾತ್ರ ಫುಲ್ ಖುಷ್​ ಆದರು. ನರೇನ್​ ನಡೆದುಕೊಂಡು ಬರುತ್ತಿದ್ದಾಗ ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್​ ಅಂಡರ್ಟೇಕರ್ ಸ್ಲಿಟ್ ಥ್ರೋಟ್ (ಕತ್ತು ಸೀಳುವ) ಸಿಗ್ನೇಚರ್​ ಸ್ಟೈಲ್ ಗೆಸ್ಚರ್‌ನೊಂದಿಗೆ ಅಪಹಾಸ್ಯ ಮಾಡಿದ್ದಾರೆ. ನಿನ್ನನ್ನು ಔಟ್ ಮಾಡುವೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

ಸುನಿಲ್ ನರೇನ್ ವಿಫಲ

ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುತ್ತಿರುವ ಸುನಿಲ್ ನರೇನ್, ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಆರಂಭದಿಂದಲೂ ಸ್ಟ್ರಗಲ್ ಆದ ಕೆಕೆಆರ್​ ಬ್ಯಾಟರ್​ ರನ್ ಗಳಿಸಲು ಪರದಾಟ ನಡೆಸಿದರು. 15 ಎಸೆತಗಳಲ್ಲಿ 10 ರನ್ ಮಾತ್ರ ಗಳಿಸಲು ಶಕ್ತರಾದರು. ಈ ಪೈಕಿ ಎರಡು ಬೌಂಡರಿ ಕೂಡ ಸಿಡಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಅವರು ಆರೆಂಜ್ ಕ್ಯಾಪ್​ ರೇಸ್​​ಗೂ ಇಳಿದಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ286 ರನ್ ಬಾರಿಸಿದ್ದಾರೆ. ಅವರು ಒಂದು ಶತಕವನ್ನೂ ಸಿಡಿಸಿದ್ದಾರೆ. 176.54ರ ಸ್ಟ್ರೈಕ್​ರೇಟ್​ನಲ್ಲಿ ರನ್ ಗಳಿಸಿದ್ದು, 28 ಫೋರ್, 20 ಸಿಕ್ಸರ್ ಬಾರಿಸಿದ್ದಾರೆ.

ಕೆಕೆಆರ್​ ಬ್ಯಾಟಿಂಗ್​ ವಿವರ

ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​ ಉತ್ತಮ ಆರಂಭ ಪಡೆಯಿತು. ಪವರ್​​ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡರೂ 75 ರನ್ ಗಳಿಸಿತು. ಅದರಲ್ಲೂ ಒಂದೇ ಓವರ್​​ನಲ್ಲಿ 28 ರನ್ ಬಾರಿಸಿದ ಫಿಲ್ ಸಾಲ್ಟ್ ಒಟ್ಟು 48 ರನ್ ಸಿಡಿಸಿ ಔಟಾದರು. ಆಂಗ್ಕ್ರಿಶ್ ರಘುವಂಶಿ 3, ನರೇನ್ 10, ವೆಂಕಟೇಶ್ ಅಯ್ಯರ್ 16 ರನ್ ಗಳಿಸಿ ನಿರಾಸೆ ಮೂಡಿಸಿದರು. ನಾಯಕ ಶ್ರೇಯಸ್ ಅಯ್ಯರ್ 50 ರನ್ ಸಿಡಿಸಿದರೆ, ರಿಂಕು ಸಿಂಗ್ 24, ಆಂಡ್ರೆ ರಸೆಲ್ 27* ಮತ್ತು ರಮಣ್ ದೀಪ್ 24 ರನ್ ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಕೆಕೆಆರ್​ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್​ಗಳ ಬೃಹತ್ ಮೊತ್ತ ಪೇರಿತು.

ಈ ಆವೃತ್ತಿಯಲ್ಲಿ ಕೊಹ್ಲಿ ಪ್ರದರ್ಶನ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೂಪರ್ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ, ಅದ್ಭುತ ಲಯದಲ್ಲಿದ್ದಾರೆ. ಬ್ಯಾಟ್​​ನೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಮತ್ತೊಂದು ತುದಿಯಲ್ಲಿ ಅವರಿಗೆ ಉತ್ತಮವಾದ ಬೆಂಬಲ ಸಿಗುತ್ತಿಲ್ಲ. 8 ಪಂದ್ಯಗಳಲ್ಲಿ 2 ಅರ್ಧಶತಕ, 1 ಶತಕ ಸಹಿತ 379 ರನ್ ಗಳಿಸಿರುವ ಕೊಹ್ಲಿ, ಪ್ರಸ್ತುತ ಆರೆಂಜ್ ಕ್ಯಾಪ್​ ಅನ್ನು ಹೊಂದಿದ್ದಾರೆ. ಕೆಕೆಆರ್​ ವಿರುದ್ಧ 18 ರನ್ ಗಳಿಸಿ ವಿವಾದಾತ್ಮಕವಾಗಿ ಔಟಾದರು. ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೈದಾನ ತೊರೆದರು.

IPL_Entry_Point