ಸ್ವೀಟ್, ಪಟಾಕಿ ಆರ್ಡರ್ ಮಾಡಿದ್ವಿ; ಮಗ ಟಿ20 ವಿಶ್ವಕಪ್​ಗೆ ಆಯ್ಕೆಯಾಗದ್ದಕ್ಕೆ ರಿಂಕು ಸಿಂಗ್ ತಂದೆ ಭಾವುಕ-cricket news we had sweets and crackers ready rinku singh father khanchandra singh on son t20 world cup 2024 snub prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ವೀಟ್, ಪಟಾಕಿ ಆರ್ಡರ್ ಮಾಡಿದ್ವಿ; ಮಗ ಟಿ20 ವಿಶ್ವಕಪ್​ಗೆ ಆಯ್ಕೆಯಾಗದ್ದಕ್ಕೆ ರಿಂಕು ಸಿಂಗ್ ತಂದೆ ಭಾವುಕ

ಸ್ವೀಟ್, ಪಟಾಕಿ ಆರ್ಡರ್ ಮಾಡಿದ್ವಿ; ಮಗ ಟಿ20 ವಿಶ್ವಕಪ್​ಗೆ ಆಯ್ಕೆಯಾಗದ್ದಕ್ಕೆ ರಿಂಕು ಸಿಂಗ್ ತಂದೆ ಭಾವುಕ

Khanchandra Singh : ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ರಿಂಕು ಸಿಂಗ್ ಸ್ಥಾನ ಪಡೆಯುತ್ತಾರೆಂಬ ಭರವಸೆಯಿಂದ ಸಿಹಿ ತಿಂಡಿ, ಪಟಾಕಿ ಆರ್ಡರ್ ಮಾಡಿದ್ದೆವು ಎಂದು ರಿಂಕು ತಂದೆ ಖಾನ್ಚಂದ್ರ ಸಿಂಗ್ ಹೇಳಿದ್ದಾರೆ.

ಸ್ವೀಟ್, ಪಟಾಕಿ ಆರ್ಡರ್ ಮಾಡಿದ್ವಿ; ಟಿ20 ವಿಶ್ವಕಪ್​ಗೆ ಆಯ್ಕೆಯಾಗದ್ದಕ್ಕೆ ರಿಂಕು ಸಿಂಗ್ ತಂದೆ ಭಾವುಕ
ಸ್ವೀಟ್, ಪಟಾಕಿ ಆರ್ಡರ್ ಮಾಡಿದ್ವಿ; ಟಿ20 ವಿಶ್ವಕಪ್​ಗೆ ಆಯ್ಕೆಯಾಗದ್ದಕ್ಕೆ ರಿಂಕು ಸಿಂಗ್ ತಂದೆ ಭಾವುಕ

ತನ್ನ ಮಗ ಭಾರತದ ಟಿ20 ವಿಶ್ವಕಪ್ ತಂಡದ (T20 World Cup 2024) ಭಾಗವಾಗದ ಕುರಿತು ರಿಂಕು ಸಿಂಗ್ (Rinku Singh) ಅವರ ತಂದೆ ಪ್ರತಿಕ್ರಿಯಿಸಿ ಭಾವುಕರಾಗಿದ್ದಾರೆ. ಮಗ ರಿಂಕು ಸಿಂಗ್ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ ರಿಂಕು ಅವರನ್ನು ಹೊರಗಿಟ್ಟಿದ್ದು ತೀವ್ರ ನಿರಾಸೆ ಮೂಡಿಸಿದೆ ಎಂದು ತಂದೆ ಖಾನ್ಚಂದ್ರ ಸಿಂಗ್ (Khanchandra Singh) ಬೇಸರ ವ್ಯಕ್ತಪಡಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಏಪ್ರಿಲ್ 30 ರಂದು ಪ್ರಕಟಿಸಿತು. ರಿಂಕು ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಸ್ಥಾನ ಪಡೆದ ನಂತರ ರಿಂಕು ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತದ ನಯಾ ಫಿನಿಷರ್​ ಮತ್ತು ಗೇಮ್ ಚೇಂಜಿಂಗ್ ಆಟದ ಮೂಲಕ ಗಮನ ಸೆಳೆದಿದ್ದಾರೆ. ಭಾರತದ ಪರ 15 ಟಿ20ಐ ಪಂದ್ಯಗಳಲ್ಲಿ 89ರ ಸರಾಸರಿ ಮತ್ತು 176.24ರ ಸ್ಟ್ರೈಕ್​ರೇಟ್​ನಲ್ಲಿ 356 ರನ್ ಗಳಿಸಿದ್ದಾರೆ. 2 ಅರ್ಧಶತಕಗಳನ್ನೂ ಗಳಿಸಿದ್ದಾರೆ. ಇಷ್ಟು ಅದ್ಭುತ ಪ್ರದರ್ಶನದ ಹೊರತಾಗಿಯೂ ಆಯ್ಕೆಯಾಗಿಲ್ಲ. ರಿಂಕು ಅವರನ್ನು ಮುಖ್ಯ ತಂಡದಿಂದ ಹೊರಗಿಟ್ಟಿರುವ ಬಗ್ಗೆ ಅಭಿಮಾನಿಗಳು ಹಾಗೂ ತಜ್ಞರು ಸಹ ಸಾಕಷ್ಟು ನಿರಾಸೆ ವ್ಯಕ್ತಪಡಿಸಿದ್ದಾರೆ.

ಬೇಸರ ವ್ಯಕ್ತಪಡಿಸಿದ ಖಾನ್ಚಂದ್ರ ಸಿಂಗ್

15 ಸದಸ್ಯರ ತಂಡದಲ್ಲಿ ಮಗನಿಗೆ ಅವಕಾಶ ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಖಾನ್ಚಂದ್ರ ಸಿಂಗ್, ರಿಂಕು ಆಯ್ಕೆ ಆಗುತ್ತಾರೆಂಬ ಭರವಸೆಯಿಂದ ಸಿಹಿ ತಿಂಡಿ, ಪಟಾಕಿ ಆರ್ಡರ್ ಮಾಡಿದ್ದೆವು. ಆಯ್ಕೆ ಆಗಿದ್ದರೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ವಿ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ಬಹಳಷ್ಟು ಭರವಸೆಗಳಿದ್ದವು. ಆದರೆ, ನಿರಾಶೆಯಾಯಿತು ಎಂದಿದ್ದಾರೆ. ಅಸಮಾಧಾನ ವ್ಯಕ್ತಪಡಿಸಿದ ರಿಂಕು ತಂದೆ, ಹೃದಯ ಮುರಿದಿಲ್ಲ ಎಂದು ಭಾರತ್ 24ಗೆ ಹೇಳಿದ್ದಾರೆ.

ರಿಂಕು ತನ್ನ ಅಮ್ಮನೊಂದಿಗೆ ತಂಡಕ್ಕೆ ಆಯ್ಕೆ ಆಗುವುದಾಗಿ ಪದೆಪದೇ ಹೇಳುತ್ತಿದ್ದರು. ಆದರೆ 15 ಸದಸ್ಯರ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇದು ರಿಂಕು ಸಿಂಗ್ ಬೇಸರಕ್ಕೂ ಕಾರಣವಾಗಿದೆ. ಆಯ್ಕೆ ಆಗಿಲ್ಲ ಎಂದ ಮಾತ್ರಕ್ಕೆ ಹೃದಯ ಮುರಿದಂತೆ ಅಲ್ಲ ಎಂದು ರಿಂಕು ತಂದೆ ಹೇಳಿದ್ದಾರೆ. ರಿಂಕು ಭಾರತೀಯ ತಂಡದೊಂದಿಗೆ ಯುಎಸ್​ಎ ಮತ್ತು ವೆಸ್ಟ್ ಇಂಡೀಸ್‌ಗೆ ಪ್ರಯಾಣಿಸಲಿದ್ದಾರೆ. ಆದರೆ ಮುಖ್ಯ ತಂಡದ ಆಟಗಾರನಾಗಿ ಅಲ್ಲ. ಮೀಸಲು ಆಟಗಾರನಾಗಿ.

ರಿಂಕು ಸಿಂಗ್​ಗಿದೆ ಅವಕಾಶ

ರಿಂಕು ಸಿಂಗ್​ ಮುಖ್ಯ ತಂಡದಲ್ಲಿ ಅವಕಾಶ ಪಡೆಯಲು ಇನ್ನೂ ಅವಕಾಶ ಇದೆ. ತಂಡದಲ್ಲಿ ಯಾರಾದರೂ ಗಾಯಗೊಂಡರೆ ಅಥವಾ ಅನಾರೋಗ್ಯಕ್ಕೆ ಒಳಗಾದರೆ ಅಥವಾ ಇನ್ನಿತರ ಕಾರಣಗಳಿಂದ ತಂಡವನ್ನು ತೊರೆದರೆ ಮೇ 25ರೊಳಗೆ ಬದಲಿಯಾಗಿ ರಿಂಕು ಅವಕಾಶ ಪಡೆಯಬಹುದು. ಅಷ್ಟೆ ಅಲ್ಲದೆ, ತಂಡಕ್ಕೆ ಆಯ್ಕೆಯಾದ ಆಟಗಾರರ ಪೈಕಿ ಯಾರಾದರೂ ಕಳಪೆ ಪ್ರದರ್ಶನ ನೀಡಿದರೆ ಅವರ ಸ್ಥಾನಕ್ಕೂ ರಿಂಕು ಆಯ್ಕೆಯಾಗುವ ಅವಕಾಶ ಇದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್​ ಯಾದವ್, ಯುಜ್ವೇಂದ್ರ ಚಹಾಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್.

mysore-dasara_Entry_Point