IPL 2024 Latest Updates: ಬಲಿಷ್ಠರ ನಡುವಿನ ಕಾಳಗ; ಕೆಕೆಆರ್ vs ರಾಜಸ್ಥಾನ್‌ ರಾಯಲ್ಸ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024 Latest Updates: ಬಲಿಷ್ಠರ ನಡುವಿನ ಕಾಳಗ; ಕೆಕೆಆರ್ Vs ರಾಜಸ್ಥಾನ್‌ ರಾಯಲ್ಸ್ ಪಂದ್ಯದ ಲೇಟೆಸ್ಟ್ ಅಪ್ಡೇಟ್

IPL 2024 Latest Updates: ಬಲಿಷ್ಠರ ನಡುವಿನ ಕಾಳಗ; ಕೆಕೆಆರ್ vs ರಾಜಸ್ಥಾನ್‌ ರಾಯಲ್ಸ್ ಪಂದ್ಯದ ಲೇಟೆಸ್ಟ್ ಅಪ್ಡೇಟ್

Indian Premier League 2024 Updates: ಐಪಿಎಲ್‌ 17ರ ಆವೃತ್ತಿಯಲ್ಲಿ ಏಪ್ರಿಲ್ 16ರ ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಕೆಕೆಆರ್‌ ತಂಡದ ತವರು ಮೈದಾನದ ಈಡನ್‌ ಗಾರ್ಡನ್ಸ್‌ನಲ್ಲಿ ಪಂದ್ಯ ನಡೆಯುತ್ತಿದೆ. ಅಂಕಪಟ್ಟಿಯ ಅಗ್ರಸ್ಥಾನಿಗಳ ಕಾದಾಟದ ಲೇಟೆಸ್ಟ್ ಅಪ್ಡೇಟ್‌ ಇಲ್ಲಿದೆ.

ಕೆಕೆಆರ್ vs ರಾಜಸ್ಥಾನ್‌ ರಾಯಲ್ಸ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
ಕೆಕೆಆರ್ vs ರಾಜಸ್ಥಾನ್‌ ರಾಯಲ್ಸ್ ಪಂದ್ಯದ ಲೇಟೆಸ್ಟ್ ಅಪ್ಡೇಟ್

ಇಂಡಿಯನ್‌ ಪ್ರೀಮಿಯರ್‌ ಲೀಗ್ 2024ರ ಆವೃತ್ತಿಯಲ್ಲಿ ಇಂದು (ಏಪ್ರಿಲ್ 16ರ ಮಂಗಳವಾರ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಹಾಗೂ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ್ ರಾಯಲ್ಸ್‌ (Kolkata Knight Riders vs Rajasthan Royals) ತಂಡಗಳು ಎದುರಾಗುತ್ತಿವೆ. ಟೂರ್ನಿಯ 31ನೇ ಪಂದ್ಯವು ಕೋಲ್ಕತ್ತಾದ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆಯುತ್ತಿದೆ. ಇಂದು ಒಂದು ಪಂದ್ಯ ಮಾತ್ರ ನಡೆಯುತ್ತಿದ್ದು ಸಂಜೆ 7.30ಕ್ಕೆ ಆರಂಭವಾಗುತ್ತಿದೆ. ಟೂರ್ನಿಯಲ್ಲಿ ಉಭಯ ತಂಡಗಳು ಕೂಡಾ ಅಮೋಘ ಪ್ರದರ್ಶನ ನೀಡುತ್ತಿವೆ. ಅದರಂತೆಯೇ ಸಂಜು ಸ್ಯಾಮ್ಸನ್‌ ಬಳಗವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್‌ ರೈಡರ್ಸ್‌ ಎರಡನೇ ಸ್ಥಾನದಲ್ಲಿದೆ. ಇಂದು ಗೆದ್ದ ತಂಡವು ಅಗ್ರಸ್ಥಾನದಲ್ಲಿ ಮೆರೆಯಲಿದೆ. ಹೀಗಾಗಿ ಇಂದಿನ ಪಂದ್ಯ ರೋಚಕತೆ ಹೆಚ್ಚಿಸಿದ್ದು, ಲೇಟೆಸ್ಟ್‌ ಅಪ್ಡೇಟ್‌ ಹೀಗಿದೆ.

ಕೆಕೆಆರ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್

ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ ರೋಚಕ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡಗಳ ಆಡುವ ಬಳಗದ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಕೆಕೆಆರ್ vs ರಾಜಸ್ಥಾನ್ ರಾಯಲ್ಸ್ ಪಿಚ್ ಹಾಗೂ ಹವಾಮಾನ ವರದಿ

KKR vs RR: ಏಪ್ರಿಲ್ 16ರಂದು ನೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಎದುರಾಗುತ್ತಿವೆ. ಕೆಕೆಆರ್‌ ತವರು ನೆಲದಲ್ಲಿ ಪಂದ್ಯ ನಡೆಯುತ್ತಿದ್ದು, ಸತತ ಗೆಲುವಿನ ಶ್ರೇಯಸ್‌ ಅಯ್ಯರ್‌ ಬಳಗ ಎದುರು ನೋಡುತ್ತಿದೆ. ಈಡನ್‌ ಗಾರ್ಡನ್ಸ್‌ ಮೈದಾನದ ಪಿಚ್ ವರದಿ ಹಾಗೂ ಕೋಲ್ಕತ್ತಾ‌ ಹವಾಮಾನ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಆಡುವ ಬಳಗ

ಸುನಿಲ್‌ ನರೈನ್, ಫಿಲ್ ಸಾಲ್ಟ್ (ವಿಕೆಟ್‌ ಕೀಪರ್), ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ರಾಜಸ್ಥಾನ್ ರಾಯಲ್ಸ್‌ ಸಂಭಾವ್ಯ ಆಡುವ ಬಳಗ

ಯಶಸ್ವಿ ಜೈಸ್ವಾಲ್, ತನುಷ್ ಕೋಟ್ಯಾನ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್‌ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಕೇಶವ್ ಮಹಾರಾಜ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್.

Whats_app_banner