IPL 2024 Latest Updates: ಚೆನ್ನೈ ಸೂಪರ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
Indian Premier League 2024 Updates: ಐಪಿಎಲ್ 17ರ ಆವೃತ್ತಿಯ 39ನೇ ಪಂದ್ಯದಲ್ಲಿ ಏಪ್ರಿಲ್ 23ರ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಸಿಎಸ್‌ಕೆ ತವರು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಪಂದ್ಯದ ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯಲ್ಲಿ ಏಪ್ರಿಲ್ 23ರ ಮಂಗಳವಾರ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ (CSK vs LSG) ಸವಾಲೆಸೆಯುತ್ತಿದೆ. ಚೆಪಾಕ್ ಮೈದಾನದಲ್ಲಿ ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ. ಐಪಿಎಲ್ 17ರ ಆವೃತ್ತಿಯ 39ನೇ ಪಂದ್ಯ ಇದಾಗಿದ್ದು, ತವರಿನಲ್ಲಿ ಸತತ ನಾಲ್ಕನೇ ಗೆಲುವಿಗೆ ರುತುರಾಜ್ ಗಾಯಕ್ವಾಡ್ ಬಳಗ ಎದುರು ನೋಡುತ್ತಿದೆ. ಇದೇ ಆವೃತ್ತಿಯಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದ್ದು, ಈಗಾಗಲೇ ಒಂದು ಬಾರಿ ನಡೆದ ಪಂದ್ಯದಲ್ಲಿ ಆತಿಥೇಯ ಲಕ್ನೋ ಜಯಭೇರಿ ಬಾರಿಸಿತ್ತು. ಪಂದ್ಯದ ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ.
ಚೆಪಾಕ್‌ನಲ್ಲಿ ದಾಖಲೆಯ ಚೇಸಿಂಗ್ ನಡೆಸಿ ಸಿಎಸ್‌ಕೆಯನ್ನು ಅದರದ್ದೇ ತವರಲ್ಲಿ ಮಣಿಸಿದ ಲಕ್ನೋ ಸೂಪರ್ ಜೈಂಟ್ಸ್
ಸಿಎಸ್‌ಕೆ ತಂಡವನ್ನು ಅದರದ್ದೇ ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ರೋಚಕವಾಗಿ ಮಣಿಸಿದೆ. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ ತಂಡ ತವರು ಮೈದಾನದಲ್ಲಿ ಮೊದಲ ಸೋಲು ಕಂಡಿದೆ. ಮಾರ್ಕಸ್ ಸ್ಟೋಯ್ನಿಸ್ ಅಜೇಯ ಶತಕದ ನೆರವಿಂದ ಎಲ್‌ಎಸ್‌ಜಿ ತಂಡ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿದೆ. ಚೆಪಾಕ್ ಮೈದಾನಲ್ಲಿ 211 ರನ್ ಚೇಸಿಂಗ್ ಮಾಡುವ ಮೂಲಕ ಲಕ್ನೋ ನೂತನ ದಾಖಲೆ ನಿರ್ಮಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಲಕ್ನೋ ತಂಡ ಸಿಎಸ್‌ಕೆ ತಂಡವನ್ನು ಹಿಂದಿಕ್ಕಿದೆ. ಪಂದ್ಯದ ಫಲಿತಾಂಶದ ಸಂಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಲಕ್ನೋ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅತ್ತ ಸಿಎಸ್‌ಕೆ ತಂಡದಲ್ಲಿ ಒಂದು ಬದಲಾವಣೆಯಾಗಿದೆ ಉಭಯ ತಂಡಗಳ ಆಡುವ ಬಳಗದ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಚೆನ್ನೈ vs ಲಕ್ನೋ ಎರಡನೇ ಮುಖಾಮುಖಿ; ಸಂಭಾವ್ಯ ಆಡುವ ಬಳಗ, ಚೆಪಾಕ್ ಪಿಚ್ ಹಾಗೂ ಹವಾಮಾನ ವರದಿ
ಏಪ್ರಿಲ್ 23ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಡುತ್ತಿವೆ. ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳು ಎರಡನೇ ಬಾರಿ ಎದುರಾಗುತ್ತಿವೆ. ಚೆನ್ನೈ ಪಿಚ್, ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗ ಸೇರಿ ಸಂಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.