RCB vs LSG Latest Updates: ಬೆಂಗಳೂರು vs ಲಕ್ನೋ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್, ಫಲಿತಾಂಶ ಸೇರಿ ಸಂಪೂರ್ಣ ವಿವರ
IPL 2024 Updates: ಐಪಿಎಲ್ 2024ರ ಆವೃತ್ತಿಯಲ್ಲಿ ಏಪ್ರಿಲ್ 2ರ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಆರ್‌ಸಿಬಿ ತವರು ಬೆಂಗಳೂರಿನಲ್ಲಿ ಸತತ ಮೂರನೇ ಪಂದ್ಯ ನಡೆಯುತ್ತಿದ್ದು, ಟೂರ್ನಿಯ ಎರಡನೇ ಗೆಲುವಿಗೆ ಫಾಫ್ ಡುಪ್ಲೆಸಿಸ್ ಪಡೆ ತಂತ್ರ ರೂಪಿಸಿದೆ. ಪಂದ್ಯದ ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯ 15ನೇ ಪಂದ್ಯದಲ್ಲಿ ಏಪ್ರಿಲ್ 2ರ ಮಂಗಳವಾರ ಆರ್‌ಸಿಬಿ ಮತ್ತು ಎಲ್ಎಸ್ಜಿ ತಂಡಗಳು ಮುಖಾಮುಖಿಯಾಗುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ಮೂರನೇ ಪಂದ್ಯಕ್ಕೆ ಸಜ್ಜಾಗಿದ್ದು, ಕಳೆದ ಆವೃತ್ತಿಯಂತೆ ಫಾಫ್ ಪಡೆಯನ್ನು ಅವರದ್ದೇ ತವರಲ್ಲಿ ಮಣಿಸಲು ಲಕ್ನೋ ಸೂಪರ್ ಜೈಂಟ್ಸ್ ತಂತ್ರ ರೂಪಿಸಿದೆ. ಆರ್‌ಸಿಬಿ ತಂಡವು ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋತಿದ್ದು, ಅತ್ತ ಕೆಎಲ್ ರಾಹುಲ್ ಬಳಗವು ನಿಕೋಲಸ್ ಪೂರನ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಇದೀಗ ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದ್ದು, ಗೆಲುವು ಯಾರ ಪಾಲಾಗಲಿದೆ ಎಂಬದು ಸಂಜೆ 7 ಗಂಟೆಯ ಬಳಿಕ ತಿಳಿಯಲಿದೆ. ಪಂದ್ಯದ ಸಂಪೂರ್ಣ ಅಪ್ಡೇಟ್ ಇಲ್ಲಿದೆ.
ಲಕ್ನೋ ಬೌಲರ್‌ಗಳ ಮಾರಕ ದಾಳಿಗೆ ಬೆದರಿದ ಬೆಂಗಳೂರು; ತವರಿನಲ್ಲಿ ಸತತ ಎರಡನೇ ಸೋಲು ಕಂಡ ಆರ್‌ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಸತತ ಎರಡನೇ ಸೋಲಿಗೆ ಶರಣಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ 28 ರನ್‌ಗಳಿಂದ ತಂಡ ಸೋಲೊಪ್ಪಿದೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನೇ ಸೋಲು ಕಂಡಿದೆ. ಕಳೆದ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿಯೂ ಲಕ್ನೋ ತಂಡ ಬೆಂಗಳೂರಿನಲ್ಲಿ ನಡೆದ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಆರ್‌ಸಿಬಿಯನ್ನು ಅವರದ್ದೇ ತವರಿನಲ್ಲಿ ಮಣಿಸಿದೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಲಕ್ನೋ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ; ಆಡುವ ಬಳಗಕ್ಕೆ ರೀಸ್ ಟೋಪ್ಲಿ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಈ ಆವೃತ್ತಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಚೇಸಿಂಗ್ ಆಯ್ಕೆ ಮಾಡಿಕೊಂಡಿದೆ. ಕೊನೆಗೂ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಬದಲಾವಣೆ ಮಾಡಲಾಗಿದೆ. ದುಬಾರಿ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಹೊರಗಿಟ್ಟು, ರೀಸ್ ಟೋಪ್ಲಿ ಅವರನ್ನು ಆಡುವ ಬಳಗಕ್ಕೆ ಕರೆಸಿಕೊಳ್ಳಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲೂ ಒಂದು ಬದಲಾವಣೆಯಾಗಿದೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಅಲ್ಜಾರಿ ಜೋಸೆಫ್ ಔಟ್, ಫರ್ಗ್ಯುಸನ್ ಇನ್; ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಸಂಭಾವ್ಯ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಪ್ರಸಕ್ತ ಆವೃತ್ತಿಯಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು ಎರಡು ಅಂಕ ಪಡೆದಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇದೀಗ ಲಕ್ನೋ ತಂಡದ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕಣಕ್ಕಿಳಿಯುತ್ತಿರುವ ಫಾಫ್ ಪಡೆಯು, ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಲಿಂಕ್ ಕ್ಲಿಕ್ ಮಾಡಿ
ಲಕ್ನೋ ಸಂಭಾವ್ಯ ತಂಡ; ಬೆಂಗಳೂರು ಪಿಚ್, ಹವಾಮಾನ ವರದಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 2ರ ಮಂಗಳವಾರ ನಡೆಯುವ ಐಪಿಎಲ್ 2024ರ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಎಲ್ಎಸ್ಜಿ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ಸಂಭಾವ್ಯ ಆಡುವ ಬಳಗ, ಪಿಚ್ ಹಾಗೂ ಹವಾಮಾನ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.