ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024 Latest Updates: ಪಂಜಾಬ್ ಕಿಂಗ್ಸ್ Vs ಎಸ್‌ಆರ್‌ಎಚ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್, ಫಲಿತಾಂಶದ ಸಂಪೂರ್ಣ ವಿವರ

IPL 2024 Latest Updates: ಪಂಜಾಬ್ ಕಿಂಗ್ಸ್ vs ಎಸ್‌ಆರ್‌ಎಚ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್, ಫಲಿತಾಂಶದ ಸಂಪೂರ್ಣ ವಿವರ

Indian Premier League 2024 Updates: ಐಪಿಎಲ್‌ 17ರ ಆವೃತ್ತಿಯ 23ನೇ ಪಂದ್ಯದಲ್ಲಿ ಏಪ್ರಿಲ್ 9ರ ಮಂಗಳವಾರ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಪಿಬಿಕೆಎಸ್‌ ಎರಡನೇ ತವರು ಮೈದಾನದ ಚಂಡೀಗಂಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಪಂದ್ಯದ ಲೇಟೆಸ್ಟ್ ಅಪ್ಡೇಟ್‌ ಇಲ್ಲಿದೆ.

ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ಲೇಟೆಸ್ಟ್ ಅಪ್ಡೇಟ್

ಐಪಿಎಲ್ 2024ರ ಆವೃತ್ತಿಯಲ್ಲಿ ಏಪ್ರಿಲ್ 9ರ ಮಂಗಳವಾರ ಪಂದ್ಯಾವಳಿಯ 23ನೇ ಪಂದ್ಯ ನಡೆಯುತ್ತಿದೆ. ಮುಲ್ಲಾನ್‌ಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಶಿಖರ್‌ ಧವನ್‌ ನೇತೃತ್ವದ ಆತಿಥೇಯ ಪಂಜಾಬ್ ಕಿಂಗ್ಸ್ ಹಾಗೂ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ (PBKS vd SRH ತಂಡಗಳು ಕಣಕ್ಕಿಳಿಯುತ್ತಿವೆ. ಉಭಯ ತಂಡಗಳಿಗೂ ಇದು ಟೂರ್ನಿಯ ಐದನೇ ಪಂದ್ಯವಾಗಿದೆ. ಕೊನೆಯ ಪಂದ್ಯದಲ್ಲಿ ಗೆಲುವಿನ ರುಚಿ ನೋಡಿರುವ ತಂಡಗಳು, ಜಯದ ಓಟ ಮುಂದುವರೆಸುವ ಉತ್ಸಾಹದಲ್ಲಿವೆ. ಎಸ್ಆರ್‌ಎಚ್ ಮತ್ತು ಪಿಬಿಕೆಎಸ್‌ ತಂಡಗಳು ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಪಂದ್ಯಗಳಲ್ಲಿ ಗೆದ್ದಿವೆ. ಹೀಗಾಗಿ ಅಂಕಪಟ್ಟಿಯಲ್ಲಿ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿ ಕುಳಿತಿವೆ.

ಟ್ರೆಂಡಿಂಗ್​ ಸುದ್ದಿ

ಶಶಾಂಕ್ ಸಿಂಗ್, ಅಶುತೋಷ್ ಮತ್ತೊಂದು ವೀರೋಚಿತ ಹೋರಾಟಕ್ಕೆ ಒಲಿಯದ ಗೆಲುವು; 2 ರನ್‌ಗಳಿಂದ ಪಂದ್ಯ ಗೆದ್ದ ಸನ್‌ರೈಸರ್ಸ್‌

ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಐಪಿಎಲ್‌ 2024ರಲ್ಲಿ ಮೂರನೇ ಗೆಲುವು ಸಾಧಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಚಂಡೀಗಢದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಕೇವಲ 2 ರನ್‌ಗಳಿಂದ ಪ್ಯಾಟ್ ಕಮಿನ್ಸ್‌ ಪಡೆ ಗೆದ್ದು ಬೀಗಿದೆ. ಕೊನೆಯ ಪಂದ್ಯದಂತೆಯೇ ಶಶಾಂಕ್‌ ಸಿಂಗ್‌ ಮತ್ತು ಅಶುತೋಷ್ ಶರ್ಮಾ ತಂಡದ ಗೆಲುವಿಗೆ ತಮ್ಮಿಂದ ಸಾಧ್ಯವಾದ ಎಲ್ಲಾ ರೀತಿಯ ಪ್ರಯತ್ನ ಮಾಡಿದರು. ಆದರೆ, ಆತಿಥೇಯ ಪಂಜಾಬ್ ಗೆಲುವಿಗೆ ಕೇವಲ 2 ರನ್‌ಗಳ ಕೊರತೆಯಾಯ್ತು.‌ ಹೀಗಾಗಿ ಸನ್‌ರೈಸರ್ಸ್‌ ರೋಚಕ ಜಯ ತನ್ನದಾಗಿಸಿಕೊಂಡಿತು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಸನ್‌ರೈಸರ್ಸ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್

ಐಪಿಎಲ್‌ 17ರ ಆವೃತ್ತಿಯ 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಚಂಡೀಗಂಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಶಿಖರ್‌ ಧವನ್ ಪಂಜಾಬ್‌ ಕಿಂಗ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡಗಳ ಆಡುವ ಬಳಗ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ಆಡುವ ಬಳಗ

ಪಂಜಾಬ್‌ ತಂಡದ ಪ್ರಮುಖ ಆಲ್‌ರೌಂಡರ್‌ ಲಿಯಾಮ್ ಲಿವಿಂಗ್‌ಸ್ಟನ್, ಗಾಯದಿಂದಾಗಿ ಹೊರಗುಳಿದಿದ್ದಾರೆ. ಕೊನೆಯ ಪಂದ್ಯದಲ್ಲಿ ಅವರ ಬದಲಿಗೆ ಸಿಕಂದರ್‌ ರಜಾ ಕಣಕ್ಕಿಳಿದಿದ್ದರು. ಆದರೆ, ಅವರು ಯಶಸ್ವಿಯಾಗಿರಲಿಲ್ಲ. ಇದಿಗ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಲಿವಿಂಗ್‌ಸ್ಟನ್ ಕಣಕ್ಕಿಳಿಯುವ ಕುರಿತು ಖಚಿತವಾಗಿಲ್ಲ. ಉಭಯ ತಂಡಗಳ ಸಂಭಾವ್ಯ ಆಡುವ ಬಳಗದ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮುಲ್ಲಾನ್‌ಪುರ ಸ್ಟೇಡಿಯಂ ಪಿಚ್ ಹಾಗೂ ಚಂಡೀಗಢ ಹವಾಮಾನ ವರದಿ

ಚಂಡೀಗಂಢದ ಮುಲ್ಲಾನ್‌ಪುರದ ಹೊಸ ಕ್ರೀಡಾಂಗಣದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ಮತ್ತು‌ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಗೆಲುವಿನ ಓಟ ಮುಂದುವರೆಸುವ ವಿಶ್ವಾಸದಲ್ಲಿವೆ. ಪಿಬಿಕೆಎಸ್ vs ಎಸ್ಆರ್‌ಎಚ್ ಪಂದ್ಯದ ಪಿಚ್‌, ಚಂಡೀಗಢ ಹವಾಮಾನ ವರದಿ ಹಾಗೂ ಮುಖಾಮುಖಿ ದಾಖಲೆ ವಿವರ ಇಲ್ಲಿದೆ.

IPL_Entry_Point