IPL 2024 Latest Updates: ಮಾರ್ಚ್‌ 23ರ ಐಪಿಎಲ್‌ ಪಂದ್ಯಗಳ ಸಂಪೂರ್ಣ ಅಪ್ಡೇಟ್; ಟಾಸ್‌, ಫಲಿತಾಂಶ ಸೇರಿ ಸಂಪೂರ್ಣ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024 Latest Updates: ಮಾರ್ಚ್‌ 23ರ ಐಪಿಎಲ್‌ ಪಂದ್ಯಗಳ ಸಂಪೂರ್ಣ ಅಪ್ಡೇಟ್; ಟಾಸ್‌, ಫಲಿತಾಂಶ ಸೇರಿ ಸಂಪೂರ್ಣ ವಿವರ

IPL 2024 Latest Updates: ಮಾರ್ಚ್‌ 23ರ ಐಪಿಎಲ್‌ ಪಂದ್ಯಗಳ ಸಂಪೂರ್ಣ ಅಪ್ಡೇಟ್; ಟಾಸ್‌, ಫಲಿತಾಂಶ ಸೇರಿ ಸಂಪೂರ್ಣ ವಿವರ

Indian Premier League 2024 Updates: ಐಪಿಎಲ್‌ 2024ರ ಆವೃತ್ತಿಗೆ ಚಾಲನೆ ಸಿಕ್ಕಿದೆ. ಎರಡನೇ ದಿನವಾದ ಇಂದು (ಮಾರ್ಚ್‌ 23, ಶನಿವಾರ) 2 ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ಮುಖಾಮುಖಿಯಾಗುತ್ತಿವೆ. ಎರಡನೇ ಪಂದ್ಯದಲ್ಲಿ ಕೆಕೆಆರ್‌ ಹಾಗೂ ಎಸ್‌ಆರ್‌ಎಚ್‌ ಎದುರಾಗುತ್ತಿವೆ. ಪಂದ್ಯಗಳ ಅಪ್ಡೇಟ್‌ ಹೀಗಿವೆ.

ಮಾರ್ಚ್‌ 23ರ ಐಪಿಎಲ್‌ ಪಂದ್ಯಗಳ ಸಂಪೂರ್ಣ ಅಪ್ಡೇಟ್
ಮಾರ್ಚ್‌ 23ರ ಐಪಿಎಲ್‌ ಪಂದ್ಯಗಳ ಸಂಪೂರ್ಣ ಅಪ್ಡೇಟ್

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 17ನೇ ಆವೃತ್ತಿಯಲ್ಲಿ, ಮಾರ್ಚ್‌ 23ರ ಶನಿವಾರ ಡಬಲ್‌ ಧಮಾಕಾ. ವಾರಾಂತ್ಯದಲ್ಲಿ ಎರಡೆರಡು ಪಂದ್ಯಗಳು ನಡೆಯುತ್ತಿವೆ. ದಿನದ ಮೊದಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗುತ್ತಿವೆ. ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಎದುರಾಗುತ್ತಿವೆ. ಪಂದ್ಯದ ಅಪ್ಡೇಟ್‌ ಇಲ್ಲಿವೆ.

ಕೆಕೆಆರ್​​​ಗೆ ರೋಚಕ ಗೆಲುವು

ಆ್ಯಂಡ್ರೆ ರಸೆಲ್ (65* ಮತ್ತು 25/2) ಅವರ ಆಲ್​ರೌಂಡರ್​ ಆಟದ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್/ಕೋಲ್ಕತ್ತಾ ನೈಟ್​ ರೈಡರ್ಸ್ 17ನೇ ಆವೃತ್ತಿಯ ಐಪಿಎಲ್​ನ ಮೂರನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 4 ರನ್​​ಗಳಿಂದ ರೋಚಕ ಗೆಲುವು ಸಾಧಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೆಕೆಆರ್ ಕೊನೆಯ ಓವರ್​​ನಲ್ಲಿ ಗೆದ್ದು ಶುಭಾರಂಭ ಮಾಡಿದೆ. ಪಂದ್ಯದ ಸಂಪೂರ್ಣ ಫಲಿತಾಂಶಕ್ಕಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಕೆಕೆಆರ್​​ ವಿರುದ್ಧ ಟಾಸ್ ಗೆದ್ದ ಎಸ್​ಆರ್​ಹೆಚ್​ ಚೇಸಿಂಗ್

ಐಪಿಎಲ್​​ನ 3ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಎಸ್​ಆರ್​​ಹೆಚ್​ ನಾಯಕ ಪ್ಯಾಟ್‌ ಕಮಿನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಆಂಗ್ಲ ಆಟಗಾರರ ಅಬ್ಬರಕ್ಕೆ ಮಣಿದ ಡೆಲ್ಲಿ; ಪಂಜಾಬ್‌ ಕಿಂಗ್ಸ್‌ ಶುಭಾರಂಭ

ಐಪಿಎಲ್ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಶಿಖರ್‌ ಧವನ್‌ ನೇತೃತ್ವದ ಪಂಜಾಬ್‌ ಕಿಂಗ್ಸ್ 4 ವಿಕೆಟ್‌ಗಳ ಜಯ ಸಾಧಿಸಿದೆ. ಇಂಗ್ಲೆಂಡ್‌ ಆಲ್‌ರೌಂಡರ್‌ಗಳಾದ ಸ್ಯಾಮ್‌ ಕರನ್‌ ಮತ್ತು ಲಿವಿಂಗ್‌ಸ್ಟನ್‌ ಸ್ಫೋಟಕ ಆಟದ ನೆರವಿನೊಂದಿಗೆ ತಂಡವು ಸುಲಭವಾಗಿ ಗೆಲುವಿನ ನಗೆ ಬೀರಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ, 9 ವಿಕೆಟ್‌ ಕಳೆದುಕೊಂಡು 174 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್‌, 19.2 ಓವರ್‌ಗಳಲ್ಲಿ ಗುರಿ ತಲುಪಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಒಂದೇ ಓವರ್‌ನಲ್ಲಿ 25 ರನ್‌ ಸಿಡಿಸಿದ ಅಭಿಷೇಕ್ ಪೊರೆಲ್; ಇಂಪ್ಯಾಕ್ಟ್‌ ಮೂಡಿಸಿದ 21ರ ಹರೆಯದ ಆಟಗಾರ

ಇಂಪ್ಯಾಕ್ಟ್ ಆಟಗಾರನಾಗಿ ಮೈದಾನಕ್ಕಿಳಿದ ಅಭಿಷೇಕ್ ಪೊರೆಲ್, ಡೆಲ್ಲಿ ತಂಡದ ಮೊತ್ತವನ್ನು ಹಿಗ್ಗಿಸುವ ಮೂಲಕ ಪಂಜಾಬ್‌ಗೆ ಸ್ಪರ್ಧಾತ್ಮಕ ಪೈಪೋಟಿ ನೀಡುವಲ್ಲಿ ನೆರವಾದರು. ಡೆಲ್ಲಿ ಇನ್ನಿಂಗ್ಸ್‌ನ ಕೊನೆಯಲ್ಲಿ ಹರ್ಷಲ್‌ ಪಟೇಲ್‌ ಎಸೆದ ಕೊನೆಯ ಓವರ್‌ನಲ್ಲಿ ಬರೋಬ್ಬರಿ 25 ರನ್‌ ಸಿಡಿಸುವ ಮೂಲಕ ಭವಿಷ್ಯದಲ್ಲಿ ಸ್ಫೋಟಕ ಫಿನಿಶರ್‌ ಆಗುವ ಸುಳಿವು ನೀಡಿದರು. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್‌ ಗೆದ್ದ ಪಂಜಾಬ್‌‌ ಕಗ್ಸ್ ಚೇಸಿಂಗ್ ಆಯ್ಕೆ

ಐಪಿಎಲ್ 2024ರ ಆವೃತ್ತಿಯ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪಂಜಾಬ್‌ ತವರು ಚಂಡಿಗಢದ ಮಹಾರಾಜ ಯಾದವಿಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ಈ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ನಾಯಕ ಶಿಖರ್‌ ಧವನ್‌ ಚೇಸಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಡೆಲ್ಲಿ ತಂಡವು ನಾಲ್ವರು ವಿದೇಶಿ ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿದಿದೆ. ಬೌಲಿಂಗ್‌ ಬಳಗದಲ್ಲಿ ಎಲ್ಲಾ ಭಾರತೀಯರೇ ಕಾಣಿಸಿಕೊಂಡಿದ್ದಾರೆ. ಅತ್ತ ಪಂಜಾಬ್‌ ತಂಡವು ಇಬ್ಬರು ವಿದೇಶಿ ಆಲ್‌ರೌಂಡರ್‌ಗಳ ಜೊತೆಗೆ ತಲಾ ಒಬ್ಬ ಬ್ಯಾಟರ್ ಹಾಗೂ ಬೌಲರ್‌ ಸೇರಿಸಿಕೊಂಡಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಪಂಜಾಬ್ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ ಹೀಗಿದೆ

ಪಂಜಾಬ್ ಕಿಂಗ್ಸ್​ ವಿರುದ್ಧದ ಮೊದಲ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಚ್ಚರಿಯ ಬದಲಾವಣೆಗೆ ಮುಂದಾಗಿದೆ. ಉತ್ತಮ ಫಾರ್ಮ್​ನಲ್ಲಿರುವ ಡೇವಿಡ್ ವಾರ್ನರ್ ಅವರನ್ನು ಕೈಬಿಡಲು ಚಿಂತಿಸಿದೆ. ಹೀಗಿದೆ ನೋಡಿ ಡೆಲ್ಲಿ ತಂಡದ ಸಂಭಾವ್ಯ ಆಡುವ ಬಳಗ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

Whats_app_banner