ಕನ್ನಡ ಸುದ್ದಿ  /  Cricket  /  Cricket Updates Today In Kannada March 25 Ipl 2024 Rcb Vs Pbks Royal Challengers Bengaluru Vs Punjab Kings Jra

IPL 2024 Latest Updates: ಆರ್‌ಸಿಬಿ vs ಪಂಜಾಬ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್‌, ಫಲಿತಾಂಶ ಸೇರಿ ಸಂಪೂರ್ಣ ವಿವರ

Indian Premier League 2024 Updates: ಐಪಿಎಲ್‌ 2024 ಆವೃತ್ತಿಯು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮಾರ್ಚ್‌ 25ರ ಸೋಮವಾರ ಟೂರ್ನಿಯ 6ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್ ಮುಖಾಮುಖಿಯಾಗುತ್ತಿವೆ. ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯಕ್ಕೆ ಬೆಂಗಳೂರು ಸಜ್ಜಾಗಿದೆ. ಪಂದ್ಯದ ಅಪ್ಡೇಟ್‌ ಇಲ್ಲಿದೆ.

ಆರ್‌ಸಿಬಿ vs ಪಂಜಾಬ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
ಆರ್‌ಸಿಬಿ vs ಪಂಜಾಬ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್

17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ (Indian Premier League 2024) ಅದ್ಧೂರಿ ಚಾಲನೆ ಸಿಕ್ಕಿದೆ. ಮಾರ್ಚ್‌ 25ರ ಸೋಮವಾರ ಉದ್ಯಾನ ನಗರಿ ಬೆಂಗಳೂರಿನ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಫಾಫ್‌ ಡುಪ್ಲೆಸಿಸ್‌ ನೇತೃತ್ವದ ಆರ್‌ಸಿಬಿ ತಂಡವು ಇಂದು ಶಿಖರ್‌ ಧವನ್‌ ನೇತೃತ್ವದ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪ್ರಸಕ್ತ ಆವೃತ್ತಿಯ ಮೊದಲನೇ ಪಂದ್ಯ ಇದಾಗಿದ್ದು, ಮೊದಲ ಗೆಲುವಿಗಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಎದುರು ನೋಡುತ್ತಿದೆ. ಪಂದ್ಯದ ಲೇಟೆಸ್ಟ್‌ ಅಪ್ಡೇಟ್ಸ್‌ ಇಲ್ಲಿದೆ.

ಸುರೇಶ್‌ ರೈನಾ ದಾಖಲೆ ಮುರಿದ ವಿರಾಟ್‌ ಕೊಹ್ಲಿ

ವಿರಾಟ್‌ ಕೊಹ್ಲಿ ಮತ್ತೊಂದು ರೆಕಾರ್ಡ್‌ ಮಾಡಿದ್ದಾರೆ. ಈ ಬಾರಿ ಅವರ ದಾಖಲೆ ಸೃಷ್ಟಿಯಾಗಿರುವುದು ಬ್ಯಾಟಿಂಗ್‌ನಲ್ಲಿ ಅಲ್ಲ. ಬದಲಿಗೆ ಫೀಲ್ಡಿಂಗ್‌ನಲ್ಲಿ. ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಈ ವೇಳೆ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ದಾಖಲೆಯನ್ನು ಮುರಿದಿದ್ದಾರೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಪಂಜಾಬ್‌ ಮಣಿಸಿ ತವರಿನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ

ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಹಳಿಗೆ ಮರಳಿದೆ. ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ ಹಾಗೂ ಅನುಭವಿ ಆಟಗಾರ ದಿನೇಶ್‌ ಕಾರ್ತಿಕ್‌ ಫಿನಿಶಿಂಗ್‌ ನೆರವಿಂದ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಸಿಎಸ್‌ಕೆ ವಿರುದ್ಧದ‌ ಮೊದಲ ಪಂದ್ಯದಲ್ಲಿ ಸೋತಿದ್ದ ಆರ್‌ಸಿಬಿ, ಇದೀಗ ಎರಡನೇ ಪಂದ್ಯದಲ್ಲಿ ಜಯದ ಹಳಿಗೆ ಮರಳಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ಧ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ

ತವರಿನಲ್ಲಿ ಮೊದಲ ಪಂದ್ಯ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಪಂಜಾಬ್‌ ಕಿಂಗ್ಸ್‌ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡಗಳ ಆಡುವ ಬಳಗ ಹೇಗಿದೆ? ಪಿಚಗ ಹೇಗಿದೆ ಎಂಬ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಪಂಜಾಬ್​ ಕಿಂಗ್ಸ್ ವಿರುದ್ಧದ​ ಕದನಕ್ಕೆ ಆರ್​ಸಿಬಿ ಆಡುವ ಬಳಗ ಹೀಗಿರಲಿದೆ

ಪ್ರಸಕ್ತ ಆವೃತ್ತಿಯ ಎರಡನೇ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಮೊದಲ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಕಣಕ್ಕಿಳಿದ ತಂಡವನ್ನೇ ಬಹುತೇಕ ಕಣಕ್ಕಿಳಿಯಲು ಫಾಫ್‌ ಪಡೆ ಚಿಂತಿಸಿದೆ. ಚಿನ್ನಸ್ವಾಮಿ ಪಿಚ್​ ವೇಗಿಗಳಿಗೆ ಅನುಕೂಲ ಇರುವ ಕಾರಣ ಹೆಚ್ಚುವರಿ ವೇಗಿಯನ್ನು ತಂಡಕ್ಕೆ ಕರೆತರುವ ಸಾಧ್ಯತೆ ಇದೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಆರ್‌ಸಿಬಿ vs ಪಂಜಾಬ್‌; ನೇರಪ್ರಸಾರ ಹಾಗೂ ಮೊಬೈಲ್‌ನಲ್ಲಿ ಉಚಿತ ವೀಕ್ಷಣೆ ವಿವರ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿದ್ದು, ಮಾರ್ಚ್ 25ರ ಸೋಮವಾರ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಪಂದ್ಯದ ನೇರಪ್ರಸಾರ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point