ಕನ್ನಡ ಸುದ್ದಿ  /  Cricket  /  Cricket Updates Today In Kannada March 30 Ipl 2024 Lsg Vs Pbks Lucknow Super Giants Vs Punjab Kings Latest News Jra

IPL 2024 Latest Updates: ಲಕ್ನೋ vs ಪಂಜಾಬ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್, ಫಲಿತಾಂಶ ಸೇರಿ ಸಂಪೂರ್ಣ ಮಾಹಿತಿ

Indian Premier League 2024: ಐಪಿಎಲ್‌ 2024ರ ಆವೃತ್ತಿಯು 9ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ರಾಜಸ್ಥಾನ ವಿರುದ್ಧ ಸೋಲಿನೊಂದಿಗೆ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ ಲಕ್ನೋ, ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಲಕ್ನೋ ತವರಿನಲ್ಲಿ ನಡೆಯುತ್ತಿರುವ ಪಂದ್ಯದ ಲೇಟೆಸ್ಟ್ ಅಪ್ಡೇಟ್‌ ಇಲ್ಲಿದೆ.

ಲಕ್ನೋ vs ಪಂಜಾಬ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
ಲಕ್ನೋ vs ಪಂಜಾಬ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian Premier League 2024) 17ನೇ ಆವೃತ್ತಿಯಲ್ಲಿ ಮಾರ್ಚ್ 30ರ ಶನಿವಾರ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಶಿಖರ್‌ ಧವನ್‌ ನೇತೃತ್ವದ ಪಂಜಾಬ್‌ ಕಿಂಗ್ಸ್‌ (Lucknow Super Giants vs Punjab Kings) ತಂಡಗಳು ಮುಖಾಮುಖಿಯಾಗುತ್ತಿವೆ. ಟೂರ್ನಿಯಲ್ಲಿ ಗೆಲುವಿನ ಅಭಿಯಾನ ಆರಂಭಿಸಿದ ಪಂಜಾಬ್‌, ಕೊನೆಯ ಪಂದ್ಯದಲ್ಲಿ ಅರ್‌ಸಿಬಿ ವಿರುದ್ಧ ಮುಗ್ಗರಿಸಿತ್ತು. ಅತ್ತ ಒಂದು ಪಂದ್ಯ ಮಾತ್ರ ಆಡಿರುವ ಲಕ್ನೋ, ಇನ್ನೂ ಗೆಲುವಿನ ಹುಡುಕಾಟದಲ್ಲಿದೆ. ಉಭಯ ತಂಡಗಳಿಗೂ ಗೆಲುವಿನ ಹಳಿಗೆ ಮರಳುವುದು ಅಗತ್ಯವಾಗಿದೆ. ಲಕ್ನೋದ ಏಕಾನಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಅಪ್ಡೇಟ್‌ ಹೀಗಿದೆ.

ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್;‌ ಕೆಎಲ್ ರಾಹುಲ್ ಬದಲಿಗೆ ಪೂರನ್‌ ನಾಯಕ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಾರ್ಚ್ 30ರ ಶನಿವಾರ ನಡೆಯುತ್ತಿರುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯದಲ್ಲಿ ಟಾಸ್‌ ಗೆದ್ದ ಲಕ್ನೋ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಪಂದ್ಯದಲ್ಲಿ ಲಕ್ನೋ ನಾಯಕ ಕೆಎಲ್‌ ರಾಹುಲ್‌ ಬದಲಿಗೆ ಪೂರನ್‌ ನಾಯಕತ್ವ ವಹಿಸಿಕೊಂಡಿದ್ದಾರೆ. ರಾಹುಲ್‌ ಇಂಪ್ಯಾಕ್ಟ್‌ ಆಟಗಾರನಾಗಿ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡಲಿದ್ದಾರೆ. ಗಾಯದಿಂದಾಗಿ ಕನ್ನಡಿಗನಿಗೆ ವಿಶ್ರಾಂತಿ ನೀಡಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಪಿಬಿಕೆಎಸ್-ಎಲ್​ಎಸ್​ಜಿ ತಂಡಗಳ ಬಲಿಷ್ಠ ಸಂಭಾವ್ಯ ಆಡುವ ಬಳಗ

ಪ್ರಸಕ್ತ ಆವೃತ್ತಿಯ ಐಪಿಎಲ್​ನ 11ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಲಕ್ನೋ ಮತ್ತು ಪಂಜಾಬ್ ತಂಡಗಳು ಈವರೆಗೆ ಕೇವಲ 3 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಎಲ್​ಎಸ್​ಜಿ ತಂಡವೇ ಮೇಲುಗೈ ಸಾಧಿಸಿದ್ದು, ಎರಡಲ್ಲಿ ಜಯಿಸಿದೆ. ಪಂಜಾಬ್ 1ರಲ್ಲಿ ಗೆಲುವು ದಾಖಲಿಸಿದೆ. ಇದೀಗ ಉಭಯ ತಂಡಗಳ ನಡುವಿನ ನಾಲ್ಕನೇ ಮುಖಾಮುಖಿಗೆ ಸಂಭಾವ್ಯ ತಂಡ, ಪಿಚ್​ ರಿಪೋರ್ಟ್ ನೋಡೋಣ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point