ಮತ್ತೆ ಪ್ರೀತಿಯಲ್ಲಿ ಬಿದ್ದರೇ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ? ನತಾಶಾ ಸ್ಟಾಂಕೋವಿಕ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು? ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ಮತ್ತೆ ಪ್ರೀತಿಯಲ್ಲಿ ಬಿದ್ದರೇ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ? ನತಾಶಾ ಸ್ಟಾಂಕೋವಿಕ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು? ವಿಡಿಯೋ

ಮತ್ತೆ ಪ್ರೀತಿಯಲ್ಲಿ ಬಿದ್ದರೇ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ? ನತಾಶಾ ಸ್ಟಾಂಕೋವಿಕ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು? ವಿಡಿಯೋ

Hardik Pandya: ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನ ನಂತರ ನತಾಶಾ ಸ್ಟಾಂಕೋವಿಕ್ ಅವರು ಮತ್ತೊಬ್ಬರ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.

ಮತ್ತೆ ಪ್ರೀತಿಯಲ್ಲಿ ಬಿದ್ದರೇ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ, ನತಾಶಾ ಸ್ಟಾಂಕೋವಿಕ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು? ವಿಡಿಯೋ
ಮತ್ತೆ ಪ್ರೀತಿಯಲ್ಲಿ ಬಿದ್ದರೇ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ, ನತಾಶಾ ಸ್ಟಾಂಕೋವಿಕ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು? ವಿಡಿಯೋ

ವಿಚ್ಛೇದನದ ನಂತರ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ (Natasha Stankovic) ತಮ್ಮ ತಮ್ಮ ವೈಯಕ್ತಿಕ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಪಾಂಡ್ಯ ಕ್ರಿಕೆಟ್ ಪಂದ್ಯಗಳಲ್ಲಿ ನಿರತರಾಗಿದ್ದಾರೆ. ನತಾಶಾ ಮತ್ತೆ ಕ್ಯಾಮೆರಾ ಮುಂದೆ ನಟಿಸಲು ತಯಾರಾಗುತ್ತಿದ್ದಾರೆ ಎನ್ನಲಾಗಿದೆ. ಈ ಎಲ್ಲದರ ನಡುವೆ ನತಾಶಾ ಅವರು ಮತ್ತೊಬ್ಬರ ಪ್ರೀತಿಯ (Love) ಬಲೆಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.

ವಿಚ್ಛೇದನ ಪಡೆದ ನಂತರ ಹಾರ್ದಿಕ್ ಮತ್ತೊಬ್ಬರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಅದೇ ರೀತಿ ನತಾಶಾ ಕೂಡ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂಬ ವದಂತಿಗಳೂ ಇದ್ದವು. ಏತನ್ಮಧ್ಯೆ, ನತಾಶಾ ಮಿಸ್ಟರಿ ವ್ಯಕ್ತಿಯೊಂದಿಗೆ ಇರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನತಾಶಾ ಅವರೇ ಸ್ವತಃ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ನತಾಶಾ ಜೊತೆ ಕಾಣಿಸಿಕೊಂಡ ವ್ಯಕ್ತಿ ಬೇರೆ ಯಾರೂ ಅಲ್ಲ, ಆಕೆಯ ಆಪ್ತ ಸ್ನೇಹಿತ ಅಲೆಕ್ಸಾಂಡರ್ ಅಲೆಕ್ಸ್ ಇಲಿಚ್ (Aleksandar Alex Ilic)!

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅವರಿಬ್ಬರೂ ಒಟ್ಟಿಗೆ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ಇತ್ತೀಚೆಗೆ ನತಾಶಾ-ಅಲೆಕ್ಸಾಂಡರ್ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಪಾರ್ಟಿಗಳಿಂದ ಹಿಡಿದು ವರ್ಕೌಟ್‌ಗಳವರೆಗೆ ಫೋಟೋಗಳು, ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಇಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದಿರುವ ನೆಟ್ಟಿಗರು, ಫಿಟ್ನೆಸ್ ದಿನಚರಿಯನ್ನೂ ಹೊಗಳುತ್ತಿದ್ದಾರೆ.

ಅಲೆಕ್ಸಾಂಡರ್ ಯಾರು?

ಅಲೆಕ್ಸಾಂಡರ್ ಒಬ್ಬ ಫಿಟ್ನೆಸ್ ತರಬೇತುದಾರ. ಅಲ್ಲದೆ ನಟ ಮತ್ತು ರೂಪದರ್ಶಿ. ಅಲೆಕ್ಸಾಂಡರ್ ಅವರು ನಟಿ ದಿಶಾ ಪಟಾನಿ ಅವರೊಂದಿಗೆ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಫೋಟೋಗಳು ಮತ್ತು ವಿಡಿಯೋಗಳು ಸಹ ವೈರಲ್ ಆಗಿದ್ದವು. ದಿಶಾ ಪಟಾನಿ ಬಿಟ್ಟು ಈಗ ನತಾಶಾ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ನೆಟ್ಟಿಗರ ಅನುಮಾನ. 2024ರ ಜುಲೈನಲ್ಲಿ ಹಾರ್ದಿಕ್ ಮತ್ತು ನತಾಶಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. 4 ವರ್ಷಗಳ ದಾಂಪತ್ಯ ಜೀವನದ ನಂತರ ಪರಸ್ಪರ ಬೇರ್ಪಟ್ಟರು. ಈ ಬಗ್ಗೆ ಅಧಿಕೃತವಾಗಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.

ಎರಡು ಬಾರಿ ಮದುವೆಯಾಗಿದ್ದ ನತಾಶಾ-ಹಾರ್ದಿಕ್

ಸರ್ಬಿಯಾದ ನತಾಶಾ ಸ್ಟಾಂಕೋವಿಕ್ ಅವರನ್ನು ಹಾರ್ದಿಕ್ ಪಾಂಡ್ಯ ಅವರು ಮೇ 31, 2020 ರಂದು ಅತ್ಯಂತ ಸರಳವಾಗಿ ಮದುವೆಯಾಗಿದ್ದರು. ಮದುವೆಗೂ ಮುನ್ನವೇ ಸ್ಟಾಂಕೋವಿಕ್ ಗರ್ಭಿಣಿಯಾಗಿದ್ದರು. ನಂತರ ಫೆಬ್ರವರಿ 2023ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮದ ಆಚರಣೆಗಳ ಪ್ರಕಾರ ಈ ಜೋಡಿ, ತಮ್ಮ ಮಗ ಅಗಸ್ತ್ಯನ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇದಾದ ಕೆಲವೇ ತಿಂಗಳ ನಂತರ ಇಬ್ಬರು ಪ್ರತ್ಯೇಕವಾಗಿರುವುದರ ವದಂತಿ ಹಬ್ಬಿತ್ತು.

4 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ನತಾಶಾ ಮತ್ತು ನಾನು ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ಒಟ್ಟಿಗೆ ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ. ನಾವು ಎಲ್ಲವನ್ನೂ ಅರ್ಪಿಸಿದ್ದೇವೆ. ಇದೀಗ ನಮ್ಮಿಬ್ಬರ ಉತ್ತಮ ಹಿತದೃಷ್ಟಿಗಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದ ಕಾರಣ ಈ ತೀರ್ಮಾನ ತೆಗೆದುಕೊಳ್ಳಲು ನಮಗೆ ಕಠಿಣ ನಿರ್ಧಾರವಾಗಿತ್ತು ಎಂದು ಹಾರ್ದಿಕ್ ವಿಚ್ಛೇದನ ಪತ್ರ ಬರೆದಿದ್ದರು.

Whats_app_banner