ಅತ್ತಿಗೆ ದಪ್ಪ ಆಗಿದ್ದಾರೆ ಎಂದ ನೆಟ್ಟಿಗನ ಬಾಯಿ ಮುಚ್ಚಿಸಿದ ಬುಮ್ರಾ ಪತ್ನಿ; ನಡಿ ಇಲ್ಲಿಂದ ಎಂದ ಸಂಜನಾ ಗಣೇಶನ್
Sanjana Ganesan: ದಪ್ಪ ಆಗಿದ್ದೀರಾ ಎಂಬ ನೆಟ್ಟಿಗನ ಟ್ರೋಲ್‌ಗೆ ಜಸ್ಪ್ರೀತ್ ಬುಮ್ರಾ ಪತ್ನಿ ಖಡಕ್ ಉತ್ತರ ಕೊಟ್ಟಿದ್ದಾರೆ. ನಿನಗೆ ಶಾಲೆಯ ವಿಜ್ಞಾನ ಪಠ್ಯಪುಸ್ತಕವೇ ನೆನಪಿಲ್ಲ. ಅದರ ನಡುವೆ ಹೆಣ್ಣಿನ ದೇಹದ ಬಗ್ಗೆ ಕಾಮೆಂಟ್ ಮಾಡಲು ನಿನಗೆ ಎಷ್ಟು ಧೈರ್ಯ, ನಡಿ ಇಲ್ಲಿಂದ ಎಂದು ಸಂಜನಾ ಗಣೇಶನ್ ಟಾಂಗ್ ಕೊಟ್ಟಿದ್ದಾರೆ.
ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ (Sanjana Ganesan), ತಮ್ಮ ಬಗ್ಗೆ ಟ್ರೋಲ್ ಮಾಡಿದ ನೆಟ್ಟಿಗನ ಬಾಯಿ ಮುಚ್ಚಿಸಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವ್ಯಾಲೆಂಟೈನ್ಸ್ ಡೇ ಕುರಿತು ಪೋಸ್ಟ್ ಮಾಡಲಾದ ಪ್ರೊಮೋಷನಲ್ ವಿಡಿಯೋಗೆ, ಬಳಕೆದಾರನೊಬ್ಬ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ಸಂಜನಾ ಗಣೇಶನ್ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಗಣೇಶನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಟಿವಿ ಕ್ರೀಡಾ ನಿರೂಪಕಿಯಾಗಿರು ಅವರು, ದೇಶ ಮತ್ತು ವಿದೇಶಗಳಲ್ಲಿ ಭಾರತದ ಕ್ರಿಕೆಟ್ ಸರಣಿಯ ಸಮಯದಲ್ಲಿ ಆನ್‌ಸ್ಕ್ರೀನ್ ಬರುತ್ತಾರೆ. ಇದು ಅವರ ಜನಪ್ರಿಯತೆಯು ಹೆಚ್ಚಿಸಿದೆ. ಆದರೆ ಆನ್‌ಲೈನ್‌ನಲ್ಲಿ ಬಾಡಿ ಶೇಮಿಂಗ್ ಅಥವಾ ಟ್ರೋಲ್ ಎಂಬ ವಿಷಯ ಬಂದಾಗ, ಗಣೇಶನ್ ತಾಳ್ಮೆಗೆಟ್ಟು ತಕ್ಕ ಉತ್ತರ ಕೊಟ್ಟಿದ್ದಾರೆ. ಇದು ಮತ್ತೊಮ್ಮೆ ಸಾಬೀತಾಗಿದೆ.
ಪ್ರೇಮಿಗಳ ದಿನದ ಪೋಸ್ಟ್‌ಗೆ ಬಳಕೆದಾರನೊಬ್ಬ ಹೀಗೆ ಕಾಮೆಂಟ್ ಮಾಡಿದ್ದಾನೆ. “ಭಾಭಿ ಮೋಟಿ ಲಗ್ ರಹೀ ಹೈ” (ಅತ್ತಿಗೆ ಸ್ವಲ್ಪ ದಪ್ಪ ಕಾಣುತ್ತಾರೆ) ಎಂದು ಕಮೆಂಟಿಸಿದ್ದಾನೆ. ಇದು ಗಣೇಶನ್ ಅವರಿಗೆ ಇಷ್ಟವಾಗಿಲ್ಲ. ಬಳಕೆದಾರನ ಕಾಮೆಂಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಸ್ಕೂಲ್ ಕಿ ಸೈನ್ಸ್ ಪಠ್ಯಪುಸ್ತಕ್ ತೋ ಯಾದ್ ಹೋತಿ ನಹೀ ಹೈ ತುಮ್ಸೆ, ಬಡಾ ಔರತೋಂಕೆ ಬಾಡಿ ಕೆ ಬಾರೆ ಮೇ ಕಾಮೆಂಟ್ ಕರ್ ರಹಾ ಹೋ. ಭಾಗೋ ಯಹಾ ಸೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅಂದರೆ, “ನಿನಗೆ ಶಾಲೆಯ ವಿಜ್ಞಾನ ಪಠ್ಯಪುಸ್ತಕವೇ ನೆನಪಿಲ್ಲ, ಅದರ ನಡುವೆ ಹೆಣ್ಣಿನ ದೇಹದ ಬಗ್ಗೆ ಕಾಮೆಂಟ್ ಮಾಡಲು ನಿನಗೆ ಎಷ್ಟು ಧೈರ್ಯ, ನಡಿ ಇಲ್ಲಿಂದ,” ಎಂಬುದು ಸಂಜನಾ ಪ್ರತಿಕ್ರಿಯೆಯಾಗಿದೆ.
ಯಾವುದೇ ಫಿಲ್ಟರ್‌ಗಳಿಲ್ಲದೆ ಆನ್‌ಲೈನ್ ದುರುಪಯೋಗ ಮಾಡುವವರಿಗೆ ಗಣೇಶನ್ ನಿಷ್ಟುರ ಉತ್ತರಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಬುಮ್ರಾ ಗಾಯಗೊಂಡಿದ್ದಾಗ ಗಣೇಶನ್ ತಮ್ಮ ಪತಿಯೊಂದಿಗಿನ 'ಥ್ರೋಬ್ಯಾಕ್' ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದರು. "ತಂಡವು ಅಲ್ಲಿ ತೀವ್ರ ಸಂಕಷ್ಟದಲ್ಲಿದ್ದರೆ, ಈ ಇಬ್ಬರು ರಜೆಯಲ್ಲಿದ್ದಾರೆ" ಎಂದು ಹಾಕಿದ್ದರು. ಇದಕ್ಕೆ ಉತ್ತರಿಸಿದ ಗಣೇಶನ್, “ಇದು ಥ್ರೋಬ್ಯಾಕ್ ಫೋಟೋ, ನಿಮಗೆ ಕಣ್ಣು ಕಾಣಿಸಲ್ವಾ?” ಎಂದು ಪ್ರಶ್ನಿಸಿದ್ದರು.
ಅತ್ತ, ರಾಜ್‌ಕೋಟ್ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಲಭ್ಯವಿರಲಿದ್ದಾರೆ ಎಂಬುದು ಖಚಿತವಾಗಿದೆ. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿರುವ ಬುಮ್ರಾ, 3ನೇ ಟೆಸ್ಟ್‌ನಲ್ಲಿ ಭಾರತದ ಬೌಲಿಂಗ್ ಬಳಗವನ್ನು ಮತ್ತೆ ಮುನ್ನಡೆಸಲಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ತಂಡಕ್ಕೆ ಮರಳಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಕೊನೆಯ 3 ಟೆಸ್ಟ್ಗಳಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.