ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ ಮುಗಿದ ಬೆನ್ನಲೇ ಎಂಎಸ್ ಧೋನಿ ಹೊಸ ಹೇರ್‌ಸ್ಟೈಲ್; ಥಲಾ ತಲೆ ನೋಡಿ ಫಿದಾ ಆದ್ರು ಫ್ಯಾನ್ಸ್‌

ಐಪಿಎಲ್‌ ಮುಗಿದ ಬೆನ್ನಲೇ ಎಂಎಸ್ ಧೋನಿ ಹೊಸ ಹೇರ್‌ಸ್ಟೈಲ್; ಥಲಾ ತಲೆ ನೋಡಿ ಫಿದಾ ಆದ್ರು ಫ್ಯಾನ್ಸ್‌

MS Dhoni: ಎಂಎಸ್ ಧೋನಿ ಮತ್ತೆ ಕೇಶವಿನ್ಯಾಸ ಮಾಡಿಸಿಕೊಂಡಿದ್ದಾರೆ. ಎಂದಿನಂತೆ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್, ಮಾಹಿಯ ಹೇರ್‌ಸ್ಟೈಲ್‌ ಮಾಡಿದ್ದಾರೆ.

ಎಂಎಸ್ ಧೋನಿ ಹೊಸ ಹೇರ್‌ಸ್ಟೈಲ್; ಥಲಾ ತಲೆ ನೋಡಿ ಫಿದಾ ಆದ್ರು ಫ್ಯಾನ್ಸ್‌
ಎಂಎಸ್ ಧೋನಿ ಹೊಸ ಹೇರ್‌ಸ್ಟೈಲ್; ಥಲಾ ತಲೆ ನೋಡಿ ಫಿದಾ ಆದ್ರು ಫ್ಯಾನ್ಸ್‌ (Instagram)

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂಎಸ್ ಧೋನಿ, ವೃತ್ತಿಜೀವನದ ಆರಂಭದಿಂದಲೂ ತಮ್ಮ ಕೇಶವಿನ್ಯಾಸದಿಂದ ಹೆಸರುವಾಸಿಯಾಗಿದ್ದಾರೆ. ಮಾಹಿ ವೃತ್ತಿಜೀವನದ ಆರಂಭದಿಂದಲೂ, ಧೋನಿ ಹೇರ್‌ಸ್ಟೈಲ್‌ ಫೇಮಸ್.‌ ಈ ಬಾರಿಯ ಐಪಿಎಲ್‌ ಆರಂಭಕ್ಕೂ ಮುನ್ನ ತಮ್ಮ ವಿಂಟೇಜ್‌ ಧೋನಿ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ಅಭಿಮಾನಿಗಳ ನೆಚ್ಚಿನ ಥಲಾ, ಟೂರ್ನಿಯುದ್ದಕ್ಕೂ ಮಿಂಚಿದರು. ಹಳೆಯ ಉದ್ದನೆಯ ಕೇಶವಿನ್ಯಾಸ ಅಭಿಮಾನಿಗಳಿಗೆ ಇಷ್ಟವಾಯ್ತು.‌ ಇದೀಗ ಐಪಿಎಲ್‌ ಮುಗಿದ ಬಳಿಕ ರಾಂಚಿಗೆ ತೆರಳಿರುವ ಧೋನಿ, ಮತ್ತೆ ಹೇರ್‌ಸ್ಟೈಲ್‌ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಟ್ರೆಂಡಿಂಗ್​ ಸುದ್ದಿ

ವಿರಾಟ್‌ ಕೊಹ್ಲಿ ಸೇರಿದಂತೆ ಗಣ್ಯರ ಹೇರ್‌ಸ್ಟೈಲ್‌ ಮಾಡುವ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರನ್ನು ಭೇಟಿಯಾಗಿರುವ ಮಾಹಿ, ಹೊಸತಾಗಿ ಮತ್ತೆ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಮುಂಬೈನ ಬಾಂದ್ರಾ ಸ್ಟುಡಿಯೋಗೆ ದಿಢೀರನೆ ಬಂದ ಧೋನಿ, ಹಕೀಮ್ ಅವರಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ಹಲವು ದಿನಗಳ ಬಳಿಕ ಧೋನಿಯನ್ನು ನೋಡುವುದು ಸಂತೋಷವಾಗಿದೆ ಎಂದು ಹಕೀಮ್‌ ಅವರು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

“ಮಹೇಂದ್ರ ಸಿಂಗ್ ಧೋನಿ ನಮ್ಮ ಸಲೂನ್‌ಗೆ ಬಂದರು. ಅದು ಎಂತಹ ಅದ್ಭುತ ಆಶ್ಚರ್ಯ” ಎಂದು ಆಲಿಮ್ ಹಕೀಮ್ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಹೇರ್ ಸ್ಟೈಲ್ ಸಮಯದಲ್ಲಿ ಅವರು (ಧೋನಿ) ಕೆಲವು ಅದ್ಭುತ ವಿಂಟೇಜ್ ಸಂಗೀತವನ್ನು ನುಡಿಸಿದರು. ಇದು ನನ್ನ ದಿನವನನ್ನು ಇನ್ನಷ್ಟು ಉತ್ತಮವಾಗಿಸಿತು. ಲವ್‌ ಯೂ ಮಾಹಿ ಸರ್," ಎಂದು ಹಕೀಮ್ ಬರೆದುಕೊಂಡಿದ್ದಾರೆ.

ಮತ್ತೆ ಉದ್ದನೆಯ ಕೂದಲಿನೊಂದಿಗೆ ಧೋನಿ ಕಾಣಿಸಿಕೊಂಡಿದ್ದಾರೆ. ಸ್ವಲ್ಪವೇ ಬಿಯರ್ಡ್‌ ಬಿಟ್ಟಿರುವ ಮಾಹಿ ಇನ್ನೂ 30ರ ಯುವಕರಂತೆ ಕಾಣಿಸಕೊಂಡಿದ್ದಾರೆ. ಸೆಷನ್‌ ನಂತರ ದಿಗ್ಗಜ ಕ್ರಿಕೆಟಿಗನೊಂದಿಗೆ ಹಕೀಮ್‌ ಸೆಲ್ಫಿ ತೆಗೆದಿದ್ದಾರೆ. ಅದನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲು ಪೋಸ್ಟ್ ಮಾಡಿದ್ದಾರೆ.

ಧೋನಿಯ ಹೊಸ ಹೇರ್‌ಸ್ಟೈಲ್‌ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಇನ್‌ಸ್ಟಾ ಪೋಸ್ಟ್‌ಗೆ ಬಗೆಬಗೆಯ ಕಾಮೆಂಟ್‌ಗಳು ಹರಿದು ಬಂದಿವೆ. "ಉದ್ದನೆಯ ಕೂದಲಿನಲ್ಲಿ ಮಾಹಿ" ಎಂದು ಒಬ್ಬರು ಬರೆದರೆ, ಮತ್ತೊಬ್ಬರು ತಲಾ ಫರ್‌ ದಿ ರೀಸನ್‌ ಎಂದಿದ್ದಾರೆ. ಮತ್ತೊಬ್ಬರು "H+A+I+R+C+U+T=7, ತಲಾ ಫರ್‌ ದಿ ರೀಸನ್‌" ಎಂದಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ