ಆಸೀಸ್ ವಿರುದ್ಧದ ಟಿ20 ಸರಣಿಗೆ ಸಿಎಸ್‌ಕೆ ವೇಗಿ ಸೇರ್ಪಡೆ; 1 ವರ್ಷದ ಬಳಿಕ ತಂಡ ಸೇರಿದ ದೀಪಕ್ ಚಹಾರ್-csk pacer deepak chahar added to india squad after 1 year for t20i series against australia mukesh kumar ind vs aus jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸೀಸ್ ವಿರುದ್ಧದ ಟಿ20 ಸರಣಿಗೆ ಸಿಎಸ್‌ಕೆ ವೇಗಿ ಸೇರ್ಪಡೆ; 1 ವರ್ಷದ ಬಳಿಕ ತಂಡ ಸೇರಿದ ದೀಪಕ್ ಚಹಾರ್

ಆಸೀಸ್ ವಿರುದ್ಧದ ಟಿ20 ಸರಣಿಗೆ ಸಿಎಸ್‌ಕೆ ವೇಗಿ ಸೇರ್ಪಡೆ; 1 ವರ್ಷದ ಬಳಿಕ ತಂಡ ಸೇರಿದ ದೀಪಕ್ ಚಹಾರ್

Deepak Chahar: ಸಿಎಸ್‌ಕೆ ವೇಗಿ ದೀಪಕ್‌ ಚಹಾರ್‌ ಬರೋಬ್ಬರಿ ಒಂದು ವರ್ಷದ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಸೀಸ್‌ ವಿರುದ್ಧದ ಮುಂದಿನ ಎರಡು ಟಿ20 ಪಂದ್ಯಗಳಲ್ಲಿ ಅವರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಟೀಮ್‌ ಇಂಡಿಯಾ ಸೇರಿಕೊಂಡ ಸಿಎಸ್‌ಕೆ ವೇಗಿ
ಟೀಮ್‌ ಇಂಡಿಯಾ ಸೇರಿಕೊಂಡ ಸಿಎಸ್‌ಕೆ ವೇಗಿ

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ (India vs Australia) ಮುಂದಿನ ಪಂದ್ಯಗಳಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ವೇಗಿ ದೀಪಕ್ ಚಹಾರ್ (Deepak Chahar) ಅವರನ್ನು ಭಾರತ ತಂಡಕ್ಕೆ ಸೇರಿಸಲಾಗಿದೆ. ಮಂಗಳವಾರ ಗುವಾಹಟಿಯಲ್ಲಿ ನಡೆದ ಸರಣಿಯ ಮೂರನೇ ಟಿ20 ಪಂದ್ಯಕ್ಕೂ ಮುನ್ನ ತಂಡದಲ್ಲಿದ್ದ ವೇಗಿ ಮುಕೇಶ್ ಕುಮಾರ್ ಅವರು ಟೀಮ್‌ ಇಂಡಿಯಾದಿಂದ ಹೊರಗುಳಿದ ಕಾರಣ ಚಹಾರ್‌ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.

ಮುಕೇಶ್ ಕುಮಾರ್ ಅವರು ಮದುವೆಯಾಗುತ್ತಿರುವ ಕಾರಣ, ತಂಡದಿಂದ ರಜೆ ಪಡೆದಿದ್ದಾರೆ. ಅವರು ವೈವಾಹಿಕ ಜೀವನಕ್ಕೆ ಕಾಲಿರುತ್ತಿರುವ ಕುರಿತು ಮೂರನೇ ಟಿ20 ಪಂದ್ಯದ ಟಾಸ್‌ ಪ್ರಕ್ರಿಯೆ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್‌ ತಿಳಿಸಿದ್ದರು.

ಇದನ್ನೂ ಓದಿ | ವಿಶ್ವಕಪ್ ಗೆದ್ದ 6 ಆಟಗಾರರನ್ನು ಟಿ20 ಸರಣಿಯಿಂದ ಹೊರಗಿಟ್ಟ ಆಸೀಸ್; ಉಳಿದ 3 ಪಂದ್ಯಗಳಿಗೆ ನೂತನ ತಂಡ ಪ್ರಕಟ

ಡಿಸೆಂಬರ್ 1ರಂದು ರಾಯ್‌ಪುರದಲ್ಲಿ ಆಸೀಸ್‌ ವಿರುದ್ಧದ ನಾಲ್ಕನೇ ಟಿ20 ಪಂದ್ಯ ನಡೆಯುತ್ತಿದೆ. ಅದಕ್ಕೂ ಮುನ್ನ ವೇಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಐದು ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಮುಖೇಶ್ ಕುಮಾರ್‌ ಆಡಿದ್ದರು. ಆದರೆ, ಮೂರನೇ ಪಂದ್ಯದಿಂದ ಹೊರಗುಳಿದ ಹಿನ್ನೆಲೆ ಅವರ ಬದಲಿಗೆ ಅವೇಶ್ ಖಾನ್ ಆಡುವ ಬಳಗಕ್ಕೆ ಆಯ್ಕೆಯಾದರು.

“ವೇಗದ ಬೌಲರ್ ಮುಖೇಶ್ ಕುಮಾರ್ ಅವರು ಗುವಾಹಟಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೂ ಮುಂಚಿತವಾಗಿ ಭಾರತ ತಂಡದಿಂದ ಬಿಡುಗಡೆ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಅವರು ವಿವಾಹವಾಗುತ್ತಿದ್ದು, ಮದುವೆಯ ಅವಧಿಗೆ ರಜೆ ನೀಡಲಾಗಿದೆ. ರಾಯ್‌ಪುರದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯಕ್ಕೂ ಮುನ್ನ ಅವರು ತಂಡ ಸೇರಿಕೊಳ್ಳಲಿದ್ದಾರೆ. ಸರಣಿಯ ಉಳಿದ ಪಂದ್ಯಗಳಿಗೆ ವೇಗಿ ದೀಪಕ್ ಚಹಾರ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ” ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.

ಭಾರತದ ಪ್ರಮುಖ ವೇಗದ ಬೌಲಿಂಗ್ ಆಲ್‌ರೌಂಡರ್‌ ಆಗಿರುವ ಚಹಾರ್, ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಮ್‌ ಇಂಡಿಯಾ ಪರ ಕೊನೆಯದಾಗಿ 2022ರ ಡಿಸೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧ ಮೀರ್‌ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅವರು ಆಡಿದ್ದರು. ಆ ಪಂದ್ಯದಲ್ಲಿ ಗಾಯಗೊಂಡ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. 2022ರ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊನೆಯ ಕೊನೆಯ ಬಾರಿಗೆ ಟಿ20 ಪಂದ್ಯದಲ್ಲಿ ಅವರು ಕಣಕ್ಕಿಳಿದಿದ್ದರು.

ಇದನ್ನೂ ಓದಿ | ಸ್ಫೋಟಕ ಶತಕದೊಂದಿಗೆ ಭಾರತದ ಗೆಲುವು ಕಸಿದ ಮ್ಯಾಕ್ಸ್‌ವೆಲ್;‌ ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಆಸ್ಟ್ರೇಲಿಯಾ

ಭಾರತ (India vs Australia) ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಹೈ ಸ್ಕೋರಿಂಗ್‌ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ರೋಚಕವಾಗಿ ಸಾಗಿದ ಇನ್ನಿಂಗ್ಸ್‌ನಲ್ಲಿ ಮ್ಯಾಕ್ಸ್‌ವೆಲ್‌ ಆಕರ್ಷಕ ಶತಕ ಸಿಡಿಸಿದರು. ಅದರೊಂದಿಗೆ ಕಾಂಗರೂಗಳಿಗೆ ಭರ್ಜರಿ ಜಯ ಒಲಿಯಿತು.

ಗುವಾಹಟಿಯಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡವು, ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತು. ರುತುರಾಜ್‌ ಗಾಯಕ್ವಾಡ್‌ ಆಕರ್ಷಕ ಶತಕದ ನೆರವಿಂದ ಭಾರತವು 3 ವಿಕೆಟ್‌ ಕಳೆದುಕೊಂಡು 222 ರನ್‌ ಪೇರಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ಆಸೀಸ್‌, ಮ್ಯಾಕ್ಸ್‌ವೆಲ್‌ ಸ್ಫೋಟಕ ಶತಕದ ನೆರವಿನಿಂದ ಕೇವಲ 5 ವಿಕೆಟ್‌ ಕಳೆದುಕೊಂಡು 225 ರನ್‌ ಗಳಿಸಿ ಗುರಿ ತಲುಪಿತು.