ಆರ್ ಅಶ್ವಿನ್, ಸ್ಯಾಮ್ ಕರನ್ ಇನ್; ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯಕ್ಕೆ ಸಿಎಸ್‌ಕೆ ಸಂಭಾವ್ಯ ತಂಡ
ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಾರ್ಚ್ 23ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಮಹತ್ವದ ಪಂದ್ಯಕ್ಕೆ ಉಭಯ ತಂಡಗಳು ಬಲಿಷ್ಠ ಆಡುವ ಬಳಗವನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಸಿಎಸ್‌ಕೆ ಸಂಭಾವ್ಯ ತಂಡ ಹೇಗಿರಬಹುದು ಎಂಬುದನ್ನು ನೋಡೋಣ.

ಚಾಂಪಿಯನ್ಸ್ ಟ್ರೋಫಿ ಜೊತೆಗೆ ಡಬ್ಲ್ಯುಪಿಎಲ್ ಕೂಡಾ ಮುಗಿದಿದೆ. ಇನ್ನೇನಿದ್ದರೂ ಭಾರತದಲ್ಲಿ ಐಪಿಎಲ್ ಸಂಭ್ರಮ ಶುರು. 2025ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪೈಪೋಟಿ ನಡೆಸಲಿವೆ. ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನವು ಈ ಬಾರಿಯ ಐಪಿಎಲ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪೈಪೋಟಿಯ ನಂತರ, ಮರುದಿನ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳೆರಡು ಮುಖಾಮುಖಿಯಾಗಲಿವೆ. ಮಾರ್ಚ್ 23ರ ಭಾನುವಾರದಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಮಹತ್ವದ ಪಂದ್ಯಕ್ಕೆ ಉಭಯ ತಂಡಗಳು ಬಲಿಷ್ಠ ಆಡುವ ಬಳಗವನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಈ ಬಾರಿ ತಂಡದ ಕೆಲವು ಆಟಗಾರರು ಬದಲಾಗಿದ್ದು, ಹೊಸತನದೊಂದಿಗೆ ಕಣಕ್ಕಿಳಿಯಲಿದೆ.
ಈ ಬಾರಿಯೂ ಸಿಎಸ್‌ಕೆ ತಂಡ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ತಂಡಕ್ಕೆ ಎಂದಿನಂತೆ ದಿಗ್ಗಜ ಆಟಗಾರ ಎಂಎಸ್ ಧೋನಿ ಬೆಂಬಲ ಸಿಗಲಿದೆ. ಐದು ಬಾರಿಯ ಚಾಂಪಿಯನ್ ಆಗಿರುವ ಸಿಎಸ್‌ಕೆಯ ಅನುಭವಿ ಆಟಗಾರರು ಹಾಗೂ ಹೊಸ ಪ್ರತಿಭಾವಂತ ಆಟಗಾರರ ದಂಡೇ ಹೊಂದಿದೆ. ಇದು ತಂಡದ ಸಾಮರ್ಥ್ಯ ಹೆಚ್ಚಿಸಿದೆ. ಹೀಗಾಗಿ ತಂಡದ ಆಡುವ ಬಳಗದ ಸಂಯೋಜನೆ ಈ ಬಾರಿ ಹೆಚ್ಚು ಕುತೂಹಲ ಮೂಡಿಸಿದೆ.
ಸಿಎಸ್‌ಕೆ ಸಂಭಾವ್ಯ ಆಡುವ ಬಳಗ
ರುತುರಾಜ್ ಗಾಯಕ್ವಾಡ್ (ನಾಯಕ), ಡೆವೊನ್ ಕಾನ್ವೇ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ/ವಿಜಯ್ ಶಂಕರ್, ಶಿವಂ ದುಬೆ, ಎಂಎಸ್ ಧೋನಿ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಸ್ಯಾಮ್ ಕರನ್, ಮಥೀಶ ಪತಿರಾನ, ಖಲೀಲ್ ಅಹ್ಮದ್/ಅನ್ಶುಲ್ ಕಾಂಬೋಜ್.
ಐಪಿಎಲ್ 2025ರಲ್ಲಿ ಸಿಎಸ್‌ಕೆ ತಂಡ ಸಂಪೂರ್ಣ ವೇಳಾಪಟ್ಟಿ
- ಮಾರ್ಚ್ 23 (ಭಾನುವಾರ) – ಸಿಎಸ್‌ಕೆ vs ಮುಂಬೈ ಇಂಡಿಯನ್ಸ್ (ಚೆನ್ನೈ)
- ಮಾರ್ಚ್ 28 (ಶುಕ್ರವಾರ) – ಸಿಎಸ್‌ಕೆ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಚೆನ್ನೈ)
- ಮಾರ್ಚ್ 30 (ಭಾನುವಾರ) – ಸಿಎಸ್‌ಕೆ vs ರಾಜಸ್ಥಾನ್ ರಾಯಲ್ಸ್ (ಗುವಾಹಟಿ)
- ಏಪ್ರಿಲ್ 5 (ಶನಿವಾರ) – ಸಿಎಸ್‌ಕೆ vs ದೆಹಲಿ ಕ್ಯಾಪಿಟಲ್ಸ್ (ಚೆನ್ನೈ)
- ಏಪ್ರಿಲ್ 8 (ಮಂಗಳವಾರ) – ಸಿಎಸ್‌ಕೆ vs ಪಂಜಾಬ್ ಕಿಂಗ್ಸ್ (ಮುಲ್ಲನ್ಪುರ)
- ಏಪ್ರಿಲ್ 11 (ಶುಕ್ರವಾರ) – ಸಿಎಸ್‌ಕೆ vs ಕೋಲ್ಕತ್ತಾ ನೈಟ್ ರೈಡರ್ಸ್ (ಚೆನ್ನೈ)
- ಏಪ್ರಿಲ್ 14 (ಸೋಮವಾರ) – ಸಿಎಸ್‌ಕೆ vs ಲಕ್ನೋ ಸೂಪರ್ ಜೈಂಟ್ಸ್ (ಲಕ್ನೋ)
- ಏಪ್ರಿಲ್ 20 (ಭಾನುವಾರ) – ಸಿಎಸ್‌ಕೆ vs ಮುಂಬೈ ಇಂಡಿಯನ್ಸ್ (ಮುಂಬೈ)
- ಏಪ್ರಿಲ್ 25 (ಶುಕ್ರವಾರ) – ಸಿಎಸ್‌ಕೆ vs ಸನ್‌ರೈಸರ್ಸ್ ಹೈದರಾಬಾದ್ (ಚೆನ್ನೈ)
- ಏಪ್ರಿಲ್ 30 (ಬುಧವಾರ) – ಸಿಎಸ್‌ಕೆ vs ಪಂಜಾಬ್ ಕಿಂಗ್ಸ್ (ಚೆನ್ನೈ)
- ಮೇ 3 (ಶನಿವಾರ) – ಸಿಎಸ್‌ಕೆ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬೆಂಗಳೂರು)
- ಮೇ 7 (ಬುಧವಾರ) – ಸಿಎಸ್‌ಕೆ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (ಕೋಲ್ಕತ್ತಾ)
- ಮೇ 12 (ಸೋಮವಾರ) – ಸಿಎಸ್‌ಕೆ ವಿರುದ್ಧ ರಾಜಸ್ಥಾನ್ ರಾಯಲ್ಸ್ (ಚೆನ್ನೈ)
- ಮೇ 18 (ಭಾನುವಾರ) – ಸಿಎಸ್‌ಕೆ ವಿರುದ್ಧ ಗುಜರಾತ್ ಟೈಟಾನ್ಸ್ (ಅಹಮದಾಬಾದ್)
ಇದನ್ನೂ ಓದಿ | RCB Unbox 2025: ನಾಳೆ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ; ಸಮಯ, ಲೈವ್ ಸ್ಟ್ರೀಮಿಂಗ್, ಪ್ರದರ್ಶಕರ ವಿವರ ಇಲ್ಲಿದೆ
