ಸತತ ಸೋಲುಂಡ ಸಿಎಸ್ಕೆಗೆ ಧೋನಿ ನಾಯಕತ್ವದಿಂದ ಸಿಗುತ್ತಾ ಬೂಸ್ಟ್, ಕೆಕೆಆರ್ಗೂ ಅಗ್ನಿಪರೀಕ್ಷೆ; ಪಂದ್ಯದ ಮಹತ್ವದ ಅಂಶಗಳು
KKR vs CSK Preview: ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯುವ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಂಪು ಹಂತದ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.

2025ರ ಐಪಿಎಲ್‌ನಲ್ಲಿ ಸತತ ನಾಲ್ಕು ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ಗೆ ಗಾಯದ ಮೇಲೆ ಬರೆ ಬಿದ್ದಿದೆ. ತಮ್ಮ ನಾಯಕ ಋತುರಾಜ್ ಗಾಯಕ್ವಾಡ್ ಗಾಯಗೊಂಡು ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ಮೂರನೇ ಬಾರಿಗೆ ಎಂಎಸ್ ಧೋನಿ ಸಿಎಸ್‌ಕೆ ನಾಯಕತ್ವ ವಹಿಸಿಕೊಂಡಿದ್ದಾರೆ. ತವರಿನ ಚೆಪಾಕ್ ಮೈದಾನದಲ್ಲಿ ಸತತ ಎರಡು ಪಂದ್ಯಗಳನ್ನು ಕಳೆದುಕೊಂಡಿರುವ ಚೆನ್ನೈ, ಧೋನಿ ಕ್ಯಾಪ್ಟನ್ಸಿಯಲ್ಲಿ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುವ ಇರಾದೆಯಲ್ಲಿದೆ.
ಇಂದು (ಏಪ್ರಿಲ್ 11) ಶುಕ್ರವಾರದ ಚೆನ್ನೈನ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಧೋನಿ ಸಾರಥ್ಯಕ್ಕೆ ಸವಾಲಾಗಲು ಸಜ್ಜಾಗಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿರುವ 5ರಲ್ಲಿ 2 ಗೆಲುವು, 3 ಸೋಲಿಗೆ ಶರಣಾಗಿದೆ. ಮತ್ತೊಂದೆಡೆ ಸಿಎಸ್‌ಕೆ ಈವರೆಗೂ ಗೆದ್ದಿರುವುದು ಒಂದನ್ನಷ್ಟೆ. 4ರಲ್ಲಿ ಮಕಾಡೆ ಮಲಗಿದೆ. ಹೀಗಾಗಿ ಧೋನಿ ಮುಂದಾಳತ್ವದಲ್ಲಿ ಯೆಲ್ಲೋ ಆರ್ಮಿಗೆ ಬೂಸ್ಟ್ ಸಿಗುತ್ತಾ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ಮತ್ತೆ ಅಗ್ರಸ್ಥಾನದಲ್ಲಿ ಮಿಂಚು ಹರಿಸುತ್ತಿರುವುದು ಸಿಎಸ್‌ಕೆ ಬಲ ಹೆಚ್ಚಿಸಿದ್ದರೂ ಮಧ್ಯಮ ಕ್ರಮಾಂಕದ ಸಮಸ್ಯೆ ಕಾಡುತ್ತಿದೆ. ಮಿಡಲ್ ಆರ್ಡರ್ ಬ್ಯಾಟರ್ಸ್ ಯಾರೂ ದೊಡ್ಡ ಇನ್ನಿಂಗ್ಸ್ ಕಟ್ಟದೇ ಇರುವುದು ಚಿಂತೆ ಹೆಚ್ಚಿಸಿದೆ. ಸಿಎಸ್‌ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು (ಸಂಖ್ಯೆ 4-7) ಈ ಋತುವಿನಲ್ಲಿ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್ (126.04) ಹೊಂದಿದ್ದಾರೆ. ಕೆಕೆಆರ್‌ನ ಮಧ್ಯಮ ಕ್ರಮಾಂಕವು 147.18 ರ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿದ್ದರೂ ಯಾರಿಂದಲೂ ದೊಡ್ಡ ಇನ್ನಿಂಗ್ಸ್ ಬಂದಿಲ್ಲ.‘
ಕೆಕೆಆರ್‌ನ ಕೆರಿಬಿಯನ್ ದಿಗ್ಗಜರಾದ ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಇನ್ನೂ ಉತ್ತಮ ಪ್ರದರ್ಶನ ನೀಡಿಲ್ಲ, ಆದರೆ ಪ್ರದರ್ಶನ ನೀಡದಿದ್ದರೂ ಚೆನ್ನೈ ಪಿಚ್ಗೆ ವರುಣ್ ಚಕ್ರವರ್ತಿ ಅವರನ್ನೇ ನೆಚ್ಚಿಕೊಳ್ಳಬೇಕಾಗಿದೆ. ಏಕೆಂದರೆ ಇದು ಅವರ ತವರಿನ ಪಿಚ್. ನಿಗೂಢ ಸ್ಪಿನ್ನರ್ ಚೆಪಾಕ್‌ನಲ್ಲಿ ಅತ್ಯುತ್ತಮ ನೆನಪುಗಳನ್ನು ಹೊಂದಿದ್ದಾರೆ, ಕಳೆದ ವರ್ಷ ಇದೇ ಸ್ಥಳದಲ್ಲಿ ಐಪಿಎಲ್ ಮತ್ತು ಟಿಎನ್‌ಪಿಎಲ್ ಎರಡನ್ನೂ ಗೆದ್ದಿದ್ದಾರೆ. ಉತ್ತಮ ಪ್ರದರ್ಶನವೂ ಬಂದಿದೆ.
ಸಿಎಸ್‌ಕೆ ತಂಡದಲ್ಲಿ ಟಿ20 ವೃತ್ತಿಜೀವನದ ಮರುಜೀವ ಅಜಿಂಕ್ಯ ರಹಾನೆ, ತಮ್ಮ ಹಿಂದಿನ ಫ್ರಾಂಚೈಸಿ ವಿರುದ್ಧ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ. ಸಿಎಸ್‌ಕೆಯಲ್ಲಿ ಆಟಗಾರ ಮತ್ತು ಬೌಲಿಂಗ್ ಕೋಚ್ ಆಗಿ ಹೆಚ್ಚು ಪರಿಚಿತ ಮುಖವಾಗಿದ್ದ ಡ್ವೇನ್ ಬ್ರಾವೋ , ಕೆಕೆಆರ್‌ನ ಮಾರ್ಗದರ್ಶಕರಾಗಿ ತಮ್ಮ ಹೊಸ ಪಾತ್ರದಲ್ಲಿ ರಹಾನೆ ಜೊತೆಗೆ ಸಿಎಸ್‌ಕೆ ವಿರುದ್ಧದ ಪಂದ್ಯವನ್ನು ರೂಪಿಸಲಿದ್ದಾರೆ.
ತಂಡಗಳ ಸುದ್ದಿ ಮತ್ತು ಸಂಭಾವ್ಯ XII
ಧೋನಿ ಸಿಎಸ್‌ಕೆ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವುದರ ಜೊತೆಗೆ, ಗಾಯಗೊಂಡ ಗಾಯಕ್ವಾಡ್ ಬದಲಿಗೆ ರಾಹುಲ್ ತ್ರಿಪಾಠಿ ತಂಡಕ್ಕೆ ಮರಳಬಹುದು.
ಚೆನ್ನೈ ಸೂಪರ್ ಕಿಂಗ್ಸ್ (ಸಂಭಾವ್ಯ ತಂಡ): 1 ರಚಿನ್ ರವೀಂದ್ರ, 2 ಡೆವೊನ್ ಕಾನ್ವೆ, 3 ರಾಹುಲ್ ತ್ರಿಪಾಠಿ, 4 ಶಿವಂ ದುಬೆ, 5 ವಿಜಯ್ ಶಂಕರ್, 6 ರವೀಂದ್ರ ಜಡೇಜಾ, 7 ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), 8 ಆರ್ ಅಶ್ವಿನ್, 9 ನೂರ್ ಅಹ್ಮದ್, 10 ಮುಕೇಶ್ ಚೌಧರಿ, 11ಅಹ್ಮದ್ ಖಾಲೀಲ್, 12. ಮತೀಶಾ ಪತಿರಾಣ,
ಪರಿಸ್ಥಿತಿ ಸ್ಪಿನ್‌ಗೆ ಅನುಕೂಲಕರವಾಗಿದ್ದರೆ, ಓವರ್‌ಗೆ ಸುಮಾರು 12 ರನ್ ನೀಡುತ್ತಿರುವ ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್ ಬದಲಿಗೆ ಕೆಕೆಆರ್ ಮೊಯಿನ್ ಅಲಿ ಅವರ ಪ್ಲೇಯಿಂಗ್ 11ಗೆ ಮರಳಿ ಕರೆತರಬಹುದು.
ಕೋಲ್ಕತ್ತಾ ನೈಟ್ ರೈಡರ್ಸ್ (ಸಂಭಾವ್ಯ ತಂಡ): 1 ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), 2 ಸುನಿಲ್ ನರೈನ್, 3 ಅಜಿಂಕ್ಯ ರಹಾನೆ (ನಾಯಕ), 4 ವೆಂಕಟೇಶ್ ಅಯ್ಯರ್, 5 ಆಂಗ್‌ಕ್ರಿಶ್ ರಘುವಂಶಿ, 6 ರಿಂಕು ಸಿಂಗ್, 7 ಆಂಡ್ರೆ ರಸೆಲ್, 8 ರಮಣದೀಪ್ ಸಿಂಗ್, 9 ಮೊಯಿನ್ ಅಲಿ, 10, ಹರ್ಷಿತ್ ರಾಣಾ, 11 ವೈಭವ್ ಆರೋರಾ, 12 ವರುಣ್ ಚಕ್ರವರ್ತಿ.
2025ರ ಐಪಿಎಲ್‌ನಲ್ಲಿ ಇದುವರೆಗೆ 4 ಇನ್ನಿಂಗ್ಸ್‌ಗಳಲ್ಲಿ ರಸೆಲ್ 7ನೇ ಸ್ಥಾನಕ್ಕಿಂತ ಮೇಲ್ಪಟ್ಟು ಬ್ಯಾಟಿಂಗ್ ಮಾಡಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧ 8ನೇ ಸ್ಥಾನದಲ್ಲಿ ಕ್ರೀಸ್ಗೆ ಬಂದ್ದಿದ್ದ ರಸೆಲ್, ಆರ್ ಅಶ್ವಿನ್ ವಿರುದ್ಧ ಕೆಟ್ಟ ದಾಖಲೆ ಹೊಂದಿದ್ದಾರೆ. ಅಶ್ವಿನ್ ಬೌಲಿಂಗ್ನಲ್ಲಿ 17 ಎಸೆತಗಳಲ್ಲಿ 2 ಬಾರಿ ಔಟ್ ಮಾಡಿದ್ದಾರೆ. ಜಡೇಜಾ ವಿರುದ್ಧ ರಸೆಲ್ ಉತ್ತಮ ಪ್ರದರ್ಶನ ನೀಡಿದ್ದು, 38 ಎಸೆತಗಳಲ್ಲಿ 69 ರನ್ ಗಳಿಸಿದ್ದಾರೆ. ಜೊತೆಗೆ 2 ಬಾರಿ ಔಟಾಗಿದ್ದಾರೆ. ನೂರ್ ಅಹ್ಮದ್ ಬೌಲಿಂಗ್ನಲ್ಲಿ ಏಳು ಎಸೆತಗಳನ್ನು 12 ರನ್ ಗಳಿಸಿ ಒಮ್ಮೆ ಔಟಾಗಿದ್ದಾರೆ.
ಕೆಕೆಆರ್ ಮತ್ತು ಸಿಎಸ್‌ಕೆ ತಂಡಗಳಿಗೆ ಪ್ರಮುಖ ಆಟಗಾರರು ಎಂದರೆ ಕ್ರಮವಾಗಿ ವೆಂಕಟೇಶ್ ಅಯ್ಯರ್, ಶಿವಂ ದುವೆ. ಇದೀಗ ಈ ಇಬ್ಬರೇ ಈ ಪಂದ್ಯದ ಸ್ಪಾಟ್ಲೈಟ್ ಆಗಿದ್ದಾರೆ. ಕಡಿಮೆ ಸ್ಕೋರ್‌ಗಳೊಂದಿಗೆ ಆವೃತ್ತಿ ಪ್ರಾರಂಭಿಸಿದ ವೆಂಕಟೇಶ್ ಅಯ್ಯರ್ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 60 ಮತ್ತು 45 ರನ್ಗಳೊಂದಿಗೆ ತನ್ನ ಸ್ಥಾನ ಕಂಡುಕೊಂಡಿದ್ದಾರೆ. ಆದರೆ ಇನ್ನೂ ಶಿವಂ ದುಬೆ ಅವರಿಂದ ಇನ್ನೂ ದೊಡ್ಡ ಇನ್ನಿಂಗ್ಸ್ ಬಂದಿಲ್ಲ. ಇದು ತಂಡಕ್ಕೆ ದೊಡ್ಡ ಹಿನ್ನಡೆ ತಂದುಕೊಟ್ಟಿದೆ. ಶಿವಂ ದುಬೆ ಲಯಕ್ಕೆ ಮರಳಿದರೆ ಪಂದ್ಯದ ಚಿತ್ರವಣವೇ ಬದಲಾಗಬಹುದು.
ಪಿಚ್ ರಿಪೋರ್ಟ್, ವಾತಾವರಣ
ಎಂಎ ಚಿದಂಬರಂ ಕ್ರೀಡಾಂಗಣ ಸ್ಪಿನ್ ಪಿಚ್ ಆಗಿದ್ದು, ಬ್ಯಾಟರ್ಗಳು ರನ್ ಗಳಿಸಲು ಪರದಾಡಬಹುದು. ಉಭಯ ತಂಡಗಳಲ್ಲೂ ಘಟಾನುಘಟಿ ಸ್ಪಿನ್ನರ್ಗಳೇ ಇರುವುದು ತಂಡಗಳಿಗೆ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ 160ಕ್ಕಿಂತ ಹೆಚ್ಚು ರನ್ ಗಳಿಸಿದರೆ ಚೇಸ್ ಮಾಡುವ ತಂಡಕ್ಕೆ ಕಠಿಣವಾಗಲಿದೆ. ಆದರೆ ಈ ಪಂದ್ಯಕ್ಕೆ ಯಾವುದೇ ಮಳೆ ಇರುವುದಿಲ್ಲ.
ಐಪಿಎಲ್‌ನಲ್ಲಿ ಧೋನಿ ವರುಣ್ ಅವರ ವಿರುದ್ಧ ಕಳಪೆ ಪ್ರದರ್ಶನ ಹೊಂದಿದ್ದಾರೆ. 16 ಎಸೆತಗಳನ್ನು ಎದುರಿಸಿ 11 ರನ್ ಗಳಿಸಿದ್ದು, 3 ಬಾರಿ ಔಟಾಗಿದ್ದಾರೆ. ನರೈನ್ ವಿರುದ್ಧ ಧೋನಿ ಪ್ರದರ್ಶನ ಇನ್ನಷ್ಟು ಕೆಟ್ಟದಾಗಿದ್ದು, ಕೇವಲ 52.70 ಸ್ಟ್ರೈಕ್ ರೇಟ್‌ನಲ್ಲಿ 74 ಎಸೆತಗಳಲ್ಲಿ 39 ರನ್ ಮತ್ತು ಒಂದು ಔಟ್ ಆಗಿದ್ದಾರೆ.
ಸಿಎಸ್‌ಕೆ ಐದು ಇನ್ನಿಂಗ್ಸ್‌ಗಳಲ್ಲಿ 31 ಸಿಕ್ಸರ್ ಬಾರಿಸಿದೆ, ಈ ಆವೃತ್ತಿಯಲ್ಲಿ ಕನಿಷ್ಠ 4 ಪಂದ್ಯಗಳನ್ನು ಆಡಿರುವ 9 ತಂಡಗಳಲ್ಲಿ ಇದು ಅತ್ಯಂತ ಕಡಿಮೆ. ಹೋಲಿಸಿದರೆ, ಕೆಕೆಆರ್ 5 ಇನ್ನಿಂಗ್ಸ್‌ಗಳಲ್ಲಿ 42 ಸಿಕ್ಸರ್ ಬಾರಿಸಿದೆ.
ಅಶ್ವಿನ್ ಬೌಲಿಂಗ್ನಲ್ಲಿ ನರೈನ್ ಅದ್ಭುತ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. 39 ಎಸೆತಗಳಲ್ಲಿ 240 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 94 ರನ್ ಗಳಿಸಿದ್ದು, ಐಪಿಎಲ್‌ನಲ್ಲಿ ಒಮ್ಮೆ ಔಟಾಗಿದ್ದಾರೆ.
ಐಪಿಎಲ್ 2024 ರಿಂದ ಪವರ್‌ಪ್ಲೇನಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ವೈಭವ್ ಅರೋರಾ 11 ಇನ್ನಿಂಗ್ಸ್‌ಗಳಲ್ಲಿ 7.00 ಸ್ಟ್ರೈಕ್ ರೇಟ್ ಮತ್ತು 6ಕ್ಕಿಂತ ಕಡಿಮೆ ಎಕಾನಮಿ ರೇಟ್‌ನಲ್ಲಿ 8 ವಿಕೆಟ್ ಪಡೆದಿದ್ದಾರೆ.
