ಕನ್ನಡ ಸುದ್ದಿ  /  ಕ್ರಿಕೆಟ್  /  Rcb Vs Csk Highlights Ipl 2024: ಸಿಎಸ್‌ಕೆ ಹೊರದಬ್ಬಿ ಭರ್ಜರಿಯಾಗಿ ಪ್ಲೇಆಫ್‌ ಲಗ್ಗೆ ಹಾಕಿದ ಆರ್‌ಸಿಬಿ

ಸಿಎಸ್‌ಕೆ ಹೊರದಬ್ಬಿ ಭರ್ಜರಿಯಾಗಿ ಪ್ಲೇಆಫ್‌ ಲಗ್ಗೆ ಹಾಕಿದ ಆರ್‌ಸಿಬಿ(PTI)

RCB vs CSK highlights IPL 2024: ಸಿಎಸ್‌ಕೆ ಹೊರದಬ್ಬಿ ಭರ್ಜರಿಯಾಗಿ ಪ್ಲೇಆಫ್‌ ಲಗ್ಗೆ ಹಾಕಿದ ಆರ್‌ಸಿಬಿ

12:00 AM ISTMay 19, 2024 12:16 AM Jayaraj
  • twitter
  • Share on Facebook
12:00 AM IST

ಐಪಿಎಲ್‌ 17ನೇ ಆವೃತ್ತಿಯಲ್ಲಿ ನಡೆಯುತ್ತಿರುವ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಪಂದ್ಯ ನಡೆಯುತ್ತಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಪಂದ್ಯದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ಸಿಗಲಿದೆ.

Sun, 19 May 202406:44 PM IST

ಆರ್‌ಸಿಬಿ ಅಮೋಘ ಆಟ

ಎಂಥಾ ಅಮೋಘ ಪಂದ್ಯ! ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌… ಎಲ್ಲಾ ವಿಭಾಗಗಳಲ್ಲಿಯೂ ಆರ್‌ಸಿಬಿ ಪ್ರಬುದ್ಧ ಪ್ರದರ್ಶನ ನೀಡಿತು. ಯಶ್‌ ದಯಾಳ್ ಎಸೆದ ಕೊನೆಯ ಓವರ್‌ ಅಂತೂ ಅದ್ಭುತ. ಮ್ಯಾಚ್‌ ವಿನ್ನರ್‌ ದಯಾಳ್.‌ ಕೊನೆಯ ಎಸೆರಡು ಎಸೆತಗಳು ಜಡೇಜಾ ಡಾಟ್‌ ಮಾಡುವಂತೆ ಚಾಣಾಕ್ಷ ಬೌಲಿಂಗ್‌ ಮಾಡಿದರು. ಇಲ್ಲಿಗೆ ಸಿಎಸ್‌ಕೆ ತಂಡ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಂತಾಗಿದೆ. ಆರ್‌ಸಿಬಿ ನಾಲ್ಕನೇ ತಂಡವಾಗಿ ಪ್ಲೇಆಫ್‌ ಲಗ್ಗೆ ಹಾಕಿದೆ. ಕನಿಷ್ಠ 18 ರನ್‌ಗಳಿಂದ ಗೆಲ್ಲಲೇಬೇಕಿದ್ದ ಪಂದ್ಯವನ್ನು ಆರ್‌ಸಿಬಿ 27 ರನ್‌ಗಳಿಂದ ಗೆದ್ದಿತು. ತವರಿನಲ್ಲಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು. ಇದರೊಂದಿಗೆ ಸಿಎಸ್‌ಕೆ ತಂಡವು ತನ್ನದೇ ತವರಿನಲ್ಲಿ ಫೈನಲ್‌ ಆಡುವ ಅವಕಾಶಕ್ಕೆ ಎಳ್ಳು ನೀರು ಬಿಟ್ಟಿತು.

Sun, 19 May 202406:35 PM IST

ಆರ್‌ಸಿಬಿ ಪ್ಲೇಆಫ್‌ಗೆ; ಸಿಎಸ್‌ಕೆ ಚೆನ್ನೈಗೆ

ಯಾ………ಸ್……‌ ಆಗಿದೆ. ಗೆದ್ದಾಗಿದೆ. ಹಾಲಿ ಚಾಂಪಿಯನ್‌ ಸಿಎಸ್‌ಕೆಯನ್ನು ದಾಖಲೆಯ 27 ರನ್‌ಗಳಿಂದ ಮಣಿಸಿದ ಆರ್‌ಸಿಬಿ ಐಪಿಎಲ್‌ 2024ರ ಪ್ಲೇಆಫ್‌ಗೆ ಲಗ್ಗೆ ಹಾಕಿದೆ.

Sun, 19 May 202406:30 PM IST

ಸಿಕ್ಸರ್‌ ಸಿಡಿಸಿ ಎಂಎಸ್‌ ಧೋನಿ ಔಟ್

ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಧೋನಿ ಔಟ್‌ ಆಗಿದ್ದಾರೆ. ಸಿಎಸ್‌ಕೆಗೆ ಮುಂದಿನ ನಾಲ್ಕು ಎಸೆತಗಳಲ್ಲಿ 11 ರನ್‌ ಬೇಕಿದೆ.

Sat, 18 May 202406:28 PM IST

ಸಿಎಸ್‌ಕೆಗೆ ಬೇಕು 17 ರನ್‌

ಕೊನೆಯ ಓವರ್‌ನಲ್ಲಿ ಸಿಎಸ್‌ಕೆಗೆ 17 ರನ್‌ ಬೇಕಿದೆ. 16 ರನ್‌ಗಳಿಗೆ ಆರ್‌ಸಿಬಿ ಕಟ್ಟಿಹಾಕಿದರೆ ಪ್ಲೇಆಫ್‌ ಟಿಕೆಟ್‌ ಬೆಂಗಳೂರಿಗೆ ಸಿಗಲಿದೆ.

Sat, 18 May 202406:25 PM IST

10 ಎಸೆತಗಳಲ್ಲಿ ಸಿಎಸ್‌ಕೆ 28 ರನ್‌!

ಪಂದ್ಯ ರೋಚಕ ಹಂತದತ್ತ ಸಾಗುತ್ತಿದೆ. 10 ಎಸೆತಗಳಲ್ಲಿ ಸಿಎಸ್‌ಕೆ 28 ರನ್‌ ದಾಟದಂತೆ ಆರ್‌ಸಿಬಿ ಕಟ್ಟಿಹಾಕಬೇಕಾಗಿದೆ. ಆಗ ಮಾತ್ರ ಪ್ಲೇಆಫ್‌ ಟಿಕೆಟ್‌ ಸಿಗಲಿದೆ.

Sat, 18 May 202406:13 PM IST

ಸಿಎಸ್‌ಕೆಗೆ ಬೇಕು 50 ರನ್

ಕೊನೆಯ ಮೂರು ಓವರ್‌ಗಳಲ್ಲಿ ಸಿಎಸ್‌ಕೆ 50 ರನ್‌ ಗಳಿಸಿದರೆ ಪ್ಲೇಆಫ್‌ ಹಂತಕ್ಕೆ ಲಗ್ಗೆ ಹಾಕಲಿದೆ.‌ 18ನೇ ಓವರ್‌ ಮೊಹಮ್ಮದ್‌ ಸಿರಾಜ್‌ ಬೌಲಿಂಗ್‌ ಮಾಡುತ್ತಿದ್ದಾರೆ.

Sat, 18 May 202406:10 PM IST

24 ಎಸೆತಗಳಲ್ಲಿ ಸಿಎಸ್‌ಕೆಗೆ ಬೇಕು 63 ರನ್

ಕೊನೆಯ 24 ಎಸೆತಗಳಲ್ಲಿ ಸಿಎಸ್‌ಕೆ ಪ್ಲೇಆಫ್‌ ಕ್ವಾಲಿಫೈ ಆಗಲು 63 ರನ್‌ಗಳ ಅಗತ್ಯವಿದೆ. ಸಿಕ್ಸರ್‌ನೊಂದಿಗೆ ಜಡೇಜಾ ಅಬ್ಬರ ಆರಂಭಿಸಿದ್ದಾರೆ.

Sat, 18 May 202406:03 PM IST

ಮಿಚೆಲ್ ಸ್ಯಾಂಟ್ನರ್​ ಔಟ್

ಮಿಚೆಲ್ ಸ್ಯಾಂಟ್ನರ್ ಔಟಾಗಿದ್ದಾರೆ. ಫಾಫ್ ಡು ಪ್ಲೆಸಿಸ್ ಹಿಡಿದ ಅಮೇಜಿಂಗ್ ಕ್ಯಾಚ್​ಗೆ ಬಲಿಯಾಗಿದ್ದಾರೆ.

Sat, 18 May 202405:53 PM IST

ಶಿವಂ ದುಬೆ ಔಟ್

ಸಿಎಸ್​ಕೆ 5ನೇ ವಿಕೆಟ್ ಪತನಗೊಂಡಿದೆ. ಶಿವಂ ದುಬೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. 15 ಎಸೆತಗಳಲ್ಲಿ 7 ರನ್ ಗಳಿಸಿ ಕ್ಯಾಮರೂನ್ ಗ್ರೀನ್ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ತಂಡದ ಮೊತ್ತ 14 ಓವರ್​ ಮುಕ್ತಾಯಕ್ಕೆ 125/5

Sat, 18 May 202405:48 PM IST

ರಚಿನ್ ರವೀಂದ್ರ ಔಟ್

ರಚಿನ್ ರವೀಂದ್ರ ರನೌಟ್​ ಆಗಿದ್ದಾರೆ. 37 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ ಸಹಿತ 61 ರನ್ ಬಾರಿಸಿದ್ದ ರಚಿನ್ ಅನಗತ್ಯ ರನ್​ಗೆ ಓಡಲು ಪ್ರಯತ್ನಿಸಿ ಔಟಾದರು. ಸ್ವಪ್ನಿಲ್ ಸಿಂಗ್ ರನೌಟ್ ಮಾಡಿದರು. ಇದರೊಂದಿಗೆ ಸಿಎಸ್​ಕೆ 4ನೇ ವಿಕೆಟ್ ಕಳೆದುಕೊಂಡಿತು.

Sat, 18 May 202405:42 PM IST

ರಚಿನ್ ರವೀಂದ್ರ ಅರ್ಧಶತಕ

ನಿರ್ಣಾಯಕ ಪಂದ್ಯದಲ್ಲಿ ರಚಿನ್ ರವೀಂದ್ರ ಬೊಂಬಾಟ್ ಅರ್ಧಶತಕ ಸಿಡಿಸಿದರು. ಇದು ಅವರ ಐಪಿಎಲ್​ನ ಮೊದಲ ಅರ್ಧಶತಕವಾಗಿದೆ. 31 ಎಸೆತಗಳಲ್ಲಿ 50ರ ಗಡಿ ದಾಟಿದರು.

Sat, 18 May 202405:30 PM IST

ರಹಾನೆ ಔಟ್

ರಚಿನ್ ರವೀಂದ್ರ ಜೊತೆಗೆ 40 ಎಸೆತಗಳಲ್ಲಿ 66 ರನ್​​ಗಳ ಪಾಲುದಾರಿಕೆ ನೀಡಿದ ಅಜಿಂಕ್ಯ ರಹಾನೆ 33 ರನ್ ಗಳಿಸಿ ಔಟಾದರು. ಲಾಕಿ ಫರ್ಗ್ಯುಸನ್​ ಈ ಜೋಡಿಯನ್ನು ಬೇರ್ಪಡಿಸಿದರು.

Sat, 18 May 202405:28 PM IST

ರಚಿನ-ರಹಾನೆ ಉತ್ತಮ ಜೊತೆಯಾಟ

ರಚಿನ್ ರವೀಂದ್ರ ಮತ್ತು ಅಜಿಂಕ್ಯ ರಹಾನೆ ಉತ್ತಮ ಜೊತೆಯಾಟವಾಡುತ್ತಿದ್ದಾರೆ. ಈ ಜೋಡಿ 40 ಎಸೆತಗಳಲ್ಲಿ ಅಜೇಯ 66 ರನ್ ಪೇರಿಸಿದೆ. 9 ಓವರ್​ ಮುಕ್ತಾಯಕ್ಕೆ 85/2. ರಹಾನೆ 33, ರಚಿನ್ 38.

Sat, 18 May 202405:23 PM IST

ಆರ್​ಸಿಬಿ ಮತ್ತೊಂದು ದುಬಾರಿ ಓವರ್​

ಸಿಎಸ್​ಕೆ 8ನೇ ಓವರ್​​​ನಲ್ಲಿ 1 ಬೌಂಡರಿ, 1 ಸಿಕ್ಸರ್ ಸಹಿತ 14ರನ್ ಗಳಿಸಿತು. ಇದರೊಂದಿಗೆ ಆರ್​ಸಿಬಿಗೆ ತಿರುಗೇಟು ನೀಡುತ್ತಿದೆ. 8 ಓವರ್​ ಮುಕ್ತಾಯಕ್ಕೆ 78/2. ರಹಾನೆ 31, ರಚಿನ್ 34.

Sat, 18 May 202405:12 PM IST

ಸಿಎಸ್​ಕೆ ಪವರ್​ ಪ್ಲೇ ಮುಕ್ತಾಯ 58/2

ಎರಡು ಬೇಗನೇ ಕಳೆದುಕೊಂಡರೂ ಸಿಎಸ್​ಕೆ ಉತ್ತಮ ಪ್ರದರ್ಶನ ನೀಡುತ್ತಿದೆ. ಸಿಎಸ್​ಕೆ ಪವರ್​​ಪ್ಲೇ ಮುಕ್ತಾಯಕ್ಕೆ 58/2 (6) ಗಳಿಸಿದೆ. 6ನೇ ಓವರ್​​ನಲ್ಲಿ ಸಿಎಸ್​ಕೆ 15 ರನ್ ಬಾರಿಸಿತು. ರಹಾನೆ 22, ರವೀಂದ್ರ 23 ರನ್ ಗಳಿಸಿದ್ದಾರೆ.

Sat, 18 May 202405:06 PM IST

ಸಿಎಸ್​ಕೆ 5 ಓವರ್ ಮುಕ್ತಾಯ 43/2

ಸಿಎಸ್​ಕೆ 5 ಓವರ್​ ಮುಕ್ತಾಯಕ್ಕೆ 43 ರನ್​​​ ಗಳಿಸಿದೆ. 2 ವಿಕೆಟ್ ಕಳೆದುಕೊಂಡಿದೆ. ರಚಿನ್ ರವೀಂದ್ರ ಆಸರೆಯಾಗುತ್ತಿದ್ದಾರೆ.

Sat, 18 May 202404:57 PM IST

3 ಓವರ್ ಮುಕ್ತಾಯಕ್ಕೆ 25/2

ಸಿಎಸ್​ಕೆ ಸಂಕಷ್ಟಕ್ಕೆ ಸಿಲುಕಿತು. 3 ಓವರ್​​​ಗೆ 25 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.

Sat, 18 May 202404:56 PM IST

ಸಿಎಸ್​ಕೆ ಎರಡನೇ ವಿಕೆಟ್ ಪತನ

ಸಿಎಸ್​ಕೆ ಎರಡನೇ ವಿಕೆಟ್ ಪತನವಾಗಿದೆ. ಗಾಯಕ್ವಾಡ್ ಬಳಿಕ ಡ್ಯಾರಿಲ್ ಮಿಚೆಲ್, ಯಶ್ ದಯಾಳ್ ಬೌಲಿಂಗ್​ನಲ್ಲಿ ಔಟ್​ ಆಗಿದ್ದಾರೆ. ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ ಪಡೆದರು.

Sat, 18 May 202404:52 PM IST

ರಚಿನ್ ಆಸರೆ

ಸಿಎಸ್​ಕೆ ಎರಡನೇ ಓವರ್​ನಲ್ಲಿ 7 ರನ್ ಗಳಿಸಿತು. 19/1 (2)

Sat, 18 May 202404:46 PM IST

ಮೊದಲ ಓವರ್​ ಮುಕ್ತಾಯಕ್ಕೆ 12 ರನ್

ಸಿಎಸ್​ಕೆ ಮೊದಲ ಓವರ್​ ಮುಕ್ತಾಯಕ್ಕೆ 12 ರನ್​ ಗಳಿಸಿದೆ. 1 ವಿಕೆಟ್ ಕಳೆದುಕೊಂಡಿದೆ.

Sat, 18 May 202404:43 PM IST

ಋತುರಾಜ್ ಗಾಯಕ್ವಾಡ್ ಔಟ್

ಇನ್ನಿಂಗ್ಸ್​ ಆರಂಭಿಸಿದ ಋತುರಾಜ್ ಗಾಯಕ್ವಾಡ್ ಮೊದಲ ಎಸೆತದಲ್ಲೇ ಔಟ್. ಗ್ಲೆನ್ ಮ್ಯಾಕ್ಸ್​ವೆಲ್ ಎಸೆದ ಮೊದಲ ಓವರ್​​ನ​ ಮೊದಲ ಎಸೆತದಲ್ಲೇ ಋತುರಾಜ್ ವಿಕೆಟ್ ಒಪ್ಪಿಸಿದರು.

Sat, 18 May 202404:41 PM IST

ಸಿಎಸ್​ಕೆ ಇನ್ನಿಂಗ್ಸ್ ಆರಂಭ

ಆರ್​ಸಿಬಿ ನೀಡಿರುವ 219 ರನ್​ಗಳ ಗುರಿಯನ್ನು ಸಿಎಸ್​ಕೆ ಬೆನ್ನಟ್ಟಿದೆ. ರಚಿನ್ ರವೀಂದ್ರ ಮತ್ತು ಋತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

Sat, 18 May 202404:29 PM IST

ಚೆನ್ನೈ ತಂಡವನ್ನು 200 ರನ್​ಗಳಿಗೆ ಕಟ್ಟಿಹಾಕಬೇಕು

ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದೆ. ವಿರಾಟ್ ಕೊಹ್ಲಿ 47, ಫಾಫ್ ಡು ಪ್ಲೆಸಿಸ್ 54, ರಜತ್ ಪಾಟೀದಾರ್ 41, ಕ್ಯಾಮರೂನ್ ಗ್ರೀನ್ 38* ರನ್ ಗಳಿಸಿದರು. ಸಿಎಸ್​ಕೆ ಗೆಲ್ಲಲು 219 ರನ್ ಬೇಕಿದೆ. ಆದರೆ ಆರ್​ಸಿಬಿ ಚೆನ್ನೈ ತಂಡವನ್ನು 200 ರನ್​​ಗಳಿಗೆ ಕಟ್ಟಿಹಾಕಬೇಕು. ಆಗ ಪ್ಲೇಆಫ್ ಪ್ರವೇಶಿಸಲಿದೆ.

Sat, 18 May 202404:27 PM IST

ಆರ್​ಸಿಬಿ ಇನ್ನಿಂಗ್ಸ್ ಮುಕ್ತಾಯ

ಆರ್​ಸಿಬಿ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. 20 ಓವರ್​​ಗಳಲ್ಲಿ5 ವಿಕೆಟ್​ ನಷ್ಟಕ್ಕೆ 218 ರನ್ ಗಳಿಸಿದೆ. ಅಂತಿಮ ಓವರ್​​​ನಲ್ಲಿ 13 ರನ್ ಕಲೆ ಹಾಕಿತು. ಮ್ಯಾಕ್ಸ್​ವೆಲ್ 5 ಎಸೆತಗಳಲ್ಲಿ 15 ರನ್ ಹರಿದು ಬಂತು.

Sat, 18 May 202404:22 PM IST

ಡಿಕೆ ಔಟ್, ಆರ್​ಸಿಬಿ 205/4 (19)

ಆರ್​ಸಿಬಿ 19 ಓವರ್​​ಗಳಲ್ಲಿ 205 ರನ್ ಗಳಿಸಿದೆ. ದಿನೇಶ್ ಕಾರ್ತಿಕ್ 14 ರನ್ ಗಳಿಸಿ ಔಟಾದರು. ಮ್ಯಾಕ್ಸ್​ವೆಲ್​ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿದ್ದಾರೆ.

Sat, 18 May 202404:12 PM IST

ರಜತ್ ಪಾಟೀದಾರ್ ಔಟ್

ಕೊನೆಯ ಹಂತದಲ್ಲಿ ರಜತ್ ಪಾಟೀದಾರ್ ಔಟ್. 23 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ ಸಹಿತ 41 ರನ್ ಸಿಡಿಸಿ ಔಟಾದರು. ಶಾರ್ದೂಲ್ ಠಾಕೂರ್ ಬೌಲಿಂಗ್​ನಲ್ಲಿ ಡ್ಯಾರಿಲ್ ಮಿಚೆಲ್​ಗೆ ಕ್ಯಾಚ್ ನೀಡಿದರು. ತಂಡದ ಮೊತ್ತ 184/3 (17.4)

Sat, 18 May 202404:07 PM IST

ಆರ್​ಸಿಬಿ 17 ಓವರ್ ಮುಕ್ತಾಯಕ್ಕೆ 171 ರನ್

ರಜತ್ ಪಾಟೀದಾರ್ 17ನೇ ಓವರ್​​ನಲ್ಲಿ 2 ಸಿಕ್ಸರ್​ ಸಹಿತ 16 ರನ್ ಪೇರಿಸಿದರು. ಇದರೊಂದಿಗೆ ಆರ್​ಸಿಬಿ 171 ರನ್ ಪೇರಿಸಿದ್ದು, 200ರತ್ತ ಹೆಜ್ಜೆ ಹಾಕುತ್ತಿದೆ.

Sat, 18 May 202403:58 PM IST

150 ದಾಟಿದ ಆರ್​ಸಿಬಿ

ಆರ್​ಸಿಬಿ 16 ಓವರ್​​ಗಳ ಮುಕ್ತಾಯಕ್ಕೆ 150ರ ಗಡಿ ದಾಟಿದೆ. ಪಾಟೀದಾರ್ ಮತ್ತು ಗ್ರೀನ್​ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಗ್ರೀನ್​ 18 ರನ್ ಗಳಿಸಿದ್ದ ಅವಧಿಯಲ್ಲಿ ನಾಯಕ ಋತುರಾಜ್ ಗಾಯಕ್ವಾಡ್, ಕ್ಯಾಚ್ ಡ್ರಾಪ್ ಮಾಡಿದ್ದಾರೆ. ಆರ್​ಸಿಬಿ 155/2 (16)

Sat, 18 May 202403:52 PM IST

15 ಓವರ್ ಮುಕ್ತಾಯ 138/2

ಆರ್​ಸಿಬಿ 15 ಓವರ್ ಮುಕ್ತಾಯಕ್ಕೆ 138 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಗ್ರೀನ್ 11, ಪಾಟೀದಾರ್ 23 ರನ್ ಗಳಿಸಿದ್ದಾರೆ.

Sat, 18 May 202403:47 PM IST

ಗ್ರೀನ್ ಮತ್ತು ಪಾಟೀದಾರ್ ಆಸರೆ

ಫಾಫ್ ಡು ಪ್ಲೆಸಿಸ್ ಔಟಾದ ಬಳಿಕ ಕ್ಯಾಮರೂನ್ ಗ್ರೀನ್ ಮತ್ತು ರಜತ್ ಪಾಟೀದಾರ್ ಆಸರೆಯಾಗುತ್ತಿದ್ದಾರೆ. 14 ಓವರ್ ಮುಕ್ತಾಯಕ್ಕೆ 132/2

Sat, 18 May 202403:38 PM IST

ಫಾಫ್ ಡು ಪ್ಲೆಸಿಸ್ ಔಟ್

ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಫಾಫ್ ಡು ಪ್ಲೆಸಿಸ್ ಔಟ್. ರಜತ್ ಪಾಟೀದಾರ್​ ಹೊಡೆದ ಚೆಂಡು ಬೌಲರ್​​​ ಮಿಚೆಲ್ ಸ್ಯಾಂಟ್ನರ್​ಗೆ ತಾಗಿ ವಿಕೆಟ್​ಗೆ ಬಡಿಯಿತು. ಆದರೆ ನಾನ್​ಸ್ಟ್ರೈಕ್​ನಲ್ಲಿ ಫಾಫ್​ ಕ್ರೀಸ್​ನಲ್ಲಿ ಫಾಫ್ ಬ್ಯಾಟ್ ತಾಗಿಸಿರಲಿಲ್ಲ. 39 ಎಸೆತಗಳಲ್ಲಿ 54 ರನ್ ಗಳಿಸಿ ಔಟಾದರು. 3 ಬೌಂಡರಿ, 3 ಸಿಕ್ಸರ್ ಸಿಡಿಸಿದ್ದಾರೆ.

Sat, 18 May 202403:29 PM IST

ಫಾಫ್ ಡು ಪ್ಲೆಸಿಸ್ ಅರ್ಧಶತಕ

ವಿರಾಟ್ ಕೊಹ್ಲಿ ಔಟಾದ ನಂತರ ಅಬ್ಬರಿಸಿದ ಫಾಫ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಟೂರ್ನಿಯಲ್ಲಿ ಇದು ಅವರ 4ನೇ ಅರ್ಧಶತಕ.

Sat, 18 May 202403:28 PM IST

ಫಾಫ್ ಅಬ್ಬರ

ಆರಂಭದಿಂದಲೂ ನಿಧಾನವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಫಾಫ್ ಡು ಪ್ಲೆಸಿಸ್ ಅವರು 11ನೇ ಓವರ್​​ನಲ್ಲಿ ಜಡೇಜಾಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿದ್ದಾರೆ. ತಂಡದ ಮೊತ್ತ 98/1 (11)

Sat, 18 May 202403:23 PM IST

ವಿರಾಟ್ ಕೊಹ್ಲಿ ಔಟ್

ಮಿಚೆಲ್ ಸ್ಯಾಂಟ್ನರ್​ ಎಸೆದ 10ನೇ ಓವರ್​ನಲ್ಲಿ ಸಿಕ್ಸರ್ ಸಿಡಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಔಟಾದರು. 29 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್​ ಸಹಿತ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

Sat, 18 May 202403:17 PM IST

6 ಓವರ್​​ಗಳ ನಂತರ ಬಂತು ಸಿಕ್ಸರ್​

3ನೇ ಓವರ್​​ ನಂತರ 9ನೇ ಓವರ್​​ನಲ್ಲಿ ಆರ್​ಸಿಬಿ ಸಿಕ್ಸರ್​ ಸಿಡಿಸಿದೆ. ವಿರಾಟ್​ ಖಾತೆಗೆ ಮತ್ತೊಂದು ಸಿಕ್ಸರ್ ಸೇರಿತು. ಜಡೇಜಾ ಎಸೆದ ಈ ಓವರ್​​ನಲ್ಲಿ 10 ರನ್ ಹರಿದು ಬಂತು. 9 ಓವರ್​ ಮುಕ್ತಾಯಕ್ಕೆ 70/0. ವಿರಾಟ್ 40, ಪ್ಲೆಸಿಸ್ 29

Sat, 18 May 202403:14 PM IST

8 ಓವರ್​ ಮುಕ್ತಾಯಕ್ಕೆ 60/0 (8)

ಆರ್​ಸಿಬಿ 8 ಓವರ್ ಮುಕ್ತಾಯಕ್ಕೆ 60 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಅದ್ಭುತ ಬೌಂಡರಿಯೊಂದನ್ನು ಸಿಡಿಸಿದರು. ಮಿಚೆಲ್ ಸ್ಯಾಂಟ್ನರ್ ಎಸೆದ ಓವರ್​​ನಲ್ಲಿ 8 ರನ್ ಬಂದವು.

Sat, 18 May 202403:10 PM IST

7 ಓವರ್ ಮುಕ್ತಾಯ, ಆರ್​ಸಿಬಿ 52/0 (7)

7 ಓವರ್​​ ಮಕ್ತಾಯಕ್ಕೆ ಆರ್​ಸಿಬಿ 52/0 (7)

Sat, 18 May 202403:05 PM IST

ಪವರ್​ಪ್ಲೇ ಮುಕ್ತಾಯ

ಮಳೆಯ ನಂತರ ಪಿಚ್​ ಸ್ಪಿನ್ನರ್​ಗಳಿಗೆ ನೆರವಾಗುತ್ತಿದೆ. 6ನೇ ಓವರ್​​ನಲ್ಲೂ ರನ್​ ಬಂದಿಲ್ಲ. ಫಾಫ್ ಒಂದು ಬೌಂಡರಿ ಸಿಡಿಸಿದರೂ ಸ್ಕೋರ್ ಬಂದಿದ್ದೇ 5 ರನ್. ಪವರ್​ ಪ್ಲೇ ಮುಕ್ತಾಯಕ್ಕೆ 42/0 (6)

Sat, 18 May 202403:04 PM IST

ಸ್ಪಿನ್ ಬಲೆಗೆ ತತ್ತರಿಸಿದ ಆರ್​ಸಿಬಿ ಓಪನರ್ಸ್

ವೇಗಿಗಳ ವಿರುದ್ಧ ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿದ ಆರ್​ಸಿಬಿ, ಸ್ಪಿನ್ನರ್​ಗಳ ವಿರುದ್ಧ ರನ್​ಗಳಿಸಲು ಪರದಾಡುತ್ತಿದ್ದಾರೆ. 5ನೇ ಓವರ್​​​ನಲ್ಲೂ ಬಂದಿದ್ದೇ 2 ರನ್. ತಂಡದ ಮೊತ್ತ 37/0 (5)

Sat, 18 May 202402:57 PM IST

ನಾಲ್ಕನೇ ಓವರ್​​​ನಲ್ಲಿ ಕೇವಲ 4 ರನ್

ಮಹೀಶಾ ತೀಕ್ಷಣ ಎಸೆದ ನಾಲ್ಕನೇ ಓವರ್​​​ನಲ್ಲಿ ಆರ್​ಸಿಬಿ ಕೇವಲ 4 ರನ್ ಗಳಿಸಿದೆ. ತಂಡದ ಮೊತ್ತ 35/0 (4)

Sat, 18 May 202402:54 PM IST

ಮತ್ತೆ ಪಂದ್ಯ ಆರಂಭ

ಮಳೆಯಿಂದ ಕೆಲಹೊತ್ತು ಸ್ಥಗಿತಗೊಂಡಿದ್ದ ಪಂದ್ಯ ಈಗ ಮತ್ತೆ ಆರಂಭವಾಗಿದೆ. ಮೂರು ಓವರ್​​ ನಂತರ ಸಿಎಸ್​ಕೆ ಸ್ಪಿನ್ನರ್​​ನನ್ನು ನಾಲ್ಕನೇ ಓವರ್​ನಲ್ಲೇ ಕಣಕ್ಕಿಳಿಸಿದೆ.

Sat, 18 May 202402:51 PM IST

8.25ಕ್ಕೆ ಪಂದ್ಯ ಆರಂಭ

ಪ್ರಸ್ತುತ ಮಳೆ ನಿಂತಿದ್ದು, 8.25ಕ್ಕೆ ಪಂದ್ಯ ಆರಂಭವಾಗಲಿದೆ. ಆರ್​ಸಿಬಿ 3 ಓವರ್ ಮುಕ್ತಾಯಕ್ಕೆ 31 ರನ್ ಗಳಿಸಿದೆ.

Sat, 18 May 202402:34 PM IST

ನಿಂತ ಮಳೆ ಶೀಘ್ರ ಪಂದ್ಯ ಆರಂಭ

ಪಂದ್ಯಕ್ಕೆ ಅಡಚಣೆ ಉಂಟು ಮಾಡಿದ್ದ ಮಳೆ ಸದ್ಯ ನಿಂತಿದೆ. ಶೀಘ್ರದಲ್ಲೇ ಪಂದ್ಯ ಆರಂಭವಾಗಲಿದೆ. ಯಾವುದೇ ಓವರ್​ಗಳು ಕಡಿತಗೊಂಡಿಲ್ಲ.

Sat, 18 May 202402:16 PM IST

ಆರ್​​ಸಿಬಿಗೆ ಆಘಾತ, ಮತ್ತೆ ಮಳೆ ಆರಂಭ

ಮೂರು ಓವರ್​ ಮುಕ್ತಾಯದ ನಂತರ ಮಳೆ ಆರಂಭಗೊಂಡಿದೆ. ಮೈದಾನದ ಸಿಬ್ಬಂದಿ ಕವರ್​​ಗಳಿಂದ ಪಿಚ್​ ಮುಚ್ಚಿದ್ದಾರೆ.

Sat, 18 May 202402:14 PM IST

ಭರ್ಜರಿ 2 ಸಿಕ್ಸರ್ ಸಿಡಿಸಿದ ಕೊಹ್ಲಿ

ವಿರಾಟ್ ಕೊಹ್ಲಿ ಎರಡು ಭರ್ಜರಿ ಸಿಕ್ಸರ್ ಸಿಡಿಸಿದರು. ತಂಡದ ಮೊತ್ತ 3 ಓವರ್ ಮುಕ್ತಾಯಕ್ಕೆ 31 ರನ್. ಕೊಹ್ಲಿ 19, ಫಾಫ್ 12.

Sat, 18 May 202402:10 PM IST

16 ರನ್ ಕಲೆ ಹಾಕಿದ ಆರ್​​ಸಿಬಿ

ಎರಡನೇ ಓವರ್​ನಲ್ಲಿ 16 ರನ್​ ಹರಿದು ಬಂತು. ಕೊಹ್ಲಿ ಬೌಂಡರಿ, ಫಾಫ್ ಬೌಂಡರಿ, ಸಿಕ್ಸರ್ ಸಿಡಿಸಿದರು. ಸ್ಕೋರ್​ 2 ಓವರ್​ ಮುಕ್ತಾಯಕ್ಕೆ 18 ರನ್​.

Sat, 18 May 202402:04 PM IST

ಆರ್​ಸಿಬಿ ನೀರಸ ಆರಂಭ

ಮೊದಲ ಓವರ್ ಮುಕ್ತಾಯಕ್ಕೆ ಆರ್​ಸಿಬಿ ಕೇವಲ 2 ರನ್ ಕಲೆ ಹಾಕಿದೆ. ವಿರಾಟ್ 1 (1), ಪ್ಲೆಸಿಸ್ 1 (5).

Sat, 18 May 202401:59 PM IST

ಆರ್​ಸಿಬಿ ಬ್ಯಾಟಿಂಗ್​ ಆರಂಭ

ಆರ್​​ಸಿಬಿ ಬ್ಯಾಟಿಂಗ್ ಆರಂಭಿಸಿದೆ. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಸಿಎಸ್​ಕೆ ಪರ ತುಷಾರ್ ದೇಶಪಾಂಡೆ ಮೊದಲು ಬೌಲಿಂಗ್ ಮಾಡುತ್ತಿದ್ದಾರೆ.

Sat, 18 May 202401:53 PM IST

18 ರನ್​ಗಳಿಂದ ಗೆಲ್ಲಲೇಬೇಕು

ಆರ್​ಸಿಬಿ ಮೊದಲು ಬ್ಯಾಟಿಂಗ್ ನಡೆಸುವ ಕಾರಣ 18 ರನ್​ಗಳ ಅಂತರದಿಂದ ಗೆಲ್ಲಲೇಬೇಕು. ಆಗ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಲಿದೆ.

Sat, 18 May 202401:45 PM IST

ಇಂಪ್ಯಾಕ್ಟ್ ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ವಪ್ನಿಲ್ ಸಿಂಗ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವಿಜಯ್‌ಕುಮಾರ್ ವೈಶಾಕ್, ಹಿಮಾಂಶು ಶರ್ಮಾ.

ಚೆನ್ನೈ ಸೂಪರ್ ಕಿಂಗ್ಸ್: ಶಿವಂ ದುಬೆ, ಸಮೀರ್ ರಿಜ್ವಿ, ಪ್ರಶಾಂತ್ ಸೋಲಂಕಿ, ಶೇಕ್ ರಶೀದ್, ಮುಖೇಶ್ ಚೌಧರಿ.

Sat, 18 May 202401:43 PM IST

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI

ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಡೇರಿಲ್ ಮಿಚೆಲ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್‌ ಕೀಪರ್), ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್ಜೀತ್ ಸಿಂಗ್, ಮಹೇಶ್ ತೀಕ್ಷಣ

Sat, 18 May 202401:42 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್, ಮಹಿಪಾಲ್ ಲೊಮ್ರರ್, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್), ಕರ್ಣ್ ಶರ್ಮಾ, ಯಶ್ ದಯಾಳ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್.

Sat, 18 May 202401:36 PM IST

ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್ ಆಯ್ಕೆ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ರುತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ.

Sat, 18 May 202401:10 PM IST

ಚಿನ್ನಸ್ವಾಮಿ ಸುತ್ತಮುತ್ತ ತುಂತುರು ಮಳೆ

ಶುಕ್ರವಾರ ರಾತ್ರಿಯಿಂದ ಚಿನ್ನಸ್ವಾಮಿ ಮೈದಾನದಲ್ಲಿ ದೊಡ್ಡ ಮಟ್ಟದಲ್ಲಿ ಮಳೆಯಾಗಿಲ್ಲ. ಸಣ್ಣ ಪ್ರಮಾಣದಲ್ಲಿ ತುಂತು ಮಳೆಯಾಗಿದೆ. ಸಂಜೆ ಬಳಿಕವೂ ಸಣ್ಣ ಮಳೆ ಸುರಿದಿತ್ತು. ಸದ್ಯ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದು, ಸಮಯಕ್ಕೆ ಸರಿಯಾಗಿ ಟಾಸ್‌ ಆರಂಭವಾಗುವ ಸಾಧ್ಯತೆ ಇದೆ.

Sat, 18 May 202412:51 PM IST

ಚಿನ್ನಸ್ವಾಮಿ ಮೈದಾನದ ಸುತ್ತಮುತ್ತ ಜನಸಾಗರ

ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಪಂದ್ಯ ವೀಕ್ಷಿಸಲು ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ.

Sat, 18 May 202412:36 PM IST

ಮೈದಾನಕ್ಕೆ ಬಂದ ಆರ್‌ಸಿಬಿ ತಂಡ

ಆರ್‌ಸಿಬಿ ತಂಡದ ಬಸ್‌ ಸ್ಟೇಡಿಯಂಗೆ ಬಂದಿದೆ. ಈ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ‌ ವೈರಲ್‌ ಆಗುತ್ತಿದೆ.

Sat, 18 May 202412:17 PM IST

ಸೋಷಿಯಲ್‌ ಮೀಡಿಯಾದಲ್ಲಿ ಬೆಂಗಳೂರು ಮಳೆ ಕುರಿತ ಪೋಸ್ಟ್‌ ಟ್ರೆಂಡಿಂಗ್

ಬೆಂಗಳೂರಿನ ಜನರು ನಗರದ ವಿವಿಧ ಭಾಗಗಳಿಂದ ಆಗಸ ಹಾಗೂ ಮೋಡದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರೆ. ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಮೋಡಕವಿದ ವಾತಾವರಣವಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಈಗ ಹೇಗಿದೆ ಎಂಬ ದೃಶ್ಯಗಳನ್ನು ಕೂಡಾ ನೆಟ್ಟಿಗರು ಹಂಚಿಕೊಂಡಿದ್ದಾರೆ. ಪಂದ್ಯಕ್ಕೆ ಗಂಟೆಗಳಿಗೂ ಮುನ್ನವೇ ಅಭಿಮಾನಿಗಳು ಮೈದಾನದತ್ತ ಬರುತ್ತಿದ್ದಾರೆ. ಮಳೆ ಬರುವ ಸಾಧ್ಯತೆ ಇದ್ದರೆ ಅದಕ್ಕೂ ಮುಂಚಿತವಾಗಿ ಸ್ಟೇಡಿಯಂ ಸೇರಿಕೊಳ್ಳುವ ಯೋಚನೆಯಲ್ಲಿದ್ದಾರೆ.

Sat, 18 May 202410:38 AM IST

ಬೆಂಗಳೂರಿನಲ್ಲಿ ಮಳೆ; ಪಂದ್ಯದ ಟಾಸ್ ತಡವಾಗುವ ಸಾಧ್ಯತೆ

ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ಸಂಜೆಯ ನಂತರ ಮಳೆ ಜೋರಾಗುವ ನಿರೀಕ್ಷೆ ಇದೆ. ಇದರಿಂದ ಪಂದ್ಯದ ಟಾಸ್ ಪ್ರಕ್ರಿಯೆ ತಡವಾಗುವ ಸಾಧ್ಯತೆ ಇದೆ. ಹೈವೋಲ್ಟೇಜ್ ಪಂದ್ಯ ನಡುವೆಯಲಿರುವ ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಸುತ್ತಮುತ್ತ ಮೋಡ ಕವಿದ ವಾತಾವರಣ ಇದೆ. ಚಿನ್ನಸ್ವಾಮಿ ಸ್ಟೇಡಿಯಂ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದೆ.

Sat, 18 May 202409:26 AM IST

ರಾತ್ರಿ 10:56ರ ಒಳಗೆ ಪಂದ್ಯ ಆರಂಭವಾಗಬೇಕು

ಕನಿಷ್ಠ ತಲಾ 5 ಓವರ್‌ಗಳ ಪಂದ್ಯಕ್ಕೆ ಕಟ್-ಆಫ್ ಸಮಯ ರಾತ್ರಿ 10:56 ಗಂಟೆ. ಅಂದರೆ, ಈ ಸಮಯದ ಒಳಗಡೆ ಪಂದ್ಯ ಆರಂಭ ಆಗಬೇಕು. ಅಂದಾಜು 10:15ರ ವೇಳೆಗೆ ಮಳೆ ನಿಂತರೆ, ಅದಾಗಿ 15-20 ನಿಮಿಷಗಳ ಕಾಲ ಮೈದಾನ ಪಂದ್ಯಕ್ಕೆ ಸಜ್ಜಾಗುತ್ತದೆ (ಚಿನ್ನಸ್ವಾಮಿ ಮೈದಾನದಲ್ಲಿ ಮಾತ್ರ). ಅಧಿಕಾರಿಗಳು ಮೈದಾನವನ್ನು ಪರಿಶೀಲಿಸಿ ಪಂದ್ಯಕ್ಕೆ ಗ್ರೀನ್‌ ಸಿಗ್ನಲ್‌ ಕೊಡುತ್ತಾರೆ. ಹೀಗಾಗಿ ಕನಿಷ್ಠ 10.45ರ ಒಳಗೆ ಟಾಸ್‌ ಪ್ರಕ್ರಿಯೆ ನಡೆಸಬೇಕು. ಅಷ್ಟರವರೆಗೆ ಮಳೆ ನಿಲ್ಲುವ ಸಾಧ್ಯತೆ ಇಲ್ಲ ಎಂದರೆ ಪಂದ್ಯವನ್ನು ಅಧಿಕೃತವಾಗಿ ರದ್ದು ಮಾಡಲಾಗುತ್ತದೆ

Sat, 18 May 202409:24 AM IST

5 ಓವರ್‌ಗಳ ಪಂದ್ಯ ನಡೆಯಲೇಬೇಕು

ಪಂದ್ಯಕ್ಕೆ ಮಳೆ ಅಡ್ಡಿಯಾದರೂ, ಪಂದ್ಯದ ಫಲಿತಾಂಶ ಪಡೆಯಲು ಕನಿಷ್ಠ 5 ಓವರ್‌ಗಳ ಪಂದ್ಯವನ್ನು ನಡೆಸಲೇಬೇಕು. ಅದಕ್ಕಿಂತ ಕಡಿಮೆ ಓವರ್‌ಗಳ ಪಂದ್ಯ ನಡೆಸುವುದಿಲ್ಲ. ಮಳೆಯಿಂದಾಗಿ 5 ಓವರ್‌ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಅಧಿಕೃತವಾಗಿ ಪಂದ್ಯವನ್ನು ರದ್ದು ಮಾಡಲಾಗುತ್ತದೆ.

Sat, 18 May 202407:45 AM IST

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಮಳೆ ನಿಂತ ಬಳಿಕ ಚಿಂತೆ ಇಲ್ಲ

ಬೆಂಗಳೂರಿನ ಚಿನ್ನಸ್ವಾಮಿ ಮೈದಾನವು ಮಳೆ ನಿಂತ 15-20 ನಿಮಿಷದಲ್ಲಿ ಪಂದ್ಯಕ್ಕೆ ಸಜ್ಜಾಗಲಿದೆ. ಅಂತಹ ವ್ಯವಸ್ಥೆ ಇಲ್ಲಿದೆ. ಇದಕ್ಕೆ ಸಬ್‌ಏರ್‌ ಸಿಸ್ಟಮ್‌ ಎಂದು ಹೆಸರು. ಸಬ್ ಏರ್ ಸಿಸ್ಟಮ್, ಹುಲ್ಲು ಹಾಸಿನ ಮೇಲೆ ಬಿದ್ದ ನೀರನ್ನು ಬೇಗನೆ ಹೀರಿಕೊಂಡು ನೆಲದ ಅಡಿಯಲ್ಲಿ ಅಳವಡಿಸಿರುವ ಕೊಳವೆಗಳ ಮೂಲಕ ನೀರನ್ನು ಹೊರಹಾಕುತ್ತದೆ. ಉಪ ಮೇಲ್ಮೈ ಗಾಳಿ ಮತ್ತು ನಿರ್ವಾತ ಚಾಲಿತ ಒಳಚರಂಡಿ ವ್ಯವಸ್ಥೆ ಇದಾಗಿದ್ದು, ಪ್ರತಿ ನಿಮಿಷಕ್ಕೆ 10,000 ಲೀಟರ್ ಪ್ರಮಾಣದಲ್ಲಿ ನೀರನ್ನು ಹೊರಹಾಕುವ ಸಾಮರ್ಥ್ಯ ಇದಕ್ಕಿದೆ. ಈ ವ್ಯವಸ್ಥೆ ಅಳವಡಿಸಿದ ವಿಶ್ವದ ಮೊದಲ ಕ್ರಿಕೆಟ್‌ ಸ್ಟೇಡಿಯಂ ಎಂಬ ಹೆಗ್ಗಳಿಕೆ ಚಿನ್ನಸ್ವಾಮಿ ಮೈದಾನದ್ದು. ಇದಕ್ಕಾಗಿ 4.25 ಕೋಟಿ ರೂಪಾಯಿ ವ್ಯಯಿಸಲಾಗಿದೆ. 2017ರಲ್ಲಿ ಇದರ ಅಳವಡಿಕೆ ಮಾಡಲಾಯ್ತು

Sat, 18 May 202407:39 AM IST

ಸಿಎಸ್ ಕೆ ವಿರುದ್ಧ ವಿರಾಟ್ ಕೊಹ್ಲಿ ಅಬ್ಬರ

ಪಂದ್ಯ - 32 (31) ಇನ್ನಿಂಗ್ಸ್

ರನ್ - 1000

ಎದುರಿಸಿದ ಎಸೆತಗಳು - 805

ಬ್ಯಾಟಿಂಗ್ ಸರಾಸರಿ - 37.25

ಬೆಸ್ಟ್ ಸ್ಕೋರ್ - 90

ಸ್ಟ್ರೈಕ್ ರೇಟ್ - 124.96

ಅರ್ಧಶತಕಗಳು - 9

4s/6s - 73/38

ಡಕೌಟ್ - 00

Sat, 18 May 202407:29 AM IST

ಬೆಂಗಳೂರಿನಲ್ಲಿ ಮಧ್ಯಾಹ್ನದವರೆಗೂ ಬಿಸಿಲು, ಕೆಲವೆಡೆ ಮಳೆ

ಶನಿವಾರ ಬೆಳಗ್ಗೆಯಿಂದ ನಗರದ ಬಹುತೇಕ ಭಾಗಗಳಲ್ಲಿ ಶುಭ್ರ ಆಕಾಶ ಕಂಡುಬಂದಿದೆ. ಮಧ್ಯಾಹ್ನದವರೆಗೂ ಕೆಲವು ಭಾಗಗಳಲ್ಲಿ ಬಿಸಿಲು ಬಿದ್ದರೆ, ಇನ್ನೂ ಕೆಲವೆಡೆ ಹಗುರ ಮಳೆಯಾಗಿದೆ. ಕೆಲವೆಡೆ ಮೋಡ ಮುಚ್ಚಿಕೊಂಡಿದೆ.

Sat, 18 May 202405:43 AM IST

ಮುಖಾಮುಖಿ ದಾಖಲೆ

2008ರಿಂದ ಒಟ್ಟು 32 ಬಾರಿ ಚೆನ್ನೈ ಹಾಗೂ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಅದರಲ್ಲಿ ಚೆನ್ನೈ ದಾಖಲೆಯ 21 ಬಾರಿ ಗೆದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಬಾರಿ ಮಾತ್ರ ಜಯಭೇರಿ ಬಾರಿಸಿದೆ. ಬೆಂಗಳೂರಿನಲ್ಲಿ ಈ ತಂಡಗಳು 11 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು, ರಾಯಲ್ ಚಾಲೆಂಜರ್ಸ್ 4 ಬಾರಿ ಗೆದ್ದರೆ, ಸಿಎಸ್‌ಕೆ 5 ಬಾರಿ ಆರ್‌ಸಿಬಿಯನ್ನು ಅದರದ್ದೇ ತವರಲ್ಲಿ ಮಣಿಸಿದೆ.

Sat, 18 May 202405:39 AM IST

ಗಗನಕ್ಕೇರಿದ ಟಿಕೆಟ್‌ ಬೆಲೆ, ಅಭಿಮಾನಿಗಳ ಆಕ್ರೋಶ

ಭಾರಿ ಕುತೂಹಲ ಮೂರಿಸಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದ ಟಿಕೆಟ್‌ ಬೆಲೆ ಗಗನಕ್ಕೇರಿದೆ. ಈಗಾಗಲೇ ದಿನಗಳ ಹಿಂದೆಯೇ ಆನ್‌​ಲೈನ್‌​ನಲ್ಲಿ ಟಿಕೆಟ್‌ಗಳು ಸೋಲ್ಡ್‌ಔಟ್‌ ಆಗಿವೆ. ಈ ನಡುವೆ ಪಂದ್ಯದ ಟಿಕೆಟ್‌​ಗಾಗಿ ಶುಕ್ರವಾರದಿಂದಲೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಆದರೆ, ಬೇಕಾದ ಟಿಕೆಟ್‌ ಸಿಗುತ್ತಿಲ್ಲ. ಬೆಲೆ ಎಷ್ಟೇ ಇದ್ದರೂ ಖರೀದಿಸಲು ಸಿದ್ಧರಿರುವ ಅಭಿಮಾನಿಗಳಿಗೆ ಟಿಕೆಟ್‌ ಸಿಗುತ್ತಿಲ್ಲ ಆನ್‌ಲೈನ್‌ನಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಬ್ಲ್ಯಾಕ್‌ ಮಾರ್ಕೆಟ್‌ ಮೂಲಕ ಭಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಫ್ಯಾನ್ಸ್‌ ಆರೋಪಿಸುತ್ತಿದ್ದಾರೆ.

Sat, 18 May 202404:13 AM IST

ಎಂ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ನಿಯಮ ಬದಲಾವಣೆ

ಬೆಂಗಳೂರು ಹಾಗೂ ಚೆನ್ನೈ ತಂಡಗಳ ನಡುವಿನ ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಮೈದಾನಕ್ಕೆ ಬರುವ ಅಭಿಮಾನಿಗಳಿಗೆ, ವಾಹನ ಪಾರ್ಕಿಂಗ್ ಕುರಿತು ಸಲಹೆ ನೀಡಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11ರ ತನಕ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೆಲ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರು ಸಾರ್ವಜನಿಕ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಕೋರಿದ್ದಾರೆ.

Sat, 18 May 202404:11 AM IST

ಮಳೆಯಿಂದ ಪಂದ್ಯ ರದ್ದಾದರೆ ಮುಂದೇನು?

ಒಂದು ವೇಳೆ ಮಳೆಯಿಂದಾಗಿ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಅಧಿಕೃತವಾಗಿ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಅಂಥಾ ಸಂದರ್ಭದಲ್ಲಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ. ಪಂದ್ಯವು ರದ್ದಾದರೆ ಆರ್‌ಸಿಬಿ ತಂಡವು ಪಂದ್ಯಾವಳಿಯಿಂದ ಹೊರಬೀಳುತ್ತದೆ. ಅತ್ತ ಸಿಎಸ್‌ಕೆ ನಾಲ್ಕನೇ ತಂಡವಾಗಿ ಪ್ಲೇಆಫ್‌ಗೆ ಲಗ್ಗೆ ಹಾಕುತ್ತದೆ. ಚೆನ್ನೈ ತಂಡದ ನೆಟ್‌ ರನ್‌ ರೇಟ್‌ ಹಾಗೂ ಅಂಕ ಹೆಚ್ಚಿರುವುದರಿಂದ ಅದಕ್ಕೆ ಅವಕಾಶ ಹೆಚ್ಚಿದೆ.

Sat, 18 May 202404:08 AM IST

ಹವಾಮಾನ ವರದಿ, ಮಳೆ ಸಾಧ್ಯತೆ

ಶನಿವಾರ ರಾತ್ರಿ 8ರಿಂದ 11 ಗಂಟೆಯವರೆಗೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಶೇ.75 ರಷ್ಟು ಇದೆ ಎಂದು ಹವಾಮಾನ ಇಲಾಖೆ ವರದಿ ಹೇಳಿವೆ. ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್‌ ಪಂದ್ಯ ಇದೇ ಸಮಯದಲ್ಲಿ ನಡೆಯುತ್ತಿದೆ. ಇದಲ್ಲದೇ, ಇಂದು ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಅಲ್ಲಲ್ಲಿ ಬಿರುಗಾಳಿ ಮತ್ತು ಗುಡುಗು ಸಹಿತ ಭಾರಿ ಮಳೆ ಸುರಿಯುವ ಲಕ್ಷಣಗಳಿವೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಭಾರಿ ಗಾಳಿ ಸಹಿತ (ಗಂಟೆಗೆ 40-50 ಕಿಮೀ ವೇಗ) ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

Sat, 18 May 202404:06 AM IST

ಸಿಎಸ್‌ಕೆ ಸಂಭಾವ್ಯ ತಂಡ

ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಡೇರಿಲ್ ಮಿಚೆಲ್, ಶಿವಂ ದುಬೆ, ಸಮೀರ್ ರಿಜ್ವಿ, ರವೀಂದ್ರ ಜಡೇಡಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್ಜಿತ್ ಸಿಂಗ್. (ಇಂಪ್ಯಾಕ್ಟ್ ಆಟಗಾರ: ಅಜಿಂಕ್ಯಾ ರಹಾನೆ)

Sat, 18 May 202404:05 AM IST

ಆರ್​ಸಿಬಿ ಸಂಭಾವ್ಯ ಆಡುವ ಬಳಗ

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್, ಯಶ್ ದಯಾಳ್ (ಇಂಪ್ಯಾಕ್ಟ್ ಪ್ಲೇಯರ್: ಮಹಿಪಾಲ್ ಲೊಮ್ರರ್)