ಐಪಿಎಲ್​​ನ ಅತ್ಯುತ್ತಮ ಕ್ಯಾಚ್ ಇದು; ಚಿರತೆಯಂತೆ ಹಾರಿ ಡೆವಾಲ್ಡ್ ಬ್ರೆವಿಸ್ ಕ್ಯಾಚ್ ಹಿಡಿದ ಕಮಿಂದು ಮೆಂಡೀಸ್, ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್​​ನ ಅತ್ಯುತ್ತಮ ಕ್ಯಾಚ್ ಇದು; ಚಿರತೆಯಂತೆ ಹಾರಿ ಡೆವಾಲ್ಡ್ ಬ್ರೆವಿಸ್ ಕ್ಯಾಚ್ ಹಿಡಿದ ಕಮಿಂದು ಮೆಂಡೀಸ್, ವಿಡಿಯೋ

ಐಪಿಎಲ್​​ನ ಅತ್ಯುತ್ತಮ ಕ್ಯಾಚ್ ಇದು; ಚಿರತೆಯಂತೆ ಹಾರಿ ಡೆವಾಲ್ಡ್ ಬ್ರೆವಿಸ್ ಕ್ಯಾಚ್ ಹಿಡಿದ ಕಮಿಂದು ಮೆಂಡೀಸ್, ವಿಡಿಯೋ

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮತ್ತೊಂದು ಐತಿಹಾಸಿಕ ಕ್ಯಾಚ್ ದಾಖಲೆಯಾಗಿದೆ. ಚಿರತೆಯಂತೆ ಹಾರಿ ಕ್ಯಾಚ್ ಪಡೆದ ಎಸ್​ಆರ್​​ಹೆಚ್ ಆಟಗಾರ ಕಮಿಂದು ಮೆಂಡೀಸ್, ಡೆವಾಲ್ಡ್ ಬ್ರೆವಿಸ್ ಅವರನ್ನು ಔಟ್ ಮಾಡಿದರು.

ಐಪಿಎಲ್​​ನ ಅತ್ಯುತ್ತಮ ಕ್ಯಾಚ್ ಇದು; ಚಿರತೆಯಂತೆ ಹಾರಿ ಡೆವಾಲ್ಡ್ ಬ್ರೆವಿಸ್ ಕ್ಯಾಚ್ ಹಿಡಿದ ಕಮಿಂದು ಮೆಂಡೀಸ್, ವಿಡಿಯೋ
ಐಪಿಎಲ್​​ನ ಅತ್ಯುತ್ತಮ ಕ್ಯಾಚ್ ಇದು; ಚಿರತೆಯಂತೆ ಹಾರಿ ಡೆವಾಲ್ಡ್ ಬ್ರೆವಿಸ್ ಕ್ಯಾಚ್ ಹಿಡಿದ ಕಮಿಂದು ಮೆಂಡೀಸ್, ವಿಡಿಯೋ

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಮತ್ತೊಂದು ಶ್ರೇಷ್ಠ ಕ್ಯಾಚ್ ದಾಖಲೆಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ - ಸನ್​ರೈಸರ್ಸ್ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಈ ಅತ್ಯದ್ಭುತ ಕ್ಯಾಚ್ ದಾಖಲಾಗಿದೆ. ಎಸ್​​ಆರ್​​ಹೆಚ್ ಬ್ಯಾಟರ್​ ಕಮಿಂದು ಮೆಂಡೀಸ್ ಅವರು ಸಿಎಸ್​ಕೆ ತಂಡದ ಡೆವಾಲ್ಡ್ ಬ್ರೆವಿಸ್ ಅವರ ಕ್ಯಾಚ್ ಅನ್ನು ಚಿರತೆಯಂತೆ ಹಾರಿ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಕ್ಯಾಚ್ ವಿಡಿಯೋ ವೈರಲ್ ಆಗಿದೆ.

ಈ ಒಂದು ಕ್ಯಾಚ್​ ಸಿಎಸ್​ಕೆ ತಂಡದ ವೇಗದ ಸ್ಕೋರ್​​ಗೆ ಅಡ್ಡಗೋಡೆಯಾಯಿತು. ಡೆವಾಲ್ಡ್ ಬ್ರೇವಿಸ್ ಆಗ ತಾನೇ ಬಿರುಸಿನ ಬ್ಯಾಟಿಂಗ್​ಗೆ ಕೈ ಹಾಕಿದ್ದರು. ತಂಡದ ಮೊತ್ತ 200ರ ಗಡಿ ದಾಟಿಸುವ ಭರವಸೆಯೂ ಮೂಡಿಸಿದ್ದ. ಆದರೆ, ಬ್ರೆವಿಸ್ ಔಟಾಗುತ್ತಿದ್ದಂತೆ 160ರ ಗಡಿ ದಾಟಲೂ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಈ ಅದ್ಭುತ ಕ್ಯಾಚ್​. ಡೆವಾಲ್ಡ್​ 25 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಿತ 42 ರನ್ ಗಳಿಸಿ ಔಟಾದರು.

ಎಸ್​​ಆರ್​​ಹೆಚ್​ ಬೌಲರ್ ಹರ್ಷಲ್ ಪಟೇಲ್ ಸಿಎಸ್​ಕೆ ಇನ್ನಿಂಗ್ಸ್​​ನ 13ನೇ ಓವರ್ ಎಸೆಯುತ್ತಿದ್ದರು. ಓವರ್​ನ ಕೊನೆಯ ಚೆಂಡನ್ನು ಲಾಂಗ್ ಆಫ್ ಕಡೆಗೆ ಬ್ರೆವಿಸ್ ಸಿಕ್ಸರ್​​ ಬಾರಿಸಿದರು. ಸಿಕ್ಸರ್​ ಬಾರಿಸುವ ಯತ್ನಿಸಿದರು. ಚೆಂಡು ಫ್ಲ್ಯಾಟ್ ಆಗಿ ಬೌಂಡರಿಯ ಕಡೆಗೆ ಸಾಗಿತು. ಇನ್ನೇನು ಬೌಂಡರಿ ಗೆರೆ ಮುಟ್ಟಿತು ಎನ್ನುವಷ್ಟರಲ್ಲಿ ದೂರದಲ್ಲಿದ್ದ ಕಮಿಂಡು ಚೆಂಡಿನ ಕಡೆಗೆ ಓಡಿ ಚಿರತೆಯಂತೆ ಹಾರಿದರು.

ಅವರು ತನ್ನ ಎಡಭಾಗದಲ್ಲಿ ಗಾಳಿಯಲ್ಲಿ ಹಾರುತ್ತಿರುವ ಕ್ಯಾಚ್ ಅನ್ನು ಗಾಳಿಯಲ್ಲಿ ಹಾರಿ ಹಿಡಿದಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತು. ಕ್ಯಾಚ್ ಹಿಡಿದ ನಂತರ, ಮೆಂಡಿಸ್ ಅದನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಈ ಅದ್ಭುತ ಕ್ಯಾಚ್ ಹಿಡಿದ ಬಳಿಕ ವೀಕ್ಷಕವಿವರಣೆಗಾರರು ಮೆಂಡಿಸ್ ಅವರನ್ನು ಹಾಡಿಹೊಗಳಿದರು. ಇದು ಪಂದ್ಯ ಬದಲಿಸುವ ಕ್ಯಾಚ್ ಎಂದು ಗುಣಗಾನ ಮಾಡುತ್ತಿದ್ದರು. ಮತ್ತೊಂದೆಡೆ, ಚೆಪಾಕ್​​ನಲ್ಲಿ ಕುಳಿತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್​ ಮೌನವಾಗಿಬಿಟ್ಟರು.

ಎಸ್​​ಆರ್​​ಹೆಚ್ ಬೌಲಿಂಗ್​ಗೆ ಸಿಎಸ್​ಕೆ ಛಿದ್ರ

ಬ್ರೆವಿಸ್ ಔಟಾದ ನಂತರ ಚೆನ್ನೈ ಸೂಪರ್ ಕಿಂಗ್ಸ್​ ಬ್ಯಾಟಿಂಗ್ ಬಹುತೇಕ ಛಿದ್ರವಾಯಿತು. ಉಳಿದ ಬ್ಯಾಟ್ಸ್​ಮನ್​​ಗಳು ನಿರೀಕ್ಷೆಯಂತೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಮೊದಲ ಓವರ್​​ನ ಮೊದಲ ಎಸೆತದಲ್ಲೇ ಶೇಕ್ ರಶೀದ್ ನಿರ್ಗಮಿಸಿದರು. ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ನಡೆಸುವ ಮೂಲಕ ಸಿಎಸ್​ಕೆಗೆ ಶಾಕ್ ಕೊಟ್ಟರು. ಬಳಿಕ ಆಯುಷ್ ಮಾತ್ರೆ ಮತ್ತು ಸ್ಯಾಮ್ ಕರಣ್ ತಂಡಕ್ಕೆ ಚೇತರಿಕೆ ನೀಡುವ ಯತ್ನಕ್ಕೆ ಕೈ ಹಾಕಿದರು.

ಆದರೆ ಕರಣ್ 10 ಎಸೆತಗಳಲ್ಲಿ 9 ರನ್ ಗಳಿಸಿ ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸಿದರು. 30 ರನ್ ಸಿಡಿಸಿದ್ದ ಮಾತ್ರೆಗೆ ಕಮಿನ್ಸ್ ಗೇಟ್​ಪಾಸ್ ಕೊಟ್ಟರು. ರವೀಂದ್ರ ಜಡೇಜಾ 21, ಶಿವಂ ದುಬೆ 12, ದೀಪಕ್ ಹೂಡಾ 22, ಎಂಎಸ್ ಧೋನಿ 6 ರನ್ ಗಳಿಸಿ ನಿರಾಸೆ ಮೂಡಿಸಿದರು. ಇನ್ನು ಎಸ್​ಆರ್​​ಹೆಚ್ ಪರ ಹರ್ಷಲ್ 28 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರು. ಜಯದೇವ್ ಉನಾದ್ಕತ್ 2 ಮತ್ತು ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು.

ಗುರಿ ಬೆನ್ನಟ್ಟುವಾ ಇನ್ನಿಂಗ್ಸ್​​ನ 2ನೇ ಎಸೆತದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡ ಹೈದರಾಬಾದ್​​ಗೆ ಇಶಾನ್ ಕಿಶನ್ ಆಸರೆಯಾದರು. ಟ್ರಾವಿಸ್ ಹೆಡ್ ಕೂಡ ರನ್ ಗಳಿಸಲು ಹರಸಾಹಸಪಟ್ಟರು. 19 ರನ್​ಗೆ ಸುಸ್ತಾದರು. ಹೆನ್ರಿಚ್ ಕ್ಲಾಸೆನ್ 7 ರನ್​​ಗೆ ನಿರ್ಗಮಿಸಿದರು. ಈ ವೇಳೆ ಮಿಂಚಿದ ಇಶಾನ್ 44 ರನ್​ಗಳ ಕೊಡುಗೆ ನೀಡಿದರು. ಅನಿಕೇತ್ ವರ್ಮಾ 19 ರನ್​ಗಳ ಕಾಣಿಕೆ ಒದಗಿಸಿಕೊಟ್ಟರು. ಪರಿಣಾಮ ಸಿಎಸ್​ಕೆ ಮೇಲೆ ಹಿಡಿತ ಸಾಧಿಸಲು ನೆರವಾಯಿತು. ಕೊನೆಯಲ್ಲಿ ಕಮಿಂದು ಮೆಂಡೀಸ್ 32, ನಿತೀಶ್ ಕುಮಾರ್​ ರೆಡ್ಡಿ 19 ರನ್ ಗಳಿಸಿ ಅಜೇಯರಾದರು. ಹೈದರಾಬಾದ್ 18.4 ಎಸೆತಗಳಲ್ಲೇ ಗೆಲುವಿನ ನಗೆ ಬೀರಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.