Daren Sammy: ಐಪಿಎಲ್ ಎಷ್ಟು ಶ್ರೇಷ್ಠವಾದರೇನು? ಭಾರತ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ; ವಿಂಡೀಸ್ ಡರೇನ್ ಸ್ಯಾಮಿ ಟೀಕೆ
Daren Sammy: ಐಪಿಎಲ್ ಎಷ್ಟು ಶ್ರೇಷ್ಠವಾದ್ದರೇನು ಲಾಭ? ಆದರೆ, ಧೋನಿ ಬಳಿಕ ಒಂದೇ ಒಂದು ಅಂತಾರಾಷ್ಟ್ರೀಯ ಟ್ರೋಫಿ ಗೆಲ್ಲೋಕೆ ಸಾಧ್ಯವಾಗುತ್ತಿಲ್ಲ. ಐಪಿಎಲ್ನಿಂದ ವಾಣಿಜ್ಯವಾಗಿ ಬೆಳೆದಿದ್ದೇ ಹೊರತು ಟೀಮ್ ಇಂಡಿಯಾ ಹೆಚ್ಚಿನ ಸಾಧನೆ ಏನು ಮಾಡಿಲ್ಲ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡರೇನ್ ಸ್ಯಾಮಿ ಅಣಕಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬಿಸಿಸಿಐ (BCCI) ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ. ಲೀಗ್ ಜರುಗುವುದು 2 ತಿಂಗಳೇ ಆದರೂ ವಹಿವಾಟು ನಡೆಸುವುದು ಸಾವಿರಾರು ಕೋಟಿ ರೂಪಾಯಿ. ಬಿಸಿಸಿಐ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಳ್ಳಲು ಐಪಿಎಲ್ ಕೂಡ ಒಂದು ಪ್ರಮುಖ ಕಾರಣ. ಬಿಸಿಸಿಐ ಮಾತ್ರವಲ್ಲ, ಆಟಗಾರರು ಸಹ ಮಿಲಿಯನ್ ಡಾಲರ್ ಟೂರ್ನಿಯಿಂದ ವಿಶ್ವ ವಿಖ್ಯಾತ ಪಡೆದಿದ್ದಾರೆ. ಆದರೀಗ ಐಪಿಎಲ್ ಅನ್ನು ವೆಸ್ಟ್ ಇಂಡೀಸ್ ಕ್ರಿಕೆಟಿಗ, ಸದ್ಯ ತಂಡದ ಕೋಚ್ ಟೀಕಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಟೀಕಿಸಿದ ಡರೇನ್ ಸ್ಯಾಮಿ
ಭಾರತಕ್ಕೆ ಐಪಿಎಲ್ ಎಂಬುದು ಬಂಗಾರದ ಗಣಿ. ಬಿಸಿಸಿಐಗೆ ಸಾವಿರಾರು ಕೋಟಿ ಆದಾಯ ಬರುತ್ತಿದೆ. ಈ ಲೀಗ್ ಮೂಲಕವೇ ಯುವ ಆಟಗಾರರ ಬೆಳಕಿಗೆ ಬಂದಿದ್ದಾರೆ. ಆದರೆ, ಐಪಿಎಲ್ ಎಷ್ಟು ಶ್ರೇಷ್ಠವಾದ್ದರೇನು ಲಾಭ? ಆದರೆ, ಧೋನಿ ಬಳಿಕ ಒಂದೇ ಒಂದು ಅಂತಾರಾಷ್ಟ್ರೀಯ ಟ್ರೋಫಿ ಗೆಲ್ಲೋಕೆ ಸಾಧ್ಯವಾಗುತ್ತಿಲ್ಲ. ಐಪಿಎಲ್ನಿಂದ ವಾಣಿಜ್ಯವಾಗಿ ಬೆಳೆದಿದ್ದೇ ಹೊರತು ಟೀಮ್ ಇಂಡಿಯಾ ಹೆಚ್ಚಿನ ಸಾಧನೆ ಏನು ಮಾಡಿಲ್ಲ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡರೇನ್ ಸ್ಯಾಮಿ ಅಣಕಿಸಿದ್ದಾರೆ.
ಯುವ ಆಟಗಾರರನ್ನು ಹೊಗಳಿದ್ರು!
ಟ್ರೋಫಿ ಗೆದ್ದಿಲ್ಲ ಎಂದು ಹೇಳಿದ ಸ್ಯಾಮಿ, ಯುವ ಆಟಗಾರರಾದ ಜೈಸ್ವಾಲ್, ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್ ಅವರ ಪ್ರತಿಭೆಯನ್ನು ಹಾಡಿ ಹೊಗಳಿದ್ದಾರೆ. ಯುವ ಆಟಗಾರರು, ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದರು. ಹಾರ್ದಿಕ್ ಪಾಂಡ್ಯ ಮುಂದೆ ಇನ್ನೂ ಸುದೀರ್ಘ ವೃತ್ತಿಜೀವನವಿದೆ. ಭಾರತೀಯ ಕ್ರಿಕೆಟ್ ಅತ್ಯುತ್ತಮ ಪ್ರಥಮ ದರ್ಜೆಯ ರಚನೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಜೈಸ್ವಾಲ್ ಆಟಕ್ಕೆ ಪ್ರಶಂಸೆ
ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಹೊಗಳಿದ ಸ್ಯಾಮಿ, ಆರಂಭಿಕ ಆಟಗಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಅದ್ಭಿತ ಪ್ರದರ್ಶನವೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಒಂದೊಳ್ಳೆ ಹೆಗ್ಗುರುತು ಮೂಡಿಸುವಂತೆ ಮಾಡಿದೆ. ಜೈಸ್ವಾಲ್ ಡೊಮಿನಿಕಾದಲ್ಲಿ 171 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟುವ ಮೂಲಕ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 141 ರನ್‌ಗಳ ಗೆಲುವು ಸಾಧಿಸಲು ನೆರವಾದರು ಎಂದು ಶ್ಲಾಘಿಸಿದ್ದಾರೆ.
ಯಶಸ್ವಿ ಜೈಸ್ವಾಲ್ 9 ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯಗಳಲ್ಲಿ 9 ಸೆಂಚುರಿಗಳಿಂದ 1800 ರನ್ ಗಳಿಸಿ ಭಾರತೀಯ ತಂಡಕ್ಕೆ ಆಯ್ಕೆಯಾದರು. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯ ನಿರೂಪಿಸಿದರು. ಸ್ಥಳೀಯ ಆಟಗಾರರು ಅಂತಾರಾಷ್ಟ್ರೀಯ ಹಂತದಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವುದು ಖುಷಿಯ ಸಂಗತಿ ಎಂದು ಹೇಳಿದ್ದಾರೆ. ಮೊದಲು ಟೀಕಿಸಿ ನಂತರ ಆಟಗಾರರನ್ನು ಹಾಡಿಹೊಗಳಿದ ಡರೇನ್ ಸ್ಯಾಮಿ, ಕೊನೆಗೆ ವ್ಯಂಗ್ಯವಾಡಿದ್ದಾರೆ.
ಹೊಗಳಿ ವ್ಯಂಗ್ಯವಾಡಿದ ಮಾಜಿ ನಾಯಕ
ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್ ಹೀಗೆ ಹಲವರು ತಂಡಕ್ಕೆ ಬಂದಿದ್ದಾರೆ. ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಯಾರಿಂದ ಭಾರತ ಅಂತಾರಾಷ್ಟ್ರೀಯ ಟ್ರೋಫಿ ಗೆದ್ದಿದ್ದೆ ಹೇಳಿ? ಸ್ಯಾಮಿ ಪ್ರಶ್ನಿಸಿದ್ದಾರೆ. ಟೀಮ್ ಇಂಡಿಯಾ ಕೊನೆಯದಾಗಿ ಐಸಿಸಿ ಟ್ರೋಫಿ ಗೆದ್ದದ್ದು 2013ರಲ್ಲಿ. ಆ ಬಳಿಕ 2014ರ ಟಿ20 ವಿಶ್ವಕಪ್ ಫೈನಲ್, 2015ರ ಏಕದಿನ ವಿಶ್ವಕಪ್ ಸೆಮಿಫೈನಲ್, 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಮುಗ್ಗರಿಸಿತು.
ಅಷ್ಟೇ ಅಲ್ಲದೆ, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2021 ಮತ್ತು 2022ರ ಟಿ20 ವಿಶ್ವಕಪ್, 2021 ಮತ್ತು 2023ರ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಳಲ್ಲೂ ಭಾರತ ಹೀನಾಯ ಸೋಲು ಕಂಡಿತು. ಇದೀಗ ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ಗೆ ಭಾರತ ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ನಿಮ್ಮ ತಂಡವು ಏಕದಿನ ವಿಶ್ವಕಪ್ಗೂ ಅರ್ಹತೆ ಪಡೆಯೋಕೆ ಸಾಧ್ಯವಾಗಿಲ್ಲ. ನೀವು ನಮಗೆ ಬುದ್ದಿ ಹೇಳುತ್ತೀರಾ ಎಂದು ಡರೇನ್ ಸ್ಯಾಮಿ ವಿರುದ್ಧ ಭಾರತದ ಕ್ರಿಕೆಟ್ ಪ್ರೇಮಿಗಳು ತಿರುಗಿಬಿದ್ದಿದ್ದಾರೆ
ಸಂಬಂಧಿತ ಲೇಖನ