ಮತ್ತೆ ಬಂತು ಧೋನಿ ರಿವ್ಯೂ ಸಿಸ್ಟಮ್; ಬೌಲರ್ ಮೇಲೆ ನಂಬಿಕೆ ಇಡದೆ ಮಾಹಿ ನಿರ್ಧಾರ ಪಡೆದ ಋತುರಾಜ್, ವಿಡಿಯೋ
Dhoni Review System: ಸಿಎಸ್ಕೆ ತಂಡದಲ್ಲಿ ಎಂಎಸ್ ಧೋನಿ ಹೆಸರಿನ ಪಕ್ಕದಲ್ಲಿ 'ನಾಯಕ' ಇಲ್ಲದಿರಬಹುದು, ಆದರೆ ಅವರ ಪ್ರಭಾವವು ಎಂದಿನಂತೆ ಪ್ರಬಲವಾಗಿದೆ ಎಂಬುದಕ್ಕೆ ಉತ್ತಮ ಸಾಕ್ಷಿ ಇಲ್ಲಿದೆ.

ವಯಸ್ಸು 43 ಆದರೂ ಸಿಎಸ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಲ್ಲಿನ ಕ್ರಿಕೆಟ್ ಚಾಣಾಕ್ಷತೆಗೆ ಎಂತಹವರೂ ಬೆರಗಾಗುತ್ತಾರೆ ಎನ್ನುವುದು ಮತ್ತೆ ಸಾಬೀತಾಗಿದೆ. ಧೋನಿ ರಿವ್ಯೂ ಪಡೆದರೆಂದರೆ ಬ್ಯಾಟರ್ ಮೈದಾನ ತೊರೆಯುವುದೇ ಉತ್ತಮ ಎಂದರ್ಥ. ಸಿಎಸ್ಕೆ ತಂಡದಲ್ಲಿ ಎಂಎಸ್ ಧೋನಿ ಹೆಸರಿನ ಪಕ್ಕದಲ್ಲಿ 'ನಾಯಕ' ಇಲ್ಲದಿರಬಹುದು, ಆದರೆ ಅವರ ಪ್ರಭಾವವು ಎಂದಿನಂತೆ ಪ್ರಬಲವಾಗಿದೆ. ಸಿಎಸ್ಕೆ ತಂಡದ ನಾಯಕತ್ವ ಯಾರೇ ವಹಿಸಿಕೊಳ್ಳಬಹುದು, ಆದರೆ ರಿವ್ಯೂಗಳಿಗೆ ಸ್ಟಂಪ್ಗಳ ಹಿಂದಿರುವ ಧೋನಿ ನಿರ್ಧಾರ ಪ್ರಮುಖ ಪಾತ್ರವಹಿಸಲಿದೆ ಎನ್ನುವುದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಾಬೀತಾಗಿದೆ.
ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಮುಂಬೈ, ಸಿಎಸ್ಕೆ ಬೌಲರ್ಗಳ ದಾಳಿಗೆ ತತ್ತರಿಸಿತು. ಪರಿಣಾಮ ಎಂಐ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಈ ಗುರಿ ಹಿಂಬಾಲಿಸಿದ ಸಿಎಸ್ಕೆ 19.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಪೇರಿಸಿತು. ಕಳೆದ 13 ಆವೃತ್ತಿಗಳಿಂದ ಮುಂಬೈ ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ತವರಿನಲ್ಲಿ ಸಿಎಸ್ಕೆ ಪ್ರಾಬಲ್ಯ ಸಾಧಿಸುವ ಮೂಲಕ ಗೆಲುವಿನ ಅಭಿಯಾನ ಆರಂಭಿಸಿತು. ಆದರೆ ಪಂದ್ಯದಲ್ಲಿ ಒಂದು ಡಿಆರ್ಎಸ್ ಎಲ್ಲರ ಗಮನ ಸೆಳೆಯಿತು.
ಧೋನಿ ರಿವಿವ್ಯೂ ಸಿಸ್ಟಮ್
18ನೇ ಓವರ್ನಲ್ಲಿ ನಾಥನ್ ಎಲ್ಲಿಸ್ ಬೌಲಿಂಗ್ ಮಾಡಿದರು. ಆಗ ಮಿಚೆಲ್ ಸ್ಯಾಂಟ್ನರ್ ‘ ಬ್ಯಾಟಿಂಗ್ ಮಾಡುತ್ತಿದ್ದರು. ಈ ಓವರ್ನ ಕೊನೆಯ ಎಸೆತದಲ್ಲಿ ಚೆಂಡು ಸ್ಯಾಂಟ್ನರ್ ಪ್ಯಾಡ್ಗಳಿಗೆ ತಾಗಿತು. ಆಗ ಬೌಲರ್ ಅಂಪೈರ್ ಬಳಿ ಎಲ್ಬಿಡಬ್ಲ್ಯುಗಾಗಿ ಮನವಿ ಮಾಡಿದರು. ಆದರೆ ಅಂಪೈರ್ ನಾಟೌಟ್ ತೀರ್ಪು ಕೊಟ್ಟರು. ಇದರ ಬೆನ್ನಲ್ಲೇ ಎಲ್ಲಿಸ್ ಅವರು ನಾಯಕ ಋತುರಾಜ್ ಮತ್ತು ಧೋನಿ ಕಡೆ ನೋಡಿದರು. ಆದರೆ, ಋತುರಾಜ್ ಅವರತು ಮಾಹಿ ಅವರತ್ತ ನೋಡಿದರು. ಆಗ ಧೋನಿ ನಗುತ್ತಾ ರಿವಿವ್ಯೂ ಪಡೆಯಲು ಕಣ್ಣಲ್ಲೇ ಸೂಚಿಸಿದರು. ಅಂತಿಮವಾಗಿ ಅದು ಔಟೆಂಟ್ ಎಂದು ಘೋಷಿಸಲಾಯಿತು. ಈ ವೇಳೆ ಋತುರಾಜ್ ಬೌಲರ್ ಮೇಲೆ ನಂಬಿಕೆ ಇಟ್ಟಿರಲಿಲ್ಲ.
ಸುದೀರ್ಘ ಚರ್ಚೆಯ ನಂತರ ರಿವಿವ್ಯೂ ತೆಗೆದುಕೊಳ್ಳಲು ಕೇವಲ ಒಂದು ಸೆಕೆಂಡ್ ಮಾತ್ರ ಬಾಕಿ ಇತ್ತು. ಆದರೆ ಧೋನಿ ಒಪ್ಪಿಗೆ ಸಿಗುವವರೆಗೂ ಕಾಯುತ್ತಿದ್ದ ಋತುರಾಜ್ ಕೊನೆಯ ಕ್ಷಣದಲ್ಲಿ ರಿವಿವ್ಯೂ ಪಡೆದರು. ಧೋನಿ ಸರಿಯಾಗಿ ಊಹಿಸಿದ್ದನ್ನೇ ದೊಡ್ಡ ಪರದೆಯಲ್ಲೂ ಪ್ರದರ್ಶಿಸಲಾಯಿತು. ಚೆಂಡು ಮಧ್ಯದ ಸ್ಟಂಪ್ನ ಮೇಲ್ಭಾಗಕ್ಕೆ ಅಪ್ಪಳಿಸಿತ್ತು. ಇದರೊಂದಿಗೆ ಸಂಕಷ್ಟಕ್ಕೆ ಸಿಲುಕಿದ್ದ ಎಂಐ, ಮತ್ತೊಂದು ವಿಕೆಟ್ ಕಳೆದುಕೊಳ್ಳುವ ಮೂಲಕ ಮತ್ತೆ ಸಂಕಷ್ಟಕ್ಕೆ ಸಿಲುಕಿತು. 'ಔಟ್' ಎಂದು ನಿರ್ಧಾರ ಪ್ರಕಟವಾಗುತ್ತಿದ್ದಂತೆ ಧೋನಿ ಜೊತೆಗೆ ಎಲ್ಲಿಸ್ ಸಂಭ್ರಮಾಚರಣೆ ಮಾಡಿದರು.
ಸಿಎಸ್ಕೆ ವಿರುದ್ಧ ನೆಟ್ಟಿಗರು ಗಂಭೀರ ಆರೋಪ
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ಗಳಿಂದ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಚೆಂಡು ವಿರೂಪಗೊಳಿಸಿ ಪಂದ್ಯವನ್ನು ಗೆದ್ದುಕೊಂಡಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಿಸಿ ಅನುಮಾನ ಹುಟ್ಟಿಸುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮತ್ತೆ ಫಿಕ್ಸಿಂಗ್ ಮಾಡಿದೆ ಎಂದು ಟೀಕೆಗೆ ಗುರಿಯಾಗಿದೆ. ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
