ಕನ್ನಡ ಸುದ್ದಿ  /  Cricket  /  Dhruv Jurel Becomes 1st Indian Wicket Keeper In 22 Years To Win Man Of The Match Award After Ajay Ratra Ind Vs Eng Jra

ಧ್ರುವ್ ಜುರೆಲ್ ಪಂದ್ಯಶ್ರೇಷ್ಠ ಪ್ರದರ್ಶನ; 22 ವರ್ಷಗಳಲ್ಲೇ ಈ ಸಾಧನೆ ಮಾಡಿದ ಭಾರತದ ಮೊದಲ ವಿಕೆಟ್ ಕೀಪರ್

‌Dhruv Jurel: ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತದ ವಿಕೆಟ್‌ ಕೀಪರ್ ಧ್ರುವ್ ಜುರೆಲ್‌‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕಳೆದ 22 ವರ್ಷಗಳಲ್ಲಿ ತಾವಾಡಿದ ಚೊಚ್ಚಲ ಟೆಸ್ಟ್ ಸರಣಿಯ ಪಂದ್ಯಲ್ಲಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ‌ ಗೆದ್ದ ಭಾರತದ ಮೊದಲ ವಿಕೆಟ್‌ ಕೀಪರ್ ಎಂಬ ದಾಖಲೆಯನ್ನು ಜುರೆಲ್‌ ನಿರ್ಮಿಸಿದ್ದಾರೆ.

ಧ್ರುವ್ ಜುರೆಲ್ ಪಂದ್ಯಶ್ರೇಷ್ಠ ಪ್ರದರ್ಶನ
ಧ್ರುವ್ ಜುರೆಲ್ ಪಂದ್ಯಶ್ರೇಷ್ಠ ಪ್ರದರ್ಶನ (AFP)

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ (India vs England) ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗಳಿಸಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ಯುವ ಬ್ಯಾಟರ್‌ ಹಾಗೂ ವಿಕೆಟ್‌ ಕೀಪರ್ ಧ್ರುವ್ ಜುರೆಲ್ (Dhruv Jurel).‌ ಈ ಸರಣಿಯ ಮೂಲಕ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ ಅವರು, ಇದೇ ಸರಣಿಯ ನಾಲ್ಕನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸದ್ಯ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಭಾರತವು 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಸರಣಿ ಗೆದ್ದಿದೆ. ರಾಂಚಿಯ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಜಯ ಸಾಧಿಸಿತು. ಈ ಪಂದ್ಯದ ಮೂಲಕ ಧ್ರುವ್ ಜುರೆಲ್ ಭಾರತೀಯ ಟೆಸ್ಟ್ ಕ್ರಿಕೆಟ್‌ನ ಭವಿಷ್ಯದ ಆಟಗಾರ ಎಂಬುದನ್ನು ಸಾಬೀತುಪಡಿಸಿದರು.

ಸಂಕಷ್ಟದಲ್ಲಿ ದಿಟ್ಟ ಹೋರಾಟ

ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು ಒಂದು ಹಂತದಲ್ಲಿ 177 ರನ್‌ ವೇಳೆಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಅಮೋಘ 90 ರನ್‌ ಗಳಿಸಿದ ಜುರೆಲ್‌, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆ ಮೂಲಕ ಭಾರತದ ಹಿನ್ನಡೆಯು ಕೇವಲ 46 ರನ್‌ಗಳಿಗೆ ಇಳಿಯಿತು. ಆ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್‌ ಕೀಪರ್ ಅಜೇಯ ಆಟವಾಡಿದರು. 192 ರನ್‌ಗಳ ಗುರಿ ಬೆನ್ನಟ್ಟಿದ ತಂಡವು ಒಂದು ಹಂತದಲ್ಲಿ 120 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡಿತು. ಈ ವೇಳೆ ಶುಭ್ಮನ್ ಗಿಲ್ ಜೊತೆಗೂಡಿ ಅಜೇಯ 72 ರನ್‌ಗಳ ಜೊತೆಯಾಟವಾಡಿದರು. ಅಲ್ಲದೆ ಅಜೇಯ 39 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

22 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಮೊದಲ ವಿಕೆಟ್‌ ಕೀಪರ್

ನಾಲ್ಕನೇ ಟೆಸ್ಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಜುರೆಲ್‌, ಹೊಸ ದಾಖಲೆ ನಿರ್ಮಿಸಿದರು. ಕಳೆದ 22 ವರ್ಷಗಳಲ್ಲಿ ತಾವಾಡಿದ ಚೊಚ್ಚಲ ಟೆಸ್ಟ್ ಸರಣಿಯ ಪಂದ್ಯವೊಂದರಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ‌ ಗೆದ್ದ ಮೊದಲ ಭಾರತೀಯ ವಿಕೆಟ್‌ ಕೀಪರ್ ಆಗಿ ಜುರೆಲ್‌ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ | ಗಿಲ್‌-ಜುರೆಲ್‌ ಜವಾಬ್ದಾರಿಯುತ ಆಟ, ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನಲ್ಲೂ ಭಾರತಕ್ಕೆ ರೋಚಕ ಜಯ; ಸರಣಿ ವಶ

ಭಾರತದ ಪರ ಕೊನೆಯದಾಗಿ ಅಜಯ್ ರಾತ್ರಾ ಈ ಸಾಧನೆ ಮಾಡಿದ್ದರು. ಆಂಟಿಗುವಾದಲ್ಲಿ 2002ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಅವರು 115 ರನ್ ಗಳಿಸಿದ್ದರು. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಅಜಯ್ ರಾತ್ರಾ ಈ ಸಾಧನೆ ಮಾಡಿದ ಕೊನೆಯ ವಿಕೆಟ ಕೀಪರ್‌ ಆಗಿದ್ದಾರೆ.

ಈವರೆಗೆ ಒಟ್ಟಾರೆಯಾಗಿ ಅಜಯ್ ರಾತ್ರಾ, ಎಂಎಸ್ ಧೋನಿ, ರಿಷಬ್ ಪಂತ್, ವೃದ್ಧಿಮಾನ್ ಸಹಾ ಮತ್ತು ನಯನ್ ಮೊಂಗಿಯಾ ಈ ಸಾಧನೆ ಮಾಡಿದ್ದಾರೆ. ಇದೀಗ ಧ್ರುವ್‌ ಜುರೆಲ್ ಚೊಚ್ಚಲ ಟೆಸ್ಟ್ ಸರಣಿಯ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆರನೇ ಭಾರತೀಯ ವಿಕೆಟ್ ಕೀಪರ್ ಆಗಿದ್ದಾರೆ. ಧೋನಿ ಮತ್ತು ಪಂತ್ ತಮ್ಮ ವೃತ್ತಿಜೀವನದಲ್ಲಿ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರೆ, ಇತರ ನಾಲ್ವರು ಆಟಗಾರರು ಒಮ್ಮೆ ಮಾತ್ರ ಗೆದ್ದಿದ್ದಾರೆ.

ಇದನ್ನೂ ಓದಿ | WPL 2024: ಯುಪಿ ವಾರಿಯರ್ಸ್‌ ವಿರುದ್ಧ ಟಾಸ್‌ ಗೆದ್ದ ಡೆಲ್ಲಿ ಬೌಲಿಂಗ್‌ ಆಯ್ಕೆ; ಅಲಿಸ್ಸಾ ಹೀಲಿ ಬಳಗದಲ್ಲಿ ಒಂದು ಬದಲಾವಣೆ

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 353 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ 307 ರನ್ ಕಲೆ ಹಾಕಿತು. ಇದರೊಂದಿಗೆ 46 ರನ್‌​ಗಳ ಹಿನ್ನಡೆ ಅನುಭವಿಸಿತು. ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಕೆಂಡ್‌ 145 ರನ್‌​​ಗಳಿಗೆ ಆಲೌಟ್ ಆಯಿತು. 192 ರನ್‌​ಗಳ ಗುರಿ ಪಡೆದ ಭಾರತ 5 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು.