ಕನ್ನಡ ಸುದ್ದಿ  /  Cricket  /  Dhruv Jurel Kuldeep Hold Fort After Quick Dismissals India 219/7 At Day 2 Stumps Yashasvi Jaiswal 73 Ind Vs Eng 4th Prs

ಯಶಸ್ವಿ ಜೈಸ್ವಾಲ್ ಅರ್ಧಶತಕ, ಸಂಕಷ್ಟದಲ್ಲಿ ಭಾರತ; ಇನ್ನೂ 134 ರನ್​ಗಳ ಹಿನ್ನಡೆಯಲ್ಲಿ ರೋಹಿತ್ ಪಡೆ

India vs England 4th Test : ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಎರಡನೇ ದಿನದಾಟದ ಅಂತ್ಯಕ್ಕೆ 7ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿದೆ.

ಯಶಸ್ವಿ ಜೈಸ್ವಾಲ್ ಅರ್ಧಶತಕ, ಸಂಕಷ್ಟದಲ್ಲಿ ಭಾರತ; ಇನ್ನೂ 134 ರನ್​ಗಳ ಹಿನ್ನಡೆಯಲ್ಲಿ ರೋಹಿತ್ ಪಡೆ
ಯಶಸ್ವಿ ಜೈಸ್ವಾಲ್ ಅರ್ಧಶತಕ, ಸಂಕಷ್ಟದಲ್ಲಿ ಭಾರತ; ಇನ್ನೂ 134 ರನ್​ಗಳ ಹಿನ್ನಡೆಯಲ್ಲಿ ರೋಹಿತ್ ಪಡೆ

ರಾಂಚಿನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಹಿನ್ನಡೆ ಅನುಭವಿಸುವ ಭೀತಿಗೆ ಸಿಲುಕಿದೆ. ಯಶಸ್ವಿ ಜೈಸ್ವಾಲ್ ಮತ್ತೆ ಅದ್ಭುತ ಪ್ರದರ್ಶನ ನೀಡಿದರೆ, ಉಳಿದ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದರು. ಇಂಗ್ಲೆಂಡ್​ನ 353 ರನ್​ಗಳಿಗೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತ 2ನೇ ದಿನದಾಟಕ್ಕೆ 73 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 219 ರನ್ ಗಳಿಸಿದೆ. ಸದ್ಯ ಭಾರತ ಇನ್ನೂ 134 ರನ್​ಗಳ ಹಿನ್ನಡೆ ಅನುಭವಿಸಿದೆ.

ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್ ಕಲೆ ಹಾಕಿದ್ದ 7 ವಿಕೆಟ್ ನಷ್ಟಕ್ಕೆ 302 ರನ್​ಗಳಿಂದ ಎರಡನೇ ದಿನದಾಟ ಆರಂಭಿಸಿತು. ಆದರೆ 51 ಮಾತ್ರ ಹೆಚ್ಚುವರಿ ಸೇರಿಸಲು ಸಾಧ್ಯವಾಯಿತು. ಜೋ ರೂಟ್​ ಅಜೇಯ 122 ರನ್ ಕಲೆ ಹಾಕಿದರೆ, ಒಲ್ಲಿ ರಾಬಿನ್ಸನ್ (58) ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು. ಜಡೇಜಾ ಉಳಿದ 3 ವಿಕೆಟ್​ ಪಡೆದರು. ಆಂಗ್ಲರು 104.5 ಓವರ್​​​ಗಳಲ್ಲಿ 353 ರನ್​ಗಳಿಗೆ ಆಲೌಟ್​ ಆದರು.

ಜೈಸ್ವಾಲ್ ಮತ್ತೆ ಮಿಂಚು, ಉಳಿದವರು ಫೇಲ್

ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಭಾರತ ಭಾರೀ ಆಘಾತಕ್ಕೆ ಒಳಗಾಯಿತು. ರೋಹಿತ್​ ಶರ್ಮಾ 2 ರನ್ ಗಳಿಸಿದರೆ, ಶುಭ್ಮನ್ ಗಿಲ್ 38 ರನ್​ಗಳಿಗೆ ಆಟ ಮುಗಿಸಿದರು. ರಜತ್ ಪಾಟೀದಾರ್ (17) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ರವೀಂದ್ರ ಜಡೇಜಾ 12, ಸರ್ಫರಾಜ್ ಖಾನ್ 14 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮಾತ್ರ ಮತ್ತೊಮ್ಮೆ ಮಿಂಚಿದರು.

ಸತತ ವಿಕೆಟ್ ಪತನದ ನಡುವೆಯೂ ಅಬ್ಬರಿಸಿದ ಜೈಸ್ವಾಲ್ ಸಿರೀಸ್​ನಲ್ಲಿ ಎರಡನೇ ಅರ್ಧಶತಕ ಸಿಡಿಸಿದರು. ನಿಧಾನಗತಿಯಲ್ಲಿ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಯಶಸ್ವಿ, 117 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್​ ಸಹಿತ 73 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಆರ್ ಅಶ್ವಿನ್ ಸಹ 1 ರನ್​ಗೆ ಹಿಂದಿರುಗಿದರು. ಇದೀಗ ಧ್ರುವ್ ಜುರೆಲ್ ಮತ್ತು ಕುಲ್ದೀಪ್ ಯಾದವ್ 42 ರನ್​ಗಳ ಪಾಲುದಾರಿಕೆ ನೀಡಿದ್ದು, ಕ್ರೀಸ್​ನಲ್ಲಿದ್ದಾರೆ.

ಧ್ರುವ್ ಜುರೆಲ್ ಮೇಲೆ ನಿರೀಕ್ಷೆ

ಸದ್ಯ ಎರಡನೇ ದಿನದಾಟಕ್ಕೆ ಕಾಯ್ದುಕೊಂಡಿರುವ ಈ ಜೋಡಿ ತಂಡಕ್ಕೆ ಚೇತರಿಕೆ ನೀಡುವ ಲೆಕ್ಕಾಚಾರದಲ್ಲಿದ್ದಾರೆ. ಧ್ರುವ್ ಜುರೆಲ್ ಅಜೇಯ 30 ಮತ್ತು ಕುಲ್ದೀಪ್ ಯಾದವ್ ಅಜೇಯ 17 ರನ್ ಗಳಿಸಿದ್ದಾರೆ. ಇಬ್ಬರಲ್ಲಿ ಒಬ್ಬರು ಔಟಾದರೂ ಭಾರತ ಬಹುಬೇಗನೇ ಆಲೌಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಅಲ್ಲದೆ, ಹೆಚ್ಚಿನ ಹಿನ್ನಡೆ ಅನುಭವಿಸಿದರೂ ಅಚ್ಚರಿ ಇಲ್ಲ. ಧ್ರುವ್ ಜುರೆಲ್ ಮೇಲೆ ನಿರೀಕ್ಷೆ ಇಡಲಾಗಿದ್ದು, ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರೆ ಹಿನ್ನಡೆಯಿಂದ ಪಾರಾಗುವ ಸಂಭವ ಇದೆ.

ಈ ಸರಣಿಯಲ್ಲಿ ಎರಡನೇ ಪಂದ್ಯವಾಡುತ್ತಿರುವ ಶೋಯೆಬ್ ಬಶೀರ್​, ಭಾರತದ ಬ್ಯಾಟಿಂಗ್​ ವಿಭಾಗದ ಬೆನ್ನು ಮುರಿದರು. ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟೀದಾರ್, ಜಡೇಜಾ ಅವರನ್ನು ಔಟ್ ಮಾಡಿದ್ದಾರೆ. ನಾಲ್ಕು ವಿಕೆಟ್ ಉರುಳಿಸಿ ಗಮನ ಸೆಳೆದಿದ್ದಾರೆ. ಉಳಿದಂತೆ ಟಾಪ್ ಹಾರ್ಟ್ಲಿ 2, ಜೇಮ್ಸ್ ಆಂಡರ್ಸನ್ 1 ವಿಕೆಟ್ ಪಡೆದಿದ್ದಾರೆ.

IPL_Entry_Point