ಕನ್ನಡ ಸುದ್ದಿ  /  Cricket  /  Dhruv Jurel Reacts To Being Compared With Ms Dhoni Thank You So Much But Nobody Can Replicate Dhoni Sunil Gavaskar Prs

ಥ್ಯಾಂಕ್ಯೂ ಸೋ ಮಚ್​, ಆದರೆ..; ಎಂಎಸ್ ಧೋನಿಗೆ ಹೋಲಿಸಿದ್ದ ಸುನಿಲ್ ಗವಾಸ್ಕರ್ ಹೇಳಿಕೆಗೆ ಧ್ರುವ್ ಜುರೆಲ್ ಪ್ರತಿಕ್ರಿಯೆ

Dhruv Jurel: ತನ್ನನ್ನು ಎಂಎಸ್ ಧೋನಿಗೆ ಹೋಲಿಸಿದ್ದ ಸುನಿಲ್ ಗವಾಸ್ಕರ್ ಅವರ ಹೇಳಿಕೆಗೆ ಭಾರತ ತಂಡದ ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್ ಪ್ರತಿಕ್ರಿಯೆ ನೀಡಿದ್ದಾರೆ.

ಎಂಎಸ್ ಧೋನಿಗೆ ಹೋಲಿಸಿದ್ದ ಸುನಿಲ್ ಗವಾಸ್ಕರ್ ಹೇಳಿಕೆಗೆ ಧ್ರುವ್ ಜುರೆಲ್ ಪ್ರತಿಕ್ರಿಯೆ
ಎಂಎಸ್ ಧೋನಿಗೆ ಹೋಲಿಸಿದ್ದ ಸುನಿಲ್ ಗವಾಸ್ಕರ್ ಹೇಳಿಕೆಗೆ ಧ್ರುವ್ ಜುರೆಲ್ ಪ್ರತಿಕ್ರಿಯೆ

ಟೀಮ್ ಇಂಡಿಯಾ ಯುವ ವಿಕೆಟ್ ಕೀಪರ್​ ಧ್ರುವ್ ಜುರೆಲ್ (Dhruv Jurel) ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕೆ ಪ್ರಶಂಸೆಗೆ ಒಳಗಾಗಿದ್ದಾರೆ. ಇದು ಅವರ ಚೊಚ್ಚಲ ಟೆಸ್ಟ್ ಸರಣಿಯಾಗಿತ್ತು. ಫೆಬ್ರವರಿ 15ರಂದು ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್​ ಕ್ರಿಕೆಟ್​ ಕ್ಯಾಪ್ ಪಡೆದ ಜುರೆಲ್, ಸಿಕ್ಕ ಅವಕಾಶದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದರು.

ವಿಕೆಟ್ ಕೀಪಿಂಗ್ ಮತ್ತು ಬ್ಯಾಟ್​ನೊಂದಿಗೆ ಗಮನಾರ್ಹ ಪ್ರದರ್ಶನ ನೀಡಿದ ಜುರೆಲ್ ಅವರನ್ನು ಭಾರತದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್​​ ಬ್ಯಾಟರ್​ ಮಹೇಂದ್ರ ಸಿಂಗ್ ಧೋನಿ (MS Dhoni) ಅವರಿಗೆ ಹೋಲಿಕೆ ಮಾಡಲಾಗಿತ್ತು. ಅದರಲ್ಲೂ ಮಾಜಿ ಭಾರತೀಯ ಬ್ಯಾಟರ್ ಸುನಿಲ್ ಗವಾಸ್ಕರ್ (Sunil Gavaskar) 23 ವರ್ಷದ ಯುವಕನನ್ನು ಹಾಡಿ ಹೊಗಳಿದ್ದಲ್ಲದೆ, ಆತನನ್ನು ಎಂಎಸ್ ಧೋನಿ ಅವರಿಗೆ ಹೋಲಿಸಿದ್ದರು. ಇದೀಗ ಈ ಹೇಳಿಕೆಗೆ ಜುರೆಲ್, ಪ್ರತಿಕ್ರಿಯಿಸಿದ್ದಾರೆ.

ಧನ್ಯವಾದ, ಆದರೆ..; ಧ್ರುವ್ ಜುರೆಲ್

ಸಾರ್ವಕಾಲಿಕ ಶ್ರೇಷ್ಠ ಆಟಗಾರನೊಂದಿಗೆ ಹೋಲಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಜುರೆಲ್, ಧನ್ಯವಾದ ಅರ್ಪಿಸಿದ್ದಾರೆ. ಆದರೆ, ಧೋನಿ ಮಾಡಿದ್ದನ್ನು ಯಾರೂ ಪುನರಾವರ್ತಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನನ್ನನ್ನು ಧೋನಿ ಸರ್ ಜೊತೆಗೆ ಹೋಲಿಸಿದ್ದಕ್ಕಾಗಿ ಗವಾಸ್ಕರ್ ಸರ್ ಅವರಿಗೆ ತುಂಬಾ ಧನ್ಯವಾದಗಳು. ಆದರೆ ಧೋನಿ ಸರ್ ಮಾಡಿದ್ದನ್ನು ಯಾರೂ ಪುನರಾವರ್ತಿಸಲು ಸಾಧ್ಯವಿಲ್ಲ. ಇದನ್ನು ನಾನು ವೈಯಕ್ತಿಕವಾಗಿ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಎಂದಿಗೂ ಧೋನಿ ಒಬ್ಬನೇ ಎಂದ ಧ್ರುವ್ ಜುರೆಲ್

ಒಬ್ಬನೇ ಧೋನಿ - ಅಂದು, ಇಂದು ಎಂದೆಂದೂ ಎಂಎಸ್ ಧೋನಿ ಯಾವತ್ತಿದ್ದರೂ ಒಬ್ಬರೆ.. ಆದರೆ ನಾನು ಎಂದಿಗೂ ಧ್ರುವ್ ಜುರೆಲ್ ಆಗಿರಲು ಬಯಸುತ್ತೇನೆ ಎಂದು ಜುರೆಲ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಇಂಗ್ಲೆಂಡ್ ಸರಣಿ ಮುಗಿಸಿದ ನಂತರ ಐಪಿಎಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಈ ಹಿಂದೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಜುರೆಲ್ ಅಬ್ಬರಿಸಿದ್ದರು.

ಇಂಗ್ಲೆಂಡ್​ ವಿರುದ್ಧ ಪದಾರ್ಪಣೆ ಮಾಡಿದ ತನ್ನ ಮೊದಲ ಟೆಸ್ಟ್​​​ನ ಪ್ರಥಮ ಇನ್ನಿಂಗ್ಸ್​​ನಲ್ಲಿ ಜುರೆಲ್ 104 ಎಸೆತಗಳಲ್ಲಿ 46 ರನ್ ಕಲೆ ಹಾಕಿದ್ದರು. ಅಲ್ಲದೆ, ಕ್ವಿಕ್ ಸ್ಟಂಪ್ ಮತ್ತು ಅದ್ಭುತ ಕ್ಯಾಚ್ ಮೂಲಕವೂ ಗಮನ ಸೆಳೆದಿದ್ದರು. ತಾನಾಡಿದ ಮೂರು ಪಂದ್ಯಗಳ 4 ಇನ್ನಿಂಗ್ಸ್​​​ಗಳಲ್ಲಿ 63.33 ಸರಾಸರಿಯಲ್ಲಿ 90 ಗರಿಷ್ಠ ಸ್ಕೋರ್‌ನೊಂದಿಗೆ 190 ರನ್ ಗಳಿಸಿದ್ದರು. 5 ಕ್ಯಾಚ್‌ಗಳನ್ನು ಪಡೆದಿರುವ ಜುರೆಲ್, ಎರಡು ಸ್ಟಂಪಿಂಗ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶದ ಪರ 2 ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಲು ಕಾರಣವಾಯಿತು. 23 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳಲ್ಲಿ 49 ಸರಾಸರಿಯಲ್ಲಿ ಒಂದು ಶತಕ ಮತ್ತು ಆರು ಅರ್ಧ ಶತಕಗಳೊಂದಿಗೆ 980 ರನ್ ಗಳಿಸಿದ್ದಾರೆ. 2022ರ ಡಿಸೆಂಬರ್​​​ನಲ್ಲಿ ನಾಗಾಲ್ಯಾಂಡ್ ವಿರುದ್ಧ ಅವರು ಅತ್ಯಧಿಕ ಸ್ಕೋರ್ 249 ರನ್ ದಾಖಲಿಸಿದ್ದರು. ಅವರು ಲಿಸ್ಟ್ ಎ ಸರ್ಕ್ಯೂಟ್‌ನಲ್ಲಿ 47.25 ರ ಸರಾಸರಿ, 92.19ರ ಸ್ಟ್ರೈಕ್ ರೇಟ್​ನಲ್ಲಿ ರನ್ ಗಳಿಸಿದ್ದಾರೆ.