ನಟಿಗೆ ಆಕಸ್ಮಿಕವಾಗಿ ಒತ್ತಿದ ಲೈಕ್​ನಿಂದ ಹೊತ್ತಿ ಉರಿಯುತ್ತಿದೆ ಕೊಹ್ಲಿ ಕುಟುಂಬ? ವಿರಾಟ್​ಗೆ ಕ್ಯಾರೆ ಎನ್ನದೆ ಹೋದ ಅನುಷ್ಕಾ, ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ನಟಿಗೆ ಆಕಸ್ಮಿಕವಾಗಿ ಒತ್ತಿದ ಲೈಕ್​ನಿಂದ ಹೊತ್ತಿ ಉರಿಯುತ್ತಿದೆ ಕೊಹ್ಲಿ ಕುಟುಂಬ? ವಿರಾಟ್​ಗೆ ಕ್ಯಾರೆ ಎನ್ನದೆ ಹೋದ ಅನುಷ್ಕಾ, ವಿಡಿಯೋ

ನಟಿಗೆ ಆಕಸ್ಮಿಕವಾಗಿ ಒತ್ತಿದ ಲೈಕ್​ನಿಂದ ಹೊತ್ತಿ ಉರಿಯುತ್ತಿದೆ ಕೊಹ್ಲಿ ಕುಟುಂಬ? ವಿರಾಟ್​ಗೆ ಕ್ಯಾರೆ ಎನ್ನದೆ ಹೋದ ಅನುಷ್ಕಾ, ವಿಡಿಯೋ

ಇನ್​ಸ್ಟಾಗ್ರಾಂನಲ್ಲಿ ನಟಿಯೊಬ್ಬರ ಪೋಸ್ಟ್​ಗೆ ಆಕಸ್ಮಿಕವಾಗಿ ಒತ್ತಿದ ಲೈಕ್​ನಿಂದ ವಿರಾಟ್ ಕೊಹ್ಲಿ ಅವರ ಕುಟುಂಬ ಹೊತ್ತಿ ಉರಿಯುತ್ತಿದೆ ಎಂದು ವರದಿಯಾಗಿದೆ. ವಿರಾಟ್ ಕೈ ಹಿಡಿಯಲು ಯತ್ನಿಸಿದರೂ ಅನುಷ್ಕಾ ಬಿಟ್ಟು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.

ನಟಿಗೆ ಆಕಸ್ಮಿಕವಾಗಿ ಒತ್ತಿದ ಲೈಕ್​ನಿಂದ ಹೊತ್ತಿ ಉರಿಯುತ್ತಿದೆ ಕೊಹ್ಲಿ ಕುಟುಂಬ? ವಿರಾಟ್​ಗೆ ಕ್ಯಾರೆ ಎನ್ನದೆ ಹೋದ ಅನುಷ್ಕಾ, ವಿಡಿಯೋ
ನಟಿಗೆ ಆಕಸ್ಮಿಕವಾಗಿ ಒತ್ತಿದ ಲೈಕ್​ನಿಂದ ಹೊತ್ತಿ ಉರಿಯುತ್ತಿದೆ ಕೊಹ್ಲಿ ಕುಟುಂಬ? ವಿರಾಟ್​ಗೆ ಕ್ಯಾರೆ ಎನ್ನದೆ ಹೋದ ಅನುಷ್ಕಾ, ವಿಡಿಯೋ

ಇನ್​ಸ್ಟಾಗ್ರಾಂನಲ್ಲಿ ನಟಿ ಅವನೀತ್​ಕೌರ್​ಗೆ ಆಕಸ್ಮಿಕವಾಗಿ ಒತ್ತಿದ ಲೈಕ್​ನಿಂದ ವಿರಾಟ್ ಕೊಹ್ಲಿ ಅವರ ಕುಟುಂಬ ಹೊತ್ತಿ ಉರಿಯುತಿದ್ಯಾ? ಹೀಗೊಂದು ಪ್ರಶ್ನೆ ಉದ್ಭವಿಸಲು ವೈರಲ್ ಆಗುತ್ತಿರುವ ವಿಡಿಯೋವೇ ಕಾರಣ. ಇಬ್ಬರ ನಡುವೆ ಮುನಿಸು ಏರ್ಪಟ್ಟಿದ್ಯಾ ಎನ್ನುವುದಕ್ಕೆ ಇದು ಮತ್ತಷ್ಟು ಪುಷ್ಠಿ ನೀಡುತ್ತಿದೆ ಎಂಬುದು ಗಮನಾರ್ಹ. ಇತ್ತೀಚೆಗೆ ಕೊಹ್ಲಿ ನಟಿ ಅವನೀತ್​ಕೌರ್ ಫೋಟೋಗೆ ಲೈಕ್ ಕೊಟ್ಟಿದ್ದು, ದೊಟ್ಟಮಟ್ಟದ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ವಿರಾಟ್ ಇನ್​ಸ್ಟಾ ಸ್ಟೋರಿಯಲ್ಲಿ ಸ್ಪಷ್ಟನೆಯೂ ಕೊಟ್ಟಿದ್ದರು. ಉದ್ದೇಶಪೂರ್ವಕವಾಗಿ ಲೈಕ್ ಕೊಟ್ಟಿಲ್ಲ. ಇನ್​ಸ್ಟಾಗ್ರಾಂ ತಾಂತ್ರಿಕ ಎಡವಟ್ಟಿನಿಂದ ಇದು ಸಂಭವಿಸಿದೆ. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಪೋಸ್ಟ್​​ನಲ್ಲಿ ಕ್ರಿಕೆಟಿಗ ಸ್ಪಷ್ಟನೆಯನ್ನು ಕೊಟ್ಟಿದ್ದರು.

ಕೊಹ್ಲಿ ಮೇಲೆ ಅನುಷ್ಕಾ ಕೋಪ

ಆದರೆ, ಈ ಘಟನೆಯ ನಂತರ ವಿರಾಟ್-ಅನುಷ್ಕಾ ದಂಪತಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ರೆಸ್ಟೋರೆಂಟ್‌ವೊಂದಕ್ಕೆ ಊಟಕ್ಕೆ ಬಂದಿದ್ದರು. ಈ ವೇಳೆ ಅನುಷ್ಕಾ ವರ್ತನೆ ಅನುಮಾನ ಮೂಡುವಂತೆ ಮಾಡಿದೆ. ಇದನ್ನು ಗಮನಿಸಿದ ನೆಟ್ಟಿಗರು ಅನುಷ್ಕಾ ಮುನಿಸಿಕೊಂಡಿದ್ದಾರೆ ಎಂದು ಕಾಮೆಂಟ್​ಗಳ ಮೂಲಕ ಹೇಳುತ್ತಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿರಾಟ್ ಮೊದಲು ಕಾರಿನಿಂದ ಇಳಿದರು. ಬಳಿಕ ಅನುಷ್ಕಾ ಕೈ ಹಿಡಿದು ಕೆಳಗಿಳಿಸಲು ಕೊಹ್ಲಿ ಯತ್ನಿಸಿದರು.

ಆದರೆ ಕೊಹ್ಲಿ ಕೈಕೊಟ್ಟರೂ ಅದನ್ನು ಧಿಕ್ಕರಿಸಿ ಕೈಹಿಡಿದುಕೊಳ್ಳದೆ ಇಳಿದು ವೇಗವಾಗಿ ನಡೆದು ರೆಸ್ಟೋರೆಂಟ್​ಗೆ ಹೋದರೆ, ನಿರಾಸೆಗೊಂಡ ಕೊಹ್ಲಿ ಮೆಲ್ಲಗೆ ಆಕೆಯ ಹಿಂದೆಯೇ ಹೋದರು. ಈ ಘಟನೆ ಸಂಭವಿಸಿದ್ದು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಲೂಪಾ ರೆಸ್ಟೋರೆಂಟ್ ಎಂದು ಹೇಳಲಾಗಿದೆ. ಹೀಗೆ ಅನುಮಾನ ಮೂಡಲು ಕಾರಣ ಏನೆಂದರೆ ಅನುಷ್ಕಾ ಅವರು ಕೊಹ್ಲಿ ಅವರ ಕೈಹಿಡಿಯಲು ಧಿಕ್ಕರಿಸಿದ್ದು ಎಂದೂ ನೋಡಿರಲಿಲ್ಲ ಎನ್ನುವುದು ಅಭಿಮಾನಿಗಳ ಮಾತು. ಕೈಕೈ ಹಿಡಿದೇ ಓಡಾಡುತ್ತಾರೆ. ಈ ಹಿಂದೆಯೂ ಕಾರು ಇಳಿಯುವಾಗ ಕೊಹ್ಲಿ ಕೊಟ್ಟ ಕೈ ಹಿಡಿದೇ ಕೆಳಗಿದಿದ್ದುಂಟು. ಆದರೆ ನಟಿಗೆ ಲೈಕ್​ ಒತ್ತಿದ ಕ್ಷಣದಿಂದ ಇಬ್ಬರ ನಡುವೆ ಸಂಬಂಧ ಹದಗೆಟ್ಟಿದೆ ಎಂಬ ಅನುಮಾನ ಉಂಟಾಗಿದೆ.

ರಿಪ್ಲೈ ಕೊಡದ ಅನುಷ್ಕಾ

ಅನುಷ್ಕಾ ಶರ್ಮಾ ಮೇ 1 ರಂದು ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ಅನುಷ್ಕಾ ಜೊತೆಗಿನ ಸುಂದರವಾದ ಫೋಟೋಗಳನ್ನು ಹಂಚಿಕೊಂಡು ಶುಭಕೋರಿದ್ದರು. 'ನನ್ನ ಅತ್ಯುತ್ತಮ ಸ್ನೇಹಿತೆ, ಜೀವನ ಸಂಗಾತಿ, ಸೇಫ್ ಸ್ಪೇಸ್, ಅತ್ಯುತ್ತಮ ಅರ್ಧಾಂಗಿ ಎಂದು ಹೃದಯಪೂರ್ವಕವಾಗಿ ಬಣ್ಣಿಸಿದ್ದರು. ವಿಪರ್ಯಾಸ ಏನೆಂದರೆ ಈ ಪೋಸ್ಟ್​ಗೆ ಅನುಷ್ಕಾ ಶರ್ಮಾ ರಿಪ್ಲೈ ಕೂಡ ಮಾಡಿಲ್ಲ. ಹಿಂದೆ ಚಿಕ್ಕ ಪೋಸ್ಟ್ ಹಂಚಿಕೊಂಡರೂ ರಿಪ್ಲೈ ಕೊಡುತ್ತಿದ್ದ ಅನುಷ್ಕಾ ತನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರೂ ಪ್ರತಿಕ್ರಿಯೆ ನೀಡದೇ ಇರುವುದು ಅಚ್ಚರಿ ಮೂಡಿಸಿದೆ. 2017ರಲ್ಲಿ ಇಟಲಿಯಲ್ಲಿ ವಿವಾಹವಾದ ಈ ದಂಪತಿಗಳು ಪ್ರಸ್ತುತ ವಾಮಿಕಾ ಮತ್ತು ಅಕಾಯ್ ಎಂಬ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.