ರೋಹಿತ್​-ಕೊಹ್ಲಿಯನ್ನು ನಿರ್ವಹಿಸುವ ತಾಕತ್ತು ಗಂಭೀರ್​​ಗಿದೆ; ಗೌತಿ ಶ್ಲಾಘಿಸಿಯೂ ಬಿಸಿಸಿಐಗೆ ಗಂಗೂಲಿ ಎಚ್ಚರಿಕೆ ಸಂದೇಶ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​-ಕೊಹ್ಲಿಯನ್ನು ನಿರ್ವಹಿಸುವ ತಾಕತ್ತು ಗಂಭೀರ್​​ಗಿದೆ; ಗೌತಿ ಶ್ಲಾಘಿಸಿಯೂ ಬಿಸಿಸಿಐಗೆ ಗಂಗೂಲಿ ಎಚ್ಚರಿಕೆ ಸಂದೇಶ

ರೋಹಿತ್​-ಕೊಹ್ಲಿಯನ್ನು ನಿರ್ವಹಿಸುವ ತಾಕತ್ತು ಗಂಭೀರ್​​ಗಿದೆ; ಗೌತಿ ಶ್ಲಾಘಿಸಿಯೂ ಬಿಸಿಸಿಐಗೆ ಗಂಗೂಲಿ ಎಚ್ಚರಿಕೆ ಸಂದೇಶ

Sourav Ganguly: ಒಬ್ಬ ಆಟಗಾರನ ಭವಿಷ್ಯವನ್ನು ರೂಪಿಸಲು ಪ್ರಮುಖ ಪಾತ್ರವಹಿಸುವ ಕೋಚ್ ಆಯ್ಕೆಯನ್ನು ಅತ್ಯಂತ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಎಂದು ಬಿಸಿಸಿಐಗೆ ಸೌರವ್ ಗಂಗೂಲಿ ಸೂಚಿಸಿದ್ದಾರೆ.

ರೋಹಿತ್​-ಕೊಹ್ಲಿಯನ್ನು ನಿರ್ವಹಿಸುವ ತಾಕತ್ತು ಗಂಭೀರ್​​ಗಿದೆ; ಗೌತಿ ಶ್ಲಾಘಿಸಿಯೂ ಬಿಸಿಸಿಐಗೆ ಗಂಗೂಲಿ ಎಚ್ಚರಿಕೆ ಸಂದೇಶ
ರೋಹಿತ್​-ಕೊಹ್ಲಿಯನ್ನು ನಿರ್ವಹಿಸುವ ತಾಕತ್ತು ಗಂಭೀರ್​​ಗಿದೆ; ಗೌತಿ ಶ್ಲಾಘಿಸಿಯೂ ಬಿಸಿಸಿಐಗೆ ಗಂಗೂಲಿ ಎಚ್ಚರಿಕೆ ಸಂದೇಶ

2024ರ ಟಿ20 ವಿಶ್ವಕಪ್ (T20 World Cup 2024) ನಂತರ ರಾಹುಲ್ ದ್ರಾವಿಡ್ (Rahul Dravid) ಅಧಿಕಾರಾವಧಿ ಮುಗಿದ ನಂತರ ಗೌತಮ್ ಗಂಭೀರ್ (Gautam Gambhir) ಅವರು ಭಾರತೀಯ ಪುರುಷರ ಕ್ರಿಕೆಟ್ ತಂಡದ (Indian Cricket Team) ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತ ಎಂದು ಊಹಾಪೋಹಗಳು ಹರಡಿವೆ. ಇದರ ಬೆನ್ನಲ್ಲೇ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರು ಬಿಸಿಸಿಐಗೆ (BCCI) ಕೋಚ್ ಅನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಸಂದೇಶವನ್ನು ಕಳುಹಿಸಿದ್ದಾರೆ. ಇದೇ ವೇಳೆ ಗಂಭೀರ್​​ಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ.

ಕಳೆದ ತಿಂಗಳ ಕೊನೆಯಲ್ಲಿ ಬಿಸಿಸಿಐ ಭಾರತದ ಮುಖ್ಯ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಪೈಕಿ ರಿಕಿ ಪಾಂಟಿಂಗ್, ಜಸ್ಟಿನ್ ಲ್ಯಾಂಗರ್ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರಂತಹ ವಿದೇಶಿ ಹೆಸರುಗಳು ಸಹ ಕೋಚ್​​ ಹುದ್ದೆಗೆ ತಳುಕು ಹಾಕಿಕೊಂಡಿತ್ತು. ಆದಾಗ್ಯೂ, ದೇಶೀಯ ಕ್ರಿಕೆಟ್​​ ರಚನೆಯ ಬಗ್ಗೆ ಚೆನ್ನಾಗಿ ತಿಳಿದಿರುವ ಭಾರತೀಯರು ಮುಖ್ಯ ಕೋಚ್ ಸ್ಥಾನವನ್ನು ವಹಿಸಿಕೊಳ್ಳಬೇಕೆಂದು ಬಿಸಿಸಿಐ ಬಯಸುತ್ತದೆ ಎಂದು ಮಂಡಳಿ ಕಾರ್ಯದರ್ಶಿ ಜಯ್​ ಶಾ ಸ್ಪಷ್ಟಪಡಿಸಿದ್ದಾರೆ.

ಗೌತಮ್ ಗಂಭೀರ್ ಶ್ಲಾಘಿಸಿದ ಸೌರವ್ ಗಂಗೂಲಿ

ಜಯ್​ ಶಾ ಸ್ಪಷ್ಟಪಡಿಸಿದ ನಂತರ, ಗಂಭೀರ್ ಅವರೇ ಪ್ರಸ್ತುತ ಟೀಮ್ ಇಂಡಿಯಾ ಹೆಡ್ ಕೋಚ್​ ಆಗುವ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಐಪಿಎಲ್​ ಇತಿಹಾಸದಲ್ಲಿ ಕೆಕೆಆರ್​​ 3ನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ನೆರವಾದ ಗಂಭೀರ್, ಅವರನ್ನೇ ಭಾರತೀಯ ತಂಡಕ್ಕೂ ಕರೆತರಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ರೂಪಿಸ್ತಿದೆ. ಗಂಭೀರ್ ನೇಮಕದ ಪ್ರಕ್ರಿಯೆ ಎಲ್ಲಾ ಮುಕ್ತಾಯಗೊಂಡಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಎಂದು ವರದಿಗಳು ಹೇಳುತ್ತಿವೆ. ಇದರ ಬೆನ್ನಲ್ಲೇ ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ, ಗೌತಮ್ ಗಂಭೀರ್ ಅವರನ್ನು ಶ್ಲಾಘಿಸಿದ್ದಾರೆ.

ಗಂಭೀರ್​ ಭಾವೋದ್ರಿಕ್ತರು, ಪ್ರಾಮಾಣಿಕರು, ಉತ್ತಮ ಅಭ್ಯರ್ಥಿ. ಫ್ರಾಂಚೈಸಿಗೆ ತರಬೇತಿ ನೀಡುವುದು ಅಥವಾ ಮಾರ್ಗದರ್ಶನ ನೀಡುವುದು ಮತ್ತು ಅಂತಾರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದರ ನಡುವೆ ವ್ಯತ್ಯಾಸವಿದೆ. ಅದೂ ಭಾರತದಂತಹ ಉನ್ನತ ಮಟ್ಟದ ತಂಡಕ್ಕೆ ಮಾರ್ಗದರ್ಶನ ನೀಡುವುದು ಸುಲಭದ ಮಾತಲ್ಲ. ಆದರೆ, ಗೌತಮ್ ಈ ಬಗ್ಗೆ ಅರಿತಿರುತ್ತಾರೆ. ಅದರ ಬಗ್ಗೆ ತಿಳಿದಿರುತ್ತಾರೆ ಎಂದು ನನಗೆ ಖಾತ್ರಿಯಿದೆ. ವಿರಾಟ್ ಮತ್ತು ರೋಹಿತ್​​ರಂತಹ ಸ್ಟಾರ್​​ಗಳೊಂದಿಗೆ ಹೇಗೆ ವ್ಯವಹರಿಸಬೇಕೆಂದು ಅವರಿಗೆ ತಿಳಿದಿದೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಂಭೀರ್ ಅವರು ಹೆಡ್​ಕೋಚ್ ಆಗಿ ನೇಮಕಗೊಂಡರೆ, ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ ವಾತಾವರಣ ಖಂಡಿತ ಬದಲಾವಣೆಯಾಗಲಿದೆ. ಡ್ರೆಸ್ಸಿಂಗ್ ರೂಮ್ ಸಂಸ್ಕೃತಿ ಕೂಡ ಬದಲಾವಣೆಯಾಗಲಿದೆ. ಇದು ನಿಮ್ಮ ಸ್ವಂತ ಆಲೋಚನೆಗಳ ಮೂಲಕ ಉತ್ತಮ ವಾತಾವರಣ ನಿರ್ಮಿಸಲಿದ್ದಾರೆ ಎಂಬ ಖಾತ್ರಿ ನನಗಿದೆ ಎಂದು ಗಂಗೂಲಿ ಭರವಸೆ ವ್ಯಕ್ತಪಡಿಸಿದ್ದಾರೆ. ಉತ್ತಮ ಕೋಚ್​ ಮಹತ್ವ ಎತ್ತಿ ತೋರಿಸಲು ಎಕ್ಸ್​​ನಲ್ಲಿ ಪೋಸ್ಟ್​ ಹಾಕಿ ಬಿಸಿಸಿಐ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ಬುದ್ಧಿವಂತಿಕೆಯಿಂದ ಕೋಚ್ ಆಯ್ಕೆ ಮಾಡಿ ಎಂದ ಗಂಗೂಲಿ

ಒಬ್ಬ ಆಟಗಾರನ ಜೀವನ ರೂಪಿಸುವಲ್ಲಿ ಕೋಚ್​​ ಮಹತ್ವ ಪಾತ್ರವನ್ನು ವಹಿಸುತ್ತಾರೆ. ಅವರ ಮಾರ್ಗದರ್ಶನ ಮತ್ತು ನಿರಂತರ ತರಬೇತಿಯು ಮೈದಾನದ ಒಳಗೆ ಮತ್ತು ಹೊರಗೆ ಯಾವುದೇ ವ್ಯಕ್ತಿಯ ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ ಕೋಚ್ ಆಯ್ಕೆ ಮಾಡುವಾಗ ಅತ್ಯಂತ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಎಂದು ಭಾರತದ ಮಾಜಿ ನಾಯಕ, ಬಿಸಿಸಿಐಗೆ ಸಲಹೆ ಕೊಟ್ಟಿದ್ದಾರೆ. 

ಈ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಹುಟ್ಟುಹಾಕಿದೆ. ಮೇಲೆ ಗೌತಿ ಅವರನ್ನು ಹೊಗಳಿದರೂ ಮತ್ತೆ ಬಿಸಿಸಿಐಗೆ ಸಲಹೆ ನೀಡಿದ್ದೇಕೆ ಎಂಬ ಹುಟ್ಟು ಹಾಕಿದೆ. ಗಂಗೂಲಿ ತಮ್ಮ ಆಟದ ದಿನಗಳಲ್ಲಿ ಗ್ರೆಗ್ ಚಾಪೆಲ್ ಅವರ ಅಡಿಯಲ್ಲಿ ತಮ್ಮ ಕಠಿಣ ಸಮಯ ನೆನಪಿಸಿಕೊಳ್ಳುವ ಮೂಲಕ ಈ ಪೋಸ್ಟ್ ಹಾಕಿದ್ದಾರೆ ಎಂದು ಕೆಲವರು ಭಾವಿಸಿದರೆ, ಇತರರು ಗಂಭೀರ್ ಅವರ ಸಂಭಾವ್ಯ ನೇಮಕಾತಿಗೆ ವಿರುದ್ಧವಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

Whats_app_banner