ಆರ್​​ಸಿಬಿ ಸೋಲಿನ ಬೆನ್ನಲ್ಲೇ ಐಪಿಎಲ್​ಗೆ ದಿನೇಶ್ ಕಾರ್ತಿಕ್ ವಿದಾಯ; ವಿ ಮಿಸ್​ ಯೂ ಫಿನಿಷರ್ ಡಿಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​​ಸಿಬಿ ಸೋಲಿನ ಬೆನ್ನಲ್ಲೇ ಐಪಿಎಲ್​ಗೆ ದಿನೇಶ್ ಕಾರ್ತಿಕ್ ವಿದಾಯ; ವಿ ಮಿಸ್​ ಯೂ ಫಿನಿಷರ್ ಡಿಕೆ

ಆರ್​​ಸಿಬಿ ಸೋಲಿನ ಬೆನ್ನಲ್ಲೇ ಐಪಿಎಲ್​ಗೆ ದಿನೇಶ್ ಕಾರ್ತಿಕ್ ವಿದಾಯ; ವಿ ಮಿಸ್​ ಯೂ ಫಿನಿಷರ್ ಡಿಕೆ

Dinesh Karthik retire: ಆರ್​ಸಿಬಿ ತಂಡದ ವಿಕೆಟ್ ಕೀಪರ್​ ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್​ಗೆ ವಿದಾಯ ಘೋಷಿಸಿದ್ದಾರೆ. ಆದರೆ, ಅಧಿಕೃತವಾಗಿ ಡಿಕೆ ಇನ್ನೂ ಹೇಳಿಲ್ಲ.

ಆರ್​​ಸಿಬಿ ಸೋಲಿನ ಬೆನ್ನಲ್ಲೇ ಐಪಿಎಲ್​ಗೆ ದಿನೇಶ್ ಕಾರ್ತಿಕ್ ವಿದಾಯ; ವಿ ಮಿಸ್​ ಯೂ ಫಿನಿಷರ್ ಡಿಕೆ
ಆರ್​​ಸಿಬಿ ಸೋಲಿನ ಬೆನ್ನಲ್ಲೇ ಐಪಿಎಲ್​ಗೆ ದಿನೇಶ್ ಕಾರ್ತಿಕ್ ವಿದಾಯ; ವಿ ಮಿಸ್​ ಯೂ ಫಿನಿಷರ್ ಡಿಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik Retire) ಅವರು ಇಂಡಿಯನ್ ಪ್ರೀಮಿಯರ್ ಲೀಗ್​​ ಟೂರ್ನಿಗೆ (Indian Premier League) ನಿವೃತ್ತಿ ಘೋಷಿಸಿದ್ದಾರೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ 17ನೇ ಆವೃತ್ತಿ ಐಪಿಎಲ್ ಎಲಿಮಿನೇಟರ್ ಪಂದ್ಯವೇ ಡಿಕೆ ಪಾಲಿಗೆ ಕೊನೆಯದ್ದಾಗಿದೆ. ಆರ್​ಸಿಬಿ (RCB 2024) ಹೃದಯವಿದ್ರಾವಕ ಸೋಲಿನ ನಂತರ ವಿಕೆಟ್ ಕೀಪರ್​​ ಬ್ಯಾಟರ್​ಗೆ ಐಪಿಎಲ್​ ವಿದಾಯದ ಸುಳಿವಿನ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಐಪಿಎಲ್​ಗೆ ಡಿಕೆ ವಿದಾಯ

ತಮ್ಮ ವಿಕೆಟ್ ಕೀಪಿಂಗ್​ ಗ್ಲೋಸ್​​ ತೆಗೆದು ಪ್ರೇಕ್ಷಕರತ್ತ ಕೈಬೀಸಿದ ಧನ್ಯವಾದ ಅರ್ಪಿಸಿದ ದಿನೇಶ್​ ಕಾರ್ತಿಕ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಂದ ಭಾವನಾತ್ಮಕ ಗೌರವ ಪಡೆದರು. ಎದುರಾಳಿ ಆಟಗಾರರು ಹಸ್ತಲಾಘವ ಮಾಡುವ ಸಂದರ್ಭದಲ್ಲೂ ಡಿಕೆ ತೀವ್ರ ಭಾವುಕರಾಗಿದ್ದು ಕಂಡು ಬಂತು. ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು ಕಾರ್ತಿಕ್​, ಭಾವುಕರಾದರು. ಆದರೆ, ದಿನೇಶ್ ಕಾರ್ತಿಕ್ ಅಧಿಕೃತವಾಗಿ ಘೋಷಣೆ ಹೊರಡಿಸುವುದೊಂದೇ ಬಾಕಿ.

ಟೂರ್ನಿ ಆರಂಭದಲ್ಲೇ ಇದೇ ತಮ್ಮ ಕೊನೆಯ ಐಪಿಎಲ್ ಎಂಬ ಸುಳಿವು ನೀಡಿದ್ದರು. ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋತ ನಂತರ ಮಾತನಾಡಿದ್ದ ಡಿಕೆ, ಆರ್​ಸಿಬಿ ಪ್ಲೇಆಫ್ ತಲುಪಿದರೆ ಆಗ ಕೊನೆಯ ಪಂದ್ಯವಾಗುತ್ತದೆ ಎಂದು ಹೇಳಿದ್ದರು. ಹೀಗೆಂದು ಪತ್ರಕರ್ತರೊಬ್ಬರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದರು. ಈಗ 38 ವರ್ಷದ ಡಿಕೆ ಈಗ ಕೊನೆಗೂ ವಿದಾಯ ಹೇಳಿದ್ದಾರೆ. ಆರ್​ಸಿಬಿಗೆ ಟ್ರೋಫಿ ಗೆಲ್ಲಿಸಿಕೊಡುವ ಕನಸಿನಲ್ಲಿ, ಕಪ್ ಗೆಲ್ಲದೆಯೇ ವಿದಾಯ ಹೇಳಿದ್ದಾರೆ. ಆರ್​ಸಿಬಿ ಸಹ ನಿವೃತ್ತಿ ಸುಳಿವು ನೀಡುವ ಫೋಸ್ಟ್ ಹಾಕಿದೆ.

ದಿನೇಶ್ ಕಾರ್ತಿಕ್ ವೃತ್ತಿಜೀವನ

2008ರಿಂದ ಐಪಿಎಲ್​ ಈವರೆಗೂ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ದಿನೇಶ್ ಕಾರ್ತಿಕ್ ಅವರು 257 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್​ನಲ್ಲಿ 250+ ಪಂದ್ಯಗಳನ್ನು ಆಡಿದ ಕೆಲವೇ ಆಟಗಾರರ ಪೈಕಿ ಡಿಕೆ ಕೂಡ ಒಬ್ಬರು. 234 ಇನ್ನಿಂಗ್ಸ್​​ಗಳಲ್ಲಿ 22 ಅರ್ಧಶತಕ ಬಾರಿಸಿರುವ ಹಿರಿಯ ಆಟಗಾರ 26.32ರ ಬ್ಯಾಟಿಂಗ್ ಸರಾಸರಿಯಲ್ಲಿ 4842 ರನ್​ ಗಳಿಸಿದ್ದಾರೆ. ಅವರ ಸ್ಟ್ರೈಕ್​ರೇಟ್​ 135.36 ಹೊಂದಿದ್ದಾರೆ. 466 ಫೋರ್, 161 ಸಿಕ್ಸರ್​​ಗಳನ್ನು ಬಾರಿಸಿದ್ದಾರೆ.

ಐಪಿಎಲ್​ನಲ್ಲಿ 6 ತಂಡಗಳನ್ನು ಪ್ರತಿನಿಧಿಸಿದ ಡಿಕೆ

17 ವರ್ಷಗಳ ಐಪಿಎಲ್​ನಲ್ಲಿ ಹಲವು ತಂಡಗಳ ಪರ ಆಡಿರುವ ದಿನೇಶ್ ಕಾರ್ತಿಕ್, ತಮ್ಮ ಐಪಿಎಲ್ ವೃತ್ತಿಜೀವನ ಪೂರ್ಣಗೊಳಿಸಲಿದ್ದಾರೆ. ಕಾರ್ತಿಕ್ ಐಪಿಎಲ್ ಇತಿಹಾಸದಲ್ಲಿ ಅಗ್ರ 10 ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದು ವಿಶೇಷ. ವಿಕೆಟ್ ಕೀಪರ್ ಬ್ಯಾಟರ್ ತಮ್ಮ ಐಪಿಎಲ್ ವೃತ್ತಿಜೀವನದುದ್ದಕ್ಕೂ ಆರು ತಂಡಗಳನ್ನು ಪ್ರತಿನಿಧಿಸಿದ್ದಾರೆ. 2008ರಲ್ಲಿ ಡೆಲ್ಲಿ ಡೇರ್​ಡೆವಿಲ್ಸ್ ತಂಡದೊಂದಿಗೆ ತನ್ನ ವೃತ್ತಿಜೀವನ ಆರಂಭಿಸಿದ್ದರು.

ಡೆಲ್ಲಿ ನಂತರ 2011ರಲ್ಲಿ ಪಂಜಾಬ್ ತಂಡಕ್ಕೆ ತೆರಳಿದರು. ನಂತರ ಎರಡು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡರು. 2014ರಲ್ಲಿ ಮತ್ತೆ ಡೆಲ್ಲಿ ತಂಡಕ್ಕೆ ಸೇರಿದ ಡಿಕೆ ಅವರನ್ನು 2015ರಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಖರೀದಿಸಿತು. ನಂತರ 2016 ಮತ್ತು 2017ರಲ್ಲಿ ಗುಜರಾತ್ ಲಯನ್ಸ್ ತಂಡದ ಆಡಿದರು. ಬಳಿಕ 2022ರವರೆಗೂ ಕೆಕೆಆರ್ ಫ್ರಾಂಚೈಸಿ ಸೇರಿದರು. ಕೊನೆಗೆ ಆರ್​ಸಿಬಿಗೆ ಮರಳಿದ ಕಾರ್ತಿಕ್, ಫಿನಿಶರ್ ಪಾತ್ರವನ್ನು ನಿಭಾಯಿಸಿದರು. ಆದರೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner