ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್​ನಲ್ಲಿ ಕರ್ನಾಟಕದ 12 ಆಟಗಾರರಿಗೆ ಭಾರಿ ನಿರಾಸೆ; ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿದ್ದು ಒಬ್ಬರಿಗಷ್ಟೆ!

ಐಪಿಎಲ್​ನಲ್ಲಿ ಕರ್ನಾಟಕದ 12 ಆಟಗಾರರಿಗೆ ಭಾರಿ ನಿರಾಸೆ; ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿದ್ದು ಒಬ್ಬರಿಗಷ್ಟೆ!

Karnataka Players In IPL 2024: 17ನೇ ಐಪಿಎಲ್​ನಲ್ಲಿ ಕಣಕ್ಕಿಳಿದ ಕರ್ನಾಟಕದ 12 ಆಟಗಾರರ ಪೈಕಿ ಯಾರು, ಹೇಗೆಲ್ಲಾ ಪ್ರದರ್ಶನ ನೀಡಿದ್ದಾರೆ ಎಂಬುದರ ವಿವರ ಇಲ್ಲಿದೆ.

ಐಪಿಎಲ್​ನಲ್ಲಿ ಕರ್ನಾಟಕದ 12 ಆಟಗಾರರಿಗೆ ಭಾರಿ ನಿರಾಸೆ; ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿದ್ದು ಒಬ್ಬರಿಗಷ್ಟೆ!
ಐಪಿಎಲ್​ನಲ್ಲಿ ಕರ್ನಾಟಕದ 12 ಆಟಗಾರರಿಗೆ ಭಾರಿ ನಿರಾಸೆ; ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿದ್ದು ಒಬ್ಬರಿಗಷ್ಟೆ!

ಮಾರ್ಚ್​ 22 ರಿಂದ ಮೇ 26ರ ತನಕ ನಡೆದ 68 ದಿನಗಳ 17ನೇ ಆವೃತ್ತಿಯ ಐಪಿಎಲ್​ನ ನಾನ್​ಸ್ಟಾಫ್ ಮನರಂಜನೆಗೆ ಫುಲ್​ಸ್ಟಾಫ್ ಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಈ ವರ್ಷವೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಆರ್​​ಸಿಬಿ ಮಾತ್ರವಲ್ಲ, ಪ್ರಸಕ್ತ ಟೂರ್ನಿಯಲ್ಲಿ ಕರ್ನಾಟಕ ಆಟಗಾರರ ಪಾಲಿಗೂ (Karnataka Players) ತೀವ್ರ ನಿರಾಸೆಯಾಗಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕಣಕ್ಕಿಳಿದ ಕರ್ನಾಟಕದ 12 ಆಟಗಾರರ ಪೈಕಿ ಅದೃಷ್ಟ ಪಡೆದಿದ್ದು ಏಕೈಕ ಆಟಗಾರ ಮಾತ್ರ. ಅದುವೇ ಮನೀಶ್ ಪಾಂಡೆ (Manish pandey). ಆದರೆ ಕಪ್ ಗೆದ್ದರೂ ಕೆಎಲ್ ರಾಹುಲ್ (KL Rahul) ಹೊರತುಪಡಿಸಿ ಎರಡಂಕಿ ಪಂದ್ಯಗಳನ್ನು ಯಾರೂ ಆಡಲೇ ಇಲ್ಲ. ಹೆಚ್ಚಿನ ಅವಕಾಶಗಳು ಸಿಗದೆ ಭಾರಿ ನಿರಾಸೆಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮನೀಶ್ ಪಾಂಡೆ ಅವರು 2024ರ ಐಪಿಎಲ್​ ಪ್ರಶಸ್ತಿ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿ ಅದೃಷ್ಟವನ್ನು ಒಲಿಸಿಕೊಂಡರು. ಅಚ್ಚರಿ ಅಂದರೆ ಮನೀಶ್ ಆಡಿದ್ದೇ ಒಂದೇ ಒಂದು ಪಂದ್ಯ. ಮುಂಬೈ ಇಂಡಿಯನ್ಸ್​ ವಿರುದ್ಧ ಕೋಲ್ಕತ್ತಾ 57ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು ಈ ಹಂತದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕ್ರೀಸ್​ಗೆ ಬಂದಿದ್ದ ಮನೀಶ್ ಪಾಂಡೆ, ಅಮೋಘ 42 ರನ್ ಕಲೆ ಹಾಕುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶಾರೂಖ್ ಖಾನ್ ಒಡೆತನದ 2014ರಲ್ಲಿ ಚಾಂಪಿಯನ್ ಆಗಿದ್ದಾಗಲೂ ಕೆಕೆಆರ್ ತಂಡದಲ್ಲಿದ್ದರು.

ಕರ್ನಾಟಕದ ಆಟಗಾರರಿಗೆ ಅವಕಾಶಗಳೇ ಕಡಿಮೆ

ಮನೀಶ್ ಹೊರತುಪಡಿಸಿ ಆರ್​ಸಿಬಿ ತಂಡದಲ್ಲಿ ಕರ್ನಾಟಕದ ವೇಗಿ ವಿಜಯ್ ಕುಮರ್ ವೈಶಾಕ್, 4 ಪಂದ್ಯಗಳಲ್ಲಿ 4 ವಿಕೆಟ್ ಪಡೆದರು. ಒಂದೆರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಉಳಿದರೆಡು ಪಂದ್ಯಗಳಲ್ಲಿ ದುಬಾರಿ ಬೌಲಿಂಗ್ ಮಾಡಿದ ಕಾರಣ ಹೆಚ್ಚಿನ ಅವಕಾಶ ಪಡೆಯುವಲ್ಲಿ ವಿಫಲರಾದರು. ಆದರೆ ಅದೇ ತಂಡದಲ್ಲಿದ್ದ ಮನೋಜ್ ಭಾಂಡಗೆ ಟೂರ್ನಿಯುದ್ದಕ್ಕೂ ಬೆಂಚ್​ ಕಾದರು. ಇದು ಆರ್​​ಸಿಬಿ ಮ್ಯಾನೇಜ್​ಮೆಂಟ್ ವಿರುದ್ದ ಆಕ್ರೋಶಕ್ಕೂ ಕಾರಣವಾಗಿತ್ತು.

ಪಂಜಾಬ್ ಕಿಂಗ್ಸ್​ ತಂಡದಲ್ಲಿದ್ದ ವಿದ್ವತ್​ ಕಾವೇರಪ್ಪ ಐಪಿಎಲ್​ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಪ್ರಮುಖ 2 ವಿಕೆಟ್ ಪಡೆದರೂ ತದನಂತರ ಬೆಂಚ್ ಕಾದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಅಭಿನವ್ ಮನೋಹರ್ ಕೂಡ ಆಡಿದ್ದು ಎರಡೇ ಪಂದ್ಯ. ಗಳಿಸಿದ್ದು 9 ರನ್. ಮುಂಬೈ ಇಂಡಿಯನ್ಸ್​ ಪರ ಶ್ರೇಯಸ್​ ಗೋಪಾಲ್ ಕಣಕ್ಕಿಳಿದ 3ರಲ್ಲಿ 3 ವಿಕೆಟ್​ ಪಡೆದಿದ್ದರು. ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿದ್ದ ಪ್ರವಿಣ್​ ದುಬೆ, ಒಂದೂ ಪಂದ್ಯವಾಡಲಿಲ್ಲ.

14 ಪಂದ್ಯವನ್ನಾಡಿದ್ದು ರಾಹುಲ್ ಒಬ್ಬರೇ

ಲಕ್ನೋ ಸೂಪರ್​ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರ ಹೊರತಾಗಿಯೂ ಟೀಕೆಗೆ ಗುರಿಯಾದರು. ಟೂರ್ನಿಯಲ್ಲಿ 520 ರನ್ ಸಿಡಿಸಿ ಕೆಎಲ್, ತನ್ನ ನಾಯಕತ್ವ ಮತ್ತು ಕಳಪೆ ಸ್ಟ್ರೈಕ್​ರೇಟ್​ನಿಂದ ಫ್ಯಾನ್ಸ್, ಮಾಜಿ ಕ್ರಿಕೆಟರ್​​ಗಳ ಟೀಕೆಗೊಳಗಾಗಿದ್ದರು. ಎಲ್​ಎಸ್​ಜಿ ತಂಡದಲ್ಲೇ ಇದ್ದ ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್​ ಅವಕಾಶ ಸಿಕ್ಕರೂ ತೀವ್ರ ವೈಫಲ್ಯ ಅನುಭವಿಸಿದರು. 7 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 38 ರನ್.

ಇನ್ನು ಅದೇ ತಂಡದಲ್ಲಿದ್ದ ಕೆ.ಗೌತಮ್, ಒಂದೇ ಪಂದ್ಯ ಆಡಿ 2 ಓವರ್​ ಬೌಲಿಂಗ್ ಮಾಡಿ 29 ರನ್ ಬಾರಿಸಿಕೊಂಡರು. ಇನ್ನು ವೇಗದ ಬೌಲರ್​​ ರಾಜಸ್ಥಾನ್ ರಾಯಲ್ಸ್​ ಪ್ರಸಿದ್ಧ್ ಕೃಷ್ಣ ಟೂರ್ನಿ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದರು. ಕರ್ನಾಟಕ ದೇಶೀಯ ಕ್ರಿಕೆಟ್​ ತಂಡದ ನಾಯಕ ಮಯಾಂಕ್​ ಅಗರ್ವಾಲ್​ ರನ್ನರ್​ಅಪ್​​ ಸನ್​ರೈಸರ್ಸ್ ಹೈದರಾಬಾದ್​ ಕಣಕ್ಕಿಳಿದ 4 ಪಂದ್ಯಗಳಲ್ಲಿ 64 ರನ್​ ಗಳಿಸಿದ್ದರು. ಕಳಪೆ ಪ್ರದರ್ಶನ ನೀಡಿದ್ದರ ಕಾರಣದಿಂದ ಮತ್ತೆ ಅವಕಾಶ ಸಿಗಲಿಲ್ಲ. ಕೆಎಲ್ ರಾಹುಲ್​ ಹೊರತುಪಡಿಸಿ ಬೇರೆ ಆಟಗಾರರು ಭಾರತ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಇಲ್ಲ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ