ನನ್ನನ್ನು ಪಾಕಿಸ್ತಾನಿ ಎಂದು ಕರೆಯಬೇಡಿ; ಆಸೀಸ್ ವಿರುದ್ಧ ಪಾಕ್ ಸೋತ ಬಳಿಕ ವಕಾರ್ ಯೂನಿಸ್ ಅಚ್ಚರಿ ಹೇಳಿಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  ನನ್ನನ್ನು ಪಾಕಿಸ್ತಾನಿ ಎಂದು ಕರೆಯಬೇಡಿ; ಆಸೀಸ್ ವಿರುದ್ಧ ಪಾಕ್ ಸೋತ ಬಳಿಕ ವಕಾರ್ ಯೂನಿಸ್ ಅಚ್ಚರಿ ಹೇಳಿಕೆ

ನನ್ನನ್ನು ಪಾಕಿಸ್ತಾನಿ ಎಂದು ಕರೆಯಬೇಡಿ; ಆಸೀಸ್ ವಿರುದ್ಧ ಪಾಕ್ ಸೋತ ಬಳಿಕ ವಕಾರ್ ಯೂನಿಸ್ ಅಚ್ಚರಿ ಹೇಳಿಕೆ

Waqar Younis: ಇನ್ಮುಂದೆ ನನ್ನನ್ನು ಪಾಕಿಸ್ತಾನಿ ಎಂದು ಕರೆಯಬೇಡಿ ಎಂದು ಸ್ಟಾರ್​ಸ್ಫೋರ್ಟ್ಸ್​​ನಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್, ಹೇಳಿದ್ದಾರೆ. ಇದು ಭಾರಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಆಸೀಸ್ ವಿರುದ್ಧ ಪಾಕ್ ಸೋತ ಬಳಿಕ ವಕಾರ್ ಯೂನಿಸ್ ಅಚ್ಚರಿ ಹೇಳಿಕೆ.
ಆಸೀಸ್ ವಿರುದ್ಧ ಪಾಕ್ ಸೋತ ಬಳಿಕ ವಕಾರ್ ಯೂನಿಸ್ ಅಚ್ಚರಿ ಹೇಳಿಕೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್​​ನಲ್ಲಿ (ICC ODI World Cup 2023) ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ (Australia vs Pakistan) 62 ರನ್​ಗಳ ಅಂತರದಿಂದ ಸೋತ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ (Waqar Younius) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳು ಟೀಕಿಸಿದ್ದಾರೆ.

ಪಂದ್ಯ ಮುಗಿದ ನಂತರ ಆಸ್ಟ್ರೇಲಿಯಾ ತಂಡದ ಮಾಜಿ ಚಾಂಪಿಯನ್​ಗಳಾದ ಶೇನ್ ವ್ಯಾಟ್ಸನ್ (Shane Watson) ಮತ್ತು ಆ್ಯರೋನ್ ಫಿಂಚ್ (Aaron Finch) ಅವರೊಂದಿಗಿನ ಚರ್ಚೆಯ ಸಮಯದಲ್ಲಿ ಮಾತನಾಡಿದ ವಕಾರ್ ಯೂನಿಸ್, ಇನ್ಮುಂದೆ ನನ್ನನ್ನು ಪಾಕಿಸ್ತಾನಿ ಎಂದು ಕರೆಯಬೇಡಿ ಎಂದು ಸ್ಟಾರ್​ಸ್ಫೋರ್ಟ್ಸ್​​ನಲ್ಲಿ ಹೇಳಿದ್ದಾರೆ. ಇದು ಭಾರಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

‘ನನ್ನನ್ನು ಪಾಕಿಸ್ತಾನಿ ಎನ್ನಬೇಡಿ’

ಈ ವೇಳೆ ಮಾತನಾಡಿದ ವಕಾರ್, ನಾನು ಅರ್ಧ ಆಸೀಸ್ (ಆಸ್ಟ್ರೇಲಿಯಾ), ನನ್ನನ್ನು ಇನ್ಮುಂದೆ ಪಾಕಿಸ್ತಾನಿ ಎಂದು ಕರೆಯಬೇಡಿ ಎಂದು ಹೇಳಿದ್ದಾರೆ. ಅವರು ಹೀಗೆ ಹೇಳಲು ಪ್ರಮುಖ ಕಾರಣ ಇದೆ. ವಕಾರ್ ಯೂನಿಸ್ ಮದುವೆಯಾಗಿರುವುದು ಆಸ್ಟ್ರೇಲಿಯನ್ ಮೂಲದ ವೈದ್ಯೆ ಫರ್ಯಾಲ್​ ಅವರನ್ನು ಎಂಬುದು ವಿಶೇಷ.

ಈ ದಂಪತಿ ನ್ಯೂ ಸೌತ್​ ವೇಲ್ಸ್​​ನ ಕ್ಯಾಸಲ್​ ಹಿಲ್ಲೆ ಪಟ್ಟಣದಲ್ಲಿ ನೆಲೆಸಿದೆ. ಅಲ್ಲದೆ, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ. ಇದೇ ಕಾರಣಕ್ಕಾಗಿ ನಾನು ಅರ್ಧ ಆಸ್ಟ್ರೇಲಿಯಾಗೆ ಸೇರಿದವ. ಪೂರ್ಣ ಪ್ರಮಾಣದಲ್ಲಿ ಪಾಕಿಸ್ತಾನಕ್ಕೆ ಸೇರಿಲ್ಲ ಎನ್ನುವ ರೀತಿ ವಕಾರ್ ಹೇಳಿಕೆ ಕೊಟ್ಟಿದ್ದಾರೆ.

ವಕಾರ್ ಯೂನಿಸ್ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಪರಿಗಣನೆಗೆ ಒಳಪಡುತ್ತಾರೆ. ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರು. 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನದಲ್ಲಿ 87 ಟೆಸ್ಟ್​​ ಪಂದ್ಯಗಳಲ್ಲಿ 373 ವಿಕೆಟ್, 262 ಏಕದಿನಗಳಲ್ಲಿ 416 ವಿಕೆಟ್ ಪಡೆದಿದ್ದಾರೆ. ಈಗವರು ವಿಶ್ವಕಪ್ ಕಾಮೆಂಟರಿ ಪ್ಯಾನೆಲ್​​​ನಲ್ಲಿದ್ದಾರೆ.

ಪಾಕ್​ಗೆ ಹೀನಾಯ ಸೋಲು

ಬೆಂಗಳೂರಿನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕಿತು. ಡೇವಿಡ್ ವಾರ್ನರ್ 163 ರನ್ ಮತ್ತು ಮಿಚೆಲ್ ಮಾರ್ಷ್ 121 ರನ್​​​ಗಳ ಅಮೋಘ ಆಟದಿಂದ 50 ಓವರ್​​​​ಗಳಲ್ಲಿ 367 ರನ್​ ಕಲೆ ಹಾಕಿತು. ಪಾಕಿಸ್ತಾನದ ಪರ ಶಾಹೀನ್ ಅಫ್ರಿದಿ 5 ವಿಕೆಟ್, ಹ್ಯಾರಿಸ್ ರೌಫ್ 3 ವಿಕೆಟ್​ ಪಡೆದು ಮಿಂಚಿದರು.

ಈ ಬೃಹತ್ ಬೆನ್ನತ್ತಿದ ಪಾಕಿಸ್ತಾನ 305 ರನ್​​ಗಳಿಗೆ ಆಲೌಟ್​ ಆಯಿತು. ಆರಂಭಿಕರಾದ ಅಬ್ದುಲ್ಲಾ ಶಫಿಕ್ 64 ರನ್, ಇಮಾಮ್ ಉಲ್ ಹಕ್ 70 ರನ್ ಸಿಡಿಸಿದ್ದು ಉಳಿದವರು ಅಟ್ಟರ್​ ಫ್ಲಾಪ್ ಪ್ರದರ್ಶನ ನೀಡಿದರು. ಪರಿಣಾಮ 45.3 ಓವರ್​​​ಗಳಲ್ಲೇ ಸರ್ವಪತನ ಕಂಡಿತು. ಆ್ಯಡಂ ಜಂಪಾ 4 ವಿಕೆಟ್, ಮಾರ್ಕಸ್ ಸ್ಟೋಯ್ನಿಸ್, ಕಮಿನ್ಸ್ ತಲಾ 2 ವಿಕೆಟ್ ಪಡೆದರು.

Whats_app_banner